For Quick Alerts
ALLOW NOTIFICATIONS  
For Daily Alerts

ದೇಶೀಯ ಎಲ್‌ಪಿಜಿ ಸಿಲಿಂಡರ್ ಬೆಲೆ ಮತ್ತೆ ಹೆಚ್ಚಳ: ಪ್ರತಿ ಸಿಲಿಂಡರ್‌ಗೆ ಎಷ್ಟು ರೂ. ಏರಿಕೆ?

|

ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ದೇಶೀಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನ ಮತ್ತೆ ಹೆಚ್ಚಿಸಿದ್ದು ಗ್ರಾಹಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ. ದೇಶಾದ್ಯಂತ ಎಲ್‌ಪಿಜಿ ಸಿಲಿಂಡರ್ ಬೆಲೆ ಪ್ರತಿ ಸಿಲಿಂಡರ್‌ಗೆ 15 ರೂಪಾಯಿ ಏರಿಕೆಗೊಂಡಿದೆ.

ಪೆಟ್ರೋಲಿಯಂ ಕಂಪನಿಗಳ ಸತತ ಬೆಲೆಯ ಹೆಚ್ಚಳದಿಂದಾಗಿ, ದೆಹಲಿಯಲ್ಲಿ 14.2 ಕೆಜಿ ದೇಶೀಯ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ಗಳ ದರ 899.50 ರೂ. ಆಗಿದ್ದು, 5 ಕೆಜಿ ಸಿಲಿಂಡರ್ ಈಗ 502 ರೂ. ತಲುಪಿದೆ.

ಅಕ್ಟೋಬರ್ 1, 2021 ರಂದು, ಪೆಟ್ರೋಲಿಯಂ ಕಂಪನಿಗಳು ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಿದವು. ಆ ದಿನ ಈ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ದರವನ್ನು 43 ರೂ. ಏರಿಕೆ ಮಾಡಿದ್ರೂ, ಆದಾಗ್ಯೂ, ಆ ದೇಶೀಯ ಗ್ಯಾಸ್ ಸಿಲಿಂಡರ್ ದರ ಬದಲಾಗಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಇಂದು ಇದ್ದಕ್ಕಿದ್ದಂತೆ ಪೆಟ್ರೋಲಿಯಂ ಕಂಪನಿಗಳು ದೇಶೀಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸುವ ಮೂಲಕ ದೊಡ್ಡ ಹೊಡೆತವನ್ನು ನೀಡಿವೆ. ದೇಶೀಯ ಗ್ಯಾಸ್ ಸಿಲಿಂಡರ್‌ಗಳ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ.

ಯಾವ ನಗರದಲ್ಲಿ ಎಷ್ಟು ರೂಪಾಯಿ ಏರಿಕೆ?

ಯಾವ ನಗರದಲ್ಲಿ ಎಷ್ಟು ರೂಪಾಯಿ ಏರಿಕೆ?

ಪೆಟ್ರೋಲಿಯಂ ಕಂಪನಿಗಳು ಸಬ್ಸಿಡಿ ಇಲ್ಲದೆ 14.2 ಕೆಜಿ ಗ್ಯಾಸ್ ಸಿಲಿಂಡರ್ ದರವನ್ನು ಹೆಚ್ಚಿಸಿವೆ. ಈ ಹೆಚ್ಚಳದ ನಂತರ, ಈಗ ದೆಹಲಿಯಲ್ಲಿ ಸಬ್ಸಿಡಿ ರಹಿತ ಗ್ಯಾಸ್ ಸಿಲಿಂಡರ್ 899.5 ರೂ. ಇದಲ್ಲದೇ ಇದರ ದರ ಮುಂಬೈನಲ್ಲಿ 899.5 ರೂ., ಕೋಲ್ಕತ್ತಾದಲ್ಲಿ 926 ರೂ. ಮತ್ತು ಚೆನ್ನೈನಲ್ಲಿ 915.5 ರೂ. ಮುಟ್ಟಿದೆ.

ಸಾರ್ವಕಾಲಿಕ ದಾಖಲೆ ಬರೆದ ಪೆಟ್ರೋಲ್, ಡೀಸೆಲ್ ದರ: ಅ. 06ರಂದು ಮತ್ತೆ ಏರಿಕೆಸಾರ್ವಕಾಲಿಕ ದಾಖಲೆ ಬರೆದ ಪೆಟ್ರೋಲ್, ಡೀಸೆಲ್ ದರ: ಅ. 06ರಂದು ಮತ್ತೆ ಏರಿಕೆ

ವಾಣಿಜ್ಯ ಸಿಲಿಂಡರ್ ಬೆಲೆ ಕೂಡ ಏರಿಕೆಯಾಗಿದೆ!

ವಾಣಿಜ್ಯ ಸಿಲಿಂಡರ್ ಬೆಲೆ ಕೂಡ ಏರಿಕೆಯಾಗಿದೆ!

ಅಕ್ಟೋಬರ್ 1, 2021ರಂದು ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ದುಬಾರಿಯಾಯಿತು. ಪೆಟ್ರೋಲಿಯಂ ಕಂಪನಿಗಳು ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳನ್ನು 43 ರೂ. ಏರಿಕೆ ಮಾಡಿದ ಬಳಿಕ
ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ದರವು 1,736.5 ರೂ.ಗೆ ಏರಿತು. ಮೊದಲು ಈ ಸಿಲಿಂಡರ್ ರೂ 1,693ಗೆ ಸಿಗುತ್ತಿತ್ತು. ಅದೇ ಸಮಯದಲ್ಲಿ, ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ರೂ 1,770.5 ರಿಂದ ರೂ 1,805.5 ಕ್ಕೆ ಏರಿಕೆಯಾಗಿದೆ. ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಚೆನ್ನೈನಲ್ಲಿ ರೂ .1,831 ರಿಂದ ರೂ .1,867.5 ಮತ್ತು ಮುಂಬೈನಲ್ಲಿ ರೂ .1685 ಕ್ಕೆ ಏರಿಕೆಯಾಗಿದೆ.

2021ರ ಆರಂಭದಲ್ಲಿ 694 ರೂಪಾಯಿನಷ್ಟಿದ್ದ ಎಲ್‌ಪಿಜಿ ಬೆಲೆ
 

2021ರ ಆರಂಭದಲ್ಲಿ 694 ರೂಪಾಯಿನಷ್ಟಿದ್ದ ಎಲ್‌ಪಿಜಿ ಬೆಲೆ

ಎಲ್‌ಪಿಜಿ ಬೆಲೆಯನ್ನು ಫೆಬ್ರವರಿ, ಮಾರ್ಚ್‌ನಲ್ಲಿ ಮತ್ತು ನಂತರ ಜುಲೈನಲ್ಲಿ ಹೆಚ್ಚಿಸಲಾಯಿತು. 2021 ರ ಆರಂಭದಲ್ಲಿ, ದೆಹಲಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ರೂ. 694. ಬೆಲೆಯನ್ನು ಫೆಬ್ರವರಿಯಲ್ಲಿ ಪ್ರತಿ ಸಿಲಿಂಡರ್‌ಗೆ 75 ರೂಪಾಯಿ ಹೆಚ್ಚಾಗಿ 769 ರೂಪಾಯಿ ತಲುಪಿತು. ನಂತರ ಮಾರ್ಚ್‌ನಲ್ಲಿ 50 ರೂಪಾಯಿ ಏರಿಕೆಗೊಂಡು 819 ರೂಪಾಯಿ ತಲುಪಿತು. ಏಪ್ರಿಲ್‌ನಲ್ಲಿ 10 ರೂಪಾಯಿ ಇಳಿಕೆಗೊಂಡು 809 ರೂಪಾಯಿ ತಲುಪಿದೆ.

ಜುಲೈ ಮತ್ತು ಆಗಸ್ಟ್‌ನಲ್ಲಿ ತಲಾ 25 ರೂಪಾಯಿ ಏರಿಕೆಗೊಂಡು 859.50 ರೂಪಾಯಿಗೆ ತಲುಪಿದ ನಂತರ, ಸೆಪ್ಟೆಂಬರ್‌ನಲ್ಲಿ 25 ರೂಪಾಯಿ ಹೆಚ್ಚಾಗಿ ಎಲ್‌ಪಿಜಿ ಸಿಲಿಂಡರ್ ಬೆಲೆ 884.50 ರೂ ಮುಟ್ಟಿದೆ. ಇದೀಗ ಅಕ್ಟೋಬರ್‌ನಲ್ಲಿ 15 ರೂಪಾಯಿ ಏರಿಕೆಗೊಂಡು 899.50 ತಲುಪಿದೆ.

 

ಏಳು ವರ್ಷಗಳಲ್ಲಿ ದೇಶಿಯ ಎಲ್‌ಪಿಜಿ ಬೆಲೆ ಡಬಲ್ ಆಗಿದೆ!

ಏಳು ವರ್ಷಗಳಲ್ಲಿ ದೇಶಿಯ ಎಲ್‌ಪಿಜಿ ಬೆಲೆ ಡಬಲ್ ಆಗಿದೆ!

ದೇಶೀಯ ಗ್ಯಾಸ್ ಸಿಲಿಂಡರ್‌ಗಳಿಗೆ ಸಬ್ಸಿಡಿ ರಹಿತ ಬೆಲೆಗಳು ಕಳೆದ ಹಲವು ವರ್ಷಗಳಿಂದ ಹೆಚ್ಚಾಗುತ್ತಿವೆ. ದೆಹಲಿಯಲ್ಲಿ 14.2 ಕೆಜಿ ದೇಶೀಯ ಎಲ್‌ಪಿಜಿ ಸಿಲಿಂಡರ್ LPG ಬೆಲೆಗಳು ಕಳೆದ ಏಳು ವರ್ಷಗಳಲ್ಲಿ ದ್ವಿಗುಣಗೊಂಡಿದೆ. ದೆಹಲಿಯಲ್ಲಿ 2014 ರ ಮಾರ್ಚ್ 1 ರಂದು ಪ್ರತಿ ಸಿಲಿಂಡರ್‌ಗೆ ರೂ 410.50 ಇದ್ದ ಎಲ್‌ಪಿಜಿ ಬೆಲೆಯು, ಈಗ 900 ರೂ.ಗಳಷ್ಟು ದುಪ್ಪಟ್ಟಾಗಿದೆ.

English summary

Domestic LPG Gas Cylinder Price Hiked By Rs 15; Check New Rates in your city

Liquefied Petroleum Gas (LPG) price was today hiked by Rs 15 across the country
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X