For Quick Alerts
ALLOW NOTIFICATIONS  
For Daily Alerts

54 ಸಾವಿರ ಕೋಟಿ ರುಪಾಯಿಗೂ ಹೆಚ್ಚು ಕುಗ್ಗಿದ ಬ್ಯಾಂಕ್ ಸಾಲ ನೀಡಿಕೆ ಪ್ರಮಾಣ

By ಅನಿಲ್ ಆಚಾರ್
|

ಆಗಸ್ಟ್ 28, 2020ಕ್ಕೆ ಕೊನೆಯಾದ ಪಾಕ್ಷಿಕಕ್ಕೆ ಸಾಲ ಬೆಳವಣಿಗೆ ದರವು ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 5.5% ಇದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಂಕಿ- ಅಂಶವು ತಿಳಿಸಿದೆ. ಈ ಹಿಂದಿನ ಪಾಕ್ಷಿಕ, ಅಂದರೆ ಆಗಸ್ಟ್ 14, 2020ಕ್ಕೆ ಅದೇ ದರ ಇತ್ತು ಕಳೆದ ವರ್ಷ ಆಗಸ್ಟ್ 30, 2019ಕ್ಕೆ ಸಾಲ ಬೆಳವಣಿಗೆ ದರವು ಎರಡಂಕಿ ದರವಾದ 10.2% ಇತ್ತು.

ಕೇರ್ ರೇಟಿಂಗ್ ಈ ಬಗ್ಗೆ ಹೇಳಿಕೆ ನೀಡಿದ್ದು, ಹಿಂಜರಿತದ ಕಾರಣಕ್ಕೆ ಬೇಡಿಕೆ ದುರ್ಬಲವಾಗಿದ್ದು, ಬ್ಯಾಂಕಿಂಗ್ ವ್ಯವಸ್ಥೆಯ ಸಾಲ ಮರುಪಾವತಿ ಅಪಾಯವನ್ನು ತಿಳಿಸಿದೆ. ಈ ವರ್ಷದ ಆಗಸ್ಟ್ ನಲ್ಲಿ ಲಾಕ್ ಡೌನ್ ನಲ್ಲಿ ಇನ್ನಷ್ಟು ವಿನಾಯಿತಿ ಘೋಷಿಸಿದ ಮೇಲೆ ಬ್ಯಾಂಕ್ ಗಳು ಎಂಎಸ್ ಎಂಇಗಳಿಗೆ ಸಾಲ ವಿತರಣೆ ಹೆಚ್ಚು ಮಾಡಿದವು ಅದಕ್ಕೆ ಸರ್ಕಾರವೇ ಖಾತ್ರಿ ಆಗಿತ್ತು. ಆದರೂ ಸಾಲ ನೀಡಿಕೆ ಬೆಳವಣಿಗೆ ದುರ್ಬಲವಾಗಿದೆ ಎಂದು ಬ್ಯಾಂಕರ್ ಗಳು ತಿಳಿಸಿದ್ದಾರೆ.

ECLGS ಅಡಿಯಲ್ಲಿ MSMEಗಳಿಗೆ 1 ಲಕ್ಷ ಕೋಟಿಗೂ ಹೆಚ್ಚು ಸಾಲ ವಿತರಣೆECLGS ಅಡಿಯಲ್ಲಿ MSMEಗಳಿಗೆ 1 ಲಕ್ಷ ಕೋಟಿಗೂ ಹೆಚ್ಚು ಸಾಲ ವಿತರಣೆ

ಕೇರ್ ಹೇಳಿರುವ ಪ್ರಕಾರ, ಷೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್ ಗಳು ಸಾಲ ನೀಡಿಕೆಯಲ್ಲೂ ಬಹಳ ಎಚ್ಚರಿಕೆ ವಹಿಸಿವೆ. ಏಕೆಂದರೆ ಆಸ್ತಿಯ ಗುಣಮಟ್ಟ ಪ್ರಮುಖವಾಗಿ ಆತಂಕಕ್ಕೆ ಕಾರಣವಾಗಿದೆ. ಮುಂದಿನ ಕೆಲಸ ಸಮಯ ಆರ್ಥಿಕ ಚಟುವಟಿಕೆಗಳೇ ಕಡಿಮೆ ಇರುವುದರಿಂದ ಒಟ್ಟಾರೆ ಬ್ಯಾಂಕ್ ಸಾಲ ಪ್ರಮಾಣವೇ ಹಿಂಜರಿತ ಅನುಭವಿಸುತ್ತದೆ ಎನ್ನಲಾಗಿದೆ.

54 ಸಾವಿರ ಕೋಟಿ ರುಪಾಯಿಗೂ ಹೆಚ್ಚು ಕುಗ್ಗಿದ ಬ್ಯಾಂಕ್ ಸಾಲ  ನೀಡಿಕೆ

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲೇ ಜಿಡಿಪಿ ದೊಡ್ಡ ಮಟ್ಟದಲ್ಲಿ, ಅಂದರೆ 23.9% ಕುಸಿದಿದೆ. ಕೊರೊನಾ ಬಿಕ್ಕಟ್ಟಿನ ಪರಿಣಾಮ ಎದ್ದು ಕಾಣುತ್ತಿದೆ. ಬ್ಯಾಂಕ್ ಗಳು ಆಗಸ್ಟ್ ನಲ್ಲಿ ಹದಿನೈದು ಸಾವಿರಕ್ಕಿಂತ ಸ್ವಲ್ಪ ಹೆಚ್ಚು ಠೇವಣಿ ಸಂಗ್ರಹಿಸಿವೆ. ಆಗಸ್ಟ್ 28, 2020ಕ್ಕೆ ಕೊನೆಯಾದ ಪಾಕ್ಷಿಕಕ್ಕೆ 96,255 ಕೋಟಿಗಿಂತ ಸ್ವಲ್ಪ ಹೆಚ್ಚು ಸೇರ್ಪಡೆ ಮಾಡಿವೆ. ಆಗಸ್ಟ್ 14, 2020ಕ್ಕೆ ಹೋಲಿಸಿದಲ್ಲಿ ಆಗಸ್ಟ್ 28, 2020ಕ್ಕೆ 80,849 ಕೋಟಿಗೆ ಕುಸಿತ ಆಗಿತ್ತು.

ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಠೇವಣಿ ಬೆಳವಣಿಗೆ 10.9 ಇದ್ದರೆ, ಕಳೆದ ಪಾಕ್ಷಿಕದಲ್ಲಿ ಹನ್ನೊಂದು ಪರ್ಸೆಂಟ್ ಇಳಿಕೆ ಆಗಿದೆ. ಕಳೆದ ವರ್ಷ ಠೇವಣಿಯಲ್ಲಿ ಬೆಳವಣಿಗೆ ಇದೇ ವೇಗದಲ್ಲಿ ಇತ್ತು. ಠೇವಣಿ ಸಂಗ್ರಹ ಹಾಗೂ ಸಾಲ ವಿಸ್ತರಣೆ ಅನುಪಾತವನ್ನು ಗಮನಿಸುವುದಾದರೆ (ಕ್ರೆಡಿಟ್ ಟು ಡೆಪಾಸಿಟ್ ರೇಷಿಯೋ) ಆಗಸ್ಟ್ 28, 2020ಕ್ಕೆ ಸಿ|ಡಿ 72.03 ಪರ್ಸೆಂಟ್ ಇತ್ತು. 2020 ಜೂನ್ ನಲ್ಲಿ ಇದು 73.48 ಪರ್ಸೆಂಟ್ ಇತ್ತು ಎಂದು ಆರ್ ಬಿಐ ಅಂಕಿ- ಅಂಶದಿಂದ ತಿಳಿದುಬರುತ್ತದೆ.

English summary

Due To Corona Crisis Bank Credit Shrinks Over 54000 Crore

On the backdrop of Corona crisis bank credit shrinks over 54,000 crore in August 2020. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X