ಮನಿ ಲಾಂಡರಿಂಗ್ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು ಮಂಗಳವಾರ ಹೀರೋ ಮೋಟೋಕಾರ್ಪ್ ಕಾರ್ಯನಿರ್ವಾಹಕ ಅಧ್ಯಕ್ಷ ಪವನ್ ಮುಂಜಾಲ್ ಮತ್ತು ಇತರರ ನಿವಾಸ ಮತ್ತು ಕಟ್ಟಡಗಳ ಮೇಲೆ ದಾಳಿ ಮಾಡಿ, ಶೋಧ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಪ್ರಮುಖವಾಗಿ ದೆಹಲಿ ಮತ್ತು ಇತರೆ ಪ್ರದೇಶದಲ್ಲಿ ಈ ಶೋಧ ಕಾರ್ಯಾಚರಣೆಯನ್ನು ನಡೆಸಲಾಗಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ನಿಬಂಧನೆಗಳ ಅಡಿಯಲ್ಲಿ ದೆಹಲಿ ಹಾಗೂ ಗುರುಗ್ರಾಮದಲ್ಲಿರುವ ಹೀರೋ ಮೋಟೋಕಾರ್ಪ್ ಸಂಬಂಧಿತ ಕಚೇರಿಗಳ ಮೇಲೆ ಇಡಿ ದಾಳಿಯನ್ನು ನಡೆಸಿದೆ, ಶೋಧ ಮಾಡಿದೆ ಎಂದು ವರದಿಯು ಹೇಳಿದೆ. ವಿದೇಶಿ ಕರೆನ್ಸಿಯನ್ನು ಸಾಗಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬರ ತನಿಖೆಯನ್ನು ನಡೆಸಲಾಗಿದ್ದು, ಮುಂಜಾಲ್‌ಗೆ ನಿಕಟವಾದ ವ್ಯಕ್ತಿಯಾದ ಕಾರಣ ಮುಂಜಾಲ್ ಮನೆ, ಕಚೇರಿ ಮೇಲೆಯೂ ದಾಳಿ ನಡೆಸಲಾಗಿದೆ.

ಕಳೆದ ವರ್ಷದಲ್ಲಿ ದಾಳಿ ನಡೆಸಿದ್ದ ಇಡಿ
ತೆರಿಗೆ ವಂಚನೆ ಪ್ರಕರಣದ ತನಿಖೆಯ ಭಾಗವಾಗಿ ಕಳೆದ ವರ್ಷ ಮಾರ್ಚ್‌ನಲ್ಲಿ ಆದಾಯ ತೆರಿಗೆ ಇಲಾಖೆಯು ಹೀರೋ ಮೋಟೋಕಾರ್ಪ್ ಕಾರ್ಯನಿರ್ವಾಹಕ ಅಧ್ಯಕ್ಷ ಪವನ್ ಮುಂಜಾಲ್ ಮತ್ತು ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟಾರ್‌ಕಾರ್ಪ್ ಮೇಲೆ ದಾಳಿ ನಡೆಸಿತ್ತು.
ಕಂಪನಿಯ ಷೇರು ಕುಸಿತ
ಹೀರೋ ಮೋಟೋಕಾರ್ಪ್ ಕಾರ್ಯನಿರ್ವಾಹಕ ಅಧ್ಯಕ್ಷ ಪವನ್ ಮುಂಜಾಲ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯವು ದಾಳಿಯನ್ನು ನಡೆಸುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಸಂಸ್ಥೆಯ ಷೇರು ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. ಮೋಟೋಕಾರ್ಪ್ ಷೇರು ಪ್ರಪಾತಕ್ಕೆ ಇಳಿಯುತ್ತಿದೆ.
ದಾಳಿಯ ಸುದ್ದಿಯಾಗುತ್ತದ್ದಂತೆ ಹೀರೋ ಮೋಟೋಕಾರ್ಪ್ ಸ್ಟಾಕ್ ಬಿಎಸ್‌ಇಯಲ್ಲಿ ಸುಮಾರು ಶೇಕಡ 5.34 ರಷ್ಟು ಇಳಿಕೆಯಾಗಿ, 3,032.10 ರೂಪಾಯಿಗೆ ತಲುಪಿದೆ. ಆದರೆ ನಾವು ವರ್ಷದಿಂದ ವರ್ಷಕ್ಕೆ ನೋಡಿದಾಗ ಈ ಸಂಸ್ಥೆಯ ಷೇರು ಶೇಕಡ 13 ರಷ್ಟು ಏರಿಕೆಯನ್ನು ಕಂಡಿದೆ. ಇನ್ನು ಈ ಸಮಯಕ್ಕೆ ಷೇರು ಸುಮಾರು ಶೇಕಡ 3.07ರಷ್ಟು ಇಳಿಕೆಯಾಗಿ, 3,105.50 ರೂಪಾಯಿಗೆ ತಲುಪಿದೆ.
ಹೀರೋ ಮೋಟೋಕಾರ್ಪ್ 2001 ರಲ್ಲಿ ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕರಾಗಿ ಬೆಳೆದ ಸಂಸ್ಥೆಯಾಗಿದೆ. ಕಳೆದ 20 ಸತತ ವರ್ಷಗಳಿಂದಲೂ ಹೀರೋ ಮೋಟೋಕಾರ್ಪ್ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಕಂಪನಿಯು ಏಷ್ಯಾ, ಆಫ್ರಿಕಾ, ಮಧ್ಯ ಅಮೇರಿಕಾ, ಮತ್ತು ದಕ್ಷಿಣ ಮತ್ತು 40 ದೇಶಗಳಲ್ಲಿ ತನ್ನ ಅಸ್ತಿತ್ವವನ್ನು ಹೊಂದಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications