ತುಮಕೂರಿನ ಅಭಿವೃದ್ಧಿ ಕಣ್ಣು ಕುಕ್ಕುವಂತೆ ಸಾಗುತ್ತಿದೆ..ಮುಂದೊಂದು ದಿನ ಬೆಂಗಳೂರಿಗೆ ಸೆಡ್ಡು ಹೊಡೆಯುವಷ್ಟು ಬೆಳೆಯುವುದರಲ್ಲಿ ಅನುಮಾನವಿಲ್ಲ. ಭವಿಷ್ಯದಲ್ಲಿ ನಮ್ಮ ಮೆಟ್ರೋ ಯೋಜನೆ, ಹೊಸ ಹೊಸ ಸ್ಟಾರ್ಟಪ್‌ಗಳು, ರಿಯಲ್ ಎಸ್ಟೇಟ್ ಬೆಳವಣಿಗೆ ಎಲ್ಲ ಕ್ಷೇತ್ರವೂ ಬೆಳವಣಿಗೆ ನೋಡುತ್ತವೆ. ಇದರ ಪರಿಣಾಮ ತುಮಕೂರಿಗೆ ಹೊಸ ಆರ್ಥಿಕ ಶಕ್ತಿ ಬರಲಿದೆ ಅಂದ್ರೆ ತಪ್ಪಾಗಲ್ಲ. ಇದೇ ನಿಟ್ಟಿನಲ್ಲಿ ಬಜೆಟ್‌ನಲ್ಲೂ ಒಂದಷ್ಟು ವಿಚಾರಗಳು ಪ್ರಸ್ತಾಪವಾಗಿವೆ. ಅಂದರೆ 2026-27ನೇ ಸಾಲಿನ ಬಜೆಟ್ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ, ತುಮಕೂರು ಜಿಲ್ಲೆಯ ಅಭಿವೃದ್ಧಿಯನ್ನು ದೀರ್ಘಕಾಲಿಕ ದೃಷ್ಟಿಕೋನದಿಂದ ನಡಿಸಲು ಗೃಹ ಸಚಿವ ಹಾಗೂ ಜಿಲ್ಲೆ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಿದ್ದಾರೆ.

ವಿಶೇಷವಾಗಿ ನಗರ ಸೌಂದರ್ಯೀಕರಣದಲ್ಲಿ ಕಬ್ಬನ್ ಪಾರ್ಕ್ ಮತ್ತು ಲಾಲ್‌ಬಾಗ್ ಮಾದರಿ ಉದ್ಯಾನವನಗಳು ಮುಖ್ಯ ಹೈಲೈಟ್ ಆಗಿವೆ. ಜಿಲ್ಲೆಯಲ್ಲಿ ಈ ಮಾದರಿಯ ಉದ್ಯಾನವನಗಳನ್ನು ನಿರ್ಮಿಸುವ ಮೂಲಕ ಹಸಿರು, ಸ್ವಚ್ಛ ಮತ್ತು ಸುಂದರ ನಗರ ವಾತಾವರಣವನ್ನು ಸೃಷ್ಟಿಸುವುದೇ ಮುಖ್ಯ ಗುರಿಯಾಗಿದೆ. ಅಲ್ಲದೇ ಇನ್ನು ಏನೆಲ್ಲಾ ವಿಚಾರಗಳು ಪ್ರಸ್ತಾಪವಾಗಿವೆ ಎಂದು ಓದಿ ತಿಳಿಯಿರಿ.
ಕೃಷಿ ಕ್ಷೇತ್ರ: ಹಣ್ಣುಗಳ ಉತ್ಪಾದನೆಗೆ ಶೀತಗೃಹ ಅವಶ್ಯಕತೆ:
ತುಮಕೂರು ಜಿಲ್ಲೆಯ ಸೇಬು, ಹುಣಸೆಹಣ್ಣು ಸೇರಿದಂತೆ ಹಲವಾರು ಹಣ್ಣುಗಳ ಉತ್ಪಾದನೆ ದಿನನಿತ್ಯ ಹೆಚ್ಚುತ್ತಿದೆ. ಆದರೆ, ಶೀತಗೃಹಗಳ ಕೊರತೆಯಿಂದ ರೈತರು ತಮ್ಮ ಉತ್ಪಾದನೆಯಲ್ಲಿ ನಷ್ಟ ಅನುಭವಿಸುತ್ತಿದ್ದಾರೆ. ಹಣ್ಣುಗಳ ಗುಣಮಟ್ಟ ಉಳಿಸಿಕೊಳ್ಳಲು ಮತ್ತು ಮೌಲ್ಯವರ್ಧನೆ ಮಾಡಲು ಸುಸಜ್ಜಿತ ಶೀತಗೃಹಗಳನ್ನು ಸ್ಥಾಪಿಸಲು ಸರ್ಕಾರಕ್ಕೆ ವಿಶೇಷ ಅನುದಾನ ನೀಡಲು ಒತ್ತಾಯಿಸಲಾಗಿದೆ.
ಆರೋಗ್ಯ ಮತ್ತು ಶಿಕ್ಷಣ: ನೆಲೆಗೊಳ್ಳುವ ಮೂಲಸೌಕರ್ಯ:
ಜಿಲ್ಲೆಯಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರವನ್ನು ಉತ್ತಮಗೊಳಿಸಲು ನವೀನ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸುಧಾರಣೆ, ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಾಧನೆಗೆ ಪ್ರೋತ್ಸಾಹ-ಇವು ಪ್ರಮುಖ ಗುರಿಗಳಾಗಿವೆ.
ಕೈಗಾರಿಕೆ ಮತ್ತು ಮೂಲಸೌಕರ್ಯ:
ಮೂಲಸೌಕರ್ಯ ಸುಧಾರಣೆಯಿಂದ, ತುಮಕೂರು ಜಿಲ್ಲೆ ರಾಜ್ಯದಲ್ಲಿ ಉದ್ಯೋಗ ಮತ್ತು ವಸತಿ ಕೇಂದ್ರವಾಗಿ ಬೆಳೆಯಬಹುದು. ಕುಡಿಯುವ ನೀರು, ಉತ್ತಮ ರಸ್ತೆ ಸಂಪರ್ಕ, ವಿದ್ಯುತ್ ಮತ್ತು ಇಂಟರ್ನೆಟ್ ಸೌಲಭ್ಯಗಳು ಉದ್ಯಮಗಳ ಆಕರ್ಷಣೆಗೆ ಸಹಾಯಕವಾಗಲಿದೆ.
ಕಬ್ಬನ್ ಪಾರ್ಕ್ ಮತ್ತು ಲಾಲ್‌ಬಾಗ್ ಮಾದರಿ ಉದ್ಯಾನವನಗಳು:
ನಗರದಲ್ಲಿ ಹಸಿರು ಪ್ರದೇಶಗಳ ವಿಸ್ತರಣೆ, ಮಕ್ಕಳ ಆಟದ ಜಾಗಗಳು, ವಿಶ್ರಾಂತಿ ವಾತಾವರಣ, ಮತ್ತು ಸಾರ್ವಜನಿಕ ಉಪಯೋಗಕ್ಕಾಗಿ ಕಬ್ಬನ್ ಪಾರ್ಕ್ ಮತ್ತು ಲಾಲ್‌ಬಾಗ್ ಮಾದರಿಯ ಉದ್ಯಾನವನಗಳು ಅಭಿವೃದ್ಧಿಪಡಿಸಲ್ಪಡಲಿವೆ. ರಾಜಕಾಲುವೆಗಳ ಸಮರ್ಪಕ ನಿರ್ವಹಣೆ, ಸುಂದರ ತೋಟಗಳು ಮತ್ತು ಪರಿಸರ ಸ್ನೇಹಿ ಜಾಗಗಳ ನಿರ್ಮಾಣದಿಂದ ತುಮಕೂರು ನಗರ ಇನ್ನಷ್ಟು ಆಕರ್ಷಕ, ಸ್ವಚ್ಛ ಮತ್ತು ಹಸಿರಾಗಲಿದೆ.
ಸಭೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಮತ್ತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲೆಯಲ್ಲಿ ಸಮಗ್ರ ವರದಿ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ, ಇದರಿಂದ ತುಮಕೂರು ಸಮಗ್ರ, ದೀರ್ಘಕಾಲಿಕ ಮತ್ತು ದೃಢಗೊಳ್ಳುವ ಅಭಿವೃದ್ಧಿಯ ಮಾರ್ಗದಲ್ಲಿ ಮುನ್ನಡೆಯಲಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications