ಆಪಲ್ ಸಂಸ್ಥೆ ಇತ್ತೀಚೆಗೆ ಮುಂಬೈನಲ್ಲಿ ಭಾರತದ ತನ್ನ ಮೊದಲ ಸ್ಟೋರ್ ಅನ್ನು ಆರಂಭ ಮಾಡಿದೆ. ಈಗ ಆಪಲ್ ನವದೆಹಲಿಯಲ್ಲಿ ಇಂದು ಅಂದರೆ ಏಪ್ರಿಲ್ 20ರಂದು ಎರಡನೇ ಸ್ಟೋರ್ ಅನ್ನು ಆರಂಭ ಮಾಡಲಿದೆ. ಮೊಲದ ಸ್ಟೋರ್ ಅನ್ನು ಸಿಇಒ ಟಿಮ್ ಕುಕ್ ಉದ್ಘಾಟನೆ ಮಾಡಿದ್ದಾರೆ. ಈ ಸ್ಟೋರ್ ಅನ್ನು ಕೂಡಾ ಸಿಇಒ ಟಿಮ್ ಕುಕ್ ತೆರಯಲಿದ್ದು, ಗ್ರಾಹಕರನ್ನು ಸ್ವಾಗತಿಸಲಿದ್ದಾರೆ.
ಪಾಲುದಾರರ ಸಹಯೋಗದೊಂದಿಗೆ ಕಳೆದ 25 ವರ್ಷಗಳಲ್ಲಿ ಭಾರತದಲ್ಲಿ ವಹಿವಾಟನ್ನು ನಡೆಸುತ್ತಾ ಬಂದಿರುವ ಐಕಾನಿಕ್ ಸಂಸ್ಥೆಯಾದ ಆಪಲ್ ಭಾರತದಲ್ಲಿ ತನ್ನ ಮೊದಲ ರಿಟೇಲ್ ಕಚೇರಿಯನ್ನು ಆರಂಭ ಮಾಡಿದೆ. ಈ ಕಚೇರಿಯು ಬಾಂದ್ರಾ ಕುರ್ಲಾ ಕಾಂಪ್ಲೇಕ್ಸ್ (BKC) ವಾಣಿಜ್ಯ ಪ್ರದೇಶದಲ್ಲಿದೆ. ಇದಾದ ಬಳಿಕ ಈಗ ಮತ್ತೆ ಆಪಲ್ ತನ್ನ ಎರಡನೇ ಕಚೇರಿಯನ್ನು ಆರಂಭ ಮಾಡುತ್ತಿದೆ. ಈ ಹಿಂದಿನ ಸ್ಟೋರ್‌ನಲ್ಲಿ ಗ್ರಾಹಕರು ಇದ್ದಂತೆ ಈ ಸ್ಟೋರ್‌ನಲ್ಲೂ ಇರುವ ಸಾಧ್ಯತೆಯಿದೆ.

ಆಪಲ್ ಸಿಇಒ ಟಿಮ್ ಕುಕ್ ನಿರೀಕ್ಷೆಯಂತೆ ಬುಧವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಭೇಟಿಯಾಗಿದ್ದಾರೆ. ಇಂದು ದೆಹಲಿ ಸ್ಟೋರ್ ಅನ್ನು ಉದ್ಘಾಟನೆ ಮಾಡಿ, ಗ್ರಾಹಕರನ್ನು ಸಿಇಒ ಟಿಮ್ ಕುಕ್ ಭೇಟಿಯಾಗಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆಪಲ್‌ನ ರಿಟೇಲ್ ಸ್ಟೋರ್‌ನ ಹಿರಿಯ ಉಪಾಧ್ಯಕ್ಷ ಡೀರ್ಡ್ರೆ ಒ'ಬ್ರಿಯಾನ್, "ದೆಹಲಿಯಲ್ಲಿ ನಮ್ಮ ಎರಡನೇ ಸ್ಟೋರ್ ಆರಂಭವಾಗಲಿದೆ. ಅಲ್ಲಿ ನಮ್ಮ ಗ್ರಾಹಕರಿಗೆ ಉತ್ತಮ ಕ್ವಾಲಿಟಿಯ ಆಪಲ್ ಫೋನ್‌ಗಳನ್ನು ನೀಡಲು ನಾವು ಉತ್ಸುಕರಾಗಿದ್ದೇವೆ," ಎಂದು ತಿಳಿಸಿದ್ದಾರೆ.
ಆಪಲ್ ಸ್ಟೋರ್ ಬಗ್ಗೆ ನೀವು ತಿಳಿದಿರಬೇಕಾದ ಮಾಹಿತಿ
*. ವಿಶಿಷ್ಟ ವಿನ್ಯಾಸದಲ್ಲಿ ಆಪಲ್ ಸ್ಟೋರ್‌ನ ಮುಂಭಾಗವನ್ನು ಹೊಂದಿದೆ. ವೈಟ್ ಓಕ್ ಟೇಬಲ್‌ಗಳಲ್ಲಿ ಆಪಲ್‌ನ ಉತ್ಪನ್ನಗಳನ್ನು ಪ್ರದರ್ಶನ ಮಾಡಲಾಗುತ್ತದೆ.
*. ಆಪಲ್ ಸ್ಟೋರ್‌ನಲ್ಲಿ ಭಾರತದಲ್ಲಿ ತಯಾರಿಸಲಾದ ವಾಲ್‌ಗಳು ಇರುತ್ತದೆ.
*. ಗ್ರಾಹಕರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ, ಅನುಕೂಲಕರ ಸಮಯದಲ್ಲಿ ತಮ್ಮ ಸಾಧನಗಳನ್ನು ಸ್ಟೋರ್‌ನಲ್ಲಿ ಸಂಗ್ರಹಿಸಲು ಸುಲಭವಾಗಿಸಲು ಸ್ಟೋರ್‌ಗೆ ಮೀಸಲಾದ ಆಪಲ್ ಪಿಕಪ್ ಸ್ಟೇಷನ್ ಅನ್ನು ಹೊಂದಿರುತ್ತದೆ.
*. ಆಪಲ್ ಶೇಕಡ 100ರಷ್ಟು ನವೀಕರಿಸಬಹುದಾದ ಶಕ್ತಿಯ ಆಧಾರದಲ್ಲಿ ಕಾರ್ಯನಿರ್ವಹಿಸುತ್ತದೆ
* ಅಂಗಡಿಯು 70 ಕ್ಕೂ ಹೆಚ್ಚು ನುರಿತ ಸದಸ್ಯರನ್ನು ಹೊಂದಿದೆ. ಈ ಸದಸ್ಯರು ಭಾರತದ ಒಟ್ಟು 18 ರಾಜ್ಯಗಳಿಗೆ ಸೇರಿದವರು ಆಗಿದ್ದಾರೆ. ಒಟ್ಟಾರೆಯಾಗಿ 15 ಕ್ಕೂ ಹೆಚ್ಚು ಭಾಷೆಗಳನ್ನು ಮಾತನಾಡುತ್ತಾರೆ.
* ಆಪಲ್ ಸಾಧನ ಪಡೆಯುವುದು, ಆಪಲ್ ಐಡಿ ಮರುಪಡೆಯುವುದು, AppleCare ಯೋಜನೆಯನ್ನು ಆಯ್ಕೆ ಮಾಡುವುದು ಅಥವಾ ಚಂದಾದಾರಿಕೆಗಳನ್ನು ಬದಲಾವಣೆ ಮಾಡುವುದು ಈ ಎಲ್ಲ ವಿಚಾರದಲ್ಲೊ ಸಹಾಯ ಪಡೆಯಲು ಈ ಸ್ಟೋರ್‌ಗೆ ಭೇಟಿ ನೀಡಬಹುದಾಗಿದೆ.
* ಆಪಲ್ ಕ್ರಿಯೇಟಿವ್ಸ್ ನೇತೃತ್ವದ ಆಪಲ್ ಸೆಷನ್‌ಗಳಲ್ಲಿ Apple Saket ಟುಡೇ ಮೂಲಕ ಉಚಿತ, ದೈನಂದಿನ ಇನ್-ಸ್ಟೋರ್ ಸೆಷನ್‌ಗಳನ್ನು ನೀಡುತ್ತದೆ.
ಮೊದಲ ಆಪಲ್ ಹೊಸ ಕಚೇರಿಯಲ್ಲಿ ಬೆಳಿಗ್ಗೆ 6 ಗಂಟೆಯಿಂದಲೇ ಗ್ರಾಹಕರ ಸರತಿ ಸಾಲು ಕಂಡು ಬಂದಿದೆ. ಕೆಲವರು ಸೋಮವಾರ ರಾತ್ರಿ 8 ಗಂಟೆಯಿಂದಲೇ ಕಾದುಕೂತಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇಲ್ಲಿನ ವಾತಾವರಣವು ವಿಭಿನ್ನವಾಗಿದೆ ಎಂದು ಪಾಶ್ಚಿಮಾತ್ಯ ಕೈಗಾರಿಕಾ ಕೇಂದ್ರವಾದ ಅಹಮದಾಬಾದ್‌ನಿಂದ ಈ ಆಪಲ್ ಸ್ಟೋರ್ ಬಿಡುಗಡೆಗೆ ಆಗಮಿಸಿದವರು ಹೇಳಿದ್ದಾರೆ. ಇದು ಸಾಮಾನ್ಯ ಅಂಗಡಿಯಲ್ಲಿ ಶಾಪಿಂಗ್ ಮಾಡುವಂತೆ ಅಲ್ಲ, ಇದು ಬೇರೆಯೇ ಅನುಭವ ಎಂದಿದ್ದಾರೆ.


Click it and Unblock the Notifications