ಬೆಂಗಳೂರು, ಏಪ್ರಿಲ್ 30: ವಿಪ್ರೋ ಕಂಪೆನಿಗೆ ನೂತನವಾಗಿ ಸಿಇಒ ಆಗಿ ನೇಮಕವಾಗಿರುವ ಶ್ರೀನಿವಾಸ್ ಪಾಲ್ಲಿಯಾ ಅವರಿಗೆ ವಾರ್ಷಿಕ ಸಂಬಳ ಅಂದಾಜು $6 ಮಿಲಿಯನ್ ಎಂದು ವರದಿಗಳು ತಿಳಿಸಿವೆ.
ವಿಪ್ರೋ ಕಂಪನಿಯ ಮಾಜಿ ಸಿಇಒ ಮತ್ತು ಎಂಡಿ ಥಿಯೆರಿ ಡೆಲಾಪೋರ್ಟೆಗೆ $4.33 ಮಿಲಿಯನ್ ಪರಿಹಾರ ಪ್ಯಾಕೇಜ್ ಅನ್ನು ಮಂಜೂರು ಮಾಡಿದೆ. ಪಲ್ಲಿಯಾ ಅವರ ಪ್ಯಾಕೇಜ್ ಸ್ಥಿರ ಮತ್ತು ವೇರಿಯಬಲ್ ಪೇ ಈ ಎರಡನ್ನು ಒಳಗೊಂಡಿದೆ.

ಏಪ್ರಿಲ್ 6 ರಂದು ಸಾಫ್ಟ್‌ವೇರ್ ದೈತ್ಯ ಡೆಲಾಪೋರ್ಟೆ ಅವರ ಆರಂಭಿಕ ರಾಜೀನಾಮೆಯ ನಂತರ ಶ್ರೀನಿವಾಸ್ ಪಾಲ್ಲಿಯಾ ಅವರನ್ನು ವಿಪ್ರೋದ ಸಿಇಒ ಮತ್ತು ಎಂಡಿ ಎಂದು ಘೋಷಿಸಲಾಯಿತು. ಇದು ನಿಗದಿತ ಸಮಯಕ್ಕಿಂತ ಒಂದು ವರ್ಷ ಮುಂಚಿತವಾಗಿ ನಡೆಯಿತು.
ವಿಪ್ರೋ ಸಿಇಒ ವೇತನ ವಿವರಗಳು
ಪಲ್ಲಿಯಾ ಅವರ ಮೂಲ ವೇತನವು ವರ್ಷಕ್ಕೆ $1.75 ಮಿಲಿಯನ್‌ನಿಂದ $3 ಮಿಲಿಯನ್‌ಗಳ ವ್ಯಾಪ್ತಿಯಲ್ಲಿ ಬರುವ ನಿರೀಕ್ಷೆಯಿದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ. ಅವರ ನಿಗದಿತ ವೇತನದ ಜೊತೆಗೆ ಪಾಲ್ಲಿಯಾ ವೇರಿಯಬಲ್ ಪರಿಹಾರವನ್ನು ಪಡೆಯುತ್ತಾರೆ. ಇದು ವಾರ್ಷಿಕವಾಗಿ ಹೆಚ್ಚುವರಿ $1.75 ಮಿಲಿಯನ್‌ನಿಂದ $3 ಮಿಲಿಯನ್ ಆಗಿರುತ್ತದೆ.
ಆದಾಗ್ಯೂ ಈ ವೇರಿಯಬಲ್ ಕಾಂಪೊನೆಂಟ್‌ನ ವಿತರಣೆಯು ಕಂಪನಿಯು ಹೇಳಿದಂತೆ ಆದಾಯ ಮತ್ತು ಲಾಭದ ಗುರಿಗಳನ್ನು ಒಳಗೊಂಡಂತೆ ಪೂರ್ವನಿರ್ಧರಿತ ಮೆಟ್ರಿಕ್‌ಗಳ ಹೊರತಾಗಿ ವಿಪ್ರೋದ ಕಾರ್ಯಕ್ಷಮತೆಯನ್ನು ಅವಲಂಬಿಸಿದೆ. ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಂಸ್ಥೆಯು ಪಾಲ್ಲಿಯಾಗೆ ಸ್ಟಾಕ್ ಪರಿಹಾರದ ರೂಪದಲ್ಲಿ ದೀರ್ಘಾವಧಿಯ ಪ್ರೋತ್ಸಾಹವನ್ನು ನೀಡಿದೆ. $4 ಮಿಲಿಯನ್ ಮೊತ್ತದ ಈ ಪ್ರೋತ್ಸಾಹಕಗಳು $1.4 ಮಿಲಿಯನ್ ನಿರ್ಬಂಧಿತ ಸ್ಟಾಕ್ ಯುನಿಟ್‌ಗಳಲ್ಲಿ (RSUs) ಮತ್ತು $2.6 ಮಿಲಿಯನ್ ಪರ್ಫಾರ್ಮೆನ್ಸ್ ಸ್ಟಾಕ್ ಯುನಿಟ್ (PSUs) ಆಗಿರುತ್ತದೆ.
ಈ ಸ್ಟಾಕ್ ಯೂನಿಟ್‌ಗಳು ಕ್ರಮೇಣವಾಗಿ 25 ಪ್ರತಿಶತವು ಮೇ 2, 2025 ರಂದು ಲಭ್ಯವಾಗುತ್ತದೆ. ಇನ್ನೊಂದು ಶೇಕಡಾ 25 ಮೇ 2, 2026 ರಂದು ಮತ್ತು ಉಳಿದ 50 ಪ್ರತಿಶತವು ಮೇ 2, 2027 ರಂದು ಲಭ್ಯವಾಗುತ್ತದೆ. ಪಲ್ಲಿಯಾ ಅವರು ಮೂರು ದಶಕಗಳಿಂದ ವಿಪ್ರೊದಲ್ಲಿದ್ದಾರೆ. ಈ ಮೊದಲು ವಿಪ್ರೊದ ಅತಿದೊಡ್ಡ ಕಾರ್ಯತಂತ್ರದ ಮಾರುಕಟ್ಟೆಯಾದ ಅಮೇರಿಕಾಸ್ 1 ಗೆ ಸಿಇಒ ಆಗಿ ಸೇವೆ ಸಲ್ಲಿಸಿದ್ದಾರೆ. ಈ ಪಾತ್ರದಲ್ಲಿ ಅವರು ವೈವಿಧ್ಯಮಯ ಉದ್ಯಮ ವಲಯಗಳನ್ನು ಮೇಲ್ವಿಚಾರಣೆ ಮಾಡಿದ್ದಾರೆ. ಅವರ ದೃಷ್ಟಿಕೋನ ಮತ್ತು ಬೆಳವಣಿಗೆಯ ಕಾರ್ಯತಂತ್ರಗಳ ಪರಿಣಾಮ ಈ ವಲಯಗಳಲ್ಲಿ ಮಾರುಕಟ್ಟೆ ಷೇರುಗಳು ಹೆಚ್ಚಿದವು.


Click it and Unblock the Notifications