ತಬ್ಲಿಘಿ ಜಮಾತ್ ನ ಮೌಲಾನಾ ಸಾದ್ ಕಂಧಲ್ವಿ ವಿರುದ್ಧ ED ಕೇಸ್

ಜಾರಿ ನಿರ್ದೇಶನಾಲಯವು (ಇ.ಡಿ.) ತಬ್ಲಿಘಿ ಜಮಾತ್ ನಾಯಕ ಮೌಲಾನಾ ಸಾದ್ ಕಂಧಲ್ವಿ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದೆ. ದೆಹಲಿ ಪೊಲೀಸ್ ಎಫ್ ಐಆರ್ ಆಧಾರದ ಮೇಲೆ Enforcement Case Information Report (ECIR) ದಾಖಲಿಸಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ ಪೊಲೀಸ್ ಅಪರಾಧ ವಿಭಾಗದದಿಂದ ಮಾರ್ಚ್ 31ರಂದು ಏಳು ಮಂದಿ ವಿರುದ್ಧ ಎಫ್ ಐಆರ್ ದಾಖಲಾಗಿತ್ತು. ಅದರಲ್ಲಿ ಮೌಲ್ವಿ ವಿರುದ್ಧವೂ ದೂರು ದಾಖಲಾಗಿದೆ. ನಿಜಾಮುದ್ದೀನ್ ಠಾಣಾಧಿಕಾರಿ ನೀಡಿದ ದೂರಿನ ಅನ್ವಯ ಈ ಕ್ರಮ ಜರುಗಿಸಲಾಗಿದೆ. ತಬ್ಲಿಘಿ ಜಮಾತ್ ಅನುಯಾಯಿಗಳ ಸಬೆ ಏರ್ಪಡಿಸಿದ್ದರಿಂದ, ಆ ಮೂಲಕ ಕೊರೊನಾ ವೈರಾಣು ಹಬ್ಬದಿರುವಂತೆ ಆದೇಶ ನೀಡಿದ್ದನ್ನು ಉಲ್ಲಂಘಿಸಲಾಗಿದೆ ಎಂದು ಆರೋಪ ಮಾಡಲಾಗಿದೆ.

ತಬ್ಲಿಘಿ ಜಮಾತ್ ನ ಮೌಲಾನಾ ಸಾದ್ ಕಂಧಲ್ವಿ ವಿರುದ್ಧ ED ಕೇಸ್

ಕೊರೊನಾ ವೈರಾಣು ಹಬ್ಬದಿರುವಂತೆ ಎಚ್ಚರಿಕೆ ಕೈಗೊಳ್ಳುತ್ತಿದ್ದ ಅವಧಿಯಲ್ಲಿ ತಬ್ಲಿಘಿ ಜಮಾತ್ ನಿಂದ ಸಭೆ ಆಯೋಜಿಸಲಾಗಿತ್ತು. ಅದರಲ್ಲಿ ಭಾಗವಹಿಸಿದ್ದವರ ಮೂಲಕ ಹೆಚ್ಚಿನ ಮಂದಿಗೆ ಕೊರೊನಾ ಹಬ್ಬಿದೆ ಎಂಬುದು ದೇಶದಾದ್ಯಂತ ಕೇಳಿಬರುತ್ತಿರುವ ಆರೋಪ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+