ಆಗಸ್ಟ್ 1 ರೊಳಗೆ ಇ ಕಾಮರ್ಸ್ ಕಂಪನಿಗಳು ಇದನ್ನು ಮಾಡಲೇಬೇಕು

ಇ ಕಾಮರ್ಸ್ ಕಂಪನಿಗಳು ತಮ್ಮ ವೆಬ್‌ಸೈಟ್‌ಗಳಲ್ಲಿ ಉತ್ಪನ್ನಗಳು ಯಾವ ದೇಶದಲ್ಲಿ ತಯಾರಾಗಿದ್ದಾವೆ ಎಂಬುದನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಕೇಂದ್ರ ಸರ್ಕಾರ ಆದೇಶಿಸಿತ್ತು. ಈಗ ಇ ಕಾಮರ್ಸ್ ಕಂಪನಿಗಳು ಆದೇಶವನ್ನು ಜಾರಿಗೆ ತರಲು ಕೇಂದ್ರ ಗಡುವು ನೀಡಿದೆ.

ಇ ಕಾಮರ್ಸ್ ಕಂಪನಿಗಳು ಆಗಸ್ಟ್ 1 ರೊಳಗೆ ಉತ್ಪನ್ನಗಳ ಮಾಹಿತಿ ಜೊತೆಗೆ ಆ ಉತ್ಪನ್ನ ತಯಾರಾಗುವ ದೇಶದ ಹೆಸರಿನ ಲೇಬಲ್ ಹಾಕಬೇಕು ಎಂದು ಆದೇಶ ಮಾಡಿದೆ. ಈಗಾಗಲೇ ಸಂಗ್ರಹಿಸಿರುವ ವಸ್ತುಗಳಿಗೂ ಅಕ್ಟೋಬರ್‌ 1ರೊಳಗೆ ಮೂಲದ ಬಗ್ಗೆ ಲೇಬಲ್‌ ಹಚ್ಚಬೇಕು ಎಂದು ತಿಳಿಸಿದೆ. ಈ ಕುರಿತು ಇ ಕಾಮರ್ಸ್ ಕಂಪನಿಗಳೊಂದಿಗೆ ವಾಣಿಜ್ಯ ಇಲಾಖೆ ಸಭೆ ನಡೆಸಿದೆ. ಆದರೆ, ಗಡುವಿಗೆ ಇನ್ನಷ್ಟು ಕಾಲಾವಕಾಶವನ್ನು ಕಂಪನಿಗಳು ಕೇಳಿವೆ ಎಂಬುದು ತಿಳಿದು ಬಂದಿದೆ.

ಅನೇಕ ಉತ್ಪನ್ನಗಳು ಉತ್ಪಾದನೆ ಮತ್ತು ವಿತರಣೆಯ ನಾನಾ ಹಂತಗಳಲ್ಲಿ ಇರುವುದರಿಂದ ಕಾಲಾವಕಾಶವನ್ನು ಕಂಪನಿಗಳು ಕೋರಿವೆ. ಹೀಗಾಗಿ ಅಂತಿಮ ಗಡುವನ್ನು ಸರಕಾರ ಮುಂಬರುವ ದಿನಗಳಲ್ಲಿ ವಿಧಿಸಲಿದೆ.

ಆಗಸ್ಟ್ 1 ರೊಳಗೆ ಇ ಕಾಮರ್ಸ್ ಕಂಪನಿಗಳು ಇದನ್ನು ಮಾಡಲೇಬೇಕು

ನಿಯಮಾವಳಿಗಳ ಪ್ರಕಾರ ಪ್ಯಾಕೇಜ್‌ ಮಾಡದೆ ಮಾರುವ ಪದಾರ್ಥಗಳ ಮೇಲೆ ಯಾವ ರಾಷ್ಟ್ರದ ಮೂಲ ಎಂದು ದಾಖಲಿಸಬೇಕಾಗಿಲ್ಲ. ಬದಲಾದ ಸನ್ನಿವೇಶದಲ್ಲಿ ಏನು ಮಾಡಬಹುದು ಎಂಬುದರ ಬಗ್ಗೆ ಕೈಗಾರಿಕಾಭಿವೃದ್ಧಿ ಮಂಡಳಿ (ಡಿಪಿಐಐಟಿ) ಪರಿಶೀಲಿಸಲಿದೆ. ಫ್ಲಿಪ್‌ಕಾರ್ಟ್‌ ಆಗಸ್ಟ್‌ 15ರ ತನಕ ಹಾಗೂ ಅಮೆಜಾನ್‌ 2-3 ತಿಂಗಳು ಕಾಲಾವಕಾಶ ಕೋರಿದೆ ಎಂದು ವರದಿಯಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+