ರಿಲಯನ್ಸ್ ಇಂಡಸ್ಟ್ರೀಸ್ ಬೆಂಬಲಿತ, ಆಹಾರ, ಇತರೆ ಉತ್ಪನ್ನಗಳನ್ನು ತ್ವರಿತವಾಗಿ ಡೆಲಿವರಿ ಮಾಡುವ ಸ್ಟಾರ್ಟ್‌ಅಪ್ ಸಂಸ್ಥೆಯಾದ ಡೊನ್ಜೊ ಆರ್ಥಿಕ ಸಂಕಷ್ಟದಲ್ಲಿದೆ. ಈ ನಿಟ್ಟಿನಲ್ಲಿ ಡೊನ್ಜೊ ಸೆಪ್ಟೆಂಬರ್‌ವರೆಗೆ ಉದ್ಯೋಗಿಗಳಿಗೆ ವೇತನವನ್ನು ನೀಡಲಾಗದು. ವೇತನವನ್ನು ಬಾಕಿ ಇಡಲಾಗುವುದು ಎಂದು ತಿಳಿಸಿರುವುದಾಗಿ ವರದಿಯಾಗಿದೆ. ಈ ಹಿಂದೆ ಡೊನ್ಜೊ ಶೇಕಡ 50ರಷ್ಟು ಉದ್ಯೋಗಿಗಳಿಗೆ ವೇತನ ಬಾಕಿ ಉಳಿಸಿ ಸುದ್ದಿಯಾಗಿತ್ತು.
ದೇಶದ ಅತೀ ದೊಡ್ಡ ಸಂಸ್ಥೆಗಳಲ್ಲಿ ಒಂದಾದ ರಿಲಯನ್ಸ್ ಬೆಂಬಲಿತವಾದ ಡೊನ್ಜೊ ಪ್ರಸ್ತುತ ಹಣಕಾಸು ಬಿಕ್ಕಟ್ಟಿನ ಸ್ಥಿತಿಯಲ್ಲಿದೆ. ಆದ್ದರಿಂದಾಗಿ ಶೇಕಡ 50ರಷ್ಟು ಡಾರ್ಕ್ ಸ್ಟೋರ್‌ಗಳ ಕಡಿತ, ಉದ್ಯೋಗ ಕಡಿತ, ಫಂಡ್ ರೈಸ್, ವೇತನ ವಿಳಂಬ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಾ ಬರುತ್ತಿದೆ. ಕಡಿಮೆ ಸಮಯದಲ್ಲಿ ಆರ್ಡರ್‌ಗಳನ್ನು ತಲುಪಿಸಲು ಅಗತ್ಯ ವಸ್ತುಗಳನ್ನು ಇರಿಸಲಾಗುವ ಸಣ್ಣ ಗೋದಾಮಿಗೆ ಡಾರ್ಕ್ ಸ್ಟೋರ್ ಎಂದು ಕರೆಯಲಾಗುತ್ತದೆ.

ಆರಂಭಿಕವಾಗಿ ಸಂಸ್ಥೆಯು ಜೂನ್ ತಿಂಗಳಲ್ಲಿ ಕೆಲವರಿಗೆ ವೇತನವನ್ನು ವಿಳಂಬ ಮಾಡಿದೆ. ಜೂನ್‌ನಲ್ಲಿ ಬೆಂಗಳೂರಿನಲ್ಲಿ ಅತೀ ಜನಪ್ರಿಯವಾದ ಆಹಾರ ಸಾಮಾಗ್ರಿ ತ್ವರಿತವಾಗಿ ಡೆಲಿವರಿ ಮಾಡುವ ಸಂಸ್ಥೆಯಾದ ಡೊನ್ಜೊ ತಮ್ಮ ಉದ್ಯೋಗಿಗಳ ಪೈಕಿ ಶೇಕಡ 50ರಷ್ಟು ಉದ್ಯೋಗಿಗಳಿಗೆ ವೇತನವನ್ನು ಮುಂದೂಡಿದೆ. ಆದರೆ ಈಗ ಸೆಪ್ಟೆಂಬರ್ 4ರವರೆಗೆ ಉದ್ಯೋಗಿಗಳಿಗೆ ವೇತನ ನೀಡಲಾಗದು ಎಂದು ಡೊನ್ಜೊ ಹೇಳಿಕೊಂಡಿದೆ. ವೇತನ ಏರಿಕೆಯನ್ನು ಕೂಡಾ ಮುಂದೂಡಿಕೆ ಮಾಡಲಾಗಿದೆ ಎಂಬ ಮಾಹಿತಿಯೂ ಇದೆ.
ಅರ್ಧದಷ್ಟು ಉದ್ಯೋಗಿಗಳಿಗೆ ಜೂನ್‌ನಲ್ಲಿಲ್ಲ ವೇತನ
ಸಂಸ್ಥೆಯಲ್ಲಿ ನಗದು ಕೊರತೆ ಕಾಣಿಸಿಕೊಂಡ ಬೆನ್ನಲ್ಲೇ ಡೊನ್ಜೊ ಸಂಸ್ಥೆಯು ಜೂನ್‌ನಲ್ಲಿ ಅರ್ಧದಷ್ಟು ಉದ್ಯೋಗಿಗಳಿಗೆ ವೇತನವನ್ನು ನೀಡಿಲ್ಲ ಎಂದು ಈ ಹಿಂದೆ ವರದಿ ಆಗಿತ್ತು. ಅತೀ ಹೆಚ್ಚು ಬೇಡಿಕೆಯನ್ನು ಹೊಂದಿರುವ ಡೆಲಿವರಿ ಸಂಸ್ಥೆಯು ಸುಮಾರು 1000 ಉದ್ಯೋಗಿಗಳನ್ನು ಹೊಂದಿದೆ. ಈ ಪೈಕಿ ಸುಮಾರು 500 ಉದ್ಯೋಗಿಗಳಿಗೆ ಡೊನ್ಜೊ ಜೂನ್ ತಿಂಗಳ ವೇತನವನ್ನು ಮುಂದಿನ ತಿಂಗಳಿನಲ್ಲಿ ನೀಡುವುದಾಗಿ ಈ ತಿಂಗಳ ಆರಂಭದಲ್ಲಿ ತಿಳಿಸಿದೆ. ಗರಿಷ್ಠವೆಂದರೆ ಉದ್ಯೋಗಿಗಳಿಗೆ 75,000 ರೂಪಾಯಿಯನ್ನು ವೇತನವಾಗಿ ನೀಡಲಾಗುತ್ತದೆ ಎಂದು ವರದಿಯು ಹೇಳುತ್ತದೆ.
ಮೂರನೇ ಹಂತದ ಉದ್ಯೋಗ ಕಡಿತ?
ಲಾಜಿಸ್ಟಿಕ್ಸ್ ಆಂಡ್ ಡೆಲಿವರಿ ಪ್ಲಾಟ್‌ಫಾರ್ಮ್ ಆದ ಡೊನ್ಜೊ ಈ ಹಿಂದೆ ಒಟ್ಟು ಎರಡು ಬಾರಿ ಉದ್ಯೋಗ ಕಡಿತವನ್ನು ಮಾಡಿದೆ. ಈಗ ಮತ್ತೆ ಮೂರನೇ ಹಂತದ ಉದ್ಯೋಗ ಕಡಿತ ಮಾಡುವ ಸಾಧ್ಯತೆ ಕಂಡು ಬಂದಿದೆ. ಈ ಹಿಂದೆ ಈ ವರ್ಷದ ಮೊದಲಾರ್ಧದಲ್ಲಿ 400 ಮಂದಿಯನ್ನು ಉದ್ಯೋಗದಿಂದ ತೆಗೆದುಹಾಕಿದೆ. ಏಪ್ರಿಲ್‌ನಲ್ಲಿ 75 ಮಿಲಿಯನ್ ಯುಎಸ್ ಡಾಲರ್‌ಗೆ ಏರಿಕೆಯಾದ ಬಳಿಕ ಸಂಸ್ಥೆಯು ಮತ್ತೆ ಶೇಕಡ 30ರಷ್ಟು ಉದ್ಯೋಗ ಕಡಿತವನ್ನು ಮಾಡಿದೆ.
ಮಾಹಿತಿ ಪ್ರಕಾರ ಈಗ ಡೊನ್ಜೊ ಮೂರನೇ ಹಂತದ ಉದ್ಯೋಗ ಕಡಿತ ಮಾಡುವ ಸಾಧ್ಯತೆಯಿದೆ. ಅದು ಕೂಡಾ ಈ ತಿಂಗಳಿನಲ್ಲೇ!. ಎರಡನೇ ಹಂತದ ಉದ್ಯೋಗ ಕಡಿತವನ್ನು ಮಾಡಿದ ಬಳಿಕ ಸಂಸ್ಥೆಯ ಸಿಇಒ ಕಬೀರ್ ಬಿಸ್ವಾಸ್ ಸಂಸ್ಥೆಯು ದೇಶದಲ್ಲಿ ಸುಮಾರು ಅರ್ಧದಷ್ಟು ಡಾರ್ಕ್ ಸ್ಟೋರ್‌ಗಳನ್ನು ಬಂದ್ ಮಾಡಲಿದೆ ಎಂದು ತಿಳಿಸಿದ್ದಾರೆ. ಹಲವಾರು ಸಂಸ್ಥೆಗಳು ಇತರೆ ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಉದ್ಯೋಗ ಕಡಿತ ಮಾಡುತ್ತಿದೆ, ಈ ನಡುವೆ ಡೊನ್ಜೊಗೆ ವೇತನ ನೀಡಲೂ ಕಷ್ಟವಾಗಿರುವಾಗ ಮತ್ತೆ ಉದ್ಯೋಗ ಕಡಿತ ನಡೆಯಬಹುದು ಎಂಬ ಮಾಹಿತಿಯಿದೆ.
ಹಣಕಾಸು ವರ್ಷ 2021-22ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಹಣಕಾಸು ದಾಖಲೆಗಳು 67.7 ಕೋಟಿ ರೂಪಾಯಿಯ ಒಟ್ಟು ಆದಾಯವನ್ನು ನೋಂದಾಯಿಸಿದ್ದರೂ, ವೆಚ್ಚಗಳು 531.7 ಕೋಟಿ ರೂಪಾಯಿ ಆಗಿದೆ ಎಂದು ತೋರಿಸುತ್ತದೆ ಎಂದು ವರದಿಯಾಗಿದೆ. ಕಂಪನಿಯು 464 ಕೋಟಿ ರೂಪಾಯಿಗಳ ನಷ್ಟವನ್ನು ಕೂಡಾ ಕಂಡಿದೆ. ಇದು ಹಿಂದಿನ ವರ್ಷಕ್ಕಿಂತ ಎರಡು ಪಟ್ಟು ನಷ್ಟವಾಗಿದೆ.
ಸಂಸ್ಥೆಗೆ ಅತೀ ದೊಡ್ಡ ಖರ್ಚು ಉದ್ಯೋಗಳಿಗೆ ನೀಡುವ ಪ್ರಯೋಜನಗಳು ಆಗಿದೆ. ಉದ್ಯೋಗಿಗಳಿಗೆ ನೀಡುವ ಪ್ರಯೋಜನಗಳಿಗಾಗಿ ಸಂಸ್ಥೆಯು 138 ಕೋಟಿ ರೂಪಾಯಿ ಖರ್ಚು ಮಾಡುತ್ತದೆ. ಖರ್ಚುಗಳ ವಿಚಾರಕ್ಕೆ ಬಂದಾಗ ಜಾಹೀರಾತಿಗೆ ತಗುಲುವ ಖರ್ಚು ಎರಡನೇ ಸ್ಥಾನದಲ್ಲಿದೆ. ಸಂಸ್ಥೆಯು ಜಾಹೀರಾತಿಗಾಗಿ 64.4 ಕೋಟಿ ರೂಪಾಯಿ ವೆಚ್ಚ ಮಾಡುತ್ತದೆ. ಪ್ರಸ್ತುತ ರಿಲಯನ್ಸ್ ರಿಟೇಲ್ ಡೊನ್ಜೊದ ಶೇಕಡ 25.8ರಷ್ಟು ಮತ್ತು ಗೂಗಲ್ ಶೇಕಡ 20ರಷ್ಟು ಪಾಲುದಾರಿಕೆಯನ್ನು ಹೊಂದಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications