ಬೆಂಗಳೂರು, ಜೂನ್ 22: ಭಾರತೀಯರು ಹಾಗೂ ಭಾರತೀಯ ಮೂಲದ ಸಂಸ್ಥೆಗಳು ಸ್ವಿಸ್ ಬ್ಯಾಂಕ್ ಗಳಲ್ಲಿ ಇಟ್ಟಿರುವ ಠೇವಣಿ ಪ್ರಮಾಣವೂ 2024 ರಲ್ಲಿ ಗಮನಾರ್ಹ ಕುಸಿತ ಕಂಡಿದೆ ಎಂದು ಸ್ವಿಟ್ಜರ್ಲೆಂಡ್ ನ ಸೆಂಟ್ರಲ್ ಬ್ಯಾಂಕ್ ನ ವಾರ್ಷಿಕ ಡೇಟಾದಲ್ಲಿ ಬಹಿರಂಗವಾಗಿದೆ. ಈ ಅಂಕಿಅಂಶಗಳ ಪ್ರಕಾರ, ಸ್ವಿಸ್ ಬ್ಯಾಂಕ್ ಗಳಲ್ಲಿನ ಭಾರತೀಯ ನಿಧಿಗಳು 2023 ರಲ್ಲಿ 70% ರಷ್ಟು ಕಡಿಮೆಯಾಗಿದ್ದು , ಪ್ರಸ್ತುತ 1.04 ಶತ ಕೋಟಿ ಸ್ವಿಸ್ ಫ್ರಾಂಕ್ ಗಳಿಗೆ (₹9,771 ಕೋಟಿ)ಗಳಿದ್ದು ಇದು ನಾಲ್ಕು ವರ್ಷಗಳಲ್ಲಿಯೇ ಕನಿಷ್ಟ ಎಂದು ತೋರಿಸಿದೆ.
2021 ರಲ್ಲಿ ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರ ಠೇವಣಿ 14 ವರ್ಷಗಳ ಗರಿಷ್ಟ ಮಟ್ಟವಾದ 30,800 ಕೋಟಿ ರೂ. ಇತ್ತು. ನಂತರ ಸತತ ಎರಡನೇ ವರ್ಷಕ್ಕೆ ಸ್ವಿಸ್ ಬ್ಯಾಂಕ್ ಗಳೊಂದಿಗಿನ ಭಾರತೀಯ ಗ್ರಾಹಕರ ಒಟ್ಟು ಫಂಡ್ ನಲ್ಲಿನ ಕುಸಿತ ಕಂಡಿತು. ಬಾಂಡ್ ಗಳು, ಸೆಕ್ಯುರಿಟೀಸ್ ಮತ್ತು ಇತರ ಹಲವಾರು ಹಣಕಾಸಿನ ಠೇವಣಿಯಲ್ಲಿ ತೀವ್ರ ಕುಸಿತ ಕಂಡಿದೆ. ಇದಲ್ಲದೆ, ಗ್ರಾಹಕರ ಠೇವಣಿ ಖಾತೆಗಳಲ್ಲಿನ ಮೊತ್ತ ಮತ್ತು ಭಾರತದಲ್ಲಿನ ಇತರ ಬ್ಯಾಂಕ್ ಶಾಖೆಗಳ ಮೂಲಕ ಹೊಂದಿರುವ ಹಣವು ಗಮನಾರ್ಹವಾಗಿ ಕುಸಿದಿದೆ ಎಂದು ಡೇಟಾ ತೋರಿಸಿದೆ.

ಇದಲ್ಲದೆ, ಗ್ರಾಹಕರ ಠೇವಣಿ ಖಾತೆಗಳಲ್ಲಿನ ಮೊತ್ತ ಮತ್ತು ಭಾರತದಲ್ಲಿನ ಇತರ ಬ್ಯಾಂಕ್ ಶಾಖೆಗಳ ಮೂಲಕ ಹೊಂದಿರುವ ಹಣವು ಗಮನಾರ್ಹವಾಗಿ ಕುಸಿದಿದೆ ಎಂದು ಡೇಟಾ ತೋರಿಸಿದೆ.
ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯ ರಾಜಕಾರಣಿಗಳು, ಉದ್ಯಮಿಗಳು ಕಪ್ಪು ಹಣ ಇರಿಸಿದ್ದಾರೆಂಬ ವಿಚಾರ ಕಳೆದ ಕೆಲ ವರ್ಷಗಳಿಂದ ಚರ್ಚೆಯಾಗುತ್ತಿದೆ. ಆದರೆ ಇವುಗಳು ಸ್ವಿಸ್ ನ್ಯಾಷನಲ್ ಬ್ಯಾಂಕ್ (SNB) ಗೆ ಬ್ಯಾಂಕ್ ವರದಿಯೂ ಅಧಿಕೃತ ಅಂಕಿಅಂಶಗಳಾಗಿದ್ದು, ಸ್ವಿಟ್ಜರ್ಲೆಂಡ್ನಲ್ಲಿ ಭಾರತೀಯರು ಹೊಂದಿರುವ ಹೆಚ್ಚು-ಚರ್ಚಿತ ಕಪ್ಪು ಹಣದ ಪ್ರಮಾಣವನ್ನು ಸೂಚಿಸುವುದಿಲ್ಲ. ಈ ಅಂಕಿಅಂಶಗಳು ಭಾರತೀಯರು, ಎನ್ಆರ್ ಐ ಗಳು ಅಥವಾ ಇತರರು ಸ್ವಿಸ್ ಬ್ಯಾಂಕ್ಗಳಲ್ಲಿ ಮೂರನೇ ದೇಶದ ಘಟಕಗಳ ಹೆಸರಿನಲ್ಲಿ ಹೊಂದಿರಬಹುದಾದ ಹಣವನ್ನು ಒಳಗೊಂಡಿಲ್ಲ.
ಒಟ್ಟು ಮೊತ್ತವು 2006 ರಲ್ಲಿ ಸುಮಾರು 6.5 ಶತಕೋಟಿ ಸ್ವಿಸ್ ಫ್ರಾಂಕ್ ಗಳ ದಾಖಲೆಯಲ್ಲಿತ್ತು, ನಂತರ ಇದು SNB ಡೇಟಾದ ಪ್ರಕಾರ 2011, 2013, 2017, 2020 ಮತ್ತು 2021 ಸೇರಿದಂತೆ ಕೆಲವು ವರ್ಷಗಳನ್ನು ಹೊರತುಪಡಿಸಿ, ಹೆಚ್ಚಾಗಿ ಕೆಳಮುಖ ಹಾದಿಯಲ್ಲಿದೆ.
ಭಾರತೀಯ ನಿವಾಸಿಗಳು ಹೊಂದಿರುವ ಆಸ್ತಿಗಳನ್ನು 'ಕಪ್ಪು ಹಣ' ಎಂದು ಪರಿಗಣಿಸಲಾಗುವುದಿಲ್ಲಆದರೆ ತೆರಿಗೆ ವಂಚನೆ ಮತ್ತು ವಂಚನೆಯ ವಿರುದ್ಧದ ಹೋರಾಟದಲ್ಲಿ ಅವರು ಭಾರತಕ್ಕೆ ಸಕ್ರಿಯವಾಗಿ ಬೆಂಬಲ ನೀಡುವುದಾಗಿ ಎಂದು ಸ್ವಿಸ್ ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಸ್ವಿಟ್ಜರ್ಲೆಂಡ್ ಮತ್ತು ಭಾರತದ ನಡುವೆ ತೆರಿಗೆ ವಿಷಯಗಳಲ್ಲಿ ಮಾಹಿತಿಯ ಸ್ವಯಂಚಾಲಿತ ವಿನಿಮಯವು 2018 ರಿಂದ ಜಾರಿಯಲ್ಲಿದೆ. ಈ ಚೌಕಟ್ಟಿನ ಅಡಿಯಲ್ಲಿ, 2018 ರಿಂದ ಸ್ವಿಸ್ ಹಣಕಾಸು ಸಂಸ್ಥೆಗಳೊಂದಿಗೆ ಖಾತೆಗಳನ್ನು ಹೊಂದಿರುವ ಎಲ್ಲಾ ಭಾರತೀಯ ನಿವಾಸಿಗಳ ವಿವರವಾದ ಹಣಕಾಸಿನ ಮಾಹಿತಿಯನ್ನು ಮೊದಲ ಬಾರಿಗೆ 2019 ಸೆಪ್ಟೆಂಬರ್ ನಲ್ಲಿ ಭಾರತೀಯ ತೆರಿಗೆ ಅಧಿಕಾರಿಗಳಿಗೆ ಒದಗಿಸಲಾಗಿದೆ ಮತ್ತು ಇದನ್ನು ಪ್ರತಿ ವರ್ಷ ಅನುಸರಿಸಲಾಗುತ್ತಿದೆ.
ಇದರ ಜೊತೆಗೆ, ಪ್ರಾಥಮಿಕ ಸಾಕ್ಷ್ಯವನ್ನು ಸಲ್ಲಿಸಿದ ನಂತರ ಸ್ವಿಟ್ಜರ್ಲೆಂಡ್ ಆರ್ಥಿಕ ಅಕ್ರಮಗಳಲ್ಲಿ ತೊಡಗಿರುವ ಶಂಕಿತ ಭಾರತೀಯರ ಖಾತೆಗಳ ವಿವರಗಳನ್ನು ಸಕ್ರಿಯವಾಗಿ ಹಂಚಿಕೊಳ್ಳುತ್ತಿದೆ. ಇದುವರೆಗೆ ನೂರಾರು ಪ್ರಕರಣಗಳಲ್ಲಿ ಇಂತಹ ಮಾಹಿತಿ ವಿನಿಮಯ ನಡೆದಿದೆ.
CHF 254 ಬಿಲಿಯನ್ ಮೂಲಕ ಸ್ವಿಸ್ ಬ್ಯಾಂಕ್‌ಗಳಲ್ಲಿನ ವಿದೇಶಿ ಗ್ರಾಹಕರ ಫಂಡ್ ನಲ್ಲಿ ಯುಕೆ ಅಗ್ರಸ್ಥಾನದಲ್ಲಿದ್ದರೆ, ಯುಎಸ್ (CHF 71 ಬಿಲಿಯನ್) ಎರಡನೇ ಸ್ಥಾನದಲ್ಲಿ ಮತ್ತು ಫ್ರಾನ್ಸ್ (CHF 64 ಬಿಲಿಯನ್) ಮೂರನೇ ಸ್ಥಾನದಲ್ಲಿದೆ. ಇದಾದ ಬಳಿಕ ವೆಸ್ಟ್ ಇಂಡೀಸ್, ಜರ್ಮನಿ, ಹಾಂಗ್ ಕಾಂಗ್, ಸಿಂಗಾಪುರ್, ಲಕ್ಸೆಂಬರ್ಗ್ ಮತ್ತು ಗುರ್ನಸಿ ನಂತರದ ಸ್ಥಾನದಲ್ಲಿದೆ. ಭಾರತವು 67 ನೇ ಸ್ಥಾನದಲ್ಲಿದೆ.


Click it and Unblock the Notifications