ಬಿಲಿಯನೇರ್ ಮುಕೇಶ್ ಅಂಬಾನಿ ನೀತಾ ಅಂಬಾನಿ ದಂಪತಿಗಳ, ಕಿರಿಯ ಪುತ್ರನಾಗಿರುವ ಅನಂತ್ ಅಂಬಾನಿ ಹಾಗೂ ಉದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಮಾರಂಭಕ್ಕೆ ಸಿದ್ಧತೆ ಜೋರಾಗಿದೆ. ಮಾರ್ಚ್ 1ರಿಂದ 3 ರವರೆಗೆ ಗುಜರಾತ್‌ನ ಜಾಮ್‌ನಗರದಲ್ಲಿ ಅವರ ಪ್ರಿ ವೆಡ್ಡಿಂಗ್ ಸಂಭ್ರಮಾಚರಣೆ ಕಾರ್ಯಕ್ರಮಗಳು ನಡೆಯಲಿದೆ.
ಕೆಲವು ವರ್ಷಗಳ ಹಿಂದೆ ಮುಕೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿ, 18 ತಿಂಗಳಲ್ಲಿ ತಮ್ಮ ತೂಕವನ್ನು 108 ಕೆಜಿಯಷ್ಟು ಕಡಿಮೆ ಮಾಡಿಕೊಂಡು ಸುದ್ದಿಯಾಗಿದ್ದರು. 2016ರಲ್ಲಿ, ಅವರ ದಢೂತಿ ದೇಹ ಹೊಂದಿದ್ದಅನಂತ್ ಅಂಬಾನಿಯವರ ವೈಟ್ ಲಾಸ್ ಜರ್ನಿಯೂ ಸ್ಥೂಲಕಾಯತೆ ಮತ್ತು ವಿಪರೀತ ತೂಕ ಹೆಚ್ಚಾಗುವಿಕೆಯಿಂದ ಬಳಲುತ್ತಿರುವ ಅನೇಕರಿಗೆ ಪ್ರೇರಣೆಯಾಗಿತ್ತು. ಅವರ ದೈಹಿಕ ರೂಪಾಂತರವು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿತು. ಹಾಗಿದ್ರೆ ನೈಸರ್ಗಿಕವಾಗಿ ತೂಕ ಇಳಿಸಿಕೊಳ್ಳಲು ಅವರಿಗೆ ಸಹಾಯ ಮಾಡಿರುವ ಫಿಟ್ನೆಸ್ ತರಬೇತುದಾರರು ಯಾರು ಗೊತ್ತಾ?

ಅನಂತ್ ಅಂಬಾನಿಯವರ ತೂಕ ಇಳಿಸಲು ಪ್ರಮುಖವಾಗಿ ಸಹಾಯ ಮಾಡಿದವರು, ಮುಂಬೈ ಮೂಲದ ಖ್ಯಾತ ಫಿಟ್ನೆಸ್ ತರಬೇತುದಾರ ವಿನೋದ್ ಚನ್ನಾ. ಭಾರತದ ಟಾಪ್ ಸೆಲೆಬ್ರಿಟಿ ಫಿಟ್ನೆಸ್ ತರಬೇತುದಾರರಲ್ಲಿ ಒಬ್ಬರಾಗಿರುವ ವಿನೋದ್ ಚನ್ನಾ ಅವರು ಈ ಹಿಂದೆ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿಯವರ ವೈಯಕ್ತಿಕ ತರಬೇತುದಾರರಾಗಿದ್ದರು. ಇವರು ಅಂಬಾನಿ ಕುಟುಂಬದ ಕಿರಿಯ ಪುತ್ರನಿಗೆ ಡಯಟ್ ಫುಡ್ ಮತ್ತು ವ್ಯಾಯಾಮದ ಮೂಲಕ ಕೇವಲ 18 ತಿಂಗಳಲ್ಲಿ 108 ಕೆಜಿ ತೂಕವನ್ನು ಇಳಿಸಲು ಸಹಾಯ ಮಾಡಿದರು.
ಇಂದು ಖ್ಯಾತ ಫಿಟ್ನೆಸ್ ತರಬೇತುದಾರಗಿರುವ ವಿನೋದ್ ಚನ್ನ ಒಂದು ಕಾಲದಲ್ಲಿ ಸಣ್ಣಗೆ, ತೆಳ್ಳಗಿನ ದೇಹ ಹೊಂದಿದ್ದರು. ಸಾಕಷ್ಟು ಶ್ರಮವಹಿಸಿ ಸಾಧನೆಯ ಹಾದಿಯಲ್ಲಿ ಸಾಗಿ ಬಂದ ಅವರ ಪಯಣ ನಿಜಕ್ಕೂ ಸ್ಪೂರ್ತಿದಾಯಕವಾಗಿದೆ. ಸಂದರ್ಶನವೊಂದರಲ್ಲಿ, ವಿನೋದ್ ಅವರು ತಮ್ಮ ಬೆಳವಣಿಗೆಯ ಸಮಯದಲ್ಲಿ ಅಪೌಷ್ಟಿಕತೆ ಆಹಾರ ಮತ್ತು ಆಹಾರವಿಲ್ಲದ ದಿನಗಳ ಬಗ್ಗೆ ವಿವರಿಸಿದ್ದರು. ಫಿಟ್ನೆಸ್ ತರಬೇತುದಾರರಾಗಿ ಯಶಸ್ಸಿಯಾಗುವ ಮೊದಲು, ವಿನೋದ್ ಚನ್ನ ಅವರು ಹೌಸ್ ಕೀಪಿಂಗ್ ಸೇಕ್ಯೂರಿಟಿ ಗಾರ್ಡ್ ಸೇರಿ ಹಲವು ವಿಧದ ಕೆಲಸಗಳನ್ನು ಮಾಡಿದ್ದರು.

ವಿನೋದ್ ಚನ್ನ ಅವರು ಬೆಳೆದಂತೆ, ಫಿಟ್‌ನೆಸ್‌ನ ಮಹತ್ವವನ್ನು ಅರಿತುಕೊಂಡು ಜಿಮ್‌ಗೆ ಸೇರಿದರು. ಇಲ್ಲಿಂದಲೇ ಅವರ ಫಿಟ್ನೆಸ್ ಪ್ರಯಾಣದ ಆರಂಭವಾಯಿತು. ಸಂದರ್ಶನವೊಂದರಲ್ಲಿ, ಅನಂತ್ ಅಂಬಾನಿ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡ ವಿನೋದ್ ಚನ್ನಾ, ಅವರಲ್ಲಿದ್ದ ಬದ್ದತೆಯನ್ನು ಹೊಗಳಿದ್ದರು. ಅನಂತ್ ಅಂಬಾನಿಗಾಗಿಯೇ ಹೆಚ್ಚಿನ ಪ್ರೊಟೀನ್, ಹೈ ಫೈಬರ್ ಮತ್ತು ಕಡಿಮೆ ಕಾರ್ಬ್ ಆಹಾರಗಳನ್ನು ಒಳಗೊಂಡಂತೆ ವಿಶೇಷ ಆಹಾರ ಯೋಜನೆಯನ್ನು ಅವರು ರಚಿಸಿದ್ದರು ಎಂದು ವಿನೋದ್ ಚನ್ನಾ ಹೇಳಿದ್ದರು.

ಅನಂತ್ ಅಂಬಾನಿಯವರಲ್ಲದೆ, ವಿನೋದ್ ಚನ್ನಾ ಅವರು ನೀತಾ ಅಂಬಾನಿ, ಕುಮಾರ್ ಮಂಗಳಂ ಬಿರ್ಲಾ, ಅನನ್ಯಾ ಬಿರ್ಲಾ ಮತ್ತು ಜಾನ್ ಅಬ್ರಹಾಂ, ಶಿಲ್ಪಾ ಶೆಟ್ಟಿ ಕುಂದ್ರಾ, ಹರ್ಷವರ್ಧನ್ ರಾಣೆ, ವಿವೇಕ್ ಒಬೆರಾಯ್ ಮತ್ತು ಅರ್ಜುನ್ ರಾಂಪಾಲ್ ಸೇರಿದಂತೆ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳಿಗೆ ವೈಯಕ್ತಿಕ ತರಬೇತುದಾರರಾಗಿದ್ದಾರೆ.
ವಿನೋದ್ ಚನ್ನಾ ಅವರು 12 ಟ್ರೈನಿಂಗ್ ಸೆಷನ್ ಪ್ಯಾಕೇಜ್‌ಗೆ 1.5 ಲಕ್ಷ ರೂ.ಗಳನ್ನು ವಿಧಿಸುತ್ತಾರೆ ಎಂದು ವರದಿಯಾಗಿದೆ.


Click it and Unblock the Notifications