ಡಾ. ಜೂಪಲ್ಲಿ ರಾಮೇಶ್ವರ್ ರಾವ್: ಐವತ್ತು ಸಾವಿರ ರೂ.ನಿಂದ ಬಿಲಿಯನ್‌ ಡಾಲರ್‌ ವರೆಗಿನ ಉದ್ಯಮ ಪಯಣ....

ಹುಟ್ಟುವಾಗಲೇ ಯಾರೂ ಕೂಡ ಬೆಳ್ಳಿಯ ಚಮಚ ಬಾಯಲ್ಲಿ ಇಟ್ಟುಕೊಂಡು ಭೂಮಿಗೆ ಬರುವುದಿಲ್ಲ ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಬದಲಾಗಿ ಬಾಲ್ಯವನ್ನು ಕಡುಬಡತನದಿಂದ ಕಳೆದ ಬಳಿಕ ಶ್ರೀಮಂತರಾಗಿ ಹೊರಹೊಮ್ಮಿದ ಅನೇಕರ ಜೀವನಗಾಥೆಗಳನ್ನು ನಾವು ನೋಡಿದ್ದೇವೆ ಕೇಳಿದ್ದೇವೆ. ಇಂಥ ಅನೇಕ ನಿದರ್ಶನಗಳು ನಮ್ಮ ಕಣ್ಣ ಮುಂದೆ ಕೂಡ ಇದೆ. ಇಂತಹುದೇ ಗುಂಪಿಗೆ ಸೇರಿದ ಮಹಾನ್‌ ಸಾಧಕರೆಂದರೆ ಡಾ. ಜೂಪಲ್ಲಿ ರಾಮೇಶ್ವರ್ ರಾವ್. ಪ್ರಮುಖ ಭಾರತೀಯ ಉದ್ಯಮಿ ಮತ್ತು ಮೈ ಹೋಮ್ ಗ್ರೂಪ್ ಸಂಸ್ಥಾಪಕರಾಗಿರುವ ಇವರ ಬಾಲ್ಯ ಅತ್ಯಂತ ಕಡುಬಡತನದಿಂದ ಕಳೆದಿದ್ದರೆ ಸದ್ಯ ಇವರು ಭಾರತದ ಶ್ರೀಮಂತ ಅಲೋಪಥಿ ವೈದ್ಯರಲ್ಲಿ ಒಬ್ಬರು ಎಂದು ಗುರುತಿಸಿಕೊಂಡಿದ್ದಾರೆ. ರಾಮೇಶ್ವರ್‌ ರಾವ್‌ ಅವರು ಹೈದರಾಬಾದ್ ಮೂಲದ ರಿಯಲ್ ಎಸ್ಟೇಟ್, ಸಿಮೆಂಟ್ ಮತ್ತು ಇಂಧನ ಕ್ಷೇತ್ರಗಳಲ್ಲಿ ಪ್ರಮುಖ ಉದ್ಯಮಿ ಕೂಡ ಆಗಿದ್ದಾರೆ.

ಹೇಗಿತ್ತು ಆರಂಭಿಕ ಜೀವನ ?

ತೆಲಂಗಾಣದ ಮಹಬೂಬ್‌ನಗರ ಜಿಲ್ಲೆಯಲ್ಲಿ ಸೆಪ್ಟೆಂಬರ್ 16, 1955 ರಂದು ಜನಿಸಿದ ಅವರು ತೀರಾ ಬಡತನದಿಂದ ಕೂಡಿದ್ದ ಕೃಷಿ ಕುಟುಂಬದಿಂದ ಬಂದವರಾಗಿದ್ದಾರೆ. ಆದರೆ ಬಡತನವನ್ನೇ ಮೆಟ್ಟಿನಿಂತು ಕಠಿಣ ಶ್ರಮಪಟ್ಟು ಶಿಕ್ಷಣ ಪೂರೈಸಿ ಹೋಮಿಯೋಪತಿ ವೈದ್ಯರಾಗಿ ಬಳಿಕ ಕೋಟ್ಯಾಧಿಪತಿ ಉದ್ಯಮಿಯಾಗಿ ಅವರ ಪ್ರಯಾಣವು ಅವರ ಏರಿಳಿತ ಮತ್ತು ಉದ್ಯಮಶೀಲತೆಯ ಮನೋಭಾವಕ್ಕೆ ಸಾಕ್ಷಿಯಾಗಿದೆ. ಇನ್ನು ಮೊದಲೇ ತಿಳಿಸಿದಂತೆ ರಾವ್ ಅವರು ಕಡಿಮೆ-ಆದಾಯದ ಕುಟುಂಬದಲ್ಲಿ ಬೆಳೆದವರು. ಕಿಲೋಮೀಟರ್‌ಗಟ್ಟಲೆ ನಡೆದುಕೊಂಡೇ ಶಾಲೆಗೆ ಹೋಗಬೇಕಾದ ಪರಿಸ್ಥಿತಿ ಇತ್ತು. ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ನಂತರ, ಅವರು ತಮ್ಮ ಪರಿಸ್ಥಿತಿಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಶಿಕ್ಷಣದ ಮಹತ್ವವನ್ನು ಅರಿತುಕೊಂಡಿದ್ದರು. 1974 ರಲ್ಲಿ ರಾವ್ ಅವರು ವೈದ್ಯನಾಗುವ ಕನಸು ಹೊತ್ತುಕೊಂಡು ಹೋಮಿಯೋಪತಿ ಅಧ್ಯಯನಕ್ಕಾಗಿ ಹೈದರಾಬಾದ್‌ಗೆ ತೆರಳಿದರು. ಅವರ ಕಾಲೇಜು ಜೀವನದಲ್ಲಿ, ಅವರು ವಿದ್ಯಾರ್ಥಿ ನಾಯಕತ್ವದಲ್ಲಿ ತೊಡಗಿಸಿಕೊಂಡ ಪರಿಣಾಮ ಭವಿಷ್ಯದಲ್ಲಿ ಇದು ಮೌಲ್ಯಯುತವಾದ ನೆಟ್‌ವರ್ಕ್ ಅನ್ನು ವಿಸ್ತರಿಸುವಲ್ಲಿ ಅವರಿಗೆ ಯಥೇಚ್ಛ ಸಹಾಯ ಮಾಡಿತು. ಅಲ್ಲದೆ ಅವರ ವ್ಯಾಪಾರ ಉದ್ಯಮಗಳಲ್ಲಿ ಅವರಿಗೆ ಸಹಾಯ ಮಾಡಿತು.

ಐವತ್ತು ಸಾವಿರ ರೂ.ನಿಂದ ಬಿಲಿಯನ್‌ ಡಾಲರ್‌ ಪಯಣ...

ಜೀವನಕ್ಕೆ ಮಹತ್ತರ ತಿರುವು !

ಆರಂಭದಲ್ಲಿ ಹೈದರಾಬಾದ್‌ನ ದಿಲ್‌ಸುಖ್ ನಗರದಲ್ಲಿ ಹೋಮಿಯೋಪತಿ ಅಭ್ಯಾಸ ಮಾಡುತ್ತಿದ್ದ ರಾವ್, ಸ್ನೇಹಿತನ ಸಲಹೆಯ ಮೇರೆಗೆ ಜಮೀನಿನಲ್ಲಿ 50,000 ರೂ.ಗಳನ್ನು ಹೂಡಿಕೆ ಮಾಡಿದ ನಂತರ ಜೀವನವು ನಿರ್ಣಾಯಕ ತಿರುವು ಪಡೆಯಿತು. ಈ ಹೂಡಿಕೆಯು ಗಮನಾರ್ಹ ಆದಾಯವನ್ನು ನೀಡಿತು. ಪರಿಣಾಮ ರಾವ್‌ ಅವರು 50,000 ರೂ. ನಲ್ಲಿ ಮಾಡಿದ ಹೂಡಿಕೆಯು ಬಳಿಕ ಮೂರು ವರ್ಷಗಳಲ್ಲಿ ಅವರಿಗೆ 1,50,000 ರೂ. ಮೊತ್ತದ ರಿಟರ್ನ್‌ ನೀಡಿತು. ಇದರಿಂದ ಪ್ರೇರಣೆಗೊಂಡ ಅವರು ತಮ್ಮ ವೈದ್ಯಕೀಯ ಅಭ್ಯಾಸವನ್ನು ತೊರೆದು ಸಂಪೂರ್ಣವಾಗಿ ಉದ್ಯಮಶೀಲತೆ ತೊಡಗಿಕೊಂಡರು. ಪರಿಣಾಮ 1981 ರಲ್ಲಿ, ಅವರು ಮೈ ಹೋಮ್ ಕನ್ಸ್ಟ್ರಕ್ಷನ್ಸ್ ಅನ್ನು ಸ್ಥಾಪಿಸಿದರು. ಸದ್ಯ ಇದು ದಕ್ಷಿಣ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿಗಳಲ್ಲಿ ಒಂದಾಗಿದೆ. ಕೇವಲ ರಿಯಲ್‌ ಎಸ್ಟೇಟ್‌ಗಳಲ್ಲಿ ಅವರು ತಮ್ಮನ್ನು ತೊಡಗಿಸಿಕೊಳ್ಳದೆ ಇತರೆ ಕ್ಷೇತ್ರಗಳಲ್ಲೂ ಅವರು ತಮ್ಮನ್ನ ತಾವು ತೊಡಗಿಸಿಕೊಂಡರು. ಅವರು ಮೈ ಹೋಮ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಅಡಿಯಲ್ಲಿ ಮಹಾ ಸಿಮೆಂಟ್ ಕಂಪೆನಿಯನ್ನು ಆರಂಭಿಸುವ ಮೂಲಕ ಇದಕ್ಕೆ ಅಡಿಪಾಯ ಹಾಕಿದರು. ಅಲ್ಲದೆ ಸಿಮೆಂಟ್‌ ಕಂಪೆನಿಯ 50 ಪ್ರತಿಶತವನ್ನು ಐರ್ಲೆಂಡ್‌ ಮೂಲದ ಕಂಪೆನಿಗೆ ಸುಮಾರು 1,429 ಕೋಟಿ ರೂ. ಮೊತ್ತಕ್ಕೆ ಮಾರಾಟ ಮಾಡಿದರೆ 2013 ರಲ್ಲಿ ಶ್ರೀ ಜಯಜ್ಯೋತಿ ಸಿಮೆಂಟ್ಸ್ ಅನ್ನು ರೂ 1,400 ಕೋಟಿಗೆ ಸ್ವಾಧೀನಪಡಿಸಿಕೊಂಡರು. ಸದ್ಯ ಇಂದು ಮಹಾ ಸಿಮೆಂಟ್ 10 ಮಿಲಿಯನ್ ಟನ್‌ಗಳ ಸಾಮರ್ಥ್ಯದೊಂದಿಗೆ ದಕ್ಷಿಣ ಭಾರತದ ಅತಿದೊಡ್ಡ ಸಿಮೆಂಟ್ ಉತ್ಪಾದಕರಲ್ಲಿ ಒಂದಾಗಿದೆ.

ಬಿಲಿಯನ್‌ ಡಾಲರ್‌ ಉದ್ಯಮಿಯಾದ ರಾವ್!‌

ಸದ್ಯ 2024 ರ ವೇಳೆಗೆ ಡಾ. ರಾವ್ ಅವರ ನಿವ್ವಳ ಸಂಪತ್ತಿನ ಮೌಲ್ಯವು ಸುಮಾರು $2.5 ಶತಕೋಟಿ (ಅಂದಾಜು 18,480 ಕೋಟಿ ರೂ.) ಎಂದು ಅಂದಾಜಿಸಲಾಗಿದೆ, ಅವರು ಭಾರತದಲ್ಲಿನ ಅತ್ಯಂತ ಶ್ರೀಮಂತ ವ್ಯಕ್ತಿ, ಅದರಲ್ಲೂ ಹೈದರಾಬಾದ್‌ನ ಅಗ್ರ ಹತ್ತು ಶ್ರೀಮಂತ ವ್ಯಕ್ತಿಗಳಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ರಾವ್‌ ಅವರ ವಿವಿಧ ಉದ್ಯಮಗಳನ್ನು ಅವರ ನಾಲ್ವರು ಮಕ್ಕಳು ನೋಡಿಕೊಳ್ಳುತ್ತಿದ್ದು, ದಾನ ಧರ್ಮದಲ್ಲೂ ಅವರು ಗಮನಾರ್ಹವಾಗಿ ಗುರುತಿಸಿಕೊಂಡಿದ್ದಾರೆ. 11 ನೇ ಶತಮಾನದ ತತ್ವಜ್ಞಾನಿ ರಾಮಾನುಜರನ್ನು ಗೌರವಿಸುವ ಸಲುವಾಗಿ ಹೈದರಾಬಾದ್‌ನಲ್ಲಿ ನಿರ್ಮಾಣಗೊಂಡಿರುವ ಸಮಾನತೆಯ ಪ್ರತಿಮೆಯ ನಿರ್ಮಾಣಕ್ಕೆ ರಾವ್‌ ಅವರು ಹೆಚ್ಚಿನ ಕೊಡುಗೆ ನೀಡಿದ್ದರು. ಡಾ. ರಾಮೇಶ್ವರ ರಾವ್ ಅವರ ಕಥೆಯು ಕೇವಲ ವೈಯಕ್ತಿಕ ಯಶಸ್ಸಿನ ಕಥೆಯಲ್ಲ, ಆದರೆ ಕಠಿಣ ಪರಿಶ್ರಮ ಮತ್ತು ಕಾರ್ಯತಂತ್ರದ ಹೂಡಿಕೆಯ ಮೂಲಕ ರೂಪಾಂತರದ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಸಾಧಾರಣ ಹಿನ್ನೆಲೆಯಿಂದ ವಿಶಾಲವಾದ ಕಾರ್ಪೊರೇಟ್ ಸಾಮ್ರಾಜ್ಯವನ್ನು ಮುನ್ನಡೆಸುವ ಅವರ ಏರಿಕೆಯು ಅನೇಕ ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ಸ್ಫೂರ್ತಿಯಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+