ದಿನೇಶ್ ಖರಾ ನಿವೃತ್ತಿ: ಎಸ್‌ಬಿಐಗೆ ಹೊಸ ಸಾರಥಿ ಯಾರು?

ನವದೆಹಲಿ, ಮೇ 20: ಭಾರತದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಹಾಲಿ ಅಧ್ಯಕ್ಷ ದಿನೇಶ್ ಕುಮಾರ್ ಖರಾ ಅವರು ಆಗಸ್ಟ್ 28 ರಂದು ನಿವೃತ್ತರಾಗಲಿದ್ದು, ಅವರ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಇನ್ನೊಂದೆಡೆ ಬ್ಯಾಂಕ್‌ನ ಮುಂದಿನ ಅಧ್ಯಕ್ಷರು ಅದೇ ದಿನ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬ ವರದಿಯಾಗಿದೆ. ಹೀಗಾಗಿ ಎಸ್​ಬಿಐಗೆ ಹೊಸ ಸಾರಥಿ ಯಾರಾಗಲಿದ್ದಾರೆ ಎಂಬ ಪ್ರಶ್ನೆ ಹುಟ್ಟುಹಾಕಿದೆ.

ಕೇಂದ್ರ ಸರ್ಕಾರದ ಅಧೀನದಲ್ಲಿರುವ ಹಣಕಾಸು ಸೇವಾ ಸಂಸ್ಥೆಗಳ ಬ್ಯೂರೋ (ಎಫ್‌ಎಸ್‌ಐಬಿ) ಈ ಹುದ್ದೆಗೆ ಸಮರ್ಥರಾದ ವ್ಯಕ್ತಿಯನ್ನು ಹುಡುಕಲು ಮೇ 21 ರಂದು ಸಂದರ್ಶನಗಳನ್ನು ನಡೆಸಲಿದೆ. ಅದೇ ದಿನ ಅಂತಿಮ ಫಲಿತಾಂಶ ಪ್ರಕಟವಾಗಲಿದೆ ಎಂದು ವರದಿಗಳಾಗಿದೆ. . ಖರಾ ನಿವೃತ್ತಿಯಾದ ದಿನವೇ ನೂತನ ಅಧ್ಯಕ್ಷರು ಕರ್ತವ್ಯ ಆರಂಭಿಸುವ ಸಾಧ್ಯತೆ ಇದೆ.

ದಿನೇಶ್ ಖರಾ ನಿವೃತ್ತಿ: ಎಸ್‌ಬಿಐಗೆ ಹೊಸ ಸಾರಥಿ ಯಾರು?

ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಯಾರು ನೇಮಕಗೊಳ್ಳಲಿದ್ದಾರೆ ಎಂಬುವುದು ಪ್ರಮುಖ ಪ್ರಶ್ನೆಯಾಗಿದ್ದು. ಎಸ್‌ಬಿಐ ಬ್ಯಾಂಕ್‌ನ ಮುಖ್ಯಸ್ಥರಾಗಿ ನೇಮಕಗೊಂಡ ವ್ಯಕ್ತಿ ಆ ಹುದ್ದೆ ನಿಭಾಯಿಸುವ ಯೋಗ್ಯವುಳ್ಳ ವ್ಯಕ್ತಿಯಾಗಿರಬೇಕು , ಏಕೆಂದರೆ ಭಾರತೀಯರು ಬಹುಸಂಖ್ಯೆಯಲ್ಲಿ ಈ ಬ್ಯಾಂಕ್ ನೊಂದಿಗೆ ವಹಿವಾಟು ನಡೆಸುತ್ತಾರೆ.

ಹೊಸ ಸಾರಥಿ ಯಾರು?

ಪ್ರಸ್ತುತ ಮಾಹಿತಿಯ ಪ್ರಕಾರ, ಎಸ್‌ಬಿಐ ಬ್ಯಾಂಕ್‌ನ ಮೂವರು ವ್ಯವಸ್ಥಾಪಕ ನಿರ್ದೇಶಕರಾದ ಸಿಎಸ್ ಶೆಟ್ಟಿ, ಅಶ್ವಿನಿ ಕುಮಾರ್ ತಿವಾರಿ ಮತ್ತು ವಿನಯ್ ಎಂ. ತೋನ್ಸೆ, ಈ ಹುದ್ದೆಗೆ ಪ್ರಮುಖ ಸ್ಪರ್ಧಿಗಳೆಂದು ವರದಿಯಾಗಿದೆ. ಇದಲ್ಲದೇ ಎಸ್‌ಬಿಐ ಬ್ಯಾಂಕ್‌ನ ನಾಲ್ಕನೇ ವ್ಯವಸ್ಥಾಪಕ ನಿರ್ದೇಶಕ ಅಲೋಕ್ ಕುಮಾರ್ ಚೌಧರಿ ಜೂನ್ ಅಂತ್ಯದ ವೇಳೆಗೆ ನಿವೃತ್ತಿಯಾಗಲಿದ್ದಾರೆ.

ಈ ಮೂವರಲ್ಲಿ ಹಿರಿಯರಾದ ಸಿ.ಎಸ್.ಶೆಟ್ಟಿ ಅವರು ಸುಮಾರು 36 ವರ್ಷಗಳಿಂದ ಎಸ್ ಬಿಐನಲ್ಲಿ ಕೆಲಸ ಮಾಡಿದ್ದಾರೆ. 57 ವರ್ಷ ವಯಸ್ಸಿನ ಅಶ್ವಿನಿ ಕುಮಾರ್ ತಿವಾರಿ ಅವರು 1991 ರಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಬ್ಯಾಂಕಿಗೆ ಸೇರಿದ್ದು ಈ ಮೂವರಲ್ಲಿ ಕಿರಿಯವರಾಗಿದ್ದಾರೆ.ನವೆಂಬರ್ 2023 ರಲ್ಲಿ ತೋನ್ಸೆ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು. 1988ರಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿಯೂ ಎಸ್‌ಬಿಐ ಸೇರಿದ್ದರು.

ದಿನೇಶ್ ಖರಾ ಅವರ ನಾಯಕತ್ವದಲ್ಲಿ ಎಸ್‌ಬಿಐ ಗಮನಾರ್ಹ ಆರ್ಥಿಕ ಬೆಳವಣಿಗೆಯನ್ನು ಕಂಡಿದ್ದರಿಂದ ಯಾರೇ ಈ ಹುದ್ದೆ ಅಲಂಕರಿಸಿದರೂ, ಇವರ ಮುಂದೆ ಅನೇಕ ಸವಾಲುಗಳಿದ್ದು, ಎಸ್‌ಬಿಐ ನ್ನು ಮತ್ತಷ್ಟು ಪ್ರಗತಿಯ ಕಡೆ ಕಂಡೊಯ್ಯಬೇಕಾದ ಜವಾಬ್ದಾರಿ ಇದೆ. ದಿನೇಶ್ ಖರಾ ಅವರ ಅವಧಿಯಲ್ಲಿ ಎಸ್ ಬಿಐ ಬ್ಯಾಂಕ್ ಷೇರು ಬೆಲೆ 250 ರೂ.ನಿಂದ 820 ರೂ.ಗೆ ಏರಿತ್ತು. ಹೀಗಾಗಿ ಯಾರಾಗಲಿದ್ದಾರೆ ಮುಂದಿನ ನಾಯಕರು ಹಾಗೂ ಎಸ್‌ಬಿಐ ಬೆಳವಣಿಗೆಯ ಹಾದಿಯನ್ನು ಉತ್ತಮವಾಗಿ ಮುನ್ನಡೆಸುತ್ತಾರೆಯೇ ಎಂದು ಕಾದು ನೋಡಬೇಕಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+