ಅಪನಗದೀಕರಣಕ್ಕೆ ನಾಲ್ಕು ವರ್ಷ: ಇದರಿಂದ ಮಾಡಿದ ಸಾಧನೆ ಏನು?

deನಾಲ್ಕು ವರ್ಷದ ಹಿಂದೆ (ನವೆಂಬರ್ 8, 2016) ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಟೀವಿಯಲ್ಲಿ ಕಾಣಿಸಿಕೊಂಡು, ಇಂದಿನ ಮಧ್ಯರಾತ್ರಿಯಿಂದಲೇ ಅನ್ವಯ ಆಗುವಂತೆ 500 ಹಾಗೂ 1000 ರುಪಾಯಿ ನೋಟುಗಳನ್ನು ಅಮಾನ್ಯ ಮಾಡಲಾಗಿದೆ ಎಂದು ಘೋಷಣೆ ಮಾಡಿದರು. ಹೀಗೆ ಅವರು ಘೋಷಣೆ ಮಾಡಿದ್ದು ರಾತ್ರಿ ಎಂಟು ಗಂಟೆಗೆ.

ತೆರಿಗೆ ಇಲಾಖೆಯಿಂದ ಮುಚ್ಚಿಟ್ಟು, ಇಟ್ಟುಕೊಂಡಿರುವ ಹಣವನ್ನು ಬಯಲಿಗೆ ತರಬೇಕು ಎಂಬುದು ಅವರ ಗುರಿ ಆಗಿತ್ತು. ಮೋದಿ ಘೋಷಣೆ ಮಾಡಿದ ಆ 500 ಹಾಗೂ 1000 ರುಪಾಯಿ ನೋಟುಗಳ ಪ್ರಮಾಣ ವ್ಯವಸ್ಥೆಯಲ್ಲಿ ಶೇಕಡಾ ಎಂಬತ್ತಾರರಷ್ಟು ಇತ್ತು. ಅಂದಿನ ಮಧ್ಯರಾತ್ರಿಯಿಂದಲೇ ಅವು ಅಮಾನ್ಯ ಆದವು.

ನಿರೀಕ್ಷೆಯಂತೆಯೇ, ಇಡೀ ದೇಶದಲ್ಲಿ ಕೋಲಾಹಲ ಶುರುವಾಯಿತು. ಆ ನಿರ್ಧಾರವನ್ನು ಅಪನಗದೀಕರಣ (ಡಿಮಾನಟೈಸೇಷನ್) ಎನ್ನಲಾಯಿತು. ಜನರು ತಮ್ಮ ಬಳಿ ಇದ್ದ ನೋಟುಗಳನ್ನು ಬದಲಿಸಿಕೊಳ್ಳಲು ಬ್ಯಾಂಕ್ ಗಳ ಎದುರು ಸಾಲುಗಟ್ಟಿ ನಿಂತರು. ನಗದು ವ್ಯವಹಾರವನ್ನೇ ನೆಚ್ಚಿಕೊಂಡಿದ್ದ ಸಣ್ಣ ವ್ಯವಹಾರಗಳು ಮಕಾಡೆ ಮಲಗಿದವು.

ಅಪನಗದೀಕರಣಕ್ಕೆ ಮೂರು ಉದ್ದೇಶ ಇತ್ತು. ಒಂದು: ಕಪ್ಪು ಹಣದ ವಿರುದ್ಧ ಹೋರಾಟ, ಎರಡನೆಯದು ನಕಲಿ ನೋಟಿಗೆ ತಡೆ ಹಾಗೂ ಡಿಜಿಟಲ್ ವ್ಯವಹಾರಕ್ಕೆ ಉತ್ತೇಜನ ನೀಡುವ ಮೂಲಕ ನಗದು ರಹಿತವಾದ ಅರ್ಥವ್ಯವಸ್ಥೆಯ ಸೃಷ್ಟಿ. ಹಾಗಿದ್ದರೆ ಆ ಉದ್ದೇಶಗಳು ಈಡೇರಿದವಾ?

ಕಪ್ಪು ಹಣಕ್ಕೆ ಕೊನೆ

ಕಪ್ಪು ಹಣಕ್ಕೆ ಕೊನೆ

ಅಪನಗದೀಕರಣದ ಅತಿ ಮುಖ್ಯ ಉದ್ದೇಶ ಇದ್ದದ್ದು ಕಪ್ಪು ಹಣಕ್ಕೆ ಕೊನೆ ಹಾಡುವುದು. ಅಂದ ಹಾಗೆ, ಕಪ್ಪು ಹಣ ಅಂದರೆ ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಲೆಕ್ಕ ಸಿಗದೆ ಇರುವಂಥದ್ದು ಅಥವಾ ಆ ನಗದಿಗೆ ಸರ್ಕಾರಕ್ಕೆ ತೆರಿಗೆ ಪಾವತಿಸದೆ ಇರುವುದು. ಆದರೆ ಆ ಉದ್ದೇಶ ಈಡೇರಿತಾ? ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಹಿತಿಯಂತೆ ಎಲ್ಲ ಹಣ (ಶೇಕಡಾ ತೊಂಬತ್ತಕ್ಕಿಂತ ಹೆಚ್ಚು) ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಬಂದಿದೆ. ಅಮಾನ್ಯವಾಗಿದ್ದ 15.41 ಲಕ್ಷ ಕೋಟಿ ರುಪಾಯಿಯೊಳಗೆ 15.31 ಲಕ್ಷ ಕೋಟಿ ರುಪಾಯಿ ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ವಾಪಸಾಗಿದೆ. ಕಳೆದ ವರ್ಷ ಫೆಬ್ರವರಿ ಹೊತ್ತಿಗೆ, ಆಗ ಹಣಕಾಸು ಸಚಿವ ಆಗಿದ್ದ ಪಿಯೂಷ್ ಗೋಯೆಲ್ ಸಂಸತ್ ನಲ್ಲಿ ನೀಡಿದ ಮಾಹಿತಿಯಂತೆ, ಅಪನಗದೀಕರಣವೂ ಸೇರಿದಂತೆ ಕಪ್ಪುಹಣ ವಿರೋಧಿ ಇತರ ನಿಯಮಾವಳಿಗಳ ಮೂಲಕ 1.3 ಲಕ್ಷ ಕೋಟಿ ರುಪಾಯಿ ವಶಪಡಿಸಿಕೊಳ್ಳಲಾಗಿತ್ತು. ಆದರೆ ಮೊದಲಿಗೆ ನಿರೀಕ್ಷೆ ಮಾಡಿದ ಪ್ರಕಾರ, ಅಪನಗದೀಕರಣವೊಂದರಿಂದಲೇ 3- 4 ಲಕ್ಷ ಕೋಟಿ ರುಪಾಯಿ ಸಂಗ್ರಹ ಆಗಬೇಕಿತ್ತು. ಆದ್ದರಿಂದ ವ್ಯವಸ್ಥೆಯಲ್ಲಿನ ಕಪ್ಪು ಹಣ ಬಯಲಿಗೆ ಎಳೆಯುವುದರಲ್ಲಿ ಅಪನಗದೀಕರಣ ವಿಫಲ ಎನ್ನುವುದು ಗೊತ್ತಾಗುತ್ತದೆ.

ನಕಲಿ ನೋಟುಗಳು

ನಕಲಿ ನೋಟುಗಳು

ಮೋದಿ ಸರ್ಕಾರದ ಎರಡನೇ ಅತಿ ದೊಡ್ಡ ಗುರಿ ಇದ್ದದ್ದು ನಕಲಿ ನೋಟುಗಳ ಕಡೆಗೆ. 2016ರಲ್ಲಿ ಅಪನಗದೀಕರಣ ಆರಂಭಿಸಿದಾಗ 6.32 ಲಕ್ಷ ತುಂಡು ನಕಲಿ ನೋಟುಗಳನ್ನು ದೇಶದಾದ್ಯಂತ ವಶಪಡಿಸಿಕೊಳ್ಳಲಾಯಿತು. ಮುಂದಿನ ನಾಲ್ಕು ವರ್ಷದಲ್ಲಿ (2020 ಒಳಗೊಂಡಂತೆ ಇಲ್ಲಿಯ ತನಕ) ಒಟ್ಟು 18.87 ಲಕ್ಷ ತುಂಡುಗಳನ್ನು ದೇಶದಾದ್ಯಂತ ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ವಿವಿಧ ಮುಖಬೆಲೆಯವು ಒಳಗೊಂಡಿವೆ. 2019-20ರಲ್ಲಿ ಬ್ಯಾಂಕಿಂಗ್ ವಲಯದಿಂದ Fake Indian Currency Notes (FICNs) ಕಂಡುಹಿಡಿದಿದ್ದರಲ್ಲಿ 4.6% ಆರ್ ಬಿಐ ಹಾಗೂ 95.4% ಇತರ ಬ್ಯಾಂಕ್ ಗಳ ಪಾಲು ಇವೆ.

ಅಪನಗದೀಕರಣದ ನಂತರ ಕಂಡುಹಿಡಿದ ನಕಲಿ ನೋಟುಗಳ ಪೈಕಿ ಬಹುತೇಕ ರು. 100 ಮುಖಬೆಲೆಯವು- 1.7 ಲಕ್ಷ ತುಂಡುಗಳು, 2019-20ರಲ್ಲಿ, 2.2 ಲಕ್ಷ 2018-19 ಮತ್ತು 2.4 ಲಕ್ಷ ತುಂಡು 2017-18ರಲ್ಲಿ. ಅದರ ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ 144.6 ಪರ್ಸೆಂಟ್, 28.7 ಪರ್ಸೆಂಟ್, 151.2 ಪರ್ಸೆಂಟ್ ಮತ್ತು 37.5 ಪರ್ಸೆಂಟ್ ರು. 10, ರು. 50, ರು. 200 ಮತ್ತು ರು. 500 (ಮಹಾತ್ಮ ಗಾಂಧಿ ಹೊಸ ಸರಣಿ) ಜಾಸ್ತಿ ಆಗಿದೆ ಎಂದು ಆರ್ ಬಿಐ ಮಾಹಿತಿ ನೀಡಿದೆ.

ಹಾಗಿದ್ದರೆ ಬದಲಾವಣೆ ಏನು? ಈಗಲೂ ನಕಲಿ ನೋಟುಗಳು ಮುಂದುವರಿದಿವೆ.

ಚಲಾವಣೆಯಲ್ಲಿ ನೋಟುಗಳು

ಚಲಾವಣೆಯಲ್ಲಿ ನೋಟುಗಳು

ಡಿಜಿಟಲ್ ವ್ಯವಹಾರ ಉತ್ತೇಜಿಸುವುದು ಮತ್ತೊಂದು ಉದ್ದೇಶ ಆಗಿತ್ತು. ಇದು ಸಾಧ್ಯ ಆಯಿತಾ? ನೋಟು ನಿಷೇಧದ ವರ್ಷಗಳ ನಂತರವೂ ನಗದು ರಾಜನ ಸ್ಥಾನದಲ್ಲಿ ಮುಂದುವರಿದಿದೆ. ಆರ್ ಬಿಐ ದತ್ತಾಂಶದ ಪ್ರಕಾರ, ಮಾರ್ಚ್ 2020ರಲ್ಲಿ 24.2 ಲಕ್ಷಕೋಟಿ ಹಣ ಚಲಾವಣೆಯಲ್ಲಿದೆ. 2016ರಲ್ಲಿ ರು. 16.4 ಲಕ್ಷ ಕೋಟಿ ಇತ್ತು. ಕರೆನ್ಸಿ ನೋಟಿನ ಪ್ರಮಾಣ 2020ರಲ್ಲಿ 11.6 ಲಕ್ಷ ತುಂಡಿಗೆ ಹೆಚ್ಚಳವಾಗಿದೆ. ಇದು 2016ರಲ್ಲಿ 9 ಲಕ್ಷ ತುಂಡುಗಳು ಇದ್ದವು.

ಹಾಗೆ ನೋಡಿದರೆ ಯುಪಿಐ ಪ್ರಮಾಣ ಹೆಚ್ಚಾಗಿದೆ. FY18ರಲ್ಲಿ 91.52 ಕೋಟಿ ಇದ್ದದ್ದು ಯುಪಿಐ ಪಾವತಿ ಪ್ರಮಾಣ FY20ಗೆ 1251.86 ಕೋಟಿಗೆ ಹೆಚ್ಚಳ ಆಗಿದೆ. ಜತೆಗೆ ಮೌಲ್ಯ ಕೂಡ 1.09 ಲಕ್ಷ ಕೋಟಿ ರುಪಾಯಿಯಿಂದ 21.31 ಲಕ್ಷ ಕೋಟಿ ರುಪಾಯಿಗೆ ಏರಿಕೆ ಆಗಿದೆ. 2016ರಲ್ಲಿ ವ್ಯವಹಾರ ಪ್ರಮಾಣ 70466 ಇದ್ದದ್ದು 2020ರಲ್ಲಿ 3.4 ಲಕ್ಷಕ್ಕೆ ಏರಿದೆ.

ಡಿಜಿಟಲ್ ವ್ಯವಹಾರ ಇಷ್ಟೆಲ್ಲ ಜಾಸ್ತಿ ಆಗಿದ್ದರೂ ಜನರು ಈಗಲೂ ನಗದಿನ ಮೂಲಕ ವ್ಯವಹಾರ ಮಾಡುವುದನ್ನು ಬಯಸುತ್ತಾರೆ. ಹಾಗಿದ್ದರೆ ಅಂಥ ದೊಡ್ಡ ನಿರ್ಧಾರದಿಂದಲೂ ಡಿಜಿಟಲ್ ವ್ಯವಹಾರ ಪೂರ್ಣವಾಗಿ ಜನರಿಗೆ ಹತ್ತಿರ ಆಗಲೇ ಇಲ್ಲವಾ ಎಂಬ ಪ್ರಶ್ನೆ ಮೂಡಿಸುತ್ತದೆ.

ಅಪನಗದೀಕರಣಕ್ಕೆ ಕಟ್ಟಿದ ಬೆಲೆ

ಅಪನಗದೀಕರಣಕ್ಕೆ ಕಟ್ಟಿದ ಬೆಲೆ

ಅಪನಗದೀಕರಣಕ್ಕೆ ಭಾರತ ಕಟ್ಟಿದ ಬೆಲೆ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಈಗಲೂ ಕಾರಣ ಆಗಿದೆ. ಯಾವ ಉದ್ದೇಶದಿಂದ ಅಪನಗದೀಕರಣ ಘೋಷಣೆ ಆಯಿತು ಹಾಗೂ ಅದರಿಂದ ಆರ್ಥಿಕವಾಗಿ ಆದ ಹಿನ್ನಡೆ ಇತ್ಯಾದಿಯನ್ನು ಗಮನಿಸಿ ನೋಡಿದಾಗ ದೊರೆತ ಫಲಿತಾಂಶ ಬಹಳ ಕಡಿಮೆ ಎಂಬುದು ಹಲವು ವಿಶ್ಲೇಷಕರು ಹಾಗೂ ಆರ್ಥಿಕ ತಜ್ಞರ ಅಭಿಪ್ರಾಯ. ಡಿಜಿಟಲ್ ವ್ಯವಹಾರ ಹೆಚ್ಚಳ ಆಗಿದ್ದನ್ನು ಹೊರತುಪಡಿಸಿದರೆ ಉಳಿದ ಉದ್ದೇಶಗಳು ಈಡೇರಿಲ್ಲ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಅದರ ಪರಿಣಾಮವು ದೇಶದ ಆರ್ಥಿಕತೆ ಮೇಲೆ ಆಯಿತು. ಹಲವು ಉದ್ಯಮಗಳು ಅನುಭವಿಸಿದವು. ಜಿಡಿಪಿಯಲ್ಲಿ ಸತತವಾಗಿ ಇಳಿಕೆ ಕಾಣುವಂತಾಯಿತು. ಈಗ ಗಾಯದ ಮೇಲೆ ಬರೆ ಎಳೆದಂತೆ ಕೊರೊನಾ ಕೂಡ ಸೇರಿಕೊಂಡಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+