ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌ಗಳಲ್ಲಿ ಡಿಜಿಟಲ್ ವಂಚನೆಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆ ಬ್ಯಾಂಕ್‌ಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಗೌರ್ನರ್ ಸಂಜಯ್ ಮಲ್ಹೋತ್ರಾ ಸೂಚನೆಯನ್ನ ನೀಡಿದ್ದಾರೆ. ಈ ಡಿಜಿಟಲ್ ವಂಚನೆಗಳು ಮತ್ತೆ ಹೆಚ್ಚಳವಾಗದಂತೆ ತಡೆಯಲು ಸೂಕ್ತ ಕ್ರಮಗಳನ್ನ ಕೈಗೊಳ್ಳುವಂತೆ ಆರ್‌ಬಿಐ ಗೌರ್ನರ್ ತಿಳಿಸಿದ್ದಾರೆ. ಇಂತಹ ವಂಚನೆಗಳನ್ನ ತಡೆಗಟ್ಟಲು ಬಲವಾ ಮತ್ತು ಸಕ್ರೀಯವಾದ ವ್ಯವಸ್ಥೆಯನ್ನ ರಚಿಸುವಂತೆ ಬ್ಯಾಂಕ್‌ಗಳಿಗೆ ಸೂಚನೆಯನ್ನ ನೀಡಿದ್ದಾರೆ.
ಸಂಜಯ್ ಮಲ್ಹೋತ್ರ ಅವರು ಆರ್‌ಬಿಐ ಗೌರ್ನರ್ ಆಗಿ ಅಧಿಕಾರ ಸ್ವೀಕರಿಸಿದ ನಂತರ ಸಾರ್ವಜನಿಕ ಮತ್ತ ಖಾಸಗಿ ವಲಯದ ಬ್ಯಾಂಕ್‌ಗಳ ಎಂಡಿಗಳು ಮತ್ತು ಸಿಇಒಗಳ ಜೊತೆ ಅಭೆ ನಡೆಸಿದ್ರು. ಇನ್ನು ಆ ಸಭೆಯಲ್ಲಿ ಡಿಜಿಟಲ್ ವಂಚನೆಗಳ ಬಗ್ಗೆ ಒತ್ತಿ ಹೇಳಿದ್ರು. ಈ ಡಿಜಿಟಲ್ ವಂಚನೆಗಳನ್ನ ತಡೆಗಟ್ಟಲು ಹಾಗೆ ಸೈಬರ್ ಸುರಕ್ಷತೆಗಾಗಿ ಬ್ಯಾಂಕ್‌ಗಳು ಬೇಕಾದ ಪರ್ಯಾಯ ಕ್ರಮಗಳನ್ನ ತೆಗೆದುಕೊಳ್ಳುವಂತೆ ಸಲಹೆಯನ್ನ ನೀಡಿದ್ರು. ಜೊತೆಗೆ ಎಲ್ಲಾ ವಭಾಗದಲ್ಲೂ ಮೂರನೇ ವ್ಯಕ್ತಿ ಪ್ರವೇಶಿಸದಂತೆ ಆ ಕುರಿತು ಗಮನಹರಿಸಬೇಕು ಎಂದು ಎಚ್ಚರಿಕೆ ನೀಡಿದ್ರು. ಇನ್ನು ಈ ಸಭೆಯಲ್ಲಿ ಆರ್‌ಬಿಐನ ಉಪ ಗವರ್ನರ್‌ಗಳಾದ ಎಂ ರಾಜೇಶ್ವರ್ ರಾವ್, ಟಿ ರಬಿ ಶಂಕರ್ ಮತ್ತು ಸ್ವಾಮಿನಾಥನ್ ಜೆ ಅವರೂ ಕೂಡ ಭಾಗವಹಿಸಿದ್ರು.

ಕಳೆದ ಎರಡು ವರ್ಷಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಡಿಜಿಟಲ್ ವಂಚನೆಗಳು ಹೆಚ್ಚುತ್ತಿರುವ ಹಿನ್ನೆಲೆ ಆರ್‌ಬಿಐ ಗೌರ್ನರ್ ಸಂಜಯ್ ಮಲ್ಹೋತ್ರಾ ಸಲಹೆಯನ್ನ ನೀಡಿದ್ರು. ಈ ಡಿಜಿಟಲ್ ಹಗರಣಗಳನ್ನ ತಪ್ಪಿಸಲು ಆರ್‌ಬಿಐ ಮತ್ತು ಬ್ಯಾಂಕ್‌ಗಳು ಒಟ್ಟಾಗ ಕೆಲಸ ಮಾಡುವ ಅಗತ್ಯ ಇದೆ ಎನ್ನುವುದನ್ನು ಒತ್ತಿ ಹೇಳಿದ್ರು. ಇದರ ಜೊತೆಗೆ ಇತರೆ ವ್ಯವಹಾರಗಳನ್ನ ಸಕ್ರೀಯಗೊಳಿಸಲು ಬ್ಯಾಂಕ್‌ಗಳಿಂದ ಸಲಹೆಗಳನ್ನ ಕೂಡ ಕೇಳಲಾಯಿತು.
ಬ್ಯಾಂಕಿಂಗ್ ಸೇವೆಗಳ ಕುರಿತು ಸಂಜಯ್ ಮಲ್ಹೋತ್ರಾ ಸಲಹೆಗ:ನ್ನ ನೀಡಿದ್ರು. ಆರ್ಥಿಕ ಸ್ಥಿರತೆ ಕಾಪಾಡಿಕೊಳ್ಳಲು, ಆರ್ಥಿಕ ಸೇರ್ಪಡೆಗಳನ್ನ ವಿಸ್ತರಿಸಲು, ಸಾಲದ ಲಭ್ಯತೆ ಮತ್ತು ಕೈಗೆಟುಕುವ ದರದಲ್ಲಿ ಸಾಲಗಳನ್ನ ನೀಡಲು, ಹಾಗೆ ಡಿಜಿಟಲ್ ತಂತ್ರಜ್ಞಾನವನ್ನ ಹೆಚ್ಚು ಬಳಕೆ ಮಾಡಲು, ಹಾಗೆ ಗ್ರಾಹಕರ ಸೇವೆ, ದೂರು ಪರಿಹಾರಗಳಿಗೆ ಸಂಬಂಧಿಸಿದಂತೆ ನೂತನ ವ್ವಸ್ಥೆಗಳನ್ನ ಜಾರಿ ಮಾಡಲು ಹಾಗೆ ತಂತ್ರಜ್ಞಾನದಲ್ಲಿ ಹೂಡಿಕೆಯನ್ನ ಮಂದುವರೆಸಲು ಸೂಚನೆಗಳನ್ನ ನೀಡಿದ್ರು. ಜೊತೆಗೆ ಬ್ಯಾಂಕ್‌ಗಳು ಜಾಗತಿಕವಾಗಿ ಯಾವ ರೀತಿಯಲ್ಲಿ ಸೇವೆಯನ್ನ ಸಲ್ಲಿಸುತ್ತಿವೆ ಎನ್ನುವುದರ ಕುರಿತು ಹೇಳಿದರು.
ಇದೇ ವೇಳೆ ಬೆಂಗಳೂರಿನ ರಿಸರ್ವ್ ಬ್ಯಾಂಕ್ ನಾವಿನ್ಯತೆ ಕೇಂದ್ರ ಅಭಿವೃದ್ಧಿಪಡಿಸಿದ 'Mule Hunter.ai' ಕುರಿತು ಒತ್ತಿಹೇಳಿದರು. ಈ ಎಐ ಆಧರಿತ ಈ ವ್ಯವಸ್ಥೆಯ ಡಿಜಿಟಲ್ ವಂಚನೆಯನ್ನ ಕಡಿಮೆ ಮಾಡಲು ಸಾಯ ಮಾಡುತ್ತದೆ, ಅಲ್ಲದೆ ಇದು ಮುಂದಿನ ದಿನಗಳಲ್ಲಿ ಬ್ಯಾಂಕ್‌ಗಳಿಗೂ ಕೂಡ ಸಹಾಯ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.
ಈವರೆಗೂ ದಾಖಲಾಗಿರುವ ಡಿಜಿಟಲ್ ಪ್ರಕರಣಗಳ ಬಗ್ಗೆ ಉಲ್ಲೆಖಿಸಿದರು. ಜಾಗತಿಕವಾಗಿ ಹೆಚ್ಚುತ್ತಿರುವ ಡಿಜಿಟಲ್ ವಂಚನೆಗಳನ್ನ ತಡೆಯಲು ಬ್ಯಾಂಕ್‌ಗಳು ಸೂಕ್ತ ಕ್ರಮಗಳನ್ನ ತೆಗೆದುಕೊಳ್ಳುಂತೆ ತಿಳಿಸಿದ್ರು. ಇನ್ನು ಈ ಡಿಜಿಟಲ್ ವಂಚನೆಗಳನ್ನ ಗಮನಿಸುವದಾದ್ರೆ, ಏಪ್ರಿಲ್‌ನಿಂದ ಸೆಪ್ಟಂಬರ್‌ವರೆಗೆ ಒಟ್ಟು 18,461 ವಂಚನೆ ಪ್ರಕರಣಗಳು ವರದಿಯಾಗಿದ್ದು, ಈ ಪ್ರಕರಣಗಳಲ್ಲಿ 21,367 ಕೋಟಿ ರೂ. ವಂಚನೆಯಾಗಿರುವುದು ತಿಳಿದುಬಂದಿದೆ. ಕಳೆದ ವರ್ಷ 14,480 ವಂಚನೆ ಪ್ರಕರಣಗಳು ವರದಿಯಗಿದ್ದು, ಈ ಪ್ರಕರಣಗಳಲ್ಲಿ 2,623 ಕೋಟಿ ವಂಚನೆಯಾಗಿರುವುದು ತಿಳಿದುಬಂದಿದೆ. ಅಂದರೆ ಕಳೆದ ವರ್ಷಕ್ಕಿಂತ ಈ ಬಾರಿ ವಂಚನೆ ಪ್ರಕರಣಗಳು ಹೆಚ್ಚಳವಾಗಿರುವುದು ತಿಳಿದುಬಂದಿದೆ. ಕಳೆದ ವರ್ಷಕ್ಕಿಂತ ವಂಚನೆ ಪ್ರಕರಣಗಳು 28% ಹೆಚ್ಚಳವಾಗಿವೆ. ಜೊತೆಗೆ ವಂಚನೆ ಮಾಡಿರುವ ಹಣ ಕೂಡ ಕಳೆದ ವರ್ಷಕ್ಕಿಂತ ಅಧಿಕವಾಗಿದೆ.


Click it and Unblock the Notifications