ಕೆಲ ದಿನಗಳ ಹಿಂದೆ ಮಹಾರಾಷ್ಟ್ರದಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತ ಸಾಧಿಸಿದ್ದ ಎನ್‌ಡಿಎ ಇದೀಗ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಘೋಷಿಸಿದೆ. ಸದ್ಯ ಮಹಾರಾಷ್ಟ್ರದ ಪ್ರಮುಖ ಬಿಜೆಪಿ ನಾಯಕರಲ್ಲಿ ಒಬ್ಬರೆಂದು ಗುರುತಿಸಿಕೊಂಡಿರುವ ಫಡ್ನವೀಸ್ ಅವರು ರಾಜ್ಯ ಬಿಜೆಪಿಯ ಪ್ರಭಾವಿ ನಾಯಕ ಕೂಡ ಆಗಿದ್ದಾರೆ. ಇನ್ನು ಚುನಾವಣೆಗೂ ಮುನ್ನ ಅವರು ನಾಗ್ಪುರ ನೈಋತ್ಯ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿರುವ ಹಿನ್ನೆಲೆಯಲ್ಲಿ ಸಲ್ಲಿಸಿದ್ದ ನಾಮಪತ್ರದಲ್ಲಿ ದೇವೇಂದ್ರ ಅವರು ತಮ್ಮ ಹಣಕಾಸಿನ ವಿವರಗಳನ್ನು ನೀಡಿದ್ದರು.
ದೇವೇಂದ್ರ ಬಳಿ ಇರುವ ಆಸ್ತಿ ಎಷ್ಟು?
ಇನ್ನು ದೇವೇಂದ್ರ ಬಳಿಯ ಸದ್ಯದ ಆಸ್ತಿ ಪ್ರಮಾಣ ಬಗ್ಗೆ ನೋಡುವುದಕ್ಕಿಂತ ಮುನ್ನ ಅವರು ಕಳೆದ ಎರಡು ವರ್ಷಗಳಲ್ಲಿ ಅವರ ಸಂಪತ್ತನ್ನು ಗಮನ ಹರಿಸುವುದು ಒಳಿತು. ಅದರಂತೆ ಫಡ್ನವಿಸ್ ಅವರ ತೆರಿಗೆ ರಿಟರ್ನ್ಸ್ ಪ್ರಕಾರ 2022-23ರ ಅವಧಿಯಲ್ಲಿ ಅವರು 92,48,094 ಲಕ್ಷ ರೂ. ಮೌಲ್ಯದ ಆದಾಯವನ್ನು ಹೊಂದಿದ್ದರೆ 2023-24ರ ಆರ್ಥಿಕ ವರ್ಷದಲ್ಲಿ ಅವರ ಒಟ್ಟು ಆದಾಯ 79,30,402 ಆಗಿತ್ತು. ಈ ಮೂಲಕ ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದೆ ಅವರ ಆದಾಯದಲ್ಲಿ ಭಾರೀ ಕುಸಿತ ಕಂಡಿದೆ.

ಉಳಿದಂತೆ ಅವರ ಎಲ್ಲಾ ಚರ ಹಾಗೂ ಸ್ಥಿರ ಆಸ್ತಿಗಳ ಒಟ್ಟು ಮೌಲ್ಯ 13.27 ಕೋಟಿ ರೂ. ಎಂದು ಲೆಕ್ಕ ಹಾಕಲಾಗಿದೆ. ಇನ್ನೂ ಸಮಗ್ರವಾಗಿ ಹೇಳುವುದಾದರೆ ದೇವೇಂದ್ರ ಫಡ್ನವಿಸ್ ಅವರು ತಮ್ಮ ಹೆಸರಿನಲ್ಲಿ 56.07 ಲಕ್ಷ ರೂಪಾಯಿ ಮೌಲ್ಯದ ಚರ ಆಸ್ತಿ ಹೊಂದಿದ್ದರೆ, ಪತ್ನಿ ಅಮೃತಾ ಫಡ್ನವಿಸ್ ಹೆಸರಿನಲ್ಲಿ 6.96 ಕೋಟಿ ರೂಪಾಯಿ ಹಾಗೂ ಮಗಳ ಹೆಸರಿನಲ್ಲಿ 10.22 ಲಕ್ಷ ರೂಪಾಯಿ ಚರ ಆಸ್ತಿಯನ್ನು ಘೋಷಿಸಿದ್ದಾರೆ. ಫಡ್ನವೀಸ್ ಬಳಿ ಕೈಯಲ್ಲಿ 23,500 ರೂಪಾಯಿ ನಗದು ಹೊಂದಿದ್ದು, ಅವರ ಪತ್ನಿ ಬಳಿ 10,000 ರೂಪಾಯಿ ಇದೆ ಎಂದು ಚುನಾವಣಾ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.
ಇನ್ನು ಫಡ್ನವಿಸ್ ಅವರ ಬ್ಯಾಂಕ್ ಬ್ಯಾಲೆನ್ಸ್, ಕೈಯಲ್ಲಿ ನಗದು, ಎನ್ಎಸ್ಎಸ್ ಮತ್ತು ಅಂಚೆ ಉಳಿತಾಯದಲ್ಲಿ ಹೂಡಿಕೆ, ಅವರ ಚಿನ್ನದ ಆಭರಣಗಳ ಮೌಲ್ಯ ಮತ್ತು ವಿಮಾ ಪಾಲಿಸಿಗಳನ್ನು ಒಳಗೊಂಡಿದೆ. ಹಣಕಾಸು ಸಂಸ್ಥೆಗಳು, ಎನ್‌ಬಿಎಫ್‌ಸಿಗಳು ಮತ್ತು ಸಹಕಾರ ಸಂಘಗಳಲ್ಲಿನ ಅವಧಿ ಠೇವಣಿ ಮತ್ತು ಠೇವಣಿ ಸೇರಿದಂತೆ ಬ್ಯಾಂಕ್ ಖಾತೆಗಳಲ್ಲಿ ಅವರ ಠೇವಣಿ 2.28 ಲಕ್ಷ ರೂ.ಗಳಾಗಿದ್ದರೆ, ಅವರ ಪತ್ನಿ ಅಮೃತಾ ಬಳಿ ಈ ಮೊತ್ತ 1.43 ಲಕ್ಷ ರೂ. ಆಗಿದೆ. ಉಳಿದಂತೆ ಫಡ್ನವಿಸ್ ಅವರು ಬಾಂಡ್‌ಗಳು, ಡಿಬೆಂಚರ್‌ಗಳು, ಷೇರುಗಳು ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ಯಾವುದೇ ಹೂಡಿಕೆ ಮಾಡಿಲ್ಲ.
ಆದರೆ ಎನ್‌ಎಸ್‌ಎಸ್, ಪೋಸ್ಟಲ್ ಉಳಿತಾಯ, ವಿಮಾ ಪಾಲಿಸಿಗಳು ಮತ್ತು ಹಣಕಾಸು ಮುಂತಾದ ಯೋಜನೆಗಳಲ್ಲಿ 20.70 ಲಕ್ಷ ರೂ. ಹೂಡಿಕೆ ಇದೆ. ಇನ್ನು ಅವರ ಪತ್ನಿ ಬಾಂಡ್‌ಗಳು, ಡಿಬೆಂಚರ್‌ಗಳು, ಷೇರುಗಳು ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ 5.62 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ 32.85 ಲಕ್ಷ ಮೌಲ್ಯದ 450 ಗ್ರಾಂ ಚಿನ್ನಾಭರಣ ಹೊಂದಿದ್ದು, ಪತ್ನಿ ಬಳಿ 65.7 ಲಕ್ಷ (900 ಗ್ರಾಂ) ಇದೆ ಎಂದು ಬಹಿರಂಗ ಪಡಿಸಲಾಗಿದೆ.
ಎಲ್ಲೆಲ್ಲಿ ಸ್ಥಿರಾಸ್ಥಿಗಳು?
ಇನ್ನು ಈಗಾಗಲೇ ತಿಳಿಸಿದಂತೆ ಫಡ್ನವಿಸ್ ಅವರು ತಮ್ಮ ಹೆಸರಿನಲ್ಲಿ 4.69 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗಳನ್ನು ಘೋಷನೆ ಮಾಡಿದ್ದಾರೆ. ಇನ್ನು ಸ್ಥಿರಾಸ್ತಿಗಳಲ್ಲಿ ಚಂದ್ರಾಪುರದ ಕೃಷಿ ಭೂಮಿ, ನಾಗ್ಪುರದ ಧರಂಪೇತ್‌ನಲ್ಲಿ ವಸತಿ ಕಟ್ಟಡ ಮತ್ತು ಇತರ ಹಲವಾರು ಆಸ್ತಿಗಳಿವೆ. ಅವರ ಪತ್ನಿ ಹೆಸರಿನಲ್ಲಿ ಸುಮಾರು 95.29 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಫಡ್ನವೀಸ್ ಅವರು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಯಾವುದೇ ಸಾಲವನ್ನು ಹೊಂದಿಲ್ಲ. ಆದರೆ ಅವರ ಪತ್ನಿಗೆ 62 ಲಕ್ಷ ರೂ. ಸಾಲವನ್ನು ಹೊಂದಿದ್ದಾರೆ.
ದೇವೇಂದ್ರ ಅವರ ಪತ್ನಿ ಅಮೃತಾ ಅವರು ಆಕ್ಸಿಸ್ ಬ್ಯಾಂಕ್ ಲಿಮಿಟೆಡ್, GAIL ಲಿಮಿಟೆಡ್, ಲಾರ್ಸೆನ್ ಮತ್ತು ಟೂಬ್ರೊ ಲಿಮಿಟೆಡ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಫೆಡರಲ್ ಬ್ಯಾಂಕ್ ಸೇರಿದಂತೆ 49 ಷೇರುಗಳನ್ನು ಹೊಂದಿದ್ದು, ಇವುಗಳ ಒಟ್ಟು ಮೌಲ್ಯ 4,36,56,553 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಉಳಿದಂತೆ ನಿಪ್ಪಾನ್ ಇಂಡಿಯಾ ಇಎಲ್‌ಎಸ್‌ಎಸ್ ಟ್ಯಾಕ್ಸ್ ಸೇವರ್, ಎಚ್‌ಡಿಎಫ್‌ಸಿ ಫ್ಲೆಕ್ಸಿ ಕ್ಯಾಪ್, ಬಂಧನ್ ಕೋರ್ ಇಕ್ವಿಟಿ, ನಿಪ್ಪಾನ್ ಇಂಡಿಯಾ ಲಾರ್ಜ್ ಕ್ಯಾಪ್, ಆಕ್ಸಿಸ್ ಬ್ಲೂಚಿಪ್, ಐಸಿಎಲ್‌ಸಿಐ ಪ್ರು ಮಲ್ಟಿಕ್ಯಾಪ್ ಮತ್ತು ಫ್ರಾಂಕ್ಲಿನ್ ಇಂಡಿಯಾ ಸಣ್ಣ ಕಂಪೆನಿಗಳ 1,26,02,478 ಕೋಟಿ ರೂ. ಸೇರಿದಂತೆ ಏಳು ಮ್ಯೂಚುಯಲ್ ಫಂಡ್ ಯೋಜನೆಗಳನ್ನುಕೂಡ ಅವರು ಹೊಂದಿದ್ದಾರೆ.


Click it and Unblock the Notifications