ಸ್ಟಾರ್ಟ್‌ಅಪ್‌ನ ಸಿಇಒ ತನ್ನ ನಾಲ್ಕು ವರ್ಷದ ಮಗುವನ್ನು ಬರ್ಬರವಾಗಿ ಕೊಂದ ಆರೋಪದ ಬಳಿಕ ಪೋಸ್ಟ್‌ಮಾರ್ಟಮ್ ವರದಿಯನ್ನು ಉಲ್ಲೇಖಿಸಿ ವೈದ್ಯರು ಭಯಾನಕವಾದ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ವೈದ್ಯರು ಗೋವಾದ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ಮಗುವನ್ನು ಹೇಗೆ ಕೊಂದರು ಎಂಬ ಮಾಹಿತಿ ನೀಡಿದ್ದಾರೆ.
ಬಾಲಕನನ್ನು ಆತನ ತಾಯಿಯೇ ಕೊಂದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಬಾಲಕನ ದೇಹದ ಮೇಲೆ ಯಾವುದೇ ಪ್ರತಿರೋಧದ ಗುರುತುಗಳು ಇಲ್ಲ ಎಂದು ಕೂಡಾ ವೈದ್ಯರು ತಿಳಿಸಿದ್ದಾರೆ. ಗೋವಾ ಪೊಲೀಸರ ನಿರ್ದೇಶನದ ಮೇರೆಗೆ ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಸಿಇಒ ಅವರನ್ನು ಬಂಧಿಸಲಾಗಿದೆ.

ಕೃತಕ ಬುದ್ಧಿಮತ್ತೆ ಸ್ಟಾರ್ಟ್‌ಅಪ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸುಚನಾ ಸೇಠ್ ಅವರು ಸೂಟ್‌ಕೇಸ್‌ನಲ್ಲಿ ತನ್ನ ಮಗುವಿನ ಮೃತದೇಹದೊಂದಿಗೆ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದಾಗ ಚಿತ್ರದುರ್ಗದಲ್ಲಿ ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿರಿಯೂರು ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಕುಮಾರ್ ನಾಯ್ಕ್ ಮಾತನಾಡಿ, "ಮಗುವನ್ನು ಕತ್ತು ಹಿಸುಕಿ ಸಾಯಿಸಲಾಗಿದೆ ಅಥವಾ ಮಗುವಿನ ಉಸಿರುಗಟ್ಟಿಸಲಾಗಿದೆ. ಬಟ್ಟೆ ಅಥವಾ ದಿಂಬು ಬಳಸಲಾಗಿದೆ. ಕತ್ತು ಹಿಸುಕಿ ಮಗು ಸಾವನ್ನಪ್ಪಿದೆ," ಎಂದು ಹೇಳಿದರು.
ಮಗುವನ್ನು ಕೈಯಿಂದ ಕತ್ತು ಹಿಸುಕಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. "ಮಗುವನ್ನು ಕೈಗಳನ್ನು ಬಳಸಿ ಕತ್ತು ಹಿಸುಕಿದಂತೆ ಕಾಣುತ್ತಿಲ್ಲ. ದಿಂಬು ಅಥವಾ ಇನ್ನಾವುದೇ ವಸ್ತುವನ್ನು ಬಳಸಿದಂತೆ ತೋರುತ್ತಿದೆ," ಎಂದು ವೈದ್ಯರು ಹೇಳಿದರು.
"ಸಾಮಾನ್ಯವಾಗಿ ಭಾರತದಲ್ಲಿ, ರಿಗರ್ ಮೋರ್ಟಿಸ್ 36 ಗಂಟೆಗಳ ನಂತರ ತಿಳಿಯುವುದಿಲ್ಲ. ಆದರೆ ಈ ಮಗುವಿನ ಪ್ರಕರಣದಲ್ಲಿ ಯಾವುದೇ ರಿಗರ್ ಮೋರ್ಟಿಸ್ ಇರಲಿಲ್ಲ. ಆದ್ದರಿಂದ, ಅವನ ಮರಣವಾಗಿ 36 ಗಂಟೆಗಳಿಗಿಂತ ಹೆಚ್ಚು ಸಮಯ ಕಳೆದಿದೆ," ಎಂದು ತಿಳಿದು ಬರುತ್ತದೆ. ರಿಗರ್ ಮೋರ್ಟಿಸ್, ಅಥವಾ ಪೋಸ್ಟ್‌ಮಾರ್ಟಮ್ ರಿಜಿಡಿಟಿ ಒಂದು ಶಾರೀರಿಕ ಪ್ರಕ್ರಿಯೆಯಾಗಿದ್ದು ಅದು ಸಾವಿನ ನಂತರ ದೇಹದ ಸ್ನಾಯುಗಳು ಗಟ್ಟಿಯಾಗಲು ಕಾರಣವಾಗುತ್ತದೆ.
ದೇಹದ ಮೇಲೆ ಯಾವುದೇ ರಕ್ತದ ಕಳೆ ಅಥವಾ ಹೋರಾಟದ ಗುರುತುಗಳಿಲ್ಲ ಎಂದು ನಾಯಕ್ ಹೇಳಿದರು. ಬಾಲಕನ ಸಾವಿನ ನಿಖರವಾದ ಸಮಯವನ್ನು ನಿರ್ಧರಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಗೋವಾದ ಅಪಾರ್ಟ್‌ಮೆಂಟ್‌ನಲ್ಲಿ ಸಾವನ್ನಪ್ಪಿ 36 ಗಂಟೆಗಳು ಕಳೆದಿವೆ. "ನಿಖರವಾದ ಸಮಯ ಹೇಳಲು ನಾವು ಸಾಧ್ಯವಿಲ್ಲ. ಆದರೆ ಮರಣವಾಗಿ 36 ಗಂಟೆಗಳು ಕಳೆದಿದೆ," ಎಂದು ನಾಯಕ್ ಹೇಳಿದರು.
ಸುಚನಾ ಸೇಠ್ ಗೋವಾದ ಅಪಾರ್ಟ್‌ಮೆಂಟ್‌ನಲ್ಲಿ ತನ್ನ ನಾಲ್ಕು ವರ್ಷದ ಮಗುವನ್ನು ಕೊಂದು, ಶವವನ್ನು ಬ್ಯಾಗ್‌ನಲ್ಲಿ ತುಂಬಿ, ಬೆಂಗಳೂರಿಗೆ ಕ್ಯಾಬ್ ವ್ಯವಸ್ಥೆ ಮಾಡುವಂತೆ ಅಪಾರ್ಟ್‌ಮೆಂಟ್ ಸಿಬ್ಬಂದಿಗೆ ಕೇಳಿದ್ದಾರೆ. ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ ಸಿಇಒ ತನ್ನ ಮಗನನ್ನು ಕೊಂದು ಆತ್ಮಹತ್ಯೆಗೂ ಯತ್ನಿಸಿದ್ದಾರೆ ಎಂದು ಮಾಹಿತಿಯಿದೆ.


Click it and Unblock the Notifications