ಭಾರತದಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಆಗಸ್ಟ್‌ನಲ್ಲಿ ಮೊದಲ ಬಾರಿಗೆ ಶೇ. 14.2ರಷ್ಟು ಏರಿಕೆಯಾಗಿ 2,15,916 ಕ್ಕೆ ತಲುಪಿದೆ. ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ತಯಾರಕರ (ಸಿಯಾಮ್) ಮಾಹಿತಿಯ ಪ್ರಕಾರ ಗ್ರಾಮೀಣ, ಕಾಂಪ್ಯಾಕ್ಟ್ ಕಾರುಗಳು ಮತ್ತು ಪ್ರವೇಶ ಮಟ್ಟದ ಸ್ಪೋರ್ಟ್ ಯುಟಿಲಿಟಿ ವಾಹನಗಳ ಬೇಡಿಕೆ ಹೆಚ್ಚುತ್ತಿರುವುದರಿಂದ ಏರಿಕೆ ಕಂಡುಬಂದಿದೆ.
ದ್ವಿಚಕ್ರ ವಾಹನ ಮಾರಾಟವು ಶೇ. 3ರಷ್ಟು ಹೆಚ್ಚಳವಾಗಿ 15,59,665 ಕ್ಕೆ ತಲುಪಿದ್ದರೆ, ಪ್ರಯಾಣಿಕರ ಕಾರುಗಳು ಶೇ. 14 ರಷ್ಟು ವರ್ಷದಿಂದ ವರ್ಷಕ್ಕೆ ಹೆಚ್ಚಳಗೊಂಡು 1,24,715 ಯುನಿಟ್‌ಗಳಿಗೆ ತಲುಪಿದೆ.

ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಹಬ್ಬಗಳಿರುವುದರಿಂದ ಮಾರಾಟವು ಹೆಚ್ಚಾಗುತ್ತದೆ ಎಂಬ ನಿರೀಕ್ಷೆಯ ಮಧ್ಯೆ ವಾಹನ ತಯಾರಕರು ದಾಸ್ತಾನು ಹೆಚ್ಚಿಸಿದ್ದಾರೆ. ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್, ಹ್ಯುಂಡೈ ಮೋಟಾರ್ ಇಂಡಿಯಾ ಲಿ. ಮತ್ತು ಕಿಯಾ ಮೋಟಾರ್ಸ್ ಇಂಡಿಯಾ ಲಿಮಿಟೆಡ್ ಉತ್ಪಾದನೆಯನ್ನು ಹೆಚ್ಚಿಸಿದ್ದು, ಬೇಡಿಕೆಗೆ ಅನುಗುಣವಾಗಿ ಮಾರುಕಟ್ಟೆಗೆ ಯುನಿಟ್‌ಗಳನ್ನ ಪೂರೈಸುತ್ತಿವೆ.
ಆದರೆ ಇದಕ್ಕೆ ತದ್ವಿರುದ್ಧವಾಗಿ, ಪ್ರಯಾಣಿಕರ ವಾಹನಗಳ ಶೋ ರೂಂ ಅಥವಾ ಚಿಲ್ಲರೆ ಮಾರಾಟವು ಆಗಸ್ಟ್‌ನಲ್ಲಿ 1,92,189 ಯುನಿಟ್‌ಗಳಿಂದ ಶೇ. 7.12ರಷ್ಟು ವೈ-ಒ-ವೈ 1,78,513 ಕ್ಕೆ ಇಳಿದಿದೆ ಎಂದು ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ (ಎಫ್‌ಎಡಿಎ) ಮಂಗಳವಾರ ಬಿಡುಗಡೆ ಮಾಡಿದೆ. ಮೋಟಾರು ಸೈಕಲ್‌ಗಳು ಮತ್ತು ಸ್ಕೂಟರ್‌ಗಳ ಶೋ ರೂಂ ಮಾರಾಟವು 1.26 ದಶಲಕ್ಷ ಯುನಿಟ್‌ಗಳಿಂದ ಶೇ. 29ರಷ್ಟು ಕುಸಿದು 8,98,775 ಯುನಿಟ್ಗೆ ತಲುಪಿದೆ.


Click it and Unblock the Notifications