ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವಾರು ಪಿಜ್ಜಾ ಸಂಸ್ಥೆಗಳು ಇದೆ. ಸಣ್ಣ ಸಣ್ಣ ಸಂಸ್ಥೆಗಳು ಈಗ ದೊಡ್ಡ ಸಂಸ್ಥೆಗಳಾಗಿ ಬೆಳವಣಿಗೆ ಕಾಣುತ್ತಾ ಬರುತ್ತಿದೆ. ಇನ್ನು ಸ್ಥಳೀಯವಾಗಿ ಕೆಲವು ಸಣ್ಣ ಅಂಗಡಿಗಳಲ್ಲಿ ತಯಾರಿಸುವ ಪಿಜ್ಜಾಗಳಿಗೂ ಬೇಡಿಕೆಯಿದೆ. ಈ ನಡುವೆ ದೊಡ್ಡ ಪಿಜ್ಜಾ ಸಂಸ್ಥೆಗಳಾದ ಡೊಮಿನೋಸ್, ಪಿಜ್ಜಾ ಹಟ್ ದರ ಇಳಿಕೆಯ ಸ್ಟ್ರಾಟೆರ್ಜಿ ಪ್ಲ್ಯಾನ್ ಮಾಡಿದೆ.
ಹೌದು ಮಾರುಕಟ್ಟೆಯಲ್ಲಿ ಹಲವಾರು ಸಂಸ್ಥೆಗಳು ಬಂದ ಬಳಿಕ ತಮ್ಮ ಗ್ರಾಹಕರ ದಂಡು ಪ್ರತಿಸ್ಪರ್ಧಿಗಳತ್ತ ತಿರುಗುತ್ತಿದ್ದಂತೆ ಡೊಮಿನೋಸ್, ಪಿಜ್ಜಾ ಹಟ್ ಸೇರಿದಂತೆ ಹಲವಾರು ದೊಡ್ಡ ಪಿಜ್ಜಾ ಸಂಸ್ಥೆಗಳು ತಮ್ಮ ಆಹಾರ ಉತ್ಪನ್ನದ ಬೆಲೆಯನ್ನು ಇಳಿಸಿದೆ. ಡೊಮಿನೋಸ್ ತನ್ನ ದೊಡ್ಡ ಪಿಜ್ಜಾಗಳ ಬೆಲೆಯನ್ನು ಅರ್ಧದಷ್ಟು ಕಡಿಮೆ ಮಾಡಿದೆ.

ಟಾಸಿನ್, ಗೋಪಿಜ್ಜಾ, ಲಿಯೋಸ್ ಪಿಜ್ಜೇರಿಯಾ, ಮೊಜೊಪಿಜ್ಜಾ, ಓವೆನ್‌ಸ್ಟೋರಿ ಮತ್ತು ಲಾ ಪಿನೋಜ್‌ನಂತಹ ಚಿಕ್ಕ ಮತ್ತು ಹೊಸ ಪ್ರತಿಸ್ಪರ್ಧಿಗಳ ನಡುವೆ ಈಗ ಪಿಜ್ಜಾ ವಿಭಾಗದಲ್ಲಿ ಸ್ಪರ್ಧೆಯು ಅಧಿಕವಾಗಿದೆ. ಹೆಚ್ಚು ಗಮನಾರ್ಹವಾಗಿ, ಡೊಮಿನೋಸ್‌ನ ಕ್ರಮವು ಪ್ರಸ್ತುತ ಬದಲಾವಣೆಯಾಗುತ್ತಿರುವ ಮಾರುಕಟ್ಟೆಗೆ ಹೊಂದಿಕೊಳ್ಳುವ, ಗ್ರಾಹಕರ ಆದ್ಯತೆಯನ್ನು ಅರ್ಥಮಾಡಿಕೊಳ್ಳುವ ಅಗತ್ಯವನ್ನು ಎತ್ತಿ ತೋರಿಸಿದೆ.
ಡೊಮಿನೋಸ್ ತನ್ನ ಲಾರ್ಜ್ ಪಿಜ್ಜಾ ಬೆಲೆಯಲ್ಲಿ ಭಾರೀ ರಿಯಾಯಿತಿಯ ಮೆಸೇಜ್ ಅನ್ನು ಹಲವಾರು ಗ್ರಾಹಕರಿಗೆ ಕಳುಹಿಸಿದೆ. ಲಾರ್ಜ್ ಸಸ್ಯಾಹಾರಿ ಪಿಜ್ಜಾಗಳ ಬೆಲೆಯನ್ನು 799 ರೂಪಾಯಿಯಿಂದ 499 ರೂಪಾಯಿಗೆ ಇಳಿಕೆ ಮಾಡಿದೆ. ಇನ್ನು ಲಾರ್ಜ್ ನಾನ್ ವೆಜ್ ಪಿಜ್ಜಾಗಳ ಬೆಲೆಯನ್ನು 919 ರೂಪಾಯಿಯಿಂದ 549 ರೂಪಾಯಿಗೆ ಇಳಿಕೆ ಮಾಡಿದೆ ಎಂದು ವರದಿಯು ಹೇಳಿದೆ.
ದೊಡ್ಡ ಸಂಸ್ಥೆಗಳ ಮಾರಾಟದಲ್ಲಿ ಕುಸಿತ
ಗಮನಾರ್ಹವಾಗಿ, ಡೊಮಿನೊಸ್, ಬರ್ಗರ್ ಕಿಂಗ್, ಪಿಜ್ಜಾ ಹಟ್ ಮತ್ತು ಕೆಎಫ್‌ಸಿಯಂತಹ ಅನೇಕ ಪ್ರಸಿದ್ಧ ಬ್ರ್ಯಾಂಡ್‌ಗಳು ಕಳೆದ ಮೂರು ತ್ರೈಮಾಸಿಕಗಳಲ್ಲಿ ಮಾರಾಟದಲ್ಲಿ ಕುಸಿತ ಕಂಡಿದೆ. ಇದಕ್ಕೆ ಪ್ರಮುಖ ಕಾರಣ ಹೆಚ್ಚಿದ ಸ್ಪರ್ಧೆ ಮತ್ತು ಗ್ರಾಹಕರ ಆದ್ಯತೆಗಳ ಮೇಲಿನ ಹಣದುಬ್ಬರದ ಪ್ರಭಾವ ಆಗಿದೆ.
ಇದಕ್ಕೆ ಪ್ರತಿಕ್ರಿಯೆಯಾಗಿ, ಈ ದೊಡ್ಡ ಬ್ರ್ಯಾಂಡ್‌ಗಳು ಬೆಲೆಗಳನ್ನು ಕಡಿಮೆ ಮಾಡುವ ಮೂಲಕ ತಮ್ಮ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ. ಕಡಿಮೆ ವೆಚ್ಚದಲ್ಲಿ ಉತ್ತಮ ಉತ್ಪನ್ನಗಳನ್ನು ನೀಡಿದರೆ ತಮ್ಮ ಗ್ರಾಹಕರು ತಮ್ಮೆಡೆಗೆ ಮತ್ತೆ ಮರಳುತ್ತಾರೆ, ಮತ್ತು ಹೊಸ ಗ್ರಾಹಕರನ್ನು ಆಕರ್ಷಿಸಬಹುದು ಎಂಬುವುದು ಈ ದರ ಕಡಿತದ ಹಿಂದಿನ ಸ್ಟ್ರಾಟೆರ್ಜಿ ಆಗಿದೆ.
ಯಮ್ ಬ್ರಾಂಡ್ಸ್-ಮಾಲೀಕತ್ವದ ಪಿಜ್ಜಾ ಹಟ್ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಮಾರುಕಟ್ಟೆಗಳನ್ನು ಗುರಿಯಾಗಿಸಿಕೊಂಡು ತನ್ನ ವಿಸ್ತರಣೆಯನ್ನು ಸಕ್ರಿಯವಾಗಿ ರೂಪಿಸುತ್ತಿದೆ. ಫ್ಲೇವರ್ ಫನ್ ಎಂಬ ಕ್ಯಾಂಪೇನ್ ಮಾಡಿಕೊಂಡು, ಪಿಜ್ಜಾ ಬೆಲೆಯನ್ನು 200 ರೂಪಾಯಿಯಿಂದ 79 ರೂಪಾಯಿಗೆ ಇಳಿಕೆ ಮಾಡಿದೆ.
ಪಿಜ್ಜಾ ಹಟ್ ಮಾರ್ಕೆಟಿಂಗ್ ಖರ್ಚುಗಳನ್ನು ಹೆಚ್ಚಿಸುತ್ತಿದೆ. ಲಂಚ್ ಟೈಮ್ ಡೀಲ್ ಎಂಬ ಕೋಂಬೋ ಆಫರ್‌ಗಳನ್ನು 600 ರೂಪಾಯಿಗೆ ಆರಂಭಿಸಿದೆ. ಹಾಗೆಯೇ ಗ್ರಾಹಕರಿಗೆ ಎರಡು ಪಿಜ್ಜಾಗಳನ್ನು ಶೇಕಡ 45 ರಷ್ಟು ರಿಯಾಯಿತಿಯಲ್ಲಿ ನೀಡಲು ಮುಂದಾಗಿದೆ.
ಈ ನಡುವೆ ಪಿಜ್ಜಾ ಮಾರುಕಟ್ಟೆಯು ವಿಸ್ತಾರವಾಗಿ ಬೆಳವಣಿಗೆ ಕಾಣುತ್ತಿದೆ. ಪ್ರಾದೇಶಿಕ ಸಣ್ಣ ಬ್ರ್ಯಾಂಡ್‌ಗಳ ಔಟ್‌ಲೆಟ್‌ಗಳು ಶೇಕಡ 30 ರಷ್ಟಿದೆ. ಸ್ವದೇಶಿಯಾಗಿ ಬೆಳೆದ ಬ್ರ್ಯಾಂಡ್‌ಗಳು ಮೂರು ವರ್ಷಗಳಲ್ಲಿ ತನ್ನ ಬ್ರ್ಯಾಂಚ್‌ಗಳ ಸಂಖ್ಯೆಯನ್ನು ಹೆಚ್ಚಿಸುತ್ತಾ ಸಾಗುತ್ತಿದೆ ಎಂದು ವರದಿ ಹೇಳಿದೆ.


Click it and Unblock the Notifications