ಬೆಂಗಳೂರು, ಮಾರ್ಚ್ 27: ರೇಮಂಡ್ಸ್ ಲಿಮಿಟೆಡ್ ಎಂಬ ವಸ್ತ್ರೋದ್ಯಮ ಸ್ಥಾಪಿಸಿ, ಸುಮಾರು 1000 ಕೋಟಿ ರೂ. ಆಸ್ತಿಯ ಒಡೆಯರಾಗಿ, ದೇಶದ ಸಿರಿವಂತರಲ್ಲಿ ಒಬ್ಬರಾಗಿದ್ದ ಮೆರೆದಿದ್ದ ಡಾ.ವಿಜಯಪತ್ ಸಿಂಘಾನಿಯಾ 2015ರಲ್ಲಿ ತಮ್ಮ ಕಂಪನಿಯ ಎಲ್ಲಾ ಉಸ್ತುವಾರಿಯನ್ನು ಮಗ ಗೌತಮ್ ಸಿಂಘಾನಿಯಾ ಹೆಗಲಿಗೆ ಹಾಕಿ ಆಸ್ತಿಯನ್ನೆಲ್ಲಾ ಮಗನ ಹೆಸರಿಗೆ ಬರೆದು ನಿವೃತ್ತರಾಗಿದ್ದರು.
ಆದರೆ, ಬಳಿಕ ಪುತ್ರ ವಿಜಯಪಥ್ ಸಿಂಘಾನಿಯಾ ತನ್ನ ತಂದೆಯನ್ನು ತನ್ನ ಮನೆಯಿಂದಲೇ ಹೊರಹಾಕಿದ್ದು ಇದರ ಬಳಿಕ ಸಿರಿವಂತ ಕುಟುಂಬದ ಕೌಟುಂಬಿಕ ಜಗಳ ಬೀದಿಗೆ ಬಂದಿತ್ತು. ತಮ್ಮ ಮಗ ಗೌತಮ್ ಸಿಂಘಾನಿಯಾನಿ ಆಡಳಿತ ಹಸ್ತಾಂತರಿಸಿದ ಬಳಿಕ ರೇಮಂಡ್ಸ್ ವಿಷಾದ ವ್ಯಕ್ತಪಡಿಸಿದ್ದು ಮಾತ್ರವಲ್ಲದೇ ಬಿಡಿಗಾಸಿಗೂ ಪರದಾಡುತ್ತಿರುವುದನ್ನು ಹೇಳಿದ್ದರು. ಇದಾದ ಕೆಲವು ದಿನಗಳ ಬಳಿಕ ಅಂದರೆ ಇತ್ತೀಚೆಗೆ ತಂದೆ ಮಗ ಜೊತೆಗಿರುವ ಪೋಟೋ ವೈರಲ್ ಆಗಿತ್ತು.

ರೇಮಂಡ್ಸ್ ಕಂಪನಿಯ ಮಾಲೀಕ ಗೌತಮ್ ಸಿಂಘಾನಿಯಾ ತಮ್ಮ ತಂದೆಯೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದು, "ಇಂದು ನನ್ನ ತಂದೆ ನಮ್ಮ ಮನೆಯಲ್ಲಿದ್ದು, ಅವರೊಂದಿಗೆ ಕಾಲಕಳೆದಿರುವುದು ಸಂತೋಷವಾಗಿದೆ ಮತ್ತು ಅವರ ಆಶೀರ್ವಾದವನ್ನು ಕೋರುತ್ತೇನೆ. ಅಪ್ಪಾ ನೀವು ಸದಾ ಆರೋಗ್ಯವಾಗಿರಿ" ಎಂದು ಬರೆದುಕೊಂಡಿದ್ದರು. ಈ ಪೋಟೋ ತಂದೆ- ಮಗನ ನಡುವಿನ ಮನಸ್ತಾಪಗಳು ದೂರವಂತೆ ಅವರಿಬ್ಬರ ಸಂಬಂಧ ಉತ್ತಮವಾದಂತೆ ಬಿಂಬಿಸಲಾಗಿತ್ತು. ಹೀಗಾಗಿ ಈ ಪೋಟೋ ವೈರಲ್ ಆಗಿತ್ತು.
ಆದರೆ ನಿಜ ವಿಚಾರವನ್ನು ವಿಜಯಪತ್ ಸಿಂಘಾನಿಯಾ ಬಿಚ್ಚಿಟ್ಟಿದ್ದು, ಈ ಪೋಟೋ ತೆಗೆದಿರುವುದು ಮತ್ತು ಅದನ್ನು ಸಾಮಾಜಿಕ ಜಾಲತಾಣದಲ್ಲಿ ದುರುದ್ದೇಶದಿಂದ ಕೂಡಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಬ್ಯುಸಿನೆಸ್ ಟುಡೆಯೊಂದಿಗೆ ಪ್ರತಿಕ್ರಿಯೆ ನೀಡಿರುವ ವಿಜಯಪಥ್ ಸಿಂಘಾನಿಯಾ, ತಮ್ಮ ಜೊತೆಗಿನ ಫೋಟೋ ಕ್ಲಿಕ್ಕಿಸಿ ಮಾಧ್ಯಮಗಳಿಗೆ ಬಲವಾದ ಸಂದೇಶ ಕಳುಹಿಸುವ ಉದ್ದೇಶದಿಂದ ಮಗ ನನ್ನನ್ನು ಮನೆಗೆ ಆಹ್ವಾನಿಸಿದ್ದ ಎಂದು ಆರೋಪಿಸಿದ್ದಾರೆ.
ವಿಜಯಪತ್ ಸಿಂಘಾನಿಯಾ ಅವರು ಮಾರ್ಚ್ 20 ರಂದು ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದಾಗ ಪುತ್ರ ಗೌತಮ್ ಸಿಂಘಾನಿಯಾ ಅಸಿಸ್ಟೆಂಟ್ ಮನಗೆ ಬರುವಂತೆ ಹೇಳಿದ್ದ. ಆದರೆ, ಇದಕ್ಕೆ ನಾನು ನಿರಾಕರಿಸಿದ್ದ. ಈ ವೇಳೆ ಗೌತಮ್ ವಿಡಿಯೋ ಸ್ಕ್ರೀನ್‌ನಲ್ಲಿ ಬಂದು, ಮನೆಗೆ ಭೇಟಿ ನೀಡಿ, ಕಾಫಿ ಕುಡಿದು ಹೋಗಿ, ನಿಮ್ಮ ಸಮಯದಲ್ಲಿ ನಾನು ಕೇವಲ ಐದು ನಿಮಿಷ ಮಾತ್ರ ತೆಗೆದುಕೊಳ್ಳುತ್ತೇನೆ ಎಂದು ಒತ್ತಾಯ ಮಾಡಿದ್ದ ಎಂದು ವಿಜಯಪಥ್ ಸಿಂಘಾನಿಯಾ ಹೇಳಿದ್ದಾರೆ. ಕೊನೆಗೆ ಆತನ ಒತ್ತಾಯಕ್ಕೆ ಮಣಿದು ಮನಗೆ ಹೋಗಲು ಒಪ್ಪಿದ್ದೆ.
ಅಲ್ಲಿ ಒಟ್ಟಾರೆ ಸಮಯ ಕಳೆದಿರುವುದು ಕೇವಲ ಐದು ನಿಮಿಷಗಳು ಮಾತ್ರ. ಇಷ್ಟವಿಲ್ಲದಿದ್ದರೂ ಆತ ನನ್ನೊಂದಿಗೆ ಪೋಟೋ ತೆಗೆದುಕೊಂಡಿದ್ದ. ಬಳಿಕ ನಾನು ಅಲ್ಲಿಂದ ಹೊರಟು ಹೋದ ಕೆಲ ಹೊತ್ತಿನಲ್ಲಿಯೇ ನನಗೆ ಮೆಸೇಜ್‌ಗಳು ಬರಲು ಆರಂಭಿಸಿದ್ದವು. ನಾನು ಹಾಗೂ ಗೌತಮ್ ಜೊತೆಯಲ್ಲಿರುವ ಚಿತ್ರ ಇಂಟರ್ನೆಟ್‌ನಲ್ಲಿತ್ತು. ನಾವಿಬ್ಬರೂ ಒಂದಾಗಿದ್ದೇವೆ ಎನ್ನುವ ಅರ್ಥದಲ್ಲಿ ಪೋಸ್ಟ್ ಹಾಕಲಾಗಿತ್ತು. ಆದರೆ, ಇದು ಸಂಪೂರ್ಣ ಸುಳ್ಳು ಎಂದು ತಿಳಿಸಿದ್ದಾರೆ.
ಆತನ ನಿಜವಾದ ಉದ್ದೇಶ ಏನೆಂದು ನನಗೆ ತಿಳಿದಿಲ್ಲ, ಆದರೆ ಇದು ಕಾಫಿ ಕುಡಿಯಲು ಅಥವಾ ನಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಖಂಡಿತವಾಗಿಯೂ ಅಲ್ಲ. ಎಂದು ಪುತ್ರನ ವರ್ತನೆ ಬಗ್ಗೆ ಸಿಂಘಾನಿಯಾ ಕಿಡಿಕಾರಿದ್ದಾರೆ. 10 ವರ್ಷಗಳಲ್ಲಿ ನಾನು ಮೊದಲ ಬಾರಿಗೆ ಜೆಕೆ ಹೌಸ್ ಅನ್ನು ಪ್ರವೇಶಿಸಿದ್ದೇನೆ. ಇನ್ನೆಂದೂ ನಾನು ಆತನ ಮನೆಗೆ ಕಾಲಿಡೋದಿಲ್ಲ ಎಂದು ನಾನು ಭಾವಿಸುತ್ತೇನೆ' ಎಂದಿದ್ದಾರೆ.
ಈ ಘಟನೆಯ ಹಿನ್ನಲೆ ಗಮನಿಸುವುದಾದರೆ, ಉದ್ಯಮಿ ಗೌತಮ್ ಸಿಂಘಾನಿಯಾ ತನ್ನ ತಂದೆಯನ್ನು ತನ್ನ ಸ್ವಂತ ಮನೆಯಿಂದ ಹೊರಹಾಕಿದ್ದರು. ಸಿಂಘಾನಿಯಾ ತನ್ನ ಎಲ್ಲಾ ಕಂಪನಿಯ ಷೇರುಗಳನ್ನು ತನ್ನ ಮಗ ಗೌತಮ್ ಹೆಸರಿನಲ್ಲಿ ಬರೆದ ನಂತರ ಈ ಬೆಳವಣಿಗೆಗಳು ಪ್ರಾರಂಭವಾಗಿತ್ತು. ಅಂದಿನಿಂದ ತಂದೆ-ಮಗನ ಜೋಡಿಯ ನಡುವಿನ ಸಂಬಂಧವು ಕುಸಿಯಲು ಪ್ರಾರಂಭಿಸಿತು.
ಒಂದು ಕಾಲದಲ್ಲಿ 36 ಅಂತಸ್ತು ಕಟ್ಟಡದ ಒಡೆಯರಾಗಿದ್ದ ವಿಜಯಪತ್ ಸಿಂಘಾನಿಯಾ, ಬಳಿಕ ಗ್ರ್ಯಾಂಡ್ ಪರಾಡಿ ಸೊಸೈಟಿಯ ಬಾಡಿಗೆ ಮನೆಯಲ್ಲಿದ್ದರು. 2017 ರಲ್ಲಿ, ದಕ್ಷಿಣ ಮುಂಬೈನಲ್ಲಿರುವ ಡ್ಯುಪ್ಲೆಕ್ಸ್ ಜೆಕೆ ಹೌಸ್ ಕಟ್ಟಡವನ್ನು ರೇಮಂಡ್ ಲಿಮಿಟೆಡ್ ತಮಗೆ ನೀಡಿಲ್ಲ ಎಂದು ಆರೋಪಿಸಿದ್ದರು. ಮಾತ್ರವಲ್ಲದೇ ಬಾಡಿಗೆಗಾಗಿ ಹಣ ಹೊಂದಿಸಲು ಹರ ಸಾಹಸ ಪಡಬೇಕಾಗಿದೆ ಎಂದು ವಿಜಯಪತ್ ಸಿಂಘಾನಿಯಾ ದೂರಿದ್ದರು. ಉದ್ಯಮ ಹಾಗೂ ತಾವು ಕಷ್ಟಪಟ್ಟು ದುಡಿದು ಸಂಪಾದಿಸಿದ ಸಕಲ ಆಸ್ತಿಯನ್ನೂ ಮಗ ಗೌತಮ್ ಹೆಸರಿಗೆ ಮಾಡಿಕೊಟ್ಟಿದ್ದರಿಂದ, ಇಂಥದ್ದೊಂದು ಪರಿಸ್ಥಿತಿ ಎದುರಿಸಬೇಕಾಗಿತ್ತು ಎಂದು ವಿಷಾದಿಸಿದ್ದರು.


Click it and Unblock the Notifications