ದೀಪಾವಳಿ ಭಾರತದಲ್ಲಿ ಆಚರಿಸುವ ದೊಡ್ಡ ಹಬ್ಬಗಳಲ್ಲಿ ಒಂದು. ಭಾರತದಲ್ಲಿ ಅಷ್ಟೇ ಅಲ್ಲ ಈ ಹಬ್ಬವನ್ನು ಬೇರೆ ದೇಶಗಳಲ್ಲೂ ಆಚರಿಸಲಾಗುತ್ತದೆ. ಆದರೆ ಈ ವರ್ಷ ಈ ಹಬ್ಬ ಕೊಂಚ ಕನ್‌ಫ್ಯೂಸ್‌ನಿಂದ ಕೂಡಿದೆ. ಹಬ್ಬವನ್ನು ಅಕ್ಟೋಬರ್ 31 ರಂದು ಆಚರಿಸಬೇಕಾ ಅಥವಾ ನವೆಂಬರ್ 1 ರಂದು ಆಚರಿಸಬೇಕಾ ಎಂದು ಗೊಂದಲವಿದೆ.
ದೀಪವಾಳಿ ಈ ರೀತಿ ಗೊಂದಲ ಉಂಟುಮಾಡಲು ಕಾರಣ ಅಮವಾಸ್ಯೆ ತಿಥಿ. ಈ ತಿಥಿ ಅಕ್ಟೋಬರ್ 31 ಹಾಗೂ ನವೆಂಬರ್ 1 ರಂದು ಇದೆ. ಹೀಗಾಗಿ ವಿವಿಧ ಸಮುದಾಯಗಳು ಬೇರೆ ಬೇರೆ ದಿನದಂದು ದೀಪಾವಳಿ ಆಚರಿಸುತ್ತವೆ.

ದೀಪಾವಳಿ ಗೊಂದಲ ಏಕೆ?
ಭಾರತದಲ್ಲಿ ಹಿಂದೂಗಳು ದೀಪವಾಳಿಯನ್ನು ಕಾರ್ತಿಕ ಮಾಸದ ಅಮವಾಸ್ಯೆಯಂದು ಆಚರಿಸುತ್ತಾರೆ. ಅಂದಹಾಗೆ ಅಮವಾಸ್ಯೆ ತಿಥಿ ಅಕ್ಟೋಬರ್ 31 ರಂದು ಮಧ್ಯಾಹ್ನ 3.52ಕ್ಕೆ ಆರಂಭವಾಗಿ ನವಂಬರ್ 1 ಸಂಜೆ 6.16ಕ್ಕೆ ಕೊನೆಯಾಗುತ್ತದೆ. ಇನ್ನು ಈ ಬಾರಿ ಭಾರತದಲ್ಲಿ ವಿವಿಧ ಸಮುದಾಯಗಳು ಬೇರೆ ಬೇರೆ ದಿನದಂದು ದೀಪಾವಳಿ ಆಚರಿಸುತ್ತಾರೆ.
ದೀಪಾವಳಿಯ ದಿನಾಂಕದ ಗೊಂದಲವನ್ನು ಬಗೆಹರಿಸಲು ಭಾರತದ 100ಕ್ಕೂ ಹೆಚ್ಚು ಜ್ಯೋತಿಷಿಗಳು, ವಿದ್ವಾಂಸರು ಮತ್ತು ಸಂಸ್ಕೃತ ವಿದ್ವಾಂಸರು ಜೈಪುರದ ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ದೀಪವಾಳಿ ನಿರ್ಣಯ ಸಭೆ ಆಯೋಜಿಸಿದ್ದರು. ಈ ಸಭೆಯಲ್ಲಿ ದೀಪಾವಳಿಯನ್ನು ಅಕ್ಟೋಬರ್ 31 ರಂದು ಆಚರಿಸಲು ನಿರ್ಧಾರಕ್ಕೆ ಬರಲಾಗಿದೆ. ಸಭೆಯಲ್ಲಿ ಜೈಪುರದ ಮಹಾರಾಜ್ ಆಚಾರ್ಯ ಸಂಸ್ಕೃತ ಕಾಲೇಜಿನ ಜ್ಯೋತಿಷ್ಯ ವಿಭಾಗದ ಮಾಜಿ ಮುಖ್ಯಸ್ಥ ಪ್ರೊಫೆಸರ್ ರಾಮ್‌ಪಾಲ್ ಶಾಸ್ತ್ರಿ ಮತ್ತು ಗುಜರಾತ್‌ನ ಸೋಮನಾಥ ಸಂಸ್ಕೃತ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಪ್ರೊಫೆಸರ್ ಅರ್ಕನಾಥ್ ಚೌಧರಿ ಮುಂತಾದವರು ಇದ್ದರು.
ಸಭೆಯಲ್ಲಿ ದೀಪಾವಳಿಯನ್ನು ಅಕ್ಟೋಬರ್ 31 ರಂದು ನಡೆಸಲು ತೀರ್ಮಾನಿಸಲಾಗಿದೆ. ಇದಕ್ಕೆ ಕಾರಣ ಅಮಾವಾಸ್ಯೆಯ ತಿಥಿಯು ಈ ದಿನಾಂಕದಂದು ಸಂಪೂರ್ಣ ಪ್ರದೋಷ ಕಾಲ ಮಾತ್ರವಲ್ಲದೆ ಇಡೀ ರಾತ್ರಿ ಇರಲಿದೆ. ಮತ್ತು ಇದೇ ದಿನ ಲಕ್ಷ್ಮಿ ಪೂಜೆಗೆ ವೃಷಭ ಮತ್ತು ಸಿಂಹ ಲಗ್ನದ ಶುಭ ಸಮಯ ಲಭ್ಯವಾಗಲಿದೆ.

ನವೆಂಬರ್ 1 ರಂದು ಅಮವಾಸ್ಯೆಯ ತಿಥಿಯು ಸಂಜೆ 6.16ಕ್ಕೆ ಕೊನೆಯಾಗುತ್ತದೆ. ಅಂದರೆ ಸೂರ್ಯಾಸ್ಥದ ನಂತರ ಕೆಲವೇ ನಿಮಿಷಗಳನ್ನು ಒಳಗೊಂಡಿರುತ್ತದೆ. ಹೀಗಾಗಿ ಲಕ್ಷ್ಮಿ ಪೂಜೆಯನ್ನು ನಡೆಸಲು ಕಡಿಮೆ ಸಮಯ ಇರುತ್ತದೆ.
ಯಾವ ಸಮಯ ಲಕ್ಷ್ಮಿ ಪೂಜೆಗೆ ಸೂಕ್ತ?
ಅಕ್ಟೋಬರ್ 31 ರಂದು ಲಕ್ಷ್ಮಿ ಪೂಜೆ ಮಾಡುವವರಿಗೆ ಸಂಜೆ ಉತ್ತಮ ಸಮಯ. ಈ ಸಮಯ ಲಕ್ಷ್ಮಿ ಪೂಜೆಗೆ ಹೆಚ್ಚು ಅನುಕೂಲಕರ ಎಂದು ಪರಿಗಣಿಸಲಾಗಿದೆ. ಇನ್ನು ನವೆಂಬರ್ 1 ರಂದು ಲಕ್ಷ್ಮಿ ಪೂಜೆಯನ್ನು ಮಾಡುವವರು ಸಂಜೆ 5:36 ರಿಂದ 6:16 ರವಳೆಗೆ ಮುಗಿಸಬೇಕು. ನಂತರ ಅಮವಾಸ್ಯೆ ತಿಥಿ ಇರುವುದಿಲ್ಲ.
ಐದು ದಿನಗಳ ಕಾಲ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ನರಕ ಚರ್ತುದರ್ಶಿ ಹಾಗೂ ಅಮವಾಸ್ಯೆ ಪೂಜೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ.


Click it and Unblock the Notifications