Drumstick Price: ಮಟನ್‌ ದರದಲ್ಲಿ ನುಗ್ಗೆಕಾಯಿ! ಒಂದು ಕೆಜಿ ನುಗ್ಗೆ ಬೆಲೆ 700 ರೂಪಾಯಿ

ಕರ್ನಾಟಕದಲ್ಲಿ (Karnataka) ಭಾರೀ ಬೇಡಿಕೆಯ ತರಕಾರಿ ಮತ್ತು ಆಯುರ್ವೇದದಲ್ಲಿ "ಮಹೌಷಧಿ" ಸಸ್ಯಗಳಲ್ಲಿ ನುಗ್ಗೆಕಾಯಿ ಕೂಡಾ ಒಂದು. ದಕ್ಷಿಣ ಭಾರತದಲ್ಲಿ (South India) ಮಾತ್ರವಲ್ಲದೇ ವಿದೇಶಗಳಲ್ಲೂ ಇದನ್ನು ಬೆಳೆಯಲಾಗುತ್ತದೆ. ಒಂದು ಕಾಲದಲ್ಲಿ ಕಮ್ಮಿ ಬೆಲೆಯಲ್ಲಿ, ಮನೆಯಲ್ಲೇ ಬೆಳೆದು ತಿನ್ನುತ್ತಿದ್ದ ನುಗ್ಗೆಕಾಯಿ ಇಂದು ದುಬಾರಿಯಾಗಿಬಿಟ್ಟಿದೆ. ಅಚ್ಛರಿಯ ವಿಷಯವೆಂದರೆ ಕೋಳಿಯ ಬೆಲೆಯನ್ನು ಮೀರಿ, ಮಟನ್‌ ಬೆಲೆಯಷ್ಟು ಇಂದು ನುಗ್ಗೆಕಾಯಿ ಬೆಲೆಯಾಗಿದೆ. ಅಂದರೆ 1 ಕೆಜಿ ನುಗ್ಗೆಕಾಯಿ ಬೆಲೆ 600 ರಿಂದ 700 ರೂ. ಆಗಿದೆ.

ಮಟನ್‌ ದರದಲ್ಲಿ ನುಗ್ಗೆಕಾಯಿ! ಒಂದು ಕೆಜಿ ನುಗ್ಗೆ ಬೆಲೆ 700 ರೂಪಾಯಿ

ಮಟನ್‌ಗೆ ಸರಿಸಮಾನವಾದ ನುಗ್ಗೆಕಾಯಿ ದರ!
ರಾಜ್ಯದೆಲ್ಲೆಡೆ ಚಳಿಗಾಲ ಆರಂಭವಾಗಿದೆ. ಆದರೂ ಅಲ್ಲಲ್ಲಿ ಮಳೆ ಸುರಿಯುತ್ತಲೇ ಇದೆ. ಅದೇ ರೀತಿ ನುಗ್ಗೆಕಾಯಿ ಬೆಳೆಗೆ ಅನುಕೂಲಕರ ಹವಾಮಾನ ಅತ್ಯಗತ್ಯ. ಆದರೆ ಈ ಬಾರಿಯಂತೂ ಎಡೆಬಿಡದೆ ಮಳೆ, ಚಂಡಮಾರುತ, ಅತಿಯಾದ ಬಿಸಿಲಿನಿಂದಾಗಿ ನುಗ್ಗೆಕಾಯಿ ಬೆಳೆಯಲ್ಲಿ ಪ್ರತಿಕೂಲ ಪರಿಣಾಮ ಬೀರಿದೆ. ಅದರಲ್ಲೂ ಕರ್ನಾಟಕದ ಹಾಸನ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ತುಮಕೂರಿನಲ್ಲಿ ನುಗ್ಗೆಕಾಯಿ ಉತ್ಪಾದನೆ ಕಡಿಮೆಯಾಗಿದೆ ಎಂದು ವರದಿಯಾಗಿದೆ. ಈ ಹಿಂದೆ 100 ಟನ್‌ ಬರುತ್ತಿದ್ದ ನುಗ್ಗೆಕಾಯಿ, ಇಂದು ಕೇವಲ 30 ರಿಂದ 40 ಟನ್‌ ಮಾತ್ರ ಮಾರುಕಟ್ಟೆಗೆ ಬರುತ್ತಿದೆ ಎನ್ನಲಾಗಿದೆ.

ದುಬಾರಿಯಾಯ್ತು ನುಗ್ಗೆಕಾಯಿ!
ಬೆಂಗಳೂರು ಮಾರುಕಟ್ಟೆಯಲ್ಲಿ ಪ್ರತೀ ಕೆ.ಜಿ ನುಗ್ಗೆಕಾಯಿ ಬೆಲೆ 500 ರಿಂದ 600 ರೂಪಾಯಿ ಆಗಿದೆ. ನವೆಂಬರ್‌ ತಿಂಗಳ ಆರಂಭದಲ್ಲಿ ಒಂದು ಕೆಜಿ ನುಗ್ಗೆಕಾಯಿ ಬೆಲೆ 150 ರಿಂದ 200 ರೂಪಾಯಿಗಳವರೆಗೆ ಇತ್ತು. ಆದರೆ ಒಂದೇ ತಿಂಗಳಲ್ಲಿ ಮೂರು ಒಟ್ಟು ಏರಿಕೆಯಾಗಿದೆ. ಅದರಲ್ಲೂ ಕೆಲವು ಮಾರಾಟಗಾರರು ಕೆಜಿಗೆ 700 ರೂ.ನಲ್ಲೂ ಮಾರಾಟ ಮಾಡುತ್ತಿದ್ದಾರೆ. ಈ ಮೂಲಕ ನುಗ್ಗೆಕಾಯಿ ದರ ಮಟನ್‌ ಬೆಲೆಗೆ ಸರಿಸಮಾನವಾಗಿದೆ.

ಒಂದೆಡೆ ಮದುವೆ ಸೀಸನ್‌, ಮತ್ತೊಂದೆಡೆ ಹಬ್ಬಗಳ ಸೀಸನ್‌, ಇನ್ನೂ ಒಂದು ಕಡೆ ಶಬರಿಮಲೆ ಯಾತ್ರೆ. ಎಲ್ಲಿ ಕೇಳಿದರು ದಿನಕ್ಕೆ ಎರಡರಿಂದ ಮೂರು ಮದುವೆ ಸಮಾರಂಭಗಳು. ಈ ಸಂದರ್ಭದಲ್ಲಿ ಕೆಲವರು ನಾನ್‌ವೆಜ್‌ ಮಾಡಿದರೂ, ಸ್ವಲ್ಪ ಮಟ್ಟಿಗಾದರೂ ತರಕಾರಿ ಬೇಕೇಬೇಕು. ಆದ್ರೆ ಈ ಬೇಡಿಕೆಯೇ ಇಂದು ತರಕಾರಿ ಬೆಲೆ ದುಬಾರಿಯಾಗಲು ಕಾರಣವಾಗಿದೆ.

ಎಲ್ಲೆಲ್ಲಿ ಎಷ್ಟಿದೆ ನುಗ್ಗೆಕಾಯಿ ದರ?
ಇನ್ನು ಕುಂದಾಪುರದಲ್ಲಿ ಇಂದು ಒಂದು ಕೆಜಿ ನುಗ್ಗೆಕಾಯಿ ಬೆಲೆ 750 ರೂ. ಆಗಿದ್ದು, ಎರಡು ದಿನಗಳ ಹಿಂದಷ್ಟೇ 500 ರೂ. ಇತ್ತು. ಅದೇ ರೀತಿ ಮಂಗಳೂರು ಮಾರುಕಟ್ಟೆಯಲ್ಲಿ ನುಗ್ಗೆ ಕಾಯಿ ಬೆಲೆ ಕೆಜಿಗೆ 700 ರಿಂದ 720 ರೂಪಾಯಿ ಆಗಿದೆ. ಸದ್ಯ ಕರ್ನಾಟಕದಲ್ಲಿ ಪೂರೈಕೆ ಕಡಿಮೆಯಾಗಿದ್ದು, ತಮಿಳುನಾಡಿನಲ್ಲಿ ಹೆಚ್ಚು ಬೆಳೆಯಲಾಗುತ್ತಿದೆ. ಆದ್ರೆ ಅಲ್ಲಿನ ಬೆಳೆ ಕರ್ನಾಟಕಕ್ಕೆ ಬರುವವರೆಗೂ ಮಾರುಕಟ್ಟೆಯಲ್ಲಿ ದರ ಇದೇ ರೀತಿ ಮುಂದುವರೆಯಲಿದೆ ಎಂದು ವರದಿಯಾಗಿದೆ.

ಇಳಿಕೆಯಾಗುತ್ತಾ ನುಗ್ಗೆಕಾಯಿ ದರ?
ವರದಿಕಾ ಪ್ರರ, ಡಿಸೆಂಬರ್‌-ಜನವರಿ ವೇಳೆ ಹವಾಮಾನ ಸ್ಥಿರಗೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ನುಗ್ಗೆಕಾಯಿ ಬೆಳೆಗೂ ಅನುಕೂಲವಾಗಲಿದೆ. ಆದರೆ ಹೆಚ್ಚಿನ ಬೆಳೆ ಬರುವವರೆಗೂ ಬೆಲೆ ಇದೇ ರೀತಿ ಇರಲಿದ್ದು, ಇಳಿಕೆಯಾಗುವುದಿಲ್ಲ ಎನ್ನಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+