ಜಾಗತಿಕ ಶೈಕ್ಷಣಿಕ ಆಪ್ ಬೈಜುಸ್ ಉದ್ಯೋಗಿಗಳನ್ನು ವಜಾಗೊಳಿಸಿದೆ. ಕಳೆದ ಆರು ತಿಂಗಳಲ್ಲಿ ಎರಡನೇ ಬಾರಿಗೆ ಈ ನಿರ್ಧಾರವನ್ನು Byju's ತೆಗೆದುಕೊಂಡಿದೆ. ಹಾಗಾದರೆ, ಈ ಬಾರಿ ಎಷ್ಟು ನೌಕರರನ್ನು Byju's ತೆಗೆದುಹಾಕಿದೆ ಎಂಬುದರ ವರದಿ ಇಲ್ಲಿದೆ.
ಬೆಂಗಳೂರು, ಫೆಬ್ರವರಿ 02: ಜಾಗತಿಕ ಶೈಕ್ಷಣಿಕ ಆಪ್ ಬೈಜುಸ್ ಸುಮಾರು 1,500 ನಾಕರರನ್ನು ವಜಾಗೊಳಿಸಿದೆ ಎಂದು ತಿಳಿದುಬಂದಿದೆ. ಪ್ರಮುಖವಾಗಿ ವಿನ್ಯಾಸ, ಎಂಜಿನಿಯರಿಂಗ್ ಮತ್ತು ಉತ್ಪಾದನಾ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉದ್ಯೋಗಿಗಳನ್ನು ತೆಗೆದುಹಾಕಿದೆ. ಅಕ್ಟೋಬರ್‌ನಲ್ಲಿ, Byju's ಸುಮಾರು 2,500 ಉದ್ಯೋಗಿಗಳನ್ನು ತೆಗೆದುಹಾಕಿತ್ತು. ವೆಚ್ಚ ಕಡಿತ ಮತ್ತು ಕಾರ್ಯಾಚರಣೆಗಳ ಹೊರಗುತ್ತಿಗೆಯನ್ನು ಉಲ್ಲೇಖಿಸಿ Byju's ಸುಮಾರು 1,500 ಉದ್ಯೋಗಿಗಳನ್ನು ತೆಗೆದುಹಾಕಿದೆ.
Byju's ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ Byju ರವೀಂದ್ರನ್ ಅಕ್ಟೋಬರ್‌ನಲ್ಲಿ ಉದ್ಯೋಗಿಗಳಿಗೆ 2,500 ಸಿಬ್ಬಂದಿಯನ್ನು ಮೀರಿ ವಜಾಗೊಳಿಸುವುದಿಲ್ಲ ಎಂದು ಭರವಸೆ ನೀಡಿದ್ದರು.
Byju's ಕಂಪನಿಯು ಕಾರ್ಯಾಚರಣೆಗಳು, ಲಾಜಿಸ್ಟಿಕ್ಸ್, ಕಸ್ಟಮರ್ ಕೇರ್, ಎಂಜಿನಿಯರಿಂಗ್, ಮಾರಾಟ, ಮಾರ್ಕೆಟಿಂಗ್ ಮತ್ತು ಸಂವಹನ ಮತ್ತು ಇತರ ವಿಭಾಗಗಳ ಕೆಲವು ಕಾರ್ಯಗಳನ್ನು ಹೊರಗುತ್ತಿಗೆ ನೀಡಲು ಯೋಜಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

'ಪ್ರಸ್ತುತ ಉದ್ಯೋಗಿಗಳನ್ನು ವಜಾಗೊಳಿಸುವ ಮೊದಲು ಹೊಸ ಪಾಲುದಾರರ ಜೊತೆ ಕೈಜೋಡಿಸಬೇಕಿದೆ. ಹೀಗಾಗಿ ಆಡಳಿತವು ಬಯಸಿದ್ದರಿಂದ ವಜಾಗೊಳಿಸುವಿಕೆಗಳು ಈಗ ಮುಂದುವರಿದಿವೆ' ಎಂದು ತಿಳಿದುಬಂದಿದೆ.
ಉದ್ಯೋಗಗಳ ವಜಾಗೊಳಿಸುವಿಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಇಮೇಲ್ ಅಥವಾ ಇತರ ಯಾವುದೇ ಮಾಧ್ಯಮದ ಮೂಲಕ ಯಾವುದೇ ಆಂತರಿಕ ಸಂವಹನವಿಲ್ಲ. ಉದ್ಯೋಗಗಳನ್ನು ಕಚೇರಿಗೆ ಕರೆಸಲಾಯಿತು ಮತ್ತು ನೇರವಾಗಿ ಪಿಂಕ್ ಸ್ಲಿಪ್‌ಗಳನ್ನು ನೀಡಲಾಯಿತು ಎಂದು ವಜಾಗೊಂಡ ನೌಕರ ಮಾಹಿತಿ ನೀಡಿದ್ದಾರೆ.
'ಇದೀಗ, Byju's ಕಂಪನಿಯು ಹೆಚ್ಚಾಗಿ ವಾಟ್ಸಾಪ್ ಮೂಲಕ ಉದ್ಯೋಗಿಗಳೊಂದಿಗೆ ಸಂವಹನ ನಡೆಸುತ್ತಿದೆ. ಏಕೆಂದರೆ ಅವರು ಇಮೇಲ್‌ಗಳು ಸೋರಿಕೆಯಾಗುತ್ತವೆ ಎಂದು ಕಂಪನಿಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ನೋಟಿಸ್ ಅವಧಿ ಮುಗಿದ ನಂತರ ಕಂಪನಿಯು ನಮಗೆ ಪ್ಯಾಕೇಜ್‌ನ ಭರವಸೆ ನೀಡಿದೆ' ಎಂದು Byju's ನಿಂದ ವಜಾಗೊಂಡ ಉದ್ಯೋಗಿ ಹೇಳಿದ್ದಾರೆ.

Byju's, ಬಹುರಾಷ್ಟ್ರೀಯ ಶೈಕ್ಷಣಿಕ ತಂತ್ರಜ್ಞಾನ ಕಂಪನಿಯಾಗಿದ್ದು, ಬೆಂಗಳೂರಿನಲ್ಲಿ ಪ್ರಧಾನ ಕಛೇರಿ ಹೊಂದಿದೆ. ಇದನ್ನು 2011 ರಲ್ಲಿ Byju ರವೀಂದ್ರನ್ ಮತ್ತು ದಿವ್ಯಾ ಗೋಕುಲನಾಥ್ ಸ್ಥಾಪಿಸಿದರು. ಮಾರ್ಚ್ 2022 ರ ಹೊತ್ತಿಗೆ, Byju's US$22 ಶತಕೋಟಿ ಮೌಲ್ಯವನ್ನು ಹೊಂದಿದ್ದು, ಕಂಪನಿಯು 115 ಮಿಲಿಯನ್ ನೋಂದಾಯಿತ ವಿದ್ಯಾರ್ಥಿಗಳನ್ನು ಹೊಂದಿದೆ ಎಂದು ಹೇಳಿಕೊಂಡಿದೆ.
ಶ್ರೀಮಂತರು ಮಾತ್ರ ಭರಿಸಬಹುದಾದ ಶುಲ್ಕವನ್ನು ವಿಧಿಸುವುದಕ್ಕಾಗಿ Byju's ಟೀಕೆಗೆ ಗುರಿಯಾಗಿದೆ. ಕಂಪನಿಯು ತನ್ನ ಉತ್ಪನ್ನಗಳನ್ನು ಖರೀದಿಸಲು ಸಾಧ್ಯವಾಗದ ಪೋಷಕರ ಮೇಲೆ ಪ್ರಭಾವ ಬೀರುತ್ತಿದೆ ಎಂಬ ಆರೋಪವೂ ಕೇಳಿಬಂದಿತ್ತು. ಈ ಆರೋಪಗಳನ್ನು ಮಾಡಿದ್ದ ಪ್ರದೀಪ್ ಪೂನಿಯಾ ವಿರುದ್ಧ Byju's ₹ 20 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದೆ. ನಂತರ ಅವರು ಮೊಕದ್ದಮೆಯನ್ನು ಹಿಂಪಡೆಯಲಾಗಿದೆ.


Click it and Unblock the Notifications