ಇಪ್ಪತ್ತು ವರ್ಷದಲ್ಲೇ ಮೊದಲ ಬಾರಿಗೆ ನೇರ ತೆರಿಗೆ ಸಂಗ್ರಹದಲ್ಲಿ ಕುಸಿತ

ಕಳೆದ ಎರಡು ದಶಕದಲ್ಲೇ ಮೊದಲ ಬಾರಿಗೆ, ಈ ಸಲ ಭಾರತದ ಕಾರ್ಪೊರೇಟ್ ಮತ್ತು ಆದಾಯ ತೆರಿಗೆ ಸಂಗ್ರಹ ಕಡಿಮೆ ಆಗಲಿದೆ ಎಂದು ತೆರಿಗೆ ಇಲಾಖೆಯ ಅಧಿಕಾರಿಗಳು ಸುದ್ದಿಸಂಸ್ಥೆಯೊಂದಕ್ಕೆ ಮಾಹಿತಿ ನೀಡಿದ್ದಾರೆ. ಆರ್ಥಿಕ ಬೆಳವಣಿಗೆಯಲ್ಲಿ ಕುಸಿತ ಮತ್ತು ಕಾರ್ಪೊರೇಟ್ ತೆರಿಗೆಯಲ್ಲಿನ ಕಡಿತವೇ ಇದಕ್ಕೆ ಕಾರಣ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈ ವರ್ಷದ ಮಾರ್ಚ್ 31ರ ಕೊನೆಗೆ, ಕಳೆದ ಅರ್ಥಿಕ ವರ್ಷಕ್ಕಿಂತ 17 ಪರ್ಸೆಂಟ್ ಹೆಚ್ಚು- ಅಂದರೆ 13.5 ಲಕ್ಷ ಕೋಟಿ ರುಪಾಯಿ ನೇರ ತೆರಿಗೆ ಸಂಗ್ರಹ ಆಗಬಹುದು ಎಂದು ಸರ್ಕಾರ ಗುರಿ ಇರಿಸಿಕೊಂಡಿತ್ತು. ಆದರೆ ಬೇಡಿಕೆಯಲ್ಲಿನ ಕುಸಿತದ ಕಾರಣಕ್ಕೆ ವ್ಯಾಪಾರಕ್ಕೆ ಹೊಡೆತ ಬಿತ್ತು. ಕಂಪೆನಿಗಳು ಹೂಡಿಕೆ ಮತ್ತು ಉದ್ಯೋಗ ಕಡಿತ ಮಾಡಿದವು. ಇದರಿಂದ ತೆರಿಗೆ ಸಂಗ್ರಹಕ್ಕೆ ಹೊಡೆತ ಬಿದ್ದಿದೆ. ಹನ್ನೊಂದು ವರ್ಷದಲ್ಲೇ ಕನಿಷ್ಠ ಮಟ್ಟವಾದ ಐದು ಪರ್ಸೆಂಟ್ ಜಿಡಿಪಿ ದಾಖಲಾಗಿದೆ.

ಜನವರಿ 23ರ ತನಕ ಆದಾಯ ತೆರಿಗೆ ಇಲಾಖೆಯು 7.3 ಲಕ್ಷ ಕೋಟಿ ರುಪಾಯಿ ಸಂಗ್ರಹಿಸಲು ಸಾಧ್ಯವಾಗಿದೆ. ಇದು ಕಳೆದ ವರ್ಷ ಇದೇ ಸಮಯಕ್ಕೆ ಸಂಗ್ರಹವಾಗಿದ್ದಕ್ಕಿಂತ 5.5 ಪರ್ಸೆಂಟ್ ಕಡಿಮೆ ಇದೆ. 2018-19ರಲ್ಲಿ ಸಂಗ್ರಹಿಸಿದ್ದ 11.5 ಲಕ್ಷ ಕೋಟಿಗಿಂತ ಕಡಿಮೆ ನೇರ ತೆರಿಗೆ ಸಂಗ್ರಹ ಆಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಪ್ಪತ್ತು ವರ್ಷದಲ್ಲೇ ಮೊದಲ ಬಾರಿಗೆ ನೇರ ತೆರಿಗೆ ಸಂಗ್ರಹದಲ್ಲಿ ಕುಸಿತ

"ನಿಗದಿ ಮಾಡಿದ್ದ ಗುರಿಯನ್ನು ಬಿಡಿ, ಇದೇ ಮೊದಲ ಬಾರಿಗೆ ನೇರ ತೆರಿಗೆ ಸಂಗ್ರಹವು ಕಡಿಮೆ ಆಗಲಿದೆ" ಎಂದು ತೆರಿಗೆ ಅಧಿಕಾರಿಗಳು ಹೇಳಿದ್ದಾರೆ. ಒಂದು ಅಂದಾಜಿನ ಪ್ರಕಾರ, 2019ರಲ್ಲಿ ಸಂಗ್ರಹವಾದ ಮೊತ್ತಕ್ಕಿಂತ 10% ಕಡಿಮೆ ಆಗಲಿದೆ. ಅಂದ ಹಾಗೆ ಸರ್ಕಾರದ ಒಟ್ಟು ಆದಾಯದಲ್ಲಿ 80% ಗೂ ಹೆಚ್ಚು ಬರುವುದು ನೇರ ತೆರಿಗೆ ಸಂಗ್ರಹದಿಂದ. ಈಗ ಅದು ಕಡಿಮೆ ಆಗುವುದರಿಂದ ವೆಚ್ಚ ಭರಿಸುವ ಕಾರಣಕ್ಕೆ ಸಾಲ ಮಾಡಬೇಕಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+