ಅಮೆಜಾನ್ ನಿಂದ ಇನ್ನು ಮುಂದೆ ಮಾತ್ರೆ, ಔಷಧಗಳು ಸಹ ಮನೆ ಬಾಗಿಲಿಗೆ ಡೆಲಿವರಿ ಆಗಲಿದೆ. ಮಂಗಳವಾರದಂದು ಯುನೈಟೆಡ್ ಸ್ಟೇಟ್ಸ್ ನಲ್ಲಿ ಆನ್ ಲೈನ್ ಫಾರ್ಮಸಿ ಆರಂಭಿಸಿದೆ ಅಮೆಜಾನ್. ಫೋನ್ ನಲ್ಲೇ ಆರ್ಡರ್ ಮಾಡಿದರೆ ಕೆಲ ದಿನಗಳಲ್ಲೇ ಮನೆ ಬಾಗಿಲಿಗೆ ಔಷಧಿಗಳು ಡೆಲಿವರಿ ಆಗುತ್ತವೆ; ಪುಸ್ತಕ, ಮೊಬೈಲ್ ಫೋನ್ ಗಳ ರೀತಿಯಲ್ಲಿ.
ಈ ಮೂಲಕ ಅಮೆಜಾನ್ ಹೊಸ ವ್ಯವಹಾರಕ್ಕೆ ಕಾಲಿರಿಸಿದೆ. ಫಾರ್ಮಾಸ್ಯುಟಿಕಲ್ ಉದ್ಯಮಕ್ಕೆ ಅದೇನು ಸವಾಲು ಕಾದಿದೆಯೋ? ಪುಸ್ತಕದಿಂದ ಬೊಂಬೆ ಹಾಗೂ ದಿನಸಿ ತನಕ ಹಲವಾರು ಉತ್ಪನ್ನಗಳ ಮಾರಾಟ ಮಾಡುತ್ತದೆ ಅಮೆಜಾನ್.
ಸಾಮಾನ್ಯವಾಗಿ ವೈದ್ಯರು ಸೂಚಿಸುವ ಔಷಧಗಳನ್ನು ಮಾರಾಟ ಮಾಡಲು ಆರಂಭಿಸಲಾಗುತ್ತದೆ. ಅದರಲ್ಲಿ ಕ್ರೀಮ್ ಗಳು, ಮಾತ್ರೆ ಹಾಗೂ ಇನ್ಸುಲಿನ್ ಮೊದಲಾದವು ಒಳಗೊಂಡಿರುತ್ತವೆ. ಯಾರು ಖರೀದಿ ಮಾಡಬೇಕು ಎಂದಿರುತ್ತಾರೋ ಅವರಿಗೆ ಅಮೆಜಾನ್ ವೆಬ್ ಸೈಟ್ ನಲ್ಲಿ ಪ್ರೊಫೈಲ್ ಹೊಂದಿರಬೇಕು. ವೈದ್ಯರು ನೀಡುವ ಸೂಚನಾ ಚೀಟಿ ಇರಬೇಕು.

ಬಹುತೇಕ ಇನ್ಷೂರೆನ್ಸ್ ಗಳನ್ನು ಸ್ವೀಕರಿಸಲಾಗುವುದು ಎಂದು ಅಮೆಜಾನ್ ಹೇಳಿದೆ. ಆದರೆ ಪ್ರೈಮ್ ಸದಸ್ಯರಾಗಿದ್ದು ಇನ್ಷೂರೆನ್ಸ್ ಇಲ್ಲದಿದ್ದಲ್ಲಿ ಜೆನೆರಿಕ್ ಅಥವಾ ಬ್ರ್ಯಾಂಡ್ ಹೆಸರಿನ ಔಷಧವನ್ನು ಅಮೆಜಾನ್ ನಿಂದ ರಿಯಾಯಿತಿಯಲ್ಲಿ ಪಡೆಯಬಹುದು. ಹೆಲ್ತ್ ಕೇರ್ ವಲಯದ ಮೇಲೆ ಕಣ್ಣಿರಿಸಿದ ಅಮೆಜಾನ್ ಎರಡು ವರ್ಷದ ಕೆಳಗೆ ಆನ್ ಲೈನ್ ಫಾರ್ಮಸಿ ಪಿಲ್ ಪ್ಯಾಕ್ ಖರೀದಿಸಲು 750 ಮಿಲಿಯನ್ ಡಾಲರ್ ವೆಚ್ಚ ಮಾಡಿತ್ತು.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications