ಭಾರತೀಯ ಮ್ಯೂಚುವಲ್ ಫಂಡ್‌ಗಳು ವಿದೇಶಿ ಷೇರುಗಳಲ್ಲಿ ಹೂಡಿಕೆ ಮಾಡುವುದರ ಮೇಲೆ ದೀರ್ಘಾವಧಿಯ ನಿರ್ಬಂಧವನ್ನು ಹೇರಿರುವ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿರ್ಧಾರವನ್ನು ಹಣಕಾಸು ಸಲಹಾ ಸಂಸ್ಥೆಯಾದ ಕ್ಯಾಪಿಟಲ್ ಮೈಂಡ್ ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿರುವ ದೀಪಕ್ ಶೆಣೈ ಪ್ರಶ್ನಿಸಿದ್ದಾರೆ. ವ್ಯಕ್ತಿಗಳು ವಿದೇಶಿ ಷೇರುಗಳಲ್ಲಿ ಸುಲಭವಾಗಿ ಹೂಡಿಕೆ ಮಾಡಬಹುದಾದರೆ, ಸಂಸ್ಥೆಗಳು ಮೂಲಕ ಹೂಡಿಕೆ ಮಾಡಲು ಏಕೆ ಅನುಮತಿಸುವುದಿಲ್ಲ? ಎಂಬ ಸವಾಲನ್ನು ಮುಂದಿಟ್ಟಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ದೀಪಕ್ ಅವರು ತಮ್ಮ ಆಲೋಚನೆಯನ್ನು ಹಂಚಿಕೊಂಡಿದ್ದು ಇದು ಚರ್ಚೆಯನ್ನು ಹುಟ್ಟುಹಾಕಿದೆ. ಹಳೆಯ ಹೂಡಿಕೆ ಮಿತಿಗಳು ಮತ್ತು ಭಾರತದ ವಿದೇಶಿ ವಿನಿಮಯ ನಿಗದಿ ಮತ್ತು ಜಾಗತಿಕ ಮಾನ್ಯತೆಗಳನ್ನು ನಿರ್ವಹಿಸಲು ಹೆಚ್ಚು ಆಧುನಿಕ ವಿಧಾನದ ಅಗತ್ಯತೆಯ ಕುರಿತ ಚರ್ಚೆಗೆ ಇವರ ಹೇಳಿಕೆ ಮತ್ತೆ ಪುಷ್ಟಿ ನೀಡಿದಂತಾಗಿದೆ.

ಡಿಸೆಂಬರ್ 29ರಂದು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್‌ನಲ್ಲಿನ ಅಸಮಾನತೆಯ ಬಗ್ಗೆ ಪ್ರಶ್ನೆ ಎತ್ತಿದ್ದು 'ವಿದೇಶಿ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುವ ಭಾರತೀಯ ಮ್ಯೂಚುವಲ್ ಫಂಡ್‌ಗಳ ಮೇಲೆ ನಾವು ಕೂಡಾ ಮಿತಿಗಳ ನಿರ್ಬಂಧಗಳನ್ನು ಏಕೆ ಇನ್ನೂ ಹೊಂದಿದ್ದೇವೆ ಎಂದು ಪ್ರಶ್ನಿಸಿದ್ದಾರೆ. ವ್ಯಕ್ತಿಗಳು ಮತ್ತು ಸಂಸ್ಥೆಗಳ ನಡುವಿನ ಹೂಡಿಕೆ ನಿಯಮಗಳಲ್ಲಿನ ಅಸಮಾನತೆಯನ್ನು ಸರಿಪಡಿಸುವ ಅಗತ್ಯತೆಗೆ ಅವರು ತಮ್ಮ ಪೋಸ್ಟ್ ಮೂಲಕ ಹೇಳಿದ್ದಾರೆ.
" ನಾವು ವಿದೇಶಿ ಷೇರುಗಳಲ್ಲಿ ಹೂಡಿಕೆ ಮಾಡಬಹುದಾದರೆ, ಭಾರತೀಯ ಮ್ಯೂಚುವಲ್ ಫಂಡ್‌ಗಳು ಏಕೆ ಮಾಡಲು ಸಾಧ್ಯವಿಲ್ಲ? ವ್ಯಕ್ತಿಗಳಿಗೆ ಈ ಅವಕಾಶವಿದ್ದರೂ, ಸಂಸ್ಥೆಗಳಿಗೆ ಏಕೆ ಇಲ್ಲ? ಸಾಗರೋತ್ತರ ಷೇರುಗಳನ್ನು ಹೊಂದಲು ವಿದೇಶಿ ಬ್ರೋಕರ್ ಮೂಲಕ ಪ್ರತಿ ವ್ಯಕ್ತಿಗಳು $250,000 ವರೆಗೆ ಹೂಡಿಕೆ ಮಾಡಬಹುದು. ಇದು ನಿಜಕ್ಕೂ ಹಾಸ್ಯಾಸ್ಪದವಾಗಿದೆ. ಆರ್‌ಬಿಐನ ಹಳೆಯ ನಿಯಮಗಳಿಂದಾಗಿ ಹೂಡಿಕೆದಾರರು ಹೆಚ್ಚಿನ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ. RBI $7 ಶತಕೋಟಿ ಮಿತಿಯನ್ನು ಹೊಂದಿದ್ದು, ಅದು 2009 ರಿಂದ ಹಾಗೆಯೇ ಇದ್ದು ಇದರಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆರ್‌ಬಿಐ ಮೀಸಲುಗಳ ಬದಲು, ನಾವು ಷೇರುಗಳನ್ನು ಹೊಂದೋಣ!" ಅವರು ಹೇಳಿದ್ದಾರೆ.
RBI ವಿಧಿಸಿರುವ ಈ ನಿರ್ಬಂಧಗಳಿಂದ ಭಾರತದ ಆರ್ಥಿಕ ಪರಿಸರದ ವ್ಯವಸ್ಥೆ ಮಿತಿಗೊಳ್ಳುತ್ತದೆ ಎಂದು ವಾದಿಸಿರುವ ಶೆಣೈ "ಭಾರತೀಯ ಹೂಡಿಕೆದಾರರು ಮತ್ತು ಸಂಸ್ಥೆಗಳು ವಿದೇಶಿ ಆಸ್ತಿಯನ್ನು ನಿಯಂತ್ರಿಸಲು ಹೆಚ್ಚಿನ ಸ್ವಾತಂತ್ರ್ಯವನ್ನು ಹೊಂದಿರಬೇಕು" ಎಂದು ತಮ್ಮ ಅಭಿಪ್ರಾಯವು ವ್ಯಕ್ತಪಡಿಸಿದ್ದಾರೆ.
"ನಾನು ಚಿನ್ನವನ್ನು ಹೊಂದಿದ್ದರೆ, ಭಾರತವು ಚಿನ್ನವನ್ನು ಹೊಂದಿದೆ ಎಂದರ್ಥ. ಅದೇ ರೀತಿ ನಾನು ಯುಎಸ್ ಡಾಲರ್ ಹೊಂದಿದ್ದರೂ ಆರ್‌ಬಿಐ ಅದನ್ನು ಹೊಂದಿದ್ದರೂ ಇಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಅದೇ ರೀತಿ, ಭಾರತೀಯ ಮ್ಯೂಚುವಲ್ ಫಂಡ್ ಮೂಲಕ US ಷೇರುಗಳ ನನ್ನ ಮಾಲೀಕತ್ವವನ್ನು ಭಾರತೀಯ ಆಸ್ತಿ, ದೇಶದ ಆಸ್ತಿ ಎಂದು ಪರಿಗಣಿಸಬೇಕು್" ಎಂದು ಹೇಳಿದ್ದಾರೆ.
ದೇಶದಲ್ಲಿನ ಹೂಡಿಕೆದಾರರು ವಿದೇಶಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಆದರೆ, ಮ್ಯೂಚುವಲ್ ಫಂಡ್‌ಗಳು ವಿದೇಶಿ ಷೇರುಗಳಲ್ಲಿ ಹೂಡಿಕೆ ಮಾಡುವುದನ್ನು ನಿರ್ಬಂಧಿಸುವ ನಿಯಮಗಳಿವೆ. ಹಲವಾರು ಹೂಡಿಕೆ ತಜ್ಞರು ಈ ನಿಯಮಗಳನ್ನು ಸಡಿಲಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ನವೆಂಬರ್ 2024 ರಲ್ಲಿ, SEBI (ಸೆಬಿ) ಇತ್ತೀಚೆಗೆ ಈ ಬಗ್ಗೆ ಸಣ್ಣ ಬದಲಾವಣೆ ಮಾಡಿದೆ ಆದರೆ ಇದರೆ ಇದು ಸಾಕಾಗುವುದಿಲ್ಲ ಇನ್ನು ಹೆಚ್ಚಿನ ಬದಲಾವಣೆಯ ಅಗತ್ಯವಿದೆ ಎಂಬುವುದು ಹೂಡಿಕೆ ತಜ್ಞರ ಅಭಿಪ್ರಾಯವಾಗಿದೆ.
More From GoodReturns

ಹಣದುಬ್ಬರ ದರ ಏರಿಕೆ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್‌ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್‌ಬಿಐ ಫೊರೆಕ್ಸ್ ಮಿತಿ: ಇಂದಿನ ಮಾರುಕಟ್ಟೆ ಕುಸಿತಕ್ಕೆ ಕಾರಣವೇ?

ಆರ್‌ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್‌ಬಿಐ ನಿರ್ಧಾರದ ಮುನ್ನ ನಿಮ್ಮ ಹಣ ಸುರಕ್ಷಿತವೇ?

ಷೇರು ಮಾರುಕಟ್ಟೆ ಕುಸಿತದ ಭೀತಿ: ಹೂಡಿಕೆದಾರರೇ ಎಚ್ಚರವಿರಲಿ!

ಚಿನ್ನದ ಬೆಲೆ ಏರಿಕೆ: ನಿಮ್ಮ ಹೂಡಿಕೆ ಸುರಕ್ಷಿತವಾಗಿಡಲು ಈ ತಂತ್ರ ಬಳಸಿ

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್‌ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್‌ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?



Click it and Unblock the Notifications