ಡೊನಾಲ್ಡ್ ಟ್ರಂಪ್ (Donald Trump) ದರ್ಬಾರ್ ಶುರು! ರಿಪಬ್ಲಿಕನ್ ಪಕ್ಷದ 2.0 ಆಡಳಿತ ಅಧಿಕೃತವಾಗಿ ಪ್ರಾರಂಭ. ಹೌದು, ಅಮೆರಿಕದ 47ನೇ ಅಧ್ಯಕ್ಷರಾಗಿ(america president) ಡೊನಾಲ್ಡ್ ಟ್ರಂಪ್ ಅವರು ಪ್ರಮಾಣವಚನ ಸ್ವೀಕರಿಸಿದರು. ಆರ್ಥಿಕ ಮತ್ತು ಮಿಲಿಟರಿ ಶಕ್ತಿಯಲ್ಲಿ ವಿಶ್ವದ ಬಲಾಡ್ಯ ರಾಷ್ಟ್ರವಾಗಿರುವ ಅಮೆರಿಕದ ಚುಕ್ಕಾಣಿಯನ್ನು ಎರಡನೇ ಬಾರಿಗೆ ಹಿಡಿಯುವ ಮೂಲಕ ಡೊನಾಲ್ಡ್ ಟ್ರಂಪ್ ಇತಿಹಾಸ ನಿರ್ಮಿಸಿದರು. ಇವರು ರಿಪಬ್ಲಿಕನ್ ಪಕ್ಷದ (Republican paksha) ಮೂಲಕ 2.0 ಅಧಿಕಾರವನ್ನು ವಹಿಸಿಕೊಂಡಿದ್ದಾರೆ.
ಹೌದು, ಡೊನಾಲ್ಡ್ ಟ್ರಂಪ್ ಸೋಮವಾರ (ಜನವರಿ 20) ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು.ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಅವರು ಪ್ರಮಾಣವಚನ ಬೋಧನೆ ಮಾಡಿದ್ದರು. ಸಂಪ್ರದಾಯದಂತೆ ಅಮೆರಿಕದ ಅಧ್ಯಕ್ಷರ ಪ್ರಮಾಣವಚನ ಸಮಾರಂಭವು 'ಕ್ಯಾಪಿಟಲ್'ನ ಮುಂಭಾಗದಲ್ಲಿ ನಡೆಯುತ್ತದೆ. ಆದರೆ ತೀವ್ರ ಚಳಿ ಇರುವ ಕಾರಣ ಟ್ರಂಪ್ ಅವರ ಪ್ರಮಾಣವಚನ ಸಮಾರಂಭವನ್ನು ಒಳಾಂಗಣದಲ್ಲಿ ನಡೆಯಿತು.ಟ್ರಂಪ್ ಅವರಿಗೂ ಮುನ್ನ ಜೆ.ಡಿ. ವೇನ್ಸ್ ಅವರು ಉಪಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು.

ಡೊನಾಲ್ಡ್ ಟ್ರಂಪ್ ಅವರು ರಾಷ್ಟ್ರವನ್ನುದ್ದೇಶಿಸಿ ಹೇಳಿದ್ದೇನು?
ಡೊನಾಲ್ಡ್ ಟ್ರಂಪ್ ಅಧಿಕಾರವನ್ನು ವಹಿಸಿಕೊಂಡ ಬಳಿಕ ಮಾತನಾಡಿದ ಭಾಷಣನದಲ್ಲಿ ಅವರು ನಮ್ಮ ದೇಶವು ಬಲಿಷ್ಠವಾಗುತ್ತದೆ. ನಾವು ಎಲ್ಲಾ ರೀತಿಯಲ್ಲೂ ವಿಶ್ವದಾದ್ಯಂತ ತನ್ನ ಗೌರವವನ್ನು ಮತ್ತೆ ಪಡೆಯುತ್ತೀವೆ. ಪ್ರತಿ ರಾಷ್ಟ್ರವೂ ಅಸೂಯೆಪಡುವ ರೀತಿಯಲ್ಲಿ ನಾವು ಬೆಳವಣಿಗೆಯ ಹಂತವನ್ನು ತಲುಪುತ್ತೇವೆ ಎಂದು ಹೆಮ್ಮೆಯಿಂದ ಹೇಳಿದ್ದರು.
ಅಮೆರಿಕವು ಯಾರಿಗೂ ಮಣಿಯದು
ಅಮೇರಿಕಾ ದೇಶ ಯಾರಿಗೂ ಹೆದರುವುದಿಲ್ಲ. ನಾವು ಯಾರ ಮುಂದಿನೂ ವಿಫಲರಾಗುವುದಿಲ್ಲ. ಅಮೆರಿಕವು ಇಂದಿನಿಂದ ಸಾರ್ವಭೌಮ ಮತ್ತು ಸ್ವತಂತ್ರ ರಾಷ್ಟ್ರವಾಗಲಿದೆ ಎಂದು ಹೇಳಿದ್ದರು.
ಭವಿಷ್ಯವು ನಮ್ಮದಾಗಲಿದೆ
ಮುಂದಿನ ಭವಿಷ್ಯದ ನಿರ್ಧಾರಗಳು ನಮ್ಮದಾಗಲಿದೆ ಎಂದು ಘೋಷಣೆ ಮಾಡಿದ್ದರು.
ಹಲವು ಆದೇಶಗಳಿಗೆ ಸಹಿಹಾಕುವ ಸಾಧ್ಯತೆ
ದಕ್ಷಿಣದ ಗಡಿಯಲ್ಲಿ ತುರ್ತು ಪರಿಸ್ಥಿತಿ ಘೋಷಣೆ, ಸಾಮೂಹಿಕ ಗಡಿಪಾರು, ಮಹಿಳಾ ಕ್ರೀಡಾ ವಿಭಾಗದಲ್ಲಿ ತೃತೀಯ ಲಿಂಗಿಗಳ ಭಾಗವಹಿಸುವಿಕೆಗೆ ತಡೆ, ಇಂಧನ ಶೋಧಕ್ಕೆ ಹೇರಲಾಗಿರುವ ನಿರ್ಬಂಧ ಕೈಬಿಡುವುದು ಹಾಗೂ ಆಡಳಿತದಲ್ಲಿ ದಕ್ಷತೆ ಹೆಚ್ಚಳ ಸೇರಿದಂತೆ ಹಲವು ಕಾರ್ಯಕಾರಿ ಆದೇಶಗಳಿಗೆ ಸಹಿಹಾಕುವ ಸಾಧ್ಯತೆಯಿದೆ.
ಕ್ರಿಮಿನಲ್ ವಿದೇಶಿಯರನ್ನು ದೇಶಕ್ಕೆ ಕಳುಹಿಸುವ ಪ್ರಕ್ರಿಯೆ
ಅಮೆರಿಕಕ್ಕೆ ಎಲ್ಲ ರೀತಿಯ ಅಕ್ರಮ ಪ್ರವೇಶವನ್ನು ನಿಲ್ಲಿಸಲಾಗುವುದು. ನಮ್ಮ ದೇಶದಲ್ಲಿರುವ ಲಕ್ಷಾಂತರ ಕ್ರಿಮಿನಲ್ ವಿದೇಶಿಯರನ್ನು ಅವರ ದೇಶಕ್ಕೆ ಕಳುಹಿಸುವ ಪ್ರಕ್ರಿಯೆ ಪ್ರಾರಂಭಿಸುತ್ತೇವೆ ಮೊದಲು ನಮ್ಮ ದಕ್ಷಿಣದ ಗಡಿಯಲ್ಲಿ ನಾನು ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸುತ್ತೇನೆ ಎಂದು ಹೇಳಿದರು.
ದಕ್ಷಿಣದ ಗಡಿಗೆ ಸೈನ್ಯವನ್ನು ಕಳುಹಿಸುತ್ತೇನೆ
ನಮ್ಮ ದೇಶವನ್ನು ಅಕ್ರಮಿಸಲು ನಡೆಯುತ್ತಿರುವ ಪ್ರಯತ್ನವನ್ನು ತಡೆಯಲು ದಕ್ಷಿಣದ ಗಡಿಗೆ ಸೈನ್ಯವನ್ನು ಕಳುಹಿಸುತ್ತೇನೆ ಎಂದು ಹೇಳಿದ್ದರು.
ರಾಜಕೀಯ ಪುನರಾಗಮನ
78 ವರ್ಷದ ಟ್ರಂಪ್ ಅವರು ಕಳೆದ ವರ್ಷ ನವೆಂಬರ್ 5ರಂದು ನಡೆದ ನಡೆದ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಎದುರಾಳಿ ಕಮಲಾ ಹ್ಯಾರಿಸ್ ವಿರುದ್ಧ ಗೆಲವು ಸಾಧಿಸಿದ್ದರು. ಟ್ರಂಪ್ ಅವರ ಈ ಗೆಲುವನ್ನು ಅಮೆರಿಕದ ಇತಿಹಾಸದಲ್ಲಿ ಅತಿದೊಡ್ಡ ರಾಜಕೀಯ ಪುನರಾಗಮನವೆಂದು ಎಂದೇ ಹೇಳಬಹುದು.
ಯುಎಸ್ ರಾಜಕೀಯದಲ್ಲಿ ಐತಿಹಾಸಿಕ ಕ್ಷಣ
ಟ್ರಂಪ್ ಅಧ್ಯಕ್ಷ ಸ್ಥಾನಕ್ಕೆ ಮರಳಿರುವುದು ಅಮೆರಿಕದ ಇತಿಹಾಸದಲ್ಲಿ ಮಹತ್ವದ ಅಧ್ಯಾಯ. ಅವರ ಉದ್ಘಾಟನೆಯು "ನವೀಕರಿಸಿದ ಶ್ರೇಷ್ಠತೆ" ಮತ್ತು "ಅಮೇರಿಕಾ ಫಸ್ಟ್" ನೀತಿಗಳಿಗಾಗಿ ಅವರ ದೃಷ್ಟಿಯನ್ನು ಕೇಂದ್ರೀಕರಿಸಿದ ಹೊಸ ಅವಧಿಗೆ ವೇದಿಕೆಯಾಗದೆ.
ವಿದೇಶಾಂಗ ನೀತಿ ಮತ್ತು ಜಾಗತಿಕ ಪರಿಣಾಮಗಳು
ಟ್ರಂಪ್ ಅವರ "ಅಮೆರಿಕಾ ಫಸ್ಟ್" ಸಿದ್ಧಾಂತವು ಅವರ ವಿದೇಶಾಂಗ ನೀತಿಯಲ್ಲಿ ಪ್ರಾಬಲ್ಯ ಸಾಧಿಸುವ ನಿರೀಕ್ಷೆಯಿದೆ. ಉಕ್ರೇನ್‌ನ ರಷ್ಯಾದ ಸುದೀರ್ಘ ಆಕ್ರಮಣ ಮತ್ತು ಗಾಜಾದಲ್ಲಿ ದುರ್ಬಲವಾದ ಕದನ ವಿರಾಮ ಸೇರಿದಂತೆ ಜಾಗತಿಕ ಉದ್ವಿಗ್ನತೆಗಳು ಕಡಿಮೆಯಾಗುತ್ತವೆ. ರಾಷ್ಟ್ರೀಯ ಭದ್ರತಾ ಕಾಳಜಿಗಳ ಹೊರತಾಗಿಯೂ ಟಿಕ್‌ಟಾಕ್ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವ ಇಚ್ಛೆಯನ್ನು ಟ್ರಂಪ್ ಆಡಳಿತವು ಸೂಚಿಸಿದೆ.
ಬಿಡೆನ್ ಮತ್ತು ಹ್ಯಾರಿಸ್ ಅವರಿಂದ ವಿದಾಯ ಪೋಸ್ಟ್‌ಗಳು
ಜೋ ಬಿಡೆನ್ ಮತ್ತು ಕಮಲಾ ಹ್ಯಾರಿಸ್ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ವಿದಾಯ ಪೋಸ್ಟ್‌ಗಳನ್ನು ಹಂಚಿಕೊಂಡರು. ಅಮೆರಿಕನ್ ಜನರೇ, ನಿಮಗೆ ಸೇವೆ ಸಲ್ಲಿಸುವುದು ನಮ್ಮ ಜೀವಮಾನದ ಗೌರವವಾಗಿದೆ" ಎಂದು ಅವರು ತಮ್ಮ ಕುಟುಂಬಗಳ ಭಾವಚಿತ್ರದೊಂದಿಗೆ ಒಂದೇ ರೀತಿಯ ಸಂದೇಶಗಳಲ್ಲಿ ಬರೆದಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಅವರು ಕುಟುಂಬದ ಬೈಬಲ್ ಮತ್ತು ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರ ಬೈಬಲ್ ಎರಡನ್ನೂ ಬಳಸಿಕೊಂಡು ಟ್ರಂಪ್ ಪ್ರಮಾಣ ವಚನ ಸ್ವೀಕರಿಸಿದರು. ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಮೊದಲು ಜಸ್ಟಿಸ್ ಬ್ರೆಟ್ ಕವನಾಗ್ ಅವರಿಂದ ಪ್ರಮಾಣವಚನ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ದೇಶಗಳ ಗಣ್ಯರು ಭಾಗಿ:
ಪ್ರಧಾನಿ ನರೇಂದ್ರ ಮೋದಿ ಅವರ ವಿಶೇಷ ಪ್ರತಿನಿಧಿಯಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಪಾಲ್ಗೊಂಡರು. ಟ್ರಂಪ್ ಪತ್ನಿ ಮೆಲಾನಿಯಾ, ಪುತ್ರಿ ಇವಾಂಕಾ ಮತ್ತು ಅವರ ಪತಿ ಜರೆಡ್ ಕುಶ್ನರ್, ಉದ್ಯಮಿಗಳಾದ ಎಲಾನ್ ಮಸ್ಕ್, ಜೆಫ್ ಬೆಜೋಸ್ ಮತ್ತು ಟಿಮ್ ಕುಕ್ ಸೇರಿದಂತೆ ವಿಶ್ವದ ಹಲವು ದೇಶಗಳ ನಾಯಕರು ಮತ್ತು ಗಣ್ಯರು, ಟ್ರಂಪ್ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಾಕ್ಷಿಯಾದರು.
ಅಮೆರಿಕದ 47 ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರ ಉದ್ಘಾಟನೆಯು ಮಾಜಿ ಅಧ್ಯಕ್ಷರಾದ ಬರಾಕ್ ಒಬಾಮಾ , ಜಾರ್ಜ್ ಡಬ್ಲ್ಯೂ. ಬುಷ್ ಮತ್ತು ಬಿಲ್ ಕ್ಲಿಂಟನ್ ಸೇರಿದಂತೆ ರಾಜಕೀಯ ನಾಯಕರ ಸಭೆಯನ್ನು ಸೆಳೆಯಿತು. ಆದಾಗ್ಯೂ, ಮಾಜಿ ಪ್ರಥಮ ಮಹಿಳೆ ಮಿಚೆಲ್ ಒಬಾಮಾ ಅವರ ಅನುಪಸ್ಥಿತಿಯು ಎದ್ದುಕಾಣುತ್ತಿತ್ತು.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications