ಹದಿನೈದು ದಿನಗಳಿಂದ ಪೆಟ್ರೋಲ್ ದರದಲ್ಲಿ ಯಾವುದೇ ಬದಲಾವಣೆ ಆಗದಿದ್ದರೂ ದೆಹಲಿಯಲ್ಲಿ ಡೀಸೆಲ್ ಬೆಲೆ ಹೊಸ ಎತ್ತರಕ್ಕೆ ಏರಿದೆ. ಸೋಮವಾರದಂದು (ಜುಲೈ 13, 2020) ದೆಹಲಿಯಲ್ಲಿ ಡೀಸೆಲ್ ದರ ಲೀಟರ್ ಗೆ 11 ಪೈಸೆ ಏರಿಕೆಯಾದರೆ, ಪೆಟ್ರೋಲ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಭಾನುವಾರದಂದು ಡೀಸೆಲ್ ದರ ಲೀಟರ್ ಗೆ 16 ಪೈಸೆ ಏರಿತ್ತು. ಅದಕ್ಕೂ ಮುನ್ನ ನಾಲ್ಕು ದಿನ ಯಾವ ಬದಲಾವಣೆ ಆಗಿರಲಿಲ್ಲ.
ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಹೀಗಿದೆ:
ನವದೆಹಲಿ ಪೆಟ್ರೋಲ್ 80.43, ಡೀಸೆಲ್ 81.05
ಗುರ್ ಗಾಂವ್ ಪೆಟ್ರೋಲ್ 78.64, ಡೀಸೆಲ್ 73.19
ಮುಂಬೈ ಪೆಟ್ರೋಲ್ 87.19, ಡೀಸೆಲ್ 79.27
ಚೆನ್ನೈ ಪೆಟ್ರೋಲ್ 83.63, ಡೀಸೆಲ್ 78.11
ಹೈದರಾಬಾದ್ ಪೆಟ್ರೋಲ್ 83.49, ಡೀಸೆಲ್ 79.14
ಬೆಂಗಳೂರು ಪೆಟ್ರೋಲ್ 83.04, ಡೀಸೆಲ್ 77.02

ಜುಲೈ 7ನೇ ತಾರೀಕು ಕೊನೆಯದಾಗಿ ಡೀಸೆಲ್ ದರ ಪರಿಷ್ಕರಣೆ ಆಗಿತ್ತು. ಇನ್ನು ಪೆಟ್ರೋಲ್ ಬೆಲೆ ಜೂನ್ 29ನೇ ತಾರೀಕು ಬದಲಾವಣೆ ಆಗಿತ್ತು. ಕಳೆದ ಐದು ವಾರಗಳಲ್ಲಿ ಡೀಸೆಲ್ ಬೆಲೆ 24 ಹಾಗೂ ಪೆಟ್ರೋಲ್ ದರ 21 ಸಂದರ್ಭಗಳಲ್ಲಿ ಏರಿಕೆ ಆಗಿದೆ. ಜೂನ್ 7ರಿಂದ ಈಚೆಗೆ ಒಟ್ಟಾರೆಯಾಗಿ ಪೆಟ್ರೋಲ್ ದರ 9.17 ರುಪಾಯಿ ಹಾಗೂ ಡೀಸೆಲ್ ದರ 11.55 ರುಪಾಯಿ ಏರಿಕೆ ಆಗಿದೆ.


Click it and Unblock the Notifications