1990ರ ದಶಕದಲ್ಲಿ ಬೆಂಗಳೂರಿನ ಹೊರವಲಯದ ಒಂದು ಸಣ್ಣ ರೇಷ್ಮೆ ಕೃಷಿ ಗ್ರಾಮವಾಗಿದ್ದ ದೇವನಹಳ್ಳಿ (Devanahalli), ಈಗ ನಗರದ ಪ್ರಮುಖ ಅಭಿವೃದ್ಧಿ ನಗರಗಳಲ್ಲಿ ಒಂದಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ಕಾರ್ಯಾರಂಭ ಮಾಡಿದಾಗಿನಿಂದ, ಇದು ಕಳೆದ ಎರಡು ದಶಕಗಳಲ್ಲಿ ಉದ್ಯೋಗ, ಕೈಗಾರಿಕೆ ಮತ್ತು ಹೂಡಿಕೆಯಲ್ಲಿ ಆರ್ಥಿಕವಾಗಿ ಮುನ್ನಗುತ್ತಿದೆ. ಇದೀಗ ಈ ಬೆಳವಣಿಗೆಗಳನ್ನ ನೋಡಿದ ರಾಜ್ಯ ಸರ್ಕಾರ (Karnataka Govt) ಮಹತ್ವದ ನಿರ್ಧಾರವೊಂದು ಕೈಗೊಂಡಿದೆ.

ಹೌದು, ಈಗಾಗಲೇ ಬೆಂಗಳೂರಿಗೆ ಹತ್ತಿರವಿರುವ ದೇವನಹಳ್ಳಿ ಹಲವು ಕ್ಷೇತ್ರಗಳಲ್ಲಿ ಬೆಳವಣಿಗೆ ಕಾಣುತ್ತಿದೆ. ಈ ಬೆಳವಣಿಗೆಗೆ ಮತ್ತಷ್ಟು ಪ್ರೋತ್ಸಾಹಿಸುವ ಉದ್ದೇಶದಿಂದ ಇದೀಗ ಕರ್ನಾಟಕ ಸರ್ಕಾರವು ಇತ್ತೀಚೆಗೆ "ದೇವನಹಳ್ಳಿ ಸ್ಪೆಷಲ್ ಇನ್ವೆಸ್ಟ್‌ಮೆಂಟ್ ರೀಜಿಯನ್" (Devanahalli Special Investment Region-SIR) ಅನ್ನು ಘೋಷಣೆ ಮಾಡಿದೆ. ಈ SIR ಟ್ಯಾಗ್‌ನೊಂದಿಗೆ ಸುಮಾರು 3,117.9 ಎಕರೆ ಜಮೀನನ್ನು ಒಂದೇ ಕಾನೂನು ಚೌಕಟ್ಟಿನಡಿ ತರುವ ಮೂಲಕ ರಾಜ್ಯ ಸರ್ಕಾರ ದೊಡ್ಡ ಮಟ್ಟದಲ್ಲಿ ಹೂಡಿಕೆಗೆ ಅವಕಾಶವನ್ನು ನೀಡುತ್ತಿದೆ.
ಪ್ರಸ್ತಾವಿತ ಏರ್‌ಪೋರ್ಟ್ ಸಿಟಿ, ಇನ್ಫರ್ಮೇಷನ್ ಟೆಕ್ನಾಲಜಿ ಇನ್ವೆಸ್ಟ್‌ಮೆಂಟ್ ರೀಜಿಯನ್ (ITR), ಏರೋಸ್ಪೇಸ್ ಪಾರ್ಕ್ ಮತ್ತು ಉನ್ನತ ಮೌಲ್ಯದ ವಸತಿ ಯೋಜನೆಗಳಿಂದಾಗಿ ದೇವನಹಳ್ಳಿ ಉತ್ತರ ಬೆಂಗಳೂರಿನ ವಿಸ್ತರಣೆಗೆ ಕೇಂದ್ರಬಿಂದುವಾಗಿದೆ. ಜಾಗತಿಕ ಉತ್ಪಾದಕರು, ತಂತ್ರಜ್ಞಾನ ಸಂಸ್ಥೆಗಳು ಮತ್ತು ಸಂಬಂಧಿತ ಕೈಗಾರಿಕೆಗಳ ಹರಿವು ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಿದ್ದು, ಈ ಮೂಲಕ ದೇವನಹಳ್ಳಿ ಉನ್ನತ ಬೆಳವಣಿಗೆಯ ಕಾರಿಡಾರ್ ಆಗಿ ಬಲಪಡಿಸಿದೆ.
ದೇವನಹಳ್ಳಿ ಅಭಿವೃದ್ಧಿಗೆ ಹೊಸ ಪ್ಲಾನ್!
ಇದೀಗ ಪ್ರದೇಶದ ಬೆಳವಣಿಗೆಯನ್ನು ಮತ್ತಷ್ಟು ಬಲಪಡಿಸಲು, ರಾಜ್ಯ ಸರ್ಕಾರ 'ದೇವನಹಳ್ಳಿ ವಿಶೇಷ ಹೂಡಿಕೆ ಪ್ರದೇಶ' (SIR) ವನ್ನು ಇತ್ತೀಚೆಗೆ ಅಧಿಸೂಚಿಸಿದೆ. ಇದು 13 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ 3,117.9 ಎಕರೆ ಪ್ರದೇಶವನ್ನು ಒಳಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (KIADB) ಈ ಉಪಕ್ರಮವನ್ನು ಕೈಗೊಂಡಿದೆ.
ಏನಿದರ ಉದ್ದೇಶ?
ಕೆಐಎಡಿಬಿ ಯ ಈ ಉಪಕ್ರಮದಿಂದಾಗಿ, ದೇವನಹಳ್ಳಿ ಜನರಲ್ ಫೇಸ್ 1, ಜನರಲ್ ಇಂಡಸ್ಟ್ರಿಯಲ್ ಏರಿಯಾ ಫೇಸ್ 2 ಮತ್ತು ಅಧಿನಾರಾಯಣ ಹೊಸಹಳ್ಳಿ ಫೇಸ್ 2 ರಂತಹ ಪ್ರಮುಖ ಕೈಗಾರಿಕಾ ಕ್ಲಸ್ಟರ್‌ಗಳನ್ನು ವಿಶ್ವ ದರ್ಜೆ ಮಟ್ಟದಲ್ಲಿ, ಜೊತೆಗೆ ಮೂಲಸೌಕರ್ಯ ಮತ್ತು ನಾಗರಿಕ ಸೌಲಭ್ಯಗಳೊಂದಿಗೆ ಜಾಗತಿಕವಾಗಿ ಸ್ಪರ್ಧಾತ್ಮಕ ಆರ್ಥಿಕ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸುವ ಗುರಿ ಹೊಂದಿದೆ.
ಕೆಐಎಡಿಬಿ ಅಧಿಕಾರಿಗಳ ಪ್ರಕಾರ, SIR ಅಧಿಸೂಚನೆಯು ಕೈಗಾರಿಕೋದ್ಯಮಿಗಳು ಮತ್ತು ಉದ್ಯಮಿಗಳು ವ್ಯಕ್ತಪಡಿಸಿದ್ದ ದೀರ್ಘಕಾಲದ ಮೂಲಸೌಕರ್ಯ ಸಮಸ್ಯೆಗಳಿಗೆ ದೊಡ್ಡ ಪರಿಹಾರ ನೀಡುತ್ತದೆ.
ಈ SIR ಮಾಡಿದ್ದು ಏಕೆ?
ಕರ್ನಾಟಕ ಇಂಡಸ್ಟ್ರಿಯಲ್ ಏರಿಯಾಸ್ ಡೆವಲಪ್‌ಮೆಂಟ್ ಬೋರ್ಡ್ (KIADB) ಮೂಲಕ ಈ ಯೋಜನೆ ಜಾರಿಗೆ ತರಲಾಗಿದೆ, ಇದರ ಮೂಲಕ ಈಗಾಗಲೇ ಇರುವ ಪ್ರಮುಖ ಕೈಗಾರಿಕಾ ಪ್ರದೇಶಗಳನ್ನು ಒಂದೇ ಚೌಕಟ್ಟಿನಲ್ಲಿ ಸೇರಿಸಿ, ಅವುಗಳನ್ನು ಜಾಗತಿಕವಾಗಿ ಗುರುತಿಸುವುದಾಗಿದೆ. ಇನ್ನು ಉದ್ಯಮಿಗಳ, ಕೈಗಾರಿಕೋದ್ಯಮಿಗಳ ದೂರುಗಳಿಗೆ ಪರಿಹಾರ ನೀಡಲಾಗುತ್ತದೆ.
ಸ್ಥಳೀಯ ಗ್ರಾಮ ಪಂಚಾಯಿತಿಗಳು ಈ ಬಗ್ಗೆ ತೆರಿಗೆ ಪಾವತಿಸಿದರೂ, ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಯಾರೂ ಗಮನ ನೀಡುತ್ತಿರಲಿಲ್ಲ. ಇದರಿಂದ ಉತ್ಪಾದನೆ ಮತ್ತು ಉದ್ಯಮಗಳ ಕೆಲಸಕ್ಕೆ ಸಮಸ್ಯೆಯುಂಟುಮಾಡುತ್ತಿತ್ತು. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಇನ್ಮೇಲೆ ಈ ಎಸ್‌ಐಆರ್‌ನಿಂದಾಗಿ, ಈ ಪ್ರದೇಶಗಳು ಸ್ಥಳೀಯ ಸಂಸ್ಥೆಗಳ ನಿಯಂತ್ರಣಕ್ಕೆ ಒಳಪಡುವುದಿಲ್ಲ, ಬದಲಾಗಿ ನೇರವಾಗಿ ರಾಜ್ಯ ಸರ್ಕಾರದ (KIADB) ನಿಯಂತ್ರಣಕ್ಕೆ ಬರುತ್ತದೆ. ಇದರಿಂದ ಅಭಿವೃದ್ಧಿಯೂ ವೇಗವಾಗುತ್ತದೆ, ಯಾವುದೇ ಸಮಸ್ಯೆಯೂ ಬರುವುದಿಲ್ಲ ಎಂಬುದು ಅಭಿಪ್ರಾಯ.
More From GoodReturns

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Good Friday 2026: ಈ ವರ್ಷ ಗುಡ್ ಫ್ರೈಡೇ ಯಾವಾಗ? ಈಸ್ಟರ್ ದಿನಾಂಕ ಮತ್ತು ಸಂಪೂರ್ಣ ಮಾಹಿತಿ ತಿಳಿಯಿರಿ

Karnataka Rain: ಕರ್ನಾಟಕದಲ್ಲಿ ಇನ್ನೆರಡು ದಿನ ಮಳೆಯಾರ್ಭಟ ಫಿಕ್ಸ್; ಜನರೇ ಎಚ್ಚರ!

Ugadi 2026 Wishes: ಈ ವರ್ಷದ ‘ಯುಗಾದಿ’ ಹೊಸ ಬೆಳಕು ತರಲಿ- ನಿಮ್ಮ ಪ್ರೀತಿ ಪಾತ್ರರಿಗೆ ಈ ರೀತಿ ಶುಭಾಶಯ ತಿಳಿಸಿ

Bengaluru 2nd Airport: ಬೆಂಗಳೂರು 2ನೇ ಏರ್‌ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ



Click it and Unblock the Notifications