ಪ್ರತೀ ವರ್ಷ ದೀಪಾವಳಿ ಹಬ್ಬ (Deepavali Festival) ಬರುತ್ತಿದ್ದಂತೆ, ಹೆಚ್ಚಿನವರು ದೂರದ ಊರುಗಳಿಂದ ತಮ್ಮ ಊರುಗಳಿಗೆ ಹೋಗಲು ಪ್ಲಾನ್ ಮಾಡಿಕೊಳ್ಳುತ್ತಾರೆ. ಈ ಬಾರಿ ಕೂಡಾ ರೈಲು ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಹಬ್ಬದ ಸಂಭ್ರಮದಲ್ಲಿ ಕುಟುಂಬ ಸದಸ್ಯರ ಜೊತೆ ಆಚರಿಸಲು, ಎಂಜಾಯ್ ಮಾಡಲು ಮನೆಗಳಿಗೆ ತೆರಳೋದು ಸಹಜ. ಇದೇ ಕಾರಣದಿಂದ ಬಸ್ ಸ್ಟ್ಯಾಂಡ್‌ಗಳು, ರೈಲ್ವೇ ಸ್ಟೇಷನ್‌ಗಳು ಜನದಟ್ಟಣೆಯಿಂದ ತುಂಬಿ ತುಳುಕುತ್ತಿರುತ್ತದೆ.

ಭಾರತೀಯ ರೈಲ್ವೇನಿಂದ ಮಹತ್ವದ ನಿರ್ಧಾರ
ಹಬ್ಬದ ಸಂದರ್ಭದಲ್ಲಿ ರೈಲ್ವೇ ಸ್ಟೇಷನ್‌ಗಳಲ್ಲಿ (Railway Station) ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು ಮತ್ತು ಸುಗಮ ಪ್ರಯಾಣಕ್ಕಾಗಿ ಭಾರತೀಯ ರೈಲ್ವೇ (Indian Railways) ಮಹತ್ವದ ಕ್ರಮ ಕೈಗೊಂಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ, ದೀಪಾವಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಬೇಡಿಕೆಯನ್ನು ಪೂರೈಸುವ ಉದ್ದೇಶದಿಂದ ರೈಲ್ವೇ ಇಲಾಖೆ, ಹೆಚ್ಚುವರಿ ರೈಲುಗಳನ್ನು ಕೆಲವು ಮಾರ್ಗಗಳಲ್ಲಿ ನಿಯೋಜಿಸಿದೆ.
ದೀಪಾವಳಿ ಹಬ್ಬದ ಸಂದರ್ಭಗಳಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸುವ ಉದ್ದೇಶದಿಂದ, ಭಾರತೀಯ ರೈಲ್ವೇ ಹುಬ್ಬಳ್ಳಿ, ಮಂಗಳೂರು ಮತ್ತು ಬೆಂಗಳೂರು ಮಾರ್ಗಗಳ ನಡುವೆ ವಿಶೇಷ ರೈಲುಗಳನ್ನು ಘೋಷಿಸಿದೆ. ಹಾಗಿದ್ರೆ ಈ ರೈಲುಗಳು ಎಲ್ಲಿಂದ, ಎಷ್ಟು ಗಂಟೆಗೆ ಹೊರಡುತ್ತದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಹುಬ್ಬಳ್ಳಿಯಿಂದ-ಮಂಗಳೂರಿಗೆ ವಿಶೇಷ ರೈಲು:
ರೈಲು ಸಂಖ್ಯೆ 07353 (ಹುಬ್ಬಳ್ಳಿ ಜಂಕ್ಷನ್‌ನಿಂದ ಮಂಗಳೂರು ಜಂಕ್ಷನ್‌ಗೆ) ಅಕ್ಟೋಬರ್ 17 ರಂದು ಸಂಜೆ 4:00 ಗಂಟೆ ಸುಮಾರಿಗೆ ಹುಬ್ಬಳ್ಳಿ ಜಂಕ್ಷನ್‌ನಿಂದ ಮಂಗಳೂರಿಗೆ ಹೊರಡಲಿದೆ. ಅಕ್ಟೋಬರ್ 18 ರಂದು ಬೆಳಿಗ್ಗೆ 11:15 ಕ್ಕೆ ಈ ರೈಲು ಮಂಗಳೂರು ಜಂಕ್ಷನ್ ತಲುಪಲಿದೆ.
ಮಂಗಳೂರಿನಿಂದ-ಬೆಂಗಳೂರಿಗೆ ವಿಶೇಷ ರೈಲು:
ರೈಲು ಸಂಖ್ಯೆ 07354 (ಮಂಗಳೂರು ಜಂಕ್ಷನ್‌ನಿಂದ ಯಶವಂತಪುರ ಜಂಕ್ಷನ್‌ಗೆ) ಅಕ್ಟೋಬರ್ 18 ರಂದು ಮಧ್ಯಾಹ್ನ 2:35 ಕ್ಕೆ ಮಂಗಳೂರು ಜಂಕ್ಷನ್‌ನಿಂದ ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸಲಿದೆ. ಮಧ್ಯಾಹ್ನ ಹೊರ ಈ ರೈಲು ಅದೇ ದಿನ ರಾತ್ರಿ 11:15 ಕ್ಕೆ ಬೆಂಗಳೂರಿನ ಯಶವಂತಪುರ ಜಂಕ್ಷನ್‌ಗೆ ರೀಚ್ ಆಗುತ್ತದೆ.
ಬೆಂಗಳೂರಿನಿಂದ-ಮಂಗಳೂರಿಗೆ ವಿಶೇಷ ರೈಲುಗಳು:
ಇನ್ನು ಅತ್ತ ಮಂಗಳೂರಿನಿಂದ ಮಾತ್ರ ಅಲ್ಲ, ಇತ್ತ ಬೆಂಗಳೂರಿನಿಂದ ಮಂಗಳೂರಿಗೆ ಸಹ ವಿಶೇಷ ರೈಲುಗಳನ್ನು ನಿಯೋಜಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ಕ್ರಮ ಕೈಗೊಂಡಿದ್ದು, ರೈಲು ಸಂಖ್ಯೆ 06229 (ಯಶವಂತಪುರ ಜಂಕ್ಷನ್‌ನಿಂದ ಮಂಗಳೂರು ಜಂಕ್ಷನ್‌ಗೆ) ಅಕ್ಟೋಬರ್ 19 ರಂದು ಮಧ್ಯರಾತ್ರಿ 12:15 ಕ್ಕೆ ಹೊರಡಲಿದೆ. ಅದು ಅದೇ ದಿನ ಬೆಳಿಗ್ಗೆ ಸುಮಾರು 11:15 ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.
ಮಂಗಳೂರು ಜಂಕ್ಷನ್‌ನಿಂದ ಬೆಂಗಳೂರು ಕಂಟೋನ್ಮೆಂಟ್:
ರೈಲು ಸಂಖ್ಯೆ 06230 (ಮಂಗಳೂರು ಜಂಕ್ಷನ್‌ನಿಂದ ಬೆಂಗಳೂರು ಕಂಟೋನ್ಮೆಂಟ್‌ಗೆ) ಈ ರೈಲು ಅಕ್ಟೋಬರ್ 19 ರಂದು ಮಧ್ಯಾಹ್ನ 2:35 ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಟು ಅಕ್ಟೋಬರ್ 20 ರಂದು ಮಧ್ಯರಾತ್ರಿ 12:30 ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪುತ್ತದೆ.
ಕೋಚ್‌ಗಳು ಮತ್ತು ಸೌಲಭ್ಯಗಳು:
ಇಲ್ಲಿ ನೀಡಲಾಗಿರುವ ಪ್ರತೀ ವಿಶೇಷ ರೈಲು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ವಿವಿಧ ರೀತಿಯ ಕೋಚ್‌ಗಳನ್ನು ಹೊಂದಿರುತ್ತದೆ. ಅದರಲ್ಲೊಂದು ಫಸ್ಟ್-ಕ್ಲಾಸ್ ಎಸಿ ಕೋಚ್, ಒಂದು ಎಸಿ ಟು-ಟೈರ್ ಕೋಚ್ ಮತ್ತು ಎರಡು ಎಸಿ ಥ್ರೀ-ಟೈರ್ ಕೋಚ್‌ಗಳು ಇರುತ್ತವೆ. ಪ್ರಯಾಣಿಕರ ಬಜೆಟ್‌ಗೆ ತಕ್ಕ ಹಾಗೆ ಇದನ್ನು ನೀಡಲಾಗುತ್ತದ. ಅಲ್ಲದೇ ಪ್ರಯಾಣಿಕರ ಅನುಕೂಲಕ್ಕಾಗಿ, ಹತ್ತು ಸ್ಲೀಪರ್ ಕ್ಲಾಸ್ ಕೋಚ್‌ಗಳು ಮತ್ತು ನಾಲ್ಕು ಜನರಲ್ ಸೆಕೆಂಡ್-ಕ್ಲಾಸ್ ಕೋಚ್‌ಗಳು ಕೂಡಾ ಲಭ್ಯವಿವೆ. ಇದರ ಜೊತೆಗೆ, ಸರಕು, ಲಗೇಜ್‌ಗಳನ್ನು ಸಾಗಿಸಲು ಮತ್ತು ಪಾರ್ಸೆಲ್‌ಗಳಿಗಾಗಿ ಎರಡು ಸೆಕೆಂಡ್-ಕ್ಲಾಸ್ ಲಗೇಜ್-ಕಮ್-ಬ್ರೇಕ್ ವ್ಯಾನ್‌ಗಳನ್ನು ಸಹ ಅಳವಡಿಸಲಾಗಿದೆ.


Click it and Unblock the Notifications