ನವದೆಹಲಿ, ಏಪ್ರಿಲ್ 2: ಸೆಲ್ಪ್ ಮೇಡ್ ಮಹಿಳಾ ಉದ್ಯಮಿಗಳ ಬದುಕೇ ಅತ್ಯಂತ ಸ್ಪೂರ್ತಿದಾಯಕ. ಇಂತಹ ಉದ್ಯಮಿಗಳು ಅವರು ಅಚಲವಾದ ಧೈರ್ಯದೊಂದಿಗೆ ಅನಾನುಕೂಲ ಪರಿಸ್ಥಿತಿಗಳ ನಡುವೆಯೂ ಹೋರಾಟ ನಡೆಸುತ್ತಾರೆ ಮಾತ್ರವಲ್ಲ ಸೋಲುಗಳನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ.
ಎಷ್ಟೇ ಅಡೆತಡೆ ಬಂದರೂ ತಾವು ಸ್ಥಾಪಿಸಿದ ಉದ್ಯಮಗಳನ್ನು ಕಷ್ಟಪಟ್ಟು ಒಂದು ಹಂತಕ್ಕೆ ತಂದು ನಿಲ್ಲಿಸುತ್ತಾರೆ. ಇದಕ್ಕೆ ಉದಾಹರಣೆಯಾಗಿ ನಿಲ್ಲುತ್ತಾರೆ ಭಾರತದ ಅತ್ಯಂತ ಕಿರಿಯ ಸ್ವಯಂ ನಿರ್ಮಿತ ಮಹಿಳಾ ಉದ್ಯಮಿಗಳಲ್ಲಿ ನೇಹಾ ನಾರ್ಖೆಡೆ.

ಯುನೈಟೆಡ್ ಸ್ಟೇಟ್ಸ್‌ನಲ್ಲಿ ಶಿಕ್ಷಣ ಪಡೆದು 75,000 ಕೋಟಿ ರೂಪಾಯಿಗಳ ಬೃಹತ್ ಮೌಲ್ಯವನ್ನು ಸಾಧಿಸಿದ ಕಂಪನಿಯನ್ನು ಸ್ಥಾಪಿಸಿದ ನೇಹಾ ನಾರ್ಖೆಡೆ ಅವರನ್ನು "ಫೋರ್ಬ್ಸ್" ಸಂಸ್ಥೆಯೂ ಯುನೈಟೆಡ್ ಸ್ಟೇಟ್ಸ್‌ನಲ್ಲಿ "ಸೆಲ್ಪ್ ಮೇಡ್ ಶ್ರೀಮಂತ ಮಹಿಳೆಯರ ಹೆಸರಾಂತ ಪಟ್ಟಿ"ಯಲ್ಲಿ ಗುರುತಿಸಿತ್ತು. ಇದು ಅವರ ಶ್ರಮಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಹಾಗೆಂದು ಈ ಅದೃಷ್ಟ ನೇಹಾ ಅವರಿಗೆ ಸುಲಭದಲ್ಲಿ ಒಲಿದು ಬರಲಿಲ್ಲ. ಯಾಕೆಂದರೆ ಈ ಹಾದಿಯಲ್ಲಿ ಗೆಲುವಿನಷ್ಟೇ ಸೋಲುಗಳ ಪಾಲನ್ನು ಹೊಂದಿದ್ದರು.
ಪುಣೆಯಲ್ಲಿ ಬೆಳೆದ ನೇಹಾ ಅವರು, ಅಮೇರಿಕಾದ ಜಾರ್ಜಿಯಾ ಟೆಕ್ ಮತ್ತು ಪುಣೆಯ ವಿಶ್ವವಿದ್ಯಾನಿಯದಲ್ಲಿ ಇನ್ ಸ್ಟ್ರಿಟ್ಯೂಟ್ ಆಫ್ ಕಂಪ್ಯೂಟರ್ ಟೆಕ್ನಾಲಜಿಯಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ ಪಡೆದಿದ್ದಾರೆ. ಅಮೆರಿಕಾದಲ್ಲಿ ತನ್ನ ಸ್ವಂತ ಕಂಪನಿಯಾದ ಕನ್ಫ್ಲುಯೆಂಟ್ ಅನ್ನು ಆರಂಭಿಸುವ ಮೊದಲು ಲಿಂಕ್ಡ್‌ಇನ್ ಮತ್ತು ಒರಾಕಲ್‌ನಂತಹ ಕಂಪನಿಗಳಿಗೆ ಕೆಲಸ ಮಾಡಿದ್ದರು.
2021 ರಲ್ಲಿ, ಅವರು ಹುಟ್ಟುಹಾಕಿದ ಕಂಪನಿ IPO ಮೂಲಕ ಸಾರ್ವಜನಿಕವಾಯಿತು. ನೇಹಾ ನಂತರ 2021 ರಲ್ಲಿ ಭಾರತದಲ್ಲಿ 8 ನೇ ಶ್ರೀಮಂತ ಮಹಿಳೆಯಾಗಿ ಸ್ಥಾನ ಪಡೆದಿದ್ದಾರೆ. ಇಂದು ನೇಹಾ ಅವರು ಅಮೆರಿಕಾದಲ್ಲಿ ಅತ್ಯಂತ ಯಶಸ್ವಿ ಮಹಿಳಾ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ. ಬಾಲ್ಯದಿಂದಲೂ ಇಂದಿರಾ ಗಾಂಧಿ, ಕಿರಣ್ ಬೇಡಿ ಮತ್ತು ಇಂದ್ರಾ ನೂಯಿ ಅವರಂತಹ ಹೆಸರಾಂತ ವ್ಯಕ್ತಿಗಳ ಪುಸ್ತಕಗಳನ್ನು ಓದಲು ಪ್ರೇರೇಪಿಸಿದ ತಂದೆಯೇ ತಮ್ಮ ಯಶಸ್ಸಿಗೆ ಕಾರಣ ಎನ್ನುತ್ತಾರೆ ನೇಹಾ.
2021 ರಲ್ಲಿ, ಅವರ ಕಂಪನಿಯು IPOಗೆ ಹೋದ ಪರಿಣಾಮ ನೇಹಾ ನಾರ್ಖೆಡೆ ಅವರ ನಿವ್ವಳ ಮೌಲ್ಯವು 13,380 ಕೋಟಿ ರೂ.ಗೆ ಏರಿತ್ತು. ಆದರೆ 2022 ರಲ್ಲಿ ಅವರ ಸಂಪತ್ತಿನಲ್ಲಿ ಗಣನೀಯ ಕುಸಿತ ಕಂಡುಬಂತು. 2022 ರ ಹುರುನ್ ಶ್ರೀಮಂತ ಪಟ್ಟಿಯ ಪ್ರಕಾರ, ಅವರ ಸಂಪತ್ತು 4,700 ಕೋಟಿ ರೂ.ಗೆ ಕಡಿಮೆಯಾಗಿದೆ. ಅಂದರೆ ನೇಹಾ ಅವರಿಗೆ ಒಂದು ವರ್ಷದೊಳಗೆ ಸುಮಾರು 8,600 ಕೋಟಿ ರೂ.ಗಳ ಬೃಹತ್ ನಷ್ಟವಾಗಿದೆ. ಆರಂಭಿಕ ಹಿನ್ನಡೆಯ ಹೊರತಾಗಿಯೂ, ನೇಹಾ ಅವರು ತಮ್ಮ ಸಂಸ್ಥೆಯನ್ನು ಮತ್ತೆ ಚೇತರಿಸಿಕೊಳ್ಳುವ ಹಾದಿಗೆ ತರುವಲ್ಲಿ ಯಶಸ್ವಿಯಾದರು.
2023 ರ ಮಾರ್ಚ್ ನಲ್ಲಿ, ನಾರ್ಖೇಡ್ ತನ್ನ ಹೊಸ ಕಂಪನಿಯನ್ನು ಸ್ಥಾಪಿಸಿದು. ಈ ಸಂಸ್ಥೆಯೂ "ಆಸಿಲಾರ್" ಎಂದು ಹೆಸರಿಸಿದ್ದು, ಇದು ವಂಚನೆ ಪತ್ತೆ ಸಂಸ್ಥೆ ಯಾಗಿದ್ದು. ನೇಹಾ ಅವರು ಈ ಸಂಸ್ಥೆಯ ಸಹ ಸಂಸ್ಥಾಪಕ ಮತ್ತು CEO ಆಗಿದ್ದಾರೆ.


Click it and Unblock the Notifications