HMPV ವೈರಸ್ ದೇಶದೆಲ್ಲೆಡೆ ಭಯದ ವಾತವರಣವನ್ನ ಸೃಷ್ಟಿ ಮಾಡಿದೆ. ಅಲ್ಲದೆ ಈ ಸೋಂಕು ಈ ಹಿಂದೆಯೇ ಇತ್ತು ಎಂದು ಹಲವು ವರದಿಗಳು ಹೇಳಿವೆ. ಅಲ್ಲದೆ ಈ ಪ್ರಕರಣಗಳು ಬೆಂಗಳೂರಿನಲ್ಲು ಕೂಡ ಕಾಣಿಕೊಂಡಿದ್ದು ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಈ HMPV ಸೋಂಕು ಯಾರಲ್ಲಿದೆ ಎಂದು ತಿಳಿಯಲು HMPV ಟೆಸ್ಟ್ ಅಗತ್ಯವಾಗುತ್ತದೆ. ಇನ್ನು ಈ HMPV ಟೆಸ್ಟ್‌ಗೆ ಎಷ್ಟು ಖರ್ಚಾಗುತ್ತೆ ಗೊತ್ತಾ. ಈ ಲ್ಯಾಬ್ ಶುಲ್ಕದ ಬಗ್ಗೆ ಇಲ್ಲಿ ತಿಳಿಯಿರಿ.
ಭಾರತದಲ್ಲಿ ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ (HMPV)ನ ಎರಡು ಪ್ರಕರಣಗಳು ಮಂಗಳವಾರ ದಾಖಲಾಗಿದ್ದು ಎಲ್ಲರಲ್ಲೂ ತೀವ್ರ ಆತಂಕವನ್ನ ಹೆಚ್ಚಿಸಿದೆ. ಅಲ್ಲದೆ ಇಂದಿನ ವರದಿ ಪ್ರಕಾರ ಭಾರತದಲ್ಲಿ ಏಳು ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ ಎರಡು, ಚೆನ್ನೈ, ಅಹಮದಾಬಾದ್ ಮತ್ತು ಸೇಲಂನಲ್ಲಿ ತಲಾ ಒಂದೊಂದು ಪ್ರಕರಣಗಳು ದಾಖಲಾಗಿವೆ. ಅಲ್ಲದೆ ನಾಗ್ಪರದಲ್ಲೂ ಕೂಡ ಈ ಪ್ರಕರಣ ದಾಖಲಾಗಿದೆ ಎನ್ನಲಾಗ್ತಿದೆ. ಇನ್ನು ದೇಶದಾದ್ಯಂತ ನಿಧಾನವಾಗಿ ಈ ವೈರಸ್ ಹರಡುತ್ತಿದ್ದು ಎಲ್ಲರನ್ನು ಭಯಭೀತರಾಗುವಂತೆ ಮಾಡಿದೆ.

ಹ್ಯೂಮನ್ ಮೆಟಾಪ್ನ್ಯೂಮೊ ವೈರಸ್ (HMPV) ಬಗ್ಗೆ ಇಲ್ಲಿ ತಿಳಿಯಿರಿ
HMPV ಸೋಂಕು ಉಸಿರಾಟದ ಸಮಸ್ಯೆಗಳನ್ನ ಉಂಟು ಮಾಡುತ್ತದೆ. ಮೊದಲಿಗೆ ಜ್ವರ, ನಂತರ ಕೆಮ್ಮು ಸೇರಿದಂತೆ ಗಂಟಲು ಮತ್ತು ಮೂಗಿನನಲ್ಲಿ ಇದರ ರೋಗಲಕ್ಷಣಗಳನ್ನ ಉಂಟು ಮಾಡುತ್ತದೆ. ಇದು ಹೆಚ್ಚಾಗಿ ಮಕ್ಕಳು ಮತ್ತು ವಯಸ್ಸಾದವರಲ್ಲಿ ಕಂಡುಬರುತ್ತದೆ. ಅಲ್ಲದೆ ಅತೀ ಹೆಚ್ಚು ರೋಗ ನಿರೋಧಕ ಶಕ್ತಿ ಹೊಂದಿರುವವರಲ್ಲಿ ಇದು ಕಾಣಿಸಿಕೊಳ್ಳುವುದು ಸ್ವಲ್ಪ ಕಡಿಮೆ.
ಅಲ್ಲದೆ ಈ ವೈರಸ್ ಚಳಿಗಾಲದಲ್ಲಿ ಇತರೆ ವೈರಸ್‌ಗಳಂತೆ ಬಿಂಭಿಸುತ್ತವೆ, ಹಾಗೆ ಇತರೆ ರೋಗಲಕ್ಷಣಗಳಂತೆ ಈ ವೈರಸ್ ಕಾಣಿಸಿಕೊಳ್ಳುತ್ತದೆ ಎಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ವರದಿ ಮಾಡಿದೆ.
ಈ HMPV ವೈರಸ್ ಲಕ್ಷಣಗಳನ್ನ ನೋಡುವುದಾದ್ರೆ, ಕೆಮ್ಮ, ಜ್ವರ, ಮೂಗು ಕಟ್ಟುವುದು, ಉಸಿರಾಟದ ತೊಂದರೆಗಳು ಮೊದಲು ಕಾಣಿಸಿಕೊಳ್ಳುತ್ತವೆ. ನಂತರ ಬ್ರಾಂಕೈಟಿಸ್ ಹಾಗೆ ನ್ಯುಮೋನಿಯಾದಂತಹ ಇತರೆ ಮಸ್ಯೆಗಳು ಶುರುವಾಗಬಹುದು. ಕೋವಿಡ್‌ನಂತೆಯೇ ಇದು ಕೂಡ ಉಸಿರಾಟದ ಸಮಸ್ಯೆಯನ್ನ ಉಂಟು ಮಾಡುತ್ತದೆ. ಈ ರೋಗ ಲಕ್ಷಣಗಳು ತೀವ್ರವಾದಂತೆ ನಮ್ಮ ಸಮಸ್ಯೆಗಳು ಕೂಡ ಉಲ್ಬಣವಾಗಬಹುದು.
HMPV ಪರೀಕ್ಷೆಗೆ ಎಷ್ಟು ಖರ್ಚಾಗಬಹುದು?
ಬಯೋಫೈರ್ ಪ್ಯಾನೆಲ್‌ನಂತಹ ಸುಧಾರಿತ ರೋಗನಿರ್ಣಯ ವಿಧಾನಗಳ ಮೂಲಕ HMPV ಪರೀಕ್ಷೆ ಮಾಡಬಹುದು. ಅಲ್ಲದೆ ಇದು HMPV ಅಲ್ಲದೆ ಬೇರೆ ವೈರಸ್‌ಗಳನ್ನ ಕೂಡ ಪತ್ತೆ ಮಾಡುತ್ತದೆ. ಡಾ ಲಾಲ್ ಪಾಥ್‌ಲ್ಯಾಬ್ಸ್, ಟಾಟಾ 1 ಎಂಜಿ ಲ್ಯಾಬ್ಸ್ ಮತ್ತು ಮ್ಯಾಕ್ಸ್ ಹೆಲ್ತ್‌ಕೇರ್ ಲ್ಯಾಬ್‌ನಂತಹ ಪ್ರಮುಖ ಲ್ಯಾಬ್‌ಗಳಲ್ಲಿ HMPV ಪರೀಕ್ಷೆ ಮಾಡಲಾಗುತ್ತದೆ. ಇನ್ನು ಇವುಗಳ ಆರ್‌ಟಿ ಪಿಸಿಆರ್ ಪರೀಕ್ಷೆಗೆ ರೂ 3,000 ರಿಂದ ರೂ 8,000 ವರೆಗೆ ಖರ್ಚಾಗುತ್ತದೆ. HMPV, ಅಡೆನೋವೈರಸ್, ಕೊರೋನಾವೈರಸ್ 229E ಹಾಗೆ ಕೊರೊನಾವೈರಸ್ HKU1ಗಳ ಪರೀಕ್ಷೆಗೆ ಒಟ್ಟು 20,000 ರೂ. ಖರ್ಚಾಗಲಿದೆ.
ಕೋವಿಡ್‌ನ ದಿನಗಳನ್ನ HMPV ಮತ್ತೆ ನೆನಪು ಮಾಡುತ್ತಾ ಎಂದು ಜನರು ಆತಂಕವನ್ನ ವ್ಯಕ್ತಪಡಿಸುತ್ತಿದ್ದಾರೆ. ಈ HMPV ವೈರಸ್ ಚೀನಾದಲ್ಲಿ ಅತೀ ಹೆಚ್ಚು ವರದಿಯಾಗಿದೆ ಎಂದು ತಿಳಿದುಬಂದಿದೆ. ಹಾಗೆ ಇದು ಇತರೆ ಸಾಂಕ್ರಮಿಕ ರೋಗಗಳನ್ನ ಹರಡುವ ಸಾಧ್ಯತೆ ಹೆಚ್ಚಿದೆ ಎಂದು ವರದಿ ತಿಳಿಸಿದೆ.
HMPV ಲಕ್ಷಣಗಳು ಅಪಾಯಗಳು
HMPV ಸಾಮಾನ್ಯವಾಗಿ ರೋಗ ನಿರೋಧಕ ಅಂಶ ಕಡಿಮೆ ಇರುವವರಲ್ಲಿ ಕಂಡುಬರುತ್ತದೆ. ಇನ್ನು ಆರೋಗ್ಯವಂತ ವ್ಯಕ್ತಿಗಳಲ್ಲಿ ನಿಧಾನವಾಗಿ ಇದರ ಗುಣಲಕ್ಷಣಗಳು ಕಾಣಲು ಶುರುವಾಗುತ್ತವೆ. ಮೂಗು ಕಟ್ಟುವುದು, ಜ್ವರ, ಗಂಟಲು ನೋವು, ಹೀಗೆ ಇನ್ನಿತರ ಸಮಸ್ಯೆಗಳು ಕಾಣಿಸಿಕೊಳ್ಳಲು ಆರಂಭವಾಗುತ್ತವೆ. ಇದರ ಜೊತೆಗೆ ಇದು ಸಾಕಷ್ಟು ಉಸಿರಾಟದ ಸಮಸ್ಯೆಗಳನ್ನ ಎದುರಿಸುವಂತೆ ಮಾಡುತ್ತದೆ. ಮಕ್ಕಳಲ್ಲಿ ಈ ರೋಗ ಲಕ್ಷಣಗಳು ಹೆಚ್ಚು ಕಾಣಿಸಿಕೊಳ್ಳುತ್ತವೆ. ತ್ವರಿತ ಉಸಿಟಾದ ಸಮಸ್ಯೆ, ಸೈನೋಸಿಸ್ ತುಟಿ ಮತ್ತು ಬೆರಳುಗಳು ನೀಲಿಯಾದ್ರೆ ಇದು ಪ್ರಕರಣದ ತೀವ್ರತೆಯನ್ನ ಹೇಳುತ್ತದೆ.
HMPV ಚಿಕಿತ್ಸೆ ಏನು?
ಸಧ್ಯಕ್ಕ ಈ ಸೋಂಕನ್ನು ತಡೆಗಟ್ಟಲು ಯಾವುದೇ ನಿರ್ಧಿಷ್ಟ ಲಸಿಕೆ ಅಥವಾ ಚಿಕಿತ್ಸೆ ಲಭ್ಯವಿಲ್ಲ. ನಾವು ಮುಂಜಾಗ್ರತೆ ಕ್ರಮಗಳನ್ನ ತೆಗೆದುಕೊಳ್ಳುವ ಮೂಲಕ ಈ ರೋಗ ಬಾರದಂತೆ ತಡೆಯಬಹುದು. ಈಗಾಗಲೇ ಅನಾರೋಗ್ಯವನ್ನ ಹೊಂದಿರುವವರು ವಯಸ್ಸಾದವರು ಮಕ್ಕಳು ಹೆಚ್ಚು ವಿಶ್ರಾಂತಿ ಹಾಗೆ ಮುಂಜಾಗ್ರತ ಕ್ರಮಗಳನ್ನ ತೆಗೆದುಕೊಳ್ಳುವ ಮೂಲಕ ಈ ಕಾಯಿಲೆ ಬಾರದಂತೆ ನಿಯಂತ್ರಿಸಬಹುದು. ಇನ್ನು ಇಂತಹ ರೋಗ ಲಕ್ಷಣಗಳು ಹೆಚ್ಛಾದರೆ ನೀವು ಆಸ್ಪತ್ರೆಗೆ ದಾಖಲಾಗುವುದು ಉತ್ತಮ.
More From GoodReturns

Lunar Eclipse 2026: ವರ್ಷದ ಮೊದಲ ಚಂದ್ರಗ್ರಣ...ಯಾವ ರಾಶಿಯವರಿಗೆ ಶುಭ, ಯಾವ ರಾಶಿಯವರಿಗೆ ಎಚ್ಚರಿಕೆ? ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Bank Holidays: ಮಾರ್ಚ್ನಲ್ಲಿ ಬ್ಯಾಂಕ್ಗಳಿಗೆ 18 ದಿನ ರಜೆ! ಗ್ರಾಹಕರೇ ಇಲ್ಲಿ ಗಮನಿಸಿ

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?



Click it and Unblock the Notifications