ಹೊಸವರ್ಷ ಶುರುವಾಗಲು ಇನ್ನೂ ಕೆಲವು ಕ್ಷಣಗಳು ಮಾತ್ರ ಬಾಕಿ ಇದೆ, ಹೌದು ಬರುವ ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಂಡು, ಜೀವನದಲ್ಲಿ ಹೊಸ ಹೊಸ ಪ್ಲಾನ್ ಮಾಡಿ ಶ್ರೀಮಂತರಾಗಬೇಕೆಂದು ಕನಸು ಕಾಣುತ್ತಿದ್ದೀರಾ..? ಆದರೆ ನಿಮ್ಮ ಸಂಪತ್ತನ್ನು ಹೇಗೆ ನೀವು ಹೆಚ್ಚಿಸಿಕೊಳ್ಳಬೇಕು ಮತ್ತು ಅದನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬ ಗೊಂದಲ ಇದ್ಯಾ? ಹಾಗಿದ್ರೆ ನಿಮಗಾಗಿ ಇಲ್ಲಿದೆ ಸ್ಮಾರ್ಟ್ ಹಣಕಾಸು ಅಭ್ಯಾಸಗಳು.
ಹೌದು,ಪ್ರತಿನಿತ್ಯದ ಜೀವನದ ಜಂಜಾಟದ ಬದಕು ನಿಮ್ಮಗೆ ಬೇಸರ ತಂದಿದ್ದೀರಾ ಚಿಂತಿಸುವ ಅಗತ್ಯವಿಲ್ಲ ನಿಮ್ಮಗೆ ಸ್ಮಾರ್ಟ್ ಹೂಡಿಕೆಗಳು ದೀರ್ಘಾವಧಿಯಲ್ಲಿ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಬಹುದು.ಅಲ್ಲದೆ ಹಣವನ್ನು ಮತ್ತೆ ಮತ್ತೆ ಹೂಡಿಕೆ ಮಾಡುವುದು ಮತ್ತು ಹಣವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವುದು ಅತ್ಯಂತ ಅವಶ್ಯಕ.

ನೀವು ಈ ಸ್ಮಾರ್ಟ್ ಹಣಕಾಸು ಅಭ್ಯಾಸವನ್ನು 2025 ಕ್ಕೆ ಅಳವಡಿಸಿಕೊಳ್ಳಲು ಶುರುಮಾಡಿದ್ದರೆ ಮೊದಲು ನಾವು ಹಣಕಾಸಿನ ಪರಿಸ್ಥಿತಿಯನ್ನು ಸುಧಾರಣೆ ಮಾಡಿಕೊಳ್ಳಿಬೇಕಾಗುತ್ತದೆ. ಅದಕ್ಕೆ ನೀವು ನಿಮ್ಮ ಗುರಿಗೆ ಅನುಗುಣಕ್ಕೆ ಸಾಧಿಸಬಹುದಾದ ಹಣಕಾಸಿನ ಗುರಿಗಳನ್ನು ಹೊಂದಿಸುವುದು ಮೊದಲು ರೂಢಿಮಾಡಿಕೊಳ್ಳಬೇಕು. ಇನ್ನೂ 2025 ರಲ್ಲಿ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಲು ಕೆಲವು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ. ಈ ಟಿಪ್ಸ್‌ಗಳನ್ನು ನೀವು ಅಳವಡಿಸಿಕೊಳ್ಳವ ಮೂಲಕ ನಿಮ್ಮ ಜೀವನದಲ್ಲಿ ನೀವು ಶ್ರೀಮಂತ ವ್ಯಕ್ತಿಯಾಗಬಹುದು.
ಬಜೆಟ್ ಪ್ಲಾನ್ ಮಾಡಿ
ನಿಮ್ಮ ಆದಾಯದ ಒಟ್ಟು ಮೊತ್ತದಲ್ಲಿ ಶೇ. 50 ಅಗತ್ಯ ವೆಚ್ಚಗಳಿಗೆ ಉಪಯೋಗ ಮಾಡಿಕೊಳ್ಳಿ ಮತ್ತು ಶೇ.30 ಅನಿರೀಕ್ಷಿತ ವೆಚ್ಚಗಳಿಗೆ ಹಾಗೂ ಶೇ. 20 ಉಳಿತಾಯ ಮತ್ತು ಹೂಡಿಕೆಗೆ ಹಣವನ್ನು ಸೇವ್ ಮಾಡಿ ಇಟ್ಟುಕೊಳ್ಳಬೇಕಾಗುತ್ತದೆ. ನಿಮ್ಮ ಖರ್ಚುಗಳನ್ನು ಟ್ರ್ಯಾಕ್ ಮಾಡಲು, ವ್ಯರ್ಥ ವೆಚ್ಚಗಳನ್ನು ಹುಡುಕಲು ಮತ್ತು ನಿಮ್ಮ ಬಜೆಟ್‌ಗಿಂತ ಹೆಚ್ಚಿನದನ್ನು ಖರ್ಚು ಮಾಡದಿರಲು ನೀವು ಕೆಲವು ಬಜೆಟ್ ಅಪ್ಲಿಕೇಶನ್‌ಗಳನ್ನು ಸಹ ಬಳಕೆ ಮಾಡಿಕೊಂಡು ಹಣವನ್ನು ಉಳಿತಾಯ ಮಾಡಬೇಕು.
ಹೂಡಿಕೆ
ನೀವು ನಿಮ್ಮ ಹಣವನ್ನು ಸುರಕ್ಷಿತವಾಗಿ ಹೊಡಿಕೆ ಮಾಡಲು ಕಡಿಮೆ ಇರುವ ಹೂಡಿಕೆ ಆಯ್ಕೆಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಮ್ಯೂಚುವಲ್ ಫಂಡ್‌ಗಳು ಅಥವಾ ಫಿಕ್ಸೆಡ್ ಡೆಪಾಸಿಟ್‌ಗಳು. ನಿರಂತರ ಆದಾಯಕ್ಕಾಗಿ ಇಕ್ವಿಟಿ ಮ್ಯೂಚುವಲ್ ಫಂಡ್ ಅಥವಾ NPS ನಂತಹ ನಿವೃತ್ತಿ ಯೋಜನೆಗಳನ್ನು ನೀವು ಬೇಕಿದ್ದರೆ ಆಯ್ಕೆ ಮಾಡಿಕೊಳ್ಳಬಹುದು.
ತುರ್ತು ನಿಧಿಯನ್ನು ಇಟ್ಟುಕೊಳ್ಳಿ
ನಿಮ್ಮ ಸಂಬಳದ ಹಣದಲ್ಲಿ 6 ರಿಂದ 12 ತಿಂಗಳುಗಳನ್ನು ನೀವು ಪ್ರತ್ಯೇಕವಾಗಿ ತುರ್ತು ನಿಧಿಯಾಗಿ ಮೀಸಲು ಇಡಬೇಕು. ನಿಮ್ಮಗೆ ಯಾವುದೇ ಸಮಸ್ಸೆಯಾದರೂ ಅದಕ್ಕೆ ಸಾಲ ಮಾಡುವುದನ್ನು ತಪ್ಪಿಸಲು ಇದು ನಿಮ್ಮ ಸಹಾಯಕ್ಕೆ ಬರುತ್ತದೆ.
ಸಾಲವನ್ನು ನಿರ್ವಹಣೆ ಮಾಡುವುದನ್ನು ಕಲಿಯಿರಿ
ಸಾಲದ ಭಾಧೆಯನ್ನು ತಪ್ಪಿಸಿಕೊಳ್ಳಲು ನೀವು ಸಾಲವನ್ನು ಹೇಗೆ ನಿರ್ವಹಣೆ ಮಾಡಬೇಕೆಂಬುವುದನ್ನು ಕಲಿಯುವುದು ಮುಖ್ಯವಾಗುತ್ತದೆ. ಹೆಚ್ಚಿನ ಬಡ್ಡಿಯ ಸಾಲಗಳು, ಕ್ರೆಡಿಟ್ ಕಾರ್ಡ್ ಬಿಲ್‌ಗಳು ಮತ್ತು ವೈಯಕ್ತಿಕ ಸಾಲಗಳನ್ನು ಮೊದಲು ಪಾವತಿಸುವುದರ ಮೇಲೆ ನೀವು ಹೆಚ್ಚಿನ ಗಮನವರಿಸಬೇಕು. ಇದರಿಂದ ಆರ್ಥಿಕ ಹೊರೆ ಕಡಿಮೆಯಾಗುತ್ತದೆ.
ಹಣಕಾಸು ಯೋಜನೆಯನ್ನು ಪ್ಲಾನ್ ಮಾಡಿ
ನಿಮ್ಮಗೆ ತಕ್ಷಣಕ್ಕೆ ಹಣವನ್ನು ನೀಡುವ ಹೊಡಿಕೆಗಳನ್ನು ಆಯ್ಕೆ ಮಾಡಿಕೊಳ್ಳಬೇಡಿ. ಇದರಿಂದ ಹೆಚ್ಚಿನ ಅಪಾಯದ ಸಾಧ್ಯತೆ ಇರುತ್ತದೆ. ಎಚ್ಚರಿಕೆಯಿಂದ ಹಣಕಾಸನ್ನು ನಿರ್ವಹಣೆ ಮಾಡುವುದು ಅತ್ಯಂತ ಅವಶ್ಯಕವಾಗಿದೆ.
ತೆರಿಗೆ ಯೋಜನೆ ಬಗ್ಗೆ ಅರಿವಿರಲಿ
ತೆರಿಗೆ ಬಿಲ್ ಅನ್ನು ಕಡಿಮೆ ಮಾಡಲು ಮತ್ತು ಕಡಿತಗಳನ್ನು ಕಡಿಮೆ ಮಾಡಲು ತೆರಿಗೆ ವೃತ್ತಿಪರ ಸಲಹೆಯನ್ನು ಪಡಿದುಕೊಳ್ಳುವುದು ಮುಖ್ಯವಾಗುತ್ತದೆ.
ವಿಮೆ ಯೋಜನೆಯ ಬಗ್ಗೆ ಗಮನವಿರಲಿ
ಆರೋಗ್ಯ, ಅಂಗವೈಕಲ್ಯ ಮತ್ತು ಹಣ ಹೊಣೆಗಾರಿಕೆಯ ವಿಮೆಯನ್ನು ನೀವು ಮಾಡಿಸಿದ್ದೀರಾ ಎಂಬುವುದನ್ನು ಖಚಿತಪಡಿಸಿಕೊಳ್ಳಿ ಇದರಿಂದ ನಿಮ್ಮಗೆ ಅವಶ್ಯವಿದ್ದಾಗ ಸಹಾಯಕ್ಕೆ ಬರುತ್ತದೆ.
ನಿಮ್ಮ ಐಷಾರಾಮಿ ಜೀವನಕ್ಕಾಗಿ ದುಂದು ವೆಚ್ಚವನ್ನು ಮಾಡಬೇಡಿ. ಜೀವನಕ್ಕೆ ಅಗತ್ಯವಿರುವ ವಸ್ತುಗಳನ್ನು ಮಾತ್ರ ಬಳಕೆ ಮಾಡಿಕೊಳ್ಳಿ. ನಿಮ್ಮ ಬದುಕಿಗೆ ಈ ಸ್ಮಾರ್ಟ್ ಹಣಕಾಸು ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದರಿಂದ 2025 ರಲ್ಲಿ ಸುರಕ್ಷಿತ ಮತ್ತು ಆರೋಗ್ಯಕರ ಆರ್ಥಿಕವಾಗಿ ಅಭಿವೃದ್ದಿ ಹೊಂದಿರುವ ವ್ಯಕ್ತಿಯಾಗಹುದು.ಇದರಿಂದ ನೀವು ಯಾರ ಬಳಿಯೂ ಸಾಲಕ್ಕಾಗಿ ಕೈಚಾಚುವ ಅವಶ್ಯಕತೆ ಇರುವುದಿಲ್ಲ.


Click it and Unblock the Notifications