ವಿಶ್ವದ ಆರ್ಥಿಕತೆಗೆ ಭಾರೀ ಹೊಡೆತ! ಡೊನಾಲ್ಡ್ ಟ್ರಂಪ್ ಮಹತ್ವದ ನಿರ್ಧಾರ ಘೋಷಣೆ.. ಆಟೋ ಸುಂಕಗಳಿಗೆ ತಾತ್ಕಾಲಿಕ ವಿರಾಮ. ಹೌದು, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಟೋ ಉದ್ಯಮದ ಮೇಲೆ ಈ ಹಿಂದೆ ವಿಧಿಸಿದ್ದ 'ಶಾಶ್ವತ' ಸುಂಕಗಳಿಂದ ತಾತ್ಕಾಲಿಕವಾಗಿ ವಿನಾಯಿತಿ ನೀಡುವ ಸುಳಿವು ಸಿಕ್ಕಿದೆ. ಸಂಭಾವ್ಯ ವಿರಾಮ ಎಷ್ಟು ಸಮಯದವರೆಗೆ ಇರುತ್ತದೆ ಅಥವಾ ಅದು ಏನನ್ನು ಒಳಗೊಳ್ಳುತ್ತದೆ ಎಂಬುದನ್ನು ಇನ್ನೂ ಬಹಿರಂಗಗೊಳಿಸಿಲ್ಲ. ಆದರೆ, ಜೋಡಿಸಲಾದ ವಾಹನಗಳ ಮೇಲಿನ ಸುಂಕಗಳು ಮುಂದುವರಿದರೆ, ಯುಎಸ್ ಭಾಗಗಳ ಆಧಾರದ ಮೇಲೆ ಶೇ. 25 ಸುಂಕಗಳ ಮೇಲಿನ ನಿಯಮಗಳು ಹೇಗೆ ಬದಲಾಗಬಹುದು? ಎಂದು ಆಟೋ ವಲಯವು ಕಾಯುತ್ತಿದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ಯುದ್ಧದ ಹೊಡೆತದ ಮಧ್ಯೆ ಬಿಡಿಭಾಗಗಳ ವಿನಾಯಿತಿಗಳು ಉದ್ಯಮವನ್ನು ಬಲಪಡಿಸುತ್ತವೆಯಾದರೂ, ಸಣ್ಣ ವಿರಾಮಗಳು ಕಾರು ತಯಾರಕರಿಗೆ ತಮ್ಮ ಜಾಗತಿಕ ಪೂರೈಕೆ ಸರಪಳಿಗಳನ್ನು ಸರಿಹೊಂದಿಸಲು ಸಾಕಷ್ಟು ಅವಕಾಶವನ್ನು ನೀಡುವ ಸಾಧ್ಯತೆಯಿಲ್ಲ ಎಂದು ತಜ್ಞರು ಹೇಳಿದ್ದಾರೆ. ಈ ನಡುವೆ ಡೊನಾಲ್ಡ್ ಟ್ರಂಪ್ ಮಹತ್ವದ ನಿರ್ಧಾರ ಘೋಷಣೆ ಮಾಡಿದ್ದಾರೆ ಅದು ಏನು ಎಂಬುವುದನ್ನು ತಿಳಿಯಲು ಮುಂದೆ ಓದಿ...
ಕಾರು ತಯಾರಕರು ತಮ್ಮ ಪೂರೈಕೆ ಸರಪಳಿಗಳನ್ನು ಸರಿಪಡಿಸುವವರೆಗೆ, ಈ ಹಿಂದೆ ಆಟೋ ಉದ್ಯಮದ ಮೇಲೆ ವಿಧಿಸಿದ್ದ ಸುಂಕಗಳಿಂದ ತಾತ್ಕಾಲಿಕವಾಗಿ ವಿನಾಯಿತಿ ನೀಡಲಾಗುವುದು ಎಂದು ವಿಶ್ವದ ದೊಡ್ಡಣ್ಣ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಾಹನ ತಯಾರಕರು ಇಲ್ಲಿಯೇ ಅವುಗಳನ್ನು ಉತ್ಪಾದಿಸಲು ಹೊರಟಿರುವುದರಿಂದ ಅವರಿಗೆ ಸ್ವಲ್ಪ ಸಮಯ ಬೇಕಾಗುತ್ತದೆ. ಹಾಗಾಗಿ ನಾನು ಇಂತಹ ವಿಷಯಗಳ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತೀನಿ ಎಂದಿದ್ದಾರೆ.
ಡೊನಾಲ್ಡ್ ಟ್ರಂಪ್ ಆಟೋ ವಲಯವನ್ನು ಕೆನಡಾ, ಮೆಕ್ಸಿಕೊ ಮತ್ತು ಬೇರೆಡೆಯಿಂದ ಉತ್ಪಾದನೆಯನ್ನು ಸ್ಥಳಾಂತರಿಸುವುದನ್ನು ಉಲ್ಲೇಖಿಸಿರುವುದರಿಂದ ಇಂದು ಜಾಗತಿಕ ಆಟೋ ಷೇರುಗಳು ಹೆಚ್ಚಾಗಿದೆ.
ಇದೇ ವಿಷಯಯದ ಕುರಿತು ಅಮೇರಿಕನ್ ಆಟೋಮೋಟಿವ್ ಪಾಲಿಸಿ ಕೌನ್ಸಿಲ್ ಅಧ್ಯಕ್ಷ ಮ್ಯಾಟ್ ಬ್ಲಂಟ್ ಅವರು ಮಾತನಾಡಿ ಆಟೋ ಬಿಡಿ ಭಾಗಗಳ ಮೇಲಿನ ಸುಂಕಗಳು ಉದ್ಯಮದ ಬೆಳವಣಿಗೆಗೆ ಅಡ್ಡಿಯಾಯಬಹುದು ಎಂದು ತಮ್ಮ ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಅಮೇರಿಕದ ಪ್ರಮುಖ ಆಟೋ ಕಂಪನಿಗಳಾದ ಫೋರ್ಡ್, ಜನರಲ್ ಮೋಟಾರ್ಸ್ ಮತ್ತು ಸ್ಟೆಲ್ಲಾಂಟಿಸ್ ಸಂಸ್ಥೆಗಳನ್ನು ಪ್ರತಿನಿಧಿಸುತ್ತಾರೆ.
ಅಮೇರಿಕನ್ ಆಟೋಮೋಟಿವ್ ಪಾಲಿಸಿ ಕೌನ್ಸಿಲ್ ಅಧ್ಯಕ್ಷ ಮ್ಯಾಟ್ ಬ್ಲಂಟ್ ಅವರು ಪ್ರಕಾರ ಬಿಡಿ ಭಾಗಗಳ ಮೇಲಿನ ವ್ಯಾಪಕ ಸುಂಕಗಳು, ನಾವು ಅಭಿವೃದ್ಧಿ ಪಡಿಸುತ್ತಿರುವ ಮತ್ತು ಬೆಳೆಯುತ್ತಿರುವ ಅಮೇರಿಕನ್ ಆಟೋ ಉದ್ಯಮದ ನಿರ್ಮಾಣ ಗುರಿಗೆ ಅಡ್ಡಿಯಾಗಿ ಪರಿಣಮಿಸಬಹುದು. ಈ ಪೂರೈಕೆ ಸರಪಳಿಯ ಪರಿವರ್ತನೆಗಳು ಸಾಧಾರಣಗಿಂತ ಹೆಚ್ಚು ಕಾಲ ತೆಗೆದುಕೊಳ್ಳುತ್ತವೆ ಎಂಬ ಅರಿವು ಈಗ ಹೆಚ್ಚುತ್ತಿದೆ ಎಂದು ಕೂಡ ಹೇಳಿದ್ದಾರೆ.
ಈ ಹೇಳಿಕೆಯಲ್ಲಿ ಮ್ಯಾಟ್ ಬ್ಲಂಟ್ ಅವರು ಅಂತಾರಾಷ್ಟ್ರೀಯ ಪೂರೈಕೆದಾರರಿಂದ ಅಮೇರಿಕಾದೊಳಗೆ ಉತ್ಪಾದನೆಯ ಕಡೆಗೆ ನಡೆಯುತ್ತಿರುವ ಆಟೋ ಸಾಗಣೆಗೆ ಸಂಬಂಧಿಸಿದ ಸವಾಲುಗಳು, ಹಾಗೂ ಸುಂಕಗಳು ಆ ಭಾಗಶಃ ಉದ್ಯಮದ ವ್ಯಾಪಾರದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ಬೆಳಕನ್ನು ಚಲ್ಲುವಂತಹ ಪ್ರಯತ್ನವನ್ನು ಮಾಡಿದ್ದಾರೆ.
ಡೊನಾಲ್ಡ್ ಟ್ರಂಪ್ ಮಾರ್ಚ್ ಅಂತ್ಯದಲ್ಲಿ ಮೊದಲ ಆಟೋಮೋಟಿವ್ ಸುಂಕಗಳನ್ನು ಶೇ. 25 ಘೋಷಣೆಯನ್ನು ಮಾಡಿದ್ದರು.ನಂತರ ಇವರು ಪೂರ್ಣಗೊಂಡ ವಾಹನಗಳ ಸುಂಕಗಳು ಏಪ್ರಿಲ್ 3 ರಿಂದ ಜಾರಿಗೆ ಬಂದವು, ಆದರೆ ಬಿಡಿಭಾಗಗಳ ಸುಂಕಗಳು 30 ದಿನಗಳ ನಂತರ ಪ್ರಾರಂಭವಾಗಬೇಕಿತ್ತು ಆದರೆ ಅದು ಒಂದು ತಿಂಗಳ ವಿಳಂಬವಾಗಿದೆ.
ಅಮೆರಿಕಾ ಇದೇ ಸಂದರ್ಭದಲ್ಲಿ ವಾಹನ ತಯಾರಕರು ಉಕ್ಕು ಮತ್ತು ಅಲ್ಯೂಮಿನಿಯಂ ಆಮದು ಸುಂಕಗಳನ್ನು ಕನಿಷ್ಠ ಶೇ.25 ವಿಧಿಸುತ್ತಿದ್ದಾರೆ. ಕೆನಡಾ ಮತ್ತು ಮೆಕ್ಸಿಕೊದ ಎಲ್ಲಾ ಸರಕುಗಳ ಮೇಲೆ ಶೇ.25 ಸುಂಕಗಳು, ಪ್ರಪಂಚದಾದ್ಯಂತ ಶೇ.10 ಜಾಗತಿಕ ಸುಂಕಗಳು ಮತ್ತು ಪರಸ್ಪರ ಸುಂಕಗಳು 90 ದಿನಗಳವರೆಗೆ ವಿರಾಮಗೊಳಿಸಲಾಗಿದೆ.ಇವೆರಡರಿಂದಲೂ ವಾಹನಗಳಿಗೆ ವಿನಾಯಿತಿ ನೀಡಲಾಗಿದೆ.
ವಿದೇಶಿ ವಾಹನ ತಯಾರಕರನ್ನು ಪ್ರತಿನಿಧಿಸುವ ಆಟೋಸ್ ಡ್ರೈವ್ ಅಮೇರಿಕಾ, ಆಟೋ ಸುಂಕಗಳ ಮೇಲೆ ವಿರಾಮ ಹಾಕುವುದು ಸರಿಯಾದ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ ಮತ್ತು ವಾಹನ ತಯಾರಕರು ಗ್ರಾಹಕರಿಗೆ ಉತ್ತಮ ಬೆಲೆಯಲ್ಲಿ ಹೆಚ್ಚಿನ ಆಯ್ಕೆಗಳನ್ನು ನೀಡಲು ಅನುವು ಮಾಡಿಕೊಡುತ್ತದೆ ಎಂದು ಹೇಳಿಕೆಯಲ್ಲಿ ಮಾಹಿತಿಯನ್ನು ತಿಳಿಸಿದೆ.
ಅಮೆರಿಕಾ ಸುಂಕಗಳು ಎಲ್ಲೆಡೆ ವೆಚ್ಚವನ್ನು ಹೆಚ್ಚಿಸುತ್ತವೆ..?
ಅಮೆರಿಕದಲ್ಲಿ ಕಾರುಗಳನ್ನು ತಯಾರು ಮಾಡಲು ಹೆಚ್ಚು ದುಬಾರಿಯಾಗಿದೆ.ಆಟೋ ಬಿಡಿಭಾಗಗಳ ಮೇಲಿನ ವಿರಾಮವು ವಾಹನ ತಯಾರಕರು ಯುಎಸ್‌ನಲ್ಲಿ ಯಾವುದೇ ಅಡೆತಡೆಯಿಲ್ಲದೆ ಉತ್ಪಾದನೆಯನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ. ಆದರೆ ಮುಗಿದ ವಾಹನಗಳ ಮೇಲಿನ ವಿರಾಮವು ವಾಹನ ತಯಾರಕರು ವಾಹನಗಳನ್ನು ಮಾರಾಟ ಮಾಡಲು ಮತ್ತು ಯುಎಸ್ ಸ್ಥಾವರಗಳು ಮತ್ತು ಉದ್ಯೋಗಗಳಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸಲು ಸಹಾಯಕವಾಗುತ್ತದೆ.
ಮತ್ತೆ ಮತ್ತೆ ಆನ್-ಆನ್, ಆಫ್-ಆನ್ ಸುಂಕಗಳು ಈಗಾಗಲೇ ಜಾಗತಿಕ ವಲಯಗಳಿಗೆ, ವಿಶೇಷವಾಗಿ ಪ್ರಪಂಚದಾದ್ಯಂತದ ಭಾಗಗಳ ಸಂಕೀರ್ಣ ಜಾಲವನ್ನು ಅವಲಂಬಿಸಿರುವ ಆಟೋ ಉದ್ಯಮಕ್ಕೆ ಹಾನಿಯನ್ನುಂಟುಮಾಡಿವೆ. ಯುನೈಟೆಡ್ ಆಟೋ ವರ್ಕರ್ಸ್ ಕಾರ್ಮಿಕ ಸಂಘವು ಪ್ರತಿಕ್ರಿಯೆಗಾಗಿ ಕೋರಿಕೆಗೆ ಪ್ರತಿಕ್ರಿಯಿಸಲಿಲ್ಲ.
ಅಮೆರಿಕದಲ್ಲಿ ಮಾರಾಟವಾಗುವ ಟೆಸ್ಲಾಗಳು ಇಲ್ಲಿ ಹೆಚ್ಚಿನ ಪ್ರಮಾಣದ ಬಿಡಿಭಾಗಗಳನ್ನು ಪೂರೈಸುತ್ತವೆ ಮತ್ತು ವಾಹನಗಳನ್ನು ಜೋಡಿಸುತ್ತವೆ ಮತ್ತು ಕಂಪನಿಯು "ಅತ್ಯಂತ ಅಮೇರಿಕನ್ ನಿರ್ಮಿತ ಕಾರುಗಳನ್ನು ಹೊಂದಿದೆ ಎಂದು ಹೇಳಿಕೊಳ್ಳುತ್ತದೆ. ವಾರ್ಷಿಕ ಮೇಡ್ ಇನ್ ಅಮೇರಿಕಾ ಆಟೋ ಸೂಚ್ಯಂಕದ ಪ್ರಕಾರ, ಟೆಸ್ಲಾ ಮಾಡೆಲ್ Y ಮತ್ತು 3 ರ ವಿವಿಧ ಟ್ರಿಮ್‌ಗಳು ಕನಿಷ್ಠ ಶೇ.85 ದೇಶೀಯ ವಸ್ತುಗಳಾಗಿವೆ.
ಸುಂಕಗಳಿಂದ ಅಮೆರಿಕ ಮತ್ತು ಯುರೋಪಿಯನ್ ಕಾರು ಉದ್ಯಮಗಳು ತೀವ್ರವಾಗಿ ಪರಿಣಾಮ ಬೀರುತ್ತವೆ. ವಾಹನಗಳ ಮೇಲೆ ವಿಧಿಸಲಾದ ಶೇ.25 ಸುಂಕದ ಜೊತೆಗೆ, ಅಲ್ಯೂಮಿನಿಯಂ, ಉಕ್ಕು ಮತ್ತು ಭಾಗಗಳ ಮೇಲಿನ ಹೆಚ್ಚುವರಿಸುಂಕಗಳ ನಮ್ಮ ಮೇಲೆ ಪರಿಣಾಮ ಬೀರುತ್ತದೆ ಎಂದು ಸ್ಟೆಲ್ಲಾಂಟಿಸ್ ಅಧ್ಯಕ್ಷ ಜಾನ್ ಎಲ್ಕನ್ ಮಂಗಳವಾರ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಹೇಳಿದರು.
ದಶಕಗಳಿಂದ ಜಾರಿಯಲ್ಲಿರುವ ಜಾಗತಿಕ ಪೂರೈಕೆ ಸರಪಳಿಯನ್ನು ತಲೆಕೆಳಗಾಗಿಸುವುದು ಆಟೋ ಉದ್ಯಮಕ್ಕೆ ರಾತ್ರೋರಾತ್ರಿ ಸಂಭವಿಸುವುದಿಲ್ಲಎಂದು ವೆಡ್‌ಬುಷ್ ಸೆಕ್ಯುರಿಟೀಸ್ ವಿಶ್ಲೇಷಕ ಡ್ಯಾನ್ ಐವ್ಸ್ ಸಂಶೋಧನಾ ಹೇಳಿದೆ.
ಇನ್ನೂ ಆಟೋ ಭಾಗಗಳ ಬದಲಿಗೆ ಯುಎಸ್‌ನಲ್ಲಿ ತಯಾರಿಸಿದ ಪೂರ್ಣಗೊಂಡ ಕಾರುಗಳ ಮೇಲೆ ಕೇಂದ್ರೀಕರಿಸುವುದು ಸ್ಪಷ್ಟವಾದ ಸರಿಯಾದ ಕ್ರಮವಾಗಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ಜಾರಿಯಲ್ಲಿ ಇರುವಂತಹ ಸುಂಕಗಳು ವಾಹನ ತಯಾರಕರಿಗೆ ಶತಕೋಟಿ ಡಾಲರ್‌ಗಳಷ್ಟು ವೆಚ್ಚವನ್ನುಂಟುಮಾಡುವುದು ಗ್ಯಾರಂಟಿಯಾಗಿದೆ. ಹೊಸ ಮತ್ತು ಬಳಸಿದ ವಾಹನಗಳ ಪೂರೈಕೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಡೀಲರ್‌ಶಿಪ್‌ಗಳಲ್ಲಿ ಕಾರು ಖರೀದಿದಾರರಿಗೆ ಸಾವಿರಾರು ಡಾಲರ್‌ಗಳಷ್ಟು ಬೆಲೆಗಳನ್ನು ಹೆಚ್ಚಿಸುತ್ತದೆ.
ಈಗಾಗಲೇ, ಕೆಲವು ವಾಹನ ತಯಾರಕರು ಕೆನಡಾ ಮತ್ತು ಮೆಕ್ಸಿಕೊದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದಾರೆ ಮತ್ತು ಯುಎಸ್‌ನಲ್ಲಿ ತಾತ್ಕಾಲಿಕವಾಗಿ ಕಾರ್ಮಿಕರನ್ನು ವಜಾಗೊಳಿಸಿದ್ದಾರೆ.

ಆಟೋ ಉದ್ಯಮಕ್ಕೆ ಸುಂಕ ವಿನಾಯಿತಿ ನೀಡುವುದರಿಂದ ಆಟೋ ತಯಾರಕರು ಮತ್ತು ಖರೀದಿದಾರರಿಗೆ ಪರಿಹಾರ ಸಿಗುತ್ತದೆ ಎಂದು ಕಾರು ಖರೀದಿ ಸಂಸ್ಥೆ ಎಡ್ಮಂಡ್ಸ್‌ನ ಗ್ರಾಹಕ ಒಳನೋಟ ವಿಶ್ಲೇಷಕ ಜೋಸೆಫ್ ಯೂನ್ ಹೇಳಿದ್ದಾರೆ. ಆದರೆ ಸುಂಕ ನೀತಿಯಲ್ಲಿ ಏರಿಳಿತಗಳು ಸಂಭವಿಸಿದಂತೆ, ವಿನಾಯಿತಿಗಳು ಸಂಭವಿಸುತ್ತವೆಯೇ ಎಂದು ತಿಳಿಯುವುದು ಕಷ್ಟ ಎಂದು ಅವರು ಹೇಳಿದ್ದಾರೆ.
ಆಟೋ ವಲಯವು ಇನ್ನೂ ಸ್ವಲ್ಪ ಸಮಯದವರೆಗೂ ಕಾಯುವುದು ಒಳಿತು.
More From GoodReturns

FIFA World Cup 2026: ಅಮೆರಿಕ ನೇತೃತ್ವದ ಫಿಫಾ ವಿಶ್ವಕಪ್ನಲ್ಲಿ ಇರಾನ್ ಭಾಗವಹಿಸುತ್ತಾ? ಇಲ್ಲಿದೆ ಮಾಹಿತಿ

Alireza Arafi: ಇಸ್ರೇಲ್ ದಾಳಿಯಲ್ಲಿ ಖಮೇನಿ ನಿಧನ: ಅಲಿರೆಜಾ ಅರಾಫಿ ತಾತ್ಕಾಲಿಕ ಸುಪ್ರೀಂ ನಾಯಕನಾಗಿ ನೇಮಕ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications