ಕರ್ನಾಟಕ ಗೃಹಸಚಿ ಡಾ. ಜಿ.ಪರಮೇಶ್ವರ್‍ಗೆ ಇಂದು ಕೂಡ ಇ.ಡಿ ಕಂಟಕದಿಂದ ಮುಕ್ತಿ ಸಿಕ್ಕಿಲ್ಲ. ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಇದೊಂದು ಬೃಹತ್ ಬೆಳವಣಿಗೆಯಾಗಿದೆ. ಇ.ಡಿ ಅಧಿಕಾರಿಗಳು ನಿನ್ನೆಯಿಂದ ಡಾ. ಜಿ. ಪರಮೇಶ್ವರ ಅವರ ಸಂಬಂಧಿತ ಶಿಕ್ಷಣ ಸಂಸ್ಥೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು, ಪ್ರಕರಣವು ರಾಜಕೀಯ ತಿರುವು ಪಡೆಯುವ ಸಾಧ್ಯತೆಯತ್ತ ಹೆಜ್ಜೆಹಾಕುತ್ತಿದೆ.

EDಗೆ ಲಭ್ಯವಾದ ಮಾಹಿತಿ ಏನು?
ಇ.ಡಿಗೆ ಲಭ್ಯವಾದ ಮೂಲ ಮಾಹಿತಿಗಳ ಪ್ರಕಾರ, ಶಂಕಿತ ಹಣಕಾಸು ಅಕ್ರಮ ವ್ಯವಹಾರದಲ್ಲಿ ಒಂದು ಶೈಕ್ಷಣಿಕ ಟ್ರಸ್ಟ್‌ನಿಂದ ₹40 ಲಕ್ಷ ರನ್ಯಾ ರಾವ್ ಅವರ ಕ್ರೆಡಿಟ್ ಕಾರ್ಡ್ ಬಿಲ್‌ಗಳಿಗೆ ಪಾವತಿಸಲ್ಪಟ್ಟಿದೆ ಎಂಬ ವಿಚಾರ ED ನ ತನಿಖೆಗಾಗಿ ಪ್ರಮುಖ ಅಂಶವಾಗಿದೆ. ಈ ಹಣದ ಮೂಲ ಏನು? ಅದರ ಲೆಕ್ಕಪತ್ರದಲ್ಲಿ ಪೂರೈಕೆ ಹೇಗೆ? ಎಂಬುದರ ಬೆನ್ನಟ್ಟಿದಾಗ ಡಾ. ಪರಮೇಶ್ವರ ಅವರ ಸಂಸ್ಥೆಗಳ ಮೇಲೆ ಶೋಧ ನಡೆಸಲು ನಿರ್ಧರಿಸಿತು ಎನ್ನಲಾಗುತ್ತಿದೆ.
ಶೋಧ ನಡೆದ ಶಿಕ್ಷಣ ಸಂಸ್ಥೆಗಳು:
ಬುಧವಾರದಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತುಮಕೂರಿನ ಸಿದ್ಧಾರ್ಥ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸಿದ್ಧಾರ್ಥ ವೈದ್ಯಕೀಯ ಕಾಲೇಜು, ಹಾಗೂ ಬೇಗೂರಿನ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿದರು. ಶೋಧದ ದಿನದಂದು ಸಂಸ್ಥೆಗಳ ಲೆಕ್ಕಪತ್ರ ವಿಭಾಗದ ಸಿಬ್ಬಂದಿಗೆ ಪ್ರಶ್ನೆಗಳನ್ನು ಎಡವಿದ್ದ ಇಡಿ ಅಧಿಕಾರಿಗಳು, ಇನ್ನೂ ತನಿಖೆ ಮುಂದುವರೆದಿರುವುದಾಗಿ ತಿಳಿದುಬಂದಿದೆ.
ಪರಮೇಶ್ವರ್ ಹೇಳಿದ್ದೇನು?
ಇನ್ನು ಈ ವಿಚಾರದ ಬಗ್ಗೆ ಗೃಹಸಚಿವ ಡಾ. ಜಿ.ಪರಮೇಶ್ವರ್ ಕೊನೆಗೂ ಮೌನ ಮುರಿದಿದ್ದಾರೆ. ನಾನು ದೇಶದ ಕಾನೂನಿನಲ್ಲಿ ನಂಬಿಕೆ ಇಟ್ಟ ವ್ಯಕ್ತಿ. ತನಿಖಾ ಸಂಸ್ಥೆ ಏನೇ ವಿಚಾರಣೆ ನಡೆಸಲಿ, ನಾನು ಶತಪ್ರತಿಶತ ಸಹಕರಿಸುತ್ತೇನೆ ಎಂದು ಸ್ಪಷ್ಟಪಡಿಸಿದರು. ಇವರ ಈ ಹೇಳಿಕೆ ಇಡಿ ಶೋಧದ ಹಿಂದೆ ರಾಜಕೀಯ ಪ್ರೇರಣೆ ಇದೆ ಎಂಬ ವಾದಗಳಿಗೆ ಪ್ರತಿಕ್ರಿಯೆಯಾಗಿ ವಿಶ್ಲೇಷಿಸಲಾಗುತ್ತಿದೆ ಎಂದಿದ್ದಾರೆ.
ರನ್ಯಾ ರಾವ್ ಪ್ರಕರಣದಿಂದ ಉಂಟಾದ ನಡುಕ:
ಈ ಎಲ್ಲಾ ಬೆಳವಣಿಗೆಗಳಿಗೆ ಕೇಂದ್ರ ಬಿಂದುವಾಗಿರುವುದು ಕನ್ನಡ ಚಿತ್ರರಂಗದ ನಟಿ ರನ್ಯಾ ರಾವ್ ವಿರುದ್ಧದ ಚಿನ್ನದ ಕಳ್ಳಸಾಗಣೆ ಹಾಗೂ ಹಣಕಾಸು ಅಕ್ರಮ ವರ್ಗಾವಣೆ ಪ್ರಕರಣ. ಮಾರ್ಚ್ 3 ರಂದು ದುಬೈನಿಂದ ಬೆಂಗಳೂರಿಗೆ ಬಂದಿದ್ದ ರನ್ಯಾ ರಾವ್ ಅವರನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ DRI ಅಧಿಕಾರಿಗಳು ಬಂಧಿಸಿ, 14.2 ಕಿಲೋಗ್ರಾಂ ಚಿನ್ನ ಮತ್ತು ಸುಮಾರು ₹12.56 ಕೋಟಿ ಮೌಲ್ಯದ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದರು.
ಅದಕ್ಕೂ ಮುನ್ನ ಹಲವು ನಕಲಿ ಹಣ ವರ್ಗಾವಣೆಗಳನ್ನು ರವಾನಿಸುತ್ತಿದ್ದ ಹವಾಲಾ ಮಾಸ್ತರ್‌ಗಳು ಹಾಗೂ ಅಕ್ರಮ ವಸತಿ ದಲಾಲರು, ರನ್ಯಾ ರಾವ್ ಅವರ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡುತ್ತಿದ್ದರೂ ಎಂಬ ಆಧಾರದ ಮೇಲೆ ED ಅಧಿಕಾರಿಗಳು PMLA (Prevention of Money Laundering Act) ಅಡಿಯಲ್ಲಿ ತನಿಖೆ ಆರಂಭಿಸಿದ್ದರು.
ರಾಜಕೀಯ ಪ್ರತಿಕ್ರಿಯೆ: ಕಾಂಗ್ರೆಸ್ ಕಿಡಿಕಾರಿಕೆ
ಈ ಎಲ್ಲಾ ಬೆಳವಣಿಗೆಗಳನ್ನು ಕೇಂದ್ರ ಸರ್ಕಾರದ ರಾಜಕೀಯ ಸೇಡು ಎಂದು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್, "ಇಡಿಯನ್ನು ಮೋದಿ ನೇತೃತ್ವದ ಸರ್ಕಾರ ಕಿರುಕುಳದ ಅಸ್ತ್ರವಾಗಿ ಬಳಸುತ್ತಿದೆ" ಎಂದು ಆರೋಪಿಸಿದೆ. ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್, "ಡಾ. ಜಿ. ಪರಮೇಶ್ವರ ಅವರು ಸಮಾಜದ ಬಡವರಲ್ಲಿ ಶಿಕ್ಷಣ ಪ್ರಚಾರಕ್ಕಾಗಿ ಅಮೂಲ್ಯ ಕೊಡುಗೆ ನೀಡಿದ ಹಿರಿಯ ನಾಯಕರು. ಅವರಂತಹ ವ್ಯಕ್ತಿಗಳ ಮೇಲೆ ಇಡಿಗೆ ದಾಳಿ ನಡೆಸುವುದು, ಇದು ಶುದ್ಧ ರಾಜಕೀಯ ಸೇಡು" ಎಂದು ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅವರು ಮುಂದುವರೆದು, "ಕರ್ನಾಟಕ ಸರ್ಕಾರ ಕಳೆದ ಎರಡು ವರ್ಷಗಳಲ್ಲಿ ಸಾಧಿಸಿರುವ ಅಭಿವೃದ್ಧಿಯಿಂದ ಬಿಜೆಪಿ ತೀವ್ರವಾಗಿ ಕಳವಳಗೊಂಡಿದೆ. ಇಡಿಯನ್ನು ರಾಜಕೀಯ ಹತ್ತಿಕ್ಕುವ ಉಪಾಯವಾಗಿ ಬಳಸಲಾಗುತ್ತಿದೆ. ನಾವು ಮೌನವಿಲ್ಲ. ಪ್ರಧಾನಿ ಮೋದಿ ಅವರ ವೈಫಲ್ಯಕ್ಕೆ ಅವರನ್ನು ಹೊಣೆ ಮಾಡುತ್ತೇವೆ" ಎಂದಿದ್ದಾರೆ.
ಕಾನೂನು ಪ್ರಕ್ರಿಯೆ ಮುಂದುವರಿದಂತೆಯೇ:
ಈ ನಡುವೆ, COFEPOSA ಅಡಿಯಲ್ಲಿ ರನ್ಯಾ ರಾವ್ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿರುವ ಅಧಿಕಾರಿಗಳು, ಪ್ರಕರಣದ ಗಂಭೀರತೆಗೆ ತಕ್ಕಂತೆ ನಿರ್ಣಯ ತೆಗೆದುಕೊಳ್ಳುತ್ತಿದ್ದಾರೆ. ಈ ಕಾಯ್ದೆಯಡಿ ಆರೋಪಿಗಳ ವಿರುದ್ಧ ಪೂರ್ವ ವಿಚಾರಣೆ ಇಲ್ಲದೇ ಒಂದು ವರ್ಷದವರೆಗೆ ಬಂಧಿಸುವ ಸಾಧ್ಯತೆ ಇದ್ದು, ಆಧಾರ ಸಿಕ್ಕಿದರೆ ಅಧಿಕೃತ ಜಾಮೀನು ಬಂದರೂ ಆರೋಪಿಗೆ ಮುಕ್ತಿಯಿಲ್ಲ ಎಂಬ ಹಂತವಿದೆ.
ಆರ್ಥಿಕ ಅಪರಾಧಗಳ ನ್ಯಾಯಾಲಯ ಈಚೆಗೆ ರನ್ಯಾ ರಾವ್ ಹಾಗೂ ಸಹಆರೋಪಿ ತರುಣ್ ರಾಜು ಅವರಿಗೆ ಷರತ್ತುಬದ್ಧ ಜಾಮೀನು ನೀಡಿದರೂ, COFEPOSA ಅಡಿಯಲ್ಲಿ ಕ್ರಮ ಕೈಗೊಂಡಿರುವುದರಿಂದ ರನ್ಯಾ ಇನ್ನೂ ಜೈಲಿನಲ್ಲೇ ಉಳಿಯುತ್ತಿದ್ದಾರೆ.
ಅಂದಹಾಗೆ ರನ್ಯಾ ರಾವ್ ಪ್ರಕರಣ ಒಂದು ಕಲಾವಿದೆಯ ವಿರುದ್ಧದ ಕಳ್ಳಸಾಗಣೆ ಆರೋಪದಿಂದ ಆರಂಭವಾಗಿ, ಇದೀಗ ರಾಜ್ಯದ ಗೃಹ ಸಚಿವರವರ ಶಿಕ್ಷಣ ಸಂಸ್ಥೆಗಳ ತನಿಖೆವರೆಗೂ ಬೃಹತ್ ತಿರುವು ಪಡೆದುಕೊಂಡಿದೆ. ಇದರ ಹಿಂದೆ ನಿಜಕ್ಕೂ ಹಣಕಾಸು ಅಕ್ರಮ ಸಂಬಂಧವಿದೆಯಾ? ಅಥವಾ ಇದು ರಾಜಕೀಯ ಪ್ರತೀಕಾರದ ಭಾಗವೇ? ಎಂಬ ಪ್ರಶ್ನೆಗೆ ಉತ್ತರ ಸದ್ಯಕ್ಕೆ ನಿರೀಕ್ಷೆಯಲ್ಲಿದೆ. ಆದರೂ, ತನಿಖಾ ಸಂಸ್ಥೆ ಗಂಭೀರವಾಗಿ ಮುಂದುವರೆದಿರುವ ಪ್ರಸ್ತುತ ಸ್ಥಿತಿಯಲ್ಲಿ, ಈ ಪ್ರಕರಣ ರಾಜ್ಯ ರಾಜಕಾರಣದ ಕೇಂದ್ರಬಿಂದುವಾಗುವುದು ಖಚಿತ.


Click it and Unblock the Notifications