ಸಿನಿಮಾ ದಂತಕಥೆ ದೇವ್ ಆನಂದ್ ಅವರ ಬಂಗಲೆಯನ್ನು ನೋಡಿಕೊಳ್ಳುವವರು ಯಾರೂ ಕೂಡಾ ಇಲ್ಲ. ಅದರಿಂದಾಗಿ ಈ ಜುಹು ಬಂಗಲೆಯನ್ನು ಸುಮಾರು 400 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ ಎಂದು ವರದಿಯಾಗಿದೆ. ಆದರೆ ಈ ವರದಿಯ ಬಗ್ಗೆ ದೇವ್ ಆನಂದ್ ಅವರ ಸೋದರಳಿಯ ಕೇತನ್ ಆನಂದ್ ಸ್ಪಷ್ಟಣೆಯನ್ನು ನೀಡಿದ್ದಾರೆ.
ಸೂಪರ್‌ಸ್ಟಾರ್ ಅವರ ಕುಟುಂಬವು "ಜುಹು ಬಂಗಲೆಯನ್ನು ಸರಿಸುಮಾರು 350-400 ಕೋಟಿ ರೂಪಾಯಿಗೆ ಮಾರಾಟ ಮಾಡಿದೆ" ಎಂಬ ವರದಿಗಳನ್ನು ದೇವ್ ಆನಂದ್ ಅವರ ಸೋದರಳಿಯ ಕೇತನ್ ಆನಂದ್ ತಳ್ಳಿಹಾಕಿದ್ದಾರೆ. ಚೇತನ್ ಆನಂದ್ ಅವರ ಪುತ್ರ ಕೇತನ್ ಆನಂದ್ ಈ ಬಗ್ಗೆ ಎಕಾನಮಿಕ್ ಟೈಮ್ಸ್‌ಗೆ ಪ್ರತಿಕ್ರಿಯೆ ನೀಡಿದ್ದು, " ಇಲ್ಲ, ಇದು ಸುಳ್ಳು ಸುದ್ದಿ. ನಾನು ದೇವಿನಾ ಮತ್ತು ಕುಟುಂಬದೊಂದಿಗೆ ಮಾತನಾಡಿದ್ದೇವೆ," ಎಂದು ಹೇಳಿದರು.

ಸೂಪರ್‌ಸ್ಟಾರ್ ಅವರ ಪತ್ನಿ ಕಲ್ಪನಾ ಕಾರ್ತಿಕ್ ಮತ್ತು ಅವರ ಮಕ್ಕಳಾದ ಸುನೀಲ್ ಆನಂದ್ ಮತ್ತು ದೇವಿನಾ ಆನಂದ್ ಜೊತೆ ವಾಸಿಸುತ್ತಿದ್ದ ದೇವ್ ಆನಂದ್ ಅವರ ಜುಹು ಮನೆಯನ್ನು ರಿಯಲ್ ಎಸ್ಟೇಟ್ ಕಂಪನಿಗೆ ಮಾರಾಟ ಮಾಡಲಾಗಿದೆ ಎಂದು ವರದಿಯಾದ ಒಂದು ದಿನದ ಬಳಿಕವೇ ಈ ಹೇಳಿಕೆಯನ್ನು ಚೇತನ್ ಆನಂದ್ ನೀಡಿದ್ದಾರೆ.
"ಒಪ್ಪಂದವೂ ಮುಗಿದಿದೆ, ಕಾಗದದ ಕೆಲಸ ನಡೆಯುತ್ತಿದೆ. ಈ ಪ್ರದೇಶದಲ್ಲಿ ಪ್ರಮುಖ ಕೈಗಾರಿಕೋದ್ಯಮಿಗಳ ಬಂಗಲೆಗಳನ್ನು ಹೊಂದಿರುವ ಪ್ರಮುಖ ಸ್ಥಳವಾಗಿರುವುದರಿಂದ ಇದನ್ನು ಅಂದಾಜು 350-400 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ. ಈ ಸ್ಥಳದಲ್ಲಿ ಈಗ 22 ಮಹಡಿಗಳ ಉದ್ದದ ಟವರ್ ನಿರ್ಮಾಣ ಮಾಡಲಾಗುತ್ತದೆ," ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿತ್ತು.
ದೇವ್ ಆನಂದ್ ಅವರ ಮಗ ಸುನೀಲ್ ಅಮೇರಿಕಾದಲ್ಲಿದ್ದರೆ, ಮಗಳು ದೇವೀನಾ ತಾಯಿ ಕಲ್ಪನಾ ಕಾರ್ತಿಕ್ ಅವರೊಂದಿಗೆ ಊಟಿಯಲ್ಲಿ ವಾಸಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮುಂಬೈನಲ್ಲಿ ಆಸ್ತಿಯನ್ನು ನೋಡಿಕೊಳ್ಳಲು ಯಾರೂ ಇಲ್ಲ, ಆದ್ದರಿಂದ ಅವರು ಬಂಗಲೆಯನ್ನು ಮಾರಾಟ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅದೇ ಕಾರಣಕ್ಕಾಗಿ ಮಹಾರಾಷ್ಟ್ರದ ಪನ್ವೇಲ್‌ನಲ್ಲಿ ಕೆಲವು ಆಸ್ತಿಯನ್ನು ಸಹ ಮಾರಾಟ ಮಾಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಸುಮಾರು 10 ವರ್ಷಗಳ ಹಿಂದೆ, ಮುಂಬೈನಲ್ಲಿರುವ ದೇವ್ ಆನಂದ್ ಅವರ ಸ್ಟುಡಿಯೋವನ್ನು ಮಾರಾಟ ಮಾಡಿದ ನಂತರ, ಕುಟುಂಬವು ಮೂರು ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಿದೆ. "ಒಂದನ್ನು ಸುನೀಲ್‌ಗೆ, ಇನ್ನೊಂದನ್ನು ದೇವಿನಾಗೆ ಮತ್ತು ಮೂರನೆಯದನ್ನು ಅವನ ಹೆಂಡತಿ ಕಲ್ಪನಾಗೆ ನೀಡಲಾಯಿತು. ಜುಹು ಆಸ್ತಿಯಲ್ಲಿ ಪ್ರತಿಯೊಬ್ಬರೂ ಪಾಲು ಪಡೆಯುತ್ತಾರೆ," ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಹೇಳಿದೆ.
ದೇವ್ ಆನಂದ್ ಅವರು ಗೈಡ್, ಅಸಲಿ-ನಕ್ಲಿ, ಸಿಐಡಿ, ಹಮ್ ದೋನೋ, ಜಾನಿ ಮೇರಾ ನಾಮ್, ಕಾಲಾ ಪಾನಿ, ಮಂಜಿಲ್, ಪ್ರೇಮ್ ಪೂಜಾರಿ ಮತ್ತು ಹರೇ ರಾಮ ಹರೇ ಕೃಷ್ಣ ಮುಂತಾದ ಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಲೆಜೆಂಡರಿ ಸ್ಟಾರ್ ಲಂಡನ್‌ನ ವಾಷಿಂಗ್ಟನ್ ಮೇಫೇರ್ ಹೋಟೆಲ್‌ನಲ್ಲಿ ಡಿಸೆಂಬರ್ 3, 2011 ರಂದು ನಿಧನರಾದರು.


Click it and Unblock the Notifications