ಕಾರು, ಟಿವಿಯಂಥ ದೊಡ್ಡ ವಸ್ತು ಖರೀದಿಸಬೇಡಿ: ವಿಶ್ವ ಶ್ರೀಮಂತನ ಸಲಹೆ ಕೇಳಿ

ವಾಷಿಂಗ್ಟನ್, ನ. 16: ಮುಂಬರುವ ದಿನಗಳಲ್ಲಿ ನೀವು ಕಾರು, ಟಿವಿ, ಫ್ರಿಡ್ಜ್, ಸ್ಮಾರ್ಟ್‌ಫೋನ್ ಇತ್ಯಾದಿ ದೊಡ್ಡ ಬಜೆಟ್ ವಸ್ತುಗಳನ್ನು ಖರೀದಿಸುವ ಪ್ಲಾನ್ ಇದ್ದರೆ ಈಗಲೇ ಮನಸು ಬದಲಾಯಿಸಿ. ಇದು ನಾವು ಹೇಳುತ್ತಿರುವ ಮಾತಲ್ಲ, ವಿಶ್ವದ ನಂಬರ್ ಒನ್ ಇ-ಕಾಮರ್ಸ್ ಕಂಪನಿ ಅಮೇಜಾನ್‌ನ ಸಂಸ್ಥಾಪಕ ಜೆಫ್ ಬೇಜೋಸ್ ನೀಡುತ್ತಿರುವ ಸಲಹೆ. ವ್ಯಾಪಾರ ಕಂಪನಿಯ ಒಡೆಯನೇ ಈ ಮಾತುಗಳನ್ನು ಆಡುತ್ತಿರುವಾಗ ಅದರಲ್ಲಿ ನಿಜಾಂಶ ಇಲ್ಲ ಎನ್ನಲು ಸಾಧ್ಯವೇ ಇಲ್ಲ.

ಜಾಗತಿಕ ಅರ್ಥಿಕತೆ ಕುಂಟುತ್ತಾ ಸಾಗುತ್ತಿದ್ದು, ಆರ್ಥಿಕ ಹಿಂಜರಿತದ ಪರಿಸ್ಥಿತಿಯ ಮಗ್ಗುಲಲ್ಲೇ ಇದೆ. ಈ ಹಿನ್ನೆಲೆಯಲ್ಲಿ ಮುಂದಿನ ಕೆಲ ತಿಂಗಳ ಕಾಲ ಯಾರೂ ಕೂಡ ದೊಡ್ಡ ಖರೀದಿಗೆ ಮುಂದಾಗದಿರುವುದು ಒಳ್ಳೆಯದು ಎಂದು ಬೇಜೋಸ್ ಎಚ್ಚರಿಸಿದ್ದಾರೆ. ಇದು ಕೇವಲ ಜನಸಾಮಾನ್ಯರಿಗೆ ಅವರು ನೀಡಿರುವ ಸಲಹೆ ಅಲ್ಲ, ವ್ಯಾಪಾರಿಗಳು ಮತ್ತು ಉದ್ದಿಮೆಗಳಿಗೂ ನೀಡುತ್ತಿರುವ ಸಲಹೆ. ಯಾವ ಕಂಪನಿಯೂ ಈ ಸಂದರ್ಭದಲ್ಲಿ ದೊಡ್ಡ ಮಟ್ಟದ ಹೂಡಿಕೆಗೆ ಅಥವಾ ಖರೀದಿಗೆ ಮುಂದಾಗ ಬಾರದು ಎಂದು ಅವರು ತಿಳಿಸಿದ್ದಾರೆ.

ಅಚ್ಚರಿ ಸಲಹೆ

ಅಚ್ಚರಿ ಸಲಹೆ

ವ್ಯವಹಾರ ಇಲ್ಲ ಎಂದು ಬರೋಬ್ಬರಿ 10 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಆಲೋಚಯಲ್ಲಿರುವ ಅಮೇಜಾನ್‌ನ ಮುಖ್ಯಸ್ಥ ಬೇಜೋಸ್ ಈ ಮಾತುಗಳನ್ನು ಆಡುತ್ತಿದ್ದಾರೆ ಎಂದರೆ ಯಾರಿಗಾದರೂ ಅಚ್ಚರಿ ಎನಿಸುತ್ತದೆ. ಬೇಜೋಸ್ ಸಲಹೆಗಳನ್ನು ಯಾರಾದರೂ ಪಾಲಿಸಿದರೆ ಅದರಿಂದ ಹೆಚ್ಚು ಹೊಡೆತ ಬೀಳುವುದು ಅಮೇಜಾನ್‌ಗೆಯೇ. ಹೀಗಿದ್ದೂ ಜೆಫ್ ಬೇಜೋಸ್ ಜನರಿಗೆ ದೊಡ್ಡ ವೆಚ್ಚ ಬೇಡವೆಂದು ಬಾಯಿ ಮಾತಿಗಾದರೂ ಹೇಳಲು ಧೈರ್ಯ ಬೇಕು.

ಅಮೇಜಾನ್ ಸಂಸ್ಥಾಪಕರೂ ಆದ ಜೆಫ್ ಬೇಜೋಸ್ ವಿಶ್ವದ ಟಾಪ್-10 ಶ್ರೀಮಂತರಲ್ಲಿ ಒಬ್ಬರು. ಆದರೆ, ತಮ್ಮ ಪಾಲಿನ ಬಹಳಷ್ಟು ಹಣವನ್ನು ಅವರು ದಾನ ದತ್ತಿಗೆ ಕೊಡುತ್ತಾರೆ. ಈಗಲೂ ಅವರು ತಮ್ಮ ಬಹುತೇಕ ಎಲ್ಲಾ ಸಂಪಾದನೆಯನ್ನು ದಾನಕ್ಕೆ ಬಳಸುವುದಾಗಿ ಬಹಿರಂಗವಾಗಿ ಘೋಷಿಸಿಯೂ ಇದ್ದಾರೆ. ಹೀಗಾಗಿ, ಜೆಫ್ ಬೇಜೋಸ್ ಆರ್ಥಿಕ ಹಿಂಜರಿತ ಎದುರಿಸಲು ಜನರಿಗೆ ನೀಡಿರುವ ಸಲಹೆ ಅಷ್ಟೇನೂ ಅಚ್ಚರಿ ಮೂಡಿಸದು.

 

ವ್ಯಾಪಾರ ಕುಸಿತ

ವ್ಯಾಪಾರ ಕುಸಿತ

ಇದೇ ವೇಳೆ, ಅಮೇಜಾನ್‌ನ ವ್ಯಾಪಾರ ಕುಸಿತ ಮುಂದುವರಿಯುವ ಸಾಧ್ಯತೆ ಇದೆ. ವರ್ಷದ ಕೊನೆಯ ಮೂರು ತಿಂಗಳಾದ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಅಮೇಜಾನ್ ವ್ಯಾಪಾರ ವಹಿವಾಟು ನಿರೀಕ್ಷೆಗಿಂತ ತೀರಾ ಕಡಿಮೆ ಇರಲಿದೆ. ಇದನ್ನು ಕಳೆದ ತಿಂಗಳು ಸ್ವತಃ ಅಮೇಜಾನ್ ಸಂಸ್ಥೆಯೇ ಹೇಳಿಕೊಂಡಿತ್ತು.

ಇನ್ನು, ಅಮೆರಿಕದ ಷೇರುಪೇಟೆಯಲ್ಲಿ ಅಮೇಜಾನ್‌ನ ಷೇರು ಬೆಲೆ ಶೇ. ೪೦ಕ್ಕಿಂತ ಹೆಚ್ಚು ಕುಸಿತವಾಗಿದೆ. ನಾಸ್ಡಾಕ್‌ನಲ್ಲಿ ಅಮೇಜಾನ್ ಷೇರು ಬೆಲೆ ಇವತ್ತು ೯೮.೯೪ ಡಾಲರ್ (೮೦೪೨.೭೩ ರೂಪಾಯಿ) ಇದೆ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಕಡಿಮೆ ಆಗಬಹುದು.

 

ಹಿಂಜರಿತದಲ್ಲಿ ಅಮೆರಿಕ

ಹಿಂಜರಿತದಲ್ಲಿ ಅಮೆರಿಕ

ಹೆಚ್ಚುತ್ತಿರುವ ಬೆಲೆ, ಆರ್ಥಿಕ ಹಿಂಜರಿತದ ಭಯ ಇವು ವ್ಯಾಪಾರ ಕುಸಿತಕ್ಕೆ ಎಡೆ ಮಾಡಿಕೊಡಬಹುದು. ಅದರಲ್ಲೂ ಅಮೆರಿಕನ್ನರು ಆರ್ಥಿಕ ಹಿಂಜರಿತದ ಸಮಯದಲ್ಲಿ ಭೋಗವಸ್ತುಗಳ ಖರೀದಿಗಿಂತ ಹೆಚ್ಚಾಗಿ ಪ್ರವಾಸ ಮತ್ತು ಆಹಾರಕ್ಕೆ ಹೆಚ್ಚು ಗಮನ ಕೊಡುತ್ತಾರೆ. ಸಿಎನ್‌ಎನ್ ಜೊತೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಜೆಫ್ ಬೇಜೋಸ್, ಆರ್ಥಿಕ ಮುಗ್ಗಟ್ಟಿನ ಸಾಧ್ಯತೆ ದಟ್ಟವಾಗಿರುವುದರಿಂದ ಹಣವನ್ನು ಉಳಿಸಿ ಆಪತ್ಕಾಲದ ಬಳಕೆಗೆಂದು ಇಟ್ಟುಕೊಳ್ಳುವುದು ವಿವೇಕತನ ಎಂದು ತಿಳಿಸಿದ್ದಾರೆ.

ಅಮೆರಿಕದಲ್ಲಿ ಈಗಾಗಲೇ ಆರ್ಥಿಕ ಹಿಂಜರಿತ ಇದೆ ಎನ್ನುವ ಅಭಿಪ್ರಾಯಗಳಿವೆ. ಅಲ್ಲಿ ಕಂಪನಿಗಳು ಉದ್ಯೋಗಿಗಳಿಗೆ ವೇತನ ಹೆಚ್ಚಿಸಿದರೂ ಬೆಲೆ ಹೆಚ್ಚಳ ಸರಿದೂಗಿಸಲು ಆಗುತ್ತಿಲ್ಲ.

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+