ಸಿಹಿಸುದ್ದಿ... ದೆಹಲಿ ಸರ್ಕಾರವು ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರ ಮಾಸಿಕ ಪಿಂಚಣಿಯನ್ನು ತಿಂಗಳಿಗೆ 500 ರೂ.ಗಳಷ್ಟು ಹೆಚ್ಚಿಸುವ ಸಾಧ್ಯತೆ ಇದೆ.
ಹೌದು, ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರ ಮಾಸಿಕ ಪಿಂಚಣಿಯನ್ನು ಏರಿಕೆ ಮಾಡುವಂತೆ ಈಗಾಗಲೇ ದೆಹಲಿ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಇದಕ್ಕಾಗಿ ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ. ಅದನ್ನು ಹಣಕಾಸು ಇಲಾಖೆಗೆ ಅನುಮೋದನೆಗಾಗಿ ಸಹ ಕಳುಹಿಸಲಾಗಿದೆ ಎಂದು ಮೂಲಗಳು ಮಾಹಿತಿಯನ್ನು ತಿಳಿಸಿದೆ.

ಸಮಾಜ ಕಲ್ಯಾಣ ಇಲಾಖೆ ಸಲ್ಲಿಸಿದೆ ಪ್ರಸ್ತಾವನೆಗೆ ಸರ್ಕಾರ ಅನುಮೋದನೆಯನ್ನು ನೀಡಿದ್ದರೆ ಇದನ್ನು ಸಂಪುಟದ ಮುಂದೆ ಮಂಡಿಸಲಾಗುವುದು. ಮುಖ್ಯಮಂತ್ರಿ ರೇಖಾ ಗುಪ್ತಾ ನೇತೃತ್ವದ ಸಚಿವ ಸಂಪುಟ ಇದಕ್ಕೆ ಅನುಮೋದನೆ ನೀಡಿದ ನಂತರ ಪಿಂಚಣಿ ಮೊತ್ತವನ್ನು ಹೆಚ್ಚಳವಾಗುತ್ತದೆ
ಸದ್ಯ ಸುಮಾರು 4.6 ಲಕ್ಷ ಹಿರಿಯ ನಾಗರಿಕರು ಮಾಸಿಕ ಸರ್ಕಾರಿ ಪಿಂಚಣಿಯನ್ನು ಈಗಾಗಲೇ ಪಡೆದುಕೊಳ್ಳುತ್ತಿದ್ದಾರೆ. 60 ರಿಂದ 69 ವರ್ಷ ವಯಸ್ಸಿನವರಿಗೆ ತಿಂಗಳಿಗೆ 2,000 ರೂ. ಗೌರವ ಧನ ಮತ್ತು 70 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರಿಗೆ 2,500 ರೂ. ಗೌರವ ಧನ ನೀಡಲಾಗುತ್ತದೆ. ಸಚಿವ ಸಂಪುಟದ ಅನುಮೋದನೆಯ ನಂತರ, ಈ ಮೊತ್ತವನ್ನು 60-69 ವರ್ಷ ವಯಸ್ಸಿನವರಿಗೆ 2,500 ರೂ. ಮತ್ತು 70 ವರ್ಷಕ್ಕಿಂತ ಮೇಲ್ಪಟ್ಟವರಿಗೆ 3,000 ರೂ.ಗಳವರೆಗೆ ಏರಿಕೆಯನ್ನು ಮಾಡಲಾಗುತ್ತದೆ.
ಸಂಪುಟದ ಅನುಮೋದನೆಯ ನಂತರ ಪ್ರಸ್ತುತ ತಿಂಗಳಿಗೆ 2,500 ರೂ. ಪಡೆಯುತ್ತಿರುವ ಸುಮಾರು 1.35 ಲಕ್ಷ ವಿಶೇಷ ಚೇತನರಿಗೆ ತಿಂಗಳಿಗೆ 3,000 ರೂ. ಪಡೆಯಲು ಅರ್ಹರಾಗಿರುತ್ತಾರೆ.
ಪಿಂಚಣಿಯನ್ನು ಪಡೆಯಲು ಏನೆಲ್ಲಾ ಅರ್ಹತೆಗಳು ಇರಬೇಕು..?
- ವೃದ್ಧಾಪ್ಯ ಪಿಂಚಣಿಗೆ ಅರ್ಹರಾಗಲು, ಒಬ್ಬ ವ್ಯಕ್ತಿಯು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.
- ಕನಿಷ್ಠ ಐದು ವರ್ಷಗಳಿಂದ ರಾಜಧಾನಿ ದೆಹಲಿಯಲ್ಲಿ ವಾಸವಾಗಿರಬೇಕು.
- ಫಲಾನುಭವಿಯ ಕುಟುಂಬದ ಆದಾಯವು ವಾರ್ಷಿಕ 1 ಲಕ್ಷ ರೂ. ಮೀರಿರಬಾರದು.
ಶೇ.40 ಮತ್ತು ಅದಕ್ಕಿಂತ ಹೆಚ್ಚಿನ ಅಂಗವೈಕಲ್ಯ ಹೊಂದಿರುವರಿಗೆ ಏನೆಲ್ಲಾ ಅರ್ಹತೆಗಳಿರಬೇಕು..?
- ಕನಿಷ್ಠ ಐದು ವರ್ಷಗಳಿಂದ ದೆಹಲಿಯಲ್ಲಿ ವಾಸವಿರಬೇಕು.
- ವಾರ್ಷಿಕ 1 ಲಕ್ಷ ರೂ.ಗಿಂತ ಕಡಿಮೆ ಕುಟುಂಬದ ಆದಾಯ ಹೊಂದಿರುವರು ಆಗಿರಬೇಕು.
- ಈ ವರ್ಗದಲ್ಲಿ ಪಿಂಚಣಿ ಪಡೆಯಲು ಅರ್ಜಿದಾರರಿಗೆ ಯಾವುದೇ ವಯಸ್ಸಿನ ಮಿತಿಯಿಲ್ಲ.
ವಿಶೇಷ ಚೇತನರ ಪಿಂಚಣಿಗೆ ಏನೆಲ್ಲಾ ಅರ್ಹತೆಗಳು ಇರಬೇಕು..?
- ಸಾಮಾನ್ಯವಾಗಿ 18 ವರ್ಷ ಮೇಲ್ಪಟ್ಟವರಾಗಿರಬೇಕು.
- ಅಂಗವಿಕಲತೆಯ ಪ್ರಮಾಣದಲ್ಲಿ ಕನಿಷ್ಠ 40% ಅಂಗವಿಕಲತೆ ಪ್ರಮಾಣಿತ ವೈದ್ಯಕೀಯ ಪ್ರಮಾಣಪತ್ರವಿರಬೇಕು
- ವಾರ್ಷಿಕ ಆದಾಯವು 1,00,000 ಕ್ಕಿಂತ ಕಡಿಮೆ ಆಗಿರಬೇಕು.
- ದೆಹಲಿಯಲ್ಲಿ ಕನಿಷ್ಠ 5 ವರ್ಷಗಳಿಂದ ವಾಸವಿರಬೇಕು.
- ಅಂಗವಿಕಲತಾ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ನಿವಾಸ ಪ್ರಮಾಣಪತ್ರ, ಬ್ಯಾಂಕ್ ಖಾತೆ ವಿವರಗಳನ್ನು ಹೊಂದಿರಬೇಕು.
ಅರ್ಜಿಸುವ ವಿಧಾನ ಹೇಗೆ..?
ನೀವು ಆನ್‌ಲೈನ್,ಆಫ್‌ಲೈನ್ ಮೂಲಕವು ಅರ್ಜಿಯನ್ನು ಸಲ್ಲಿಕೆ ಮಾಡಬಹುದು.ಅದು ಹೇಗೆ ಎಂಬುವುದು ಈ ಕೇಳಗಿನಂತೆ ಇದೆ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ವಿಧಾನ
ಹಂತ 1: ನೀವು ಅಧೀಕೃತ ವೆಬ್‌ಸೈಟ್ Delhi e-District Portalಗೆ ಮೊದಲು ಭೇಟಿ ನೀಡಬೇಕು.
ಹಂತ 2: ನಂತರ ಲಾಗಿನ್/ನೋಂದಣಿಯನ್ನು ಆಯ್ಕೆ ಮಾಡಿಕೊಳ್ಳಿ. ನೀವು ಹೊಸ ಬಳಕೆದಾರರಿದ್ದರೆ "New User" ಮೇಲೆ ಕ್ಲಿಕ್ ಮಾಡಿ ಆಧಾರ್ ಮೂಲಕ ನೋಂದಣಿ ಮಾಡಿಕೊಳ್ಳಿ.
ಹಂತ 3: ನೀವು ಅರ್ಜಿ ಸಲ್ಲಿಸುತ್ತಿರುವ ಸೇವೆ ಆಯ್ಕೆ ಮಾಡಿ. ಹಿರಿಯ ನಾಗರಿಕರ ಪಿಂಚಣಿ ಅಥವಾ ವಿಶೇಷಚೇತನರು ಎಂಬ ಎರಡು ಆಯ್ಕೆಯಲ್ಲಿ ನೀವು ಅರ್ಜಿಸಲ್ಲಿಸುತ್ತಿರುವುದು ಯಾವುದಕ್ಕೆ ಎಂದು ಗಮನದಲಿಟ್ಟುಕೊಂಡು ಅರ್ಜಿ ಸಲ್ಲಿಕೆ ಮಾಡಿ.
ಹಂತ 4: ವೈಯಕ್ತಿಕ ವಿವರ, ಬ್ಯಾಂಕ್ ಖಾತೆ ಮಾಹಿತಿ, ಪಡಿತರ ಚೀಟಿ ಇತ್ಯಾದಿ ಪ್ರಮುಖ ಅಂಶಗಳನ್ನು ಭರ್ತಿ ಮಾಡಿ
ಹಂತ 5: ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿವಯೋಸೂಚಕ ದಾಖಲೆ
ಹಂತ 6: ಫಾರ್ಮ್ ಸಬ್‌ಮಿಟ್ ಮಾಡಿ.ನಂತರ ಅರ್ಜಿ ಸಲ್ಲಿಸಿದ ನಂತರ ಸ್ವೀಕೃತಿ ಸಂಖ್ಯೆ ದೊರೆಯುತ್ತದೆ.
ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
- ಸ್ಥಳೀಯ SDM ಕಚೇರಿ, Citizen Service Centre (CSC) ಗಳಿಂದ ಅರ್ಜಿ ಫಾರ್ಮ್ ಪಡೆಯಿರಿ
- ಅರ್ಜಿಯನ್ನು ಭರ್ತಿ ಮಾಡಿ
- ದಾಖಲೆಗಳನ್ನು ಲಗತ್ತಿಸಿ
- ಅರ್ಜಿಯನ್ನು ಸಂಬಂಧಿತ ಕಚೇರಿಗೆ ಸಲ್ಲಿಸಿ ಮಾಡಿ
ಸಂಕಷ್ಟದಲ್ಲಿರುವ ಮಹಿಳೆಯರಿಗೆ ಪಿಂಚಣಿ ಮೊತ್ತ ಹೆಚ್ಚಳ
ದೆಹಲಿ ಸರ್ಕಾರ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಪಿಂಚಣಿ ಮೊತ್ತವನ್ನು ಹೆಚ್ಚಿಸುವ ಬಗ್ಗೆಯೂ ಕೂಡ ಚಿಂತನೆಯನ್ನು ಮಾಡುತ್ತಿದೆ ಎಂದು ಮೂಲಗಳು ಮಾಹಿತಿಯನ್ನು ತಿಳಿಸಿದೆ. ಸರ್ಕಾರ ದೆಹಲಿಯಲ್ಲಿ ವಾಸವಿರುವ ಮನೆಮನೆಗೆ ಸಮೀಕ್ಷೆಯ ರೂಪದಲ್ಲಿ ಎಲ್ಲಾ ಫಲಾನುಭವಿಗಳ ಪರಿಶೀಲನೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಮಾಹಿತಿಯನ್ನು ತಿಳಿಸಿದ್ದಾರೆ.


Click it and Unblock the Notifications