ಇಂದಿನ ದುಬಾರಿ ದುನಿಯಾದಲ್ಲಿ ಎಲ್ಲವೂ ದುಬಾರಿಯಾಗಿಬಿಟ್ಟಿದೆ. ಅತ್ತ ಬಸ್ ಟಿಕೆಟ್‌ನಿಂದ ಹಿಡಿದು, ಇತ್ತ ತರಕಾರಿ, ಬಂಗಾರ ಎಲ್ಲವೂ ದುಬಾರಿಯಾಗಿಬಿಟ್ಟಿದೆ. ಜನ ಸಾಮಾನ್ಯರಂತೂ ಯಾವುದನ್ನೂ ಖರೀದಿಸದಂತಾಗಿಬಿಟ್ಟಿದೆ. ಅದರಲ್ಲೂ ವಿಶೇಷವೆಂದರೆ ನುಗ್ಗೆಕಾಯಿ ಬೆಲೆ ಮಟನ್ ಬೆಲೆಗೆ ಸರಿಸಮನಾಗಿದ್ದರೆ, ಇತ್ತ ಮೊಟ್ಟೆ ಬೆಲೆ (Egg Price Hike) ಕೂಡಾ ದಿನೇ ದಿನೇ ಏರಿಕೆ ಕಾಣುತ್ತಿದೆ. ಇದೀಗ ಮೊಟ್ಟೆ ಬೆಲೆ 5 ರೂ.ನಿಂದ 7 ರೂ.ಆಗಿದೆ.

ಬೆಂಗಳೂರಿನಲ್ಲಿ ದುಬಾರಿಯಾಯ್ತು ಮೊಟ್ಟೆ!
ಈ ಬಾರಿ ಚಳಿಯೂ ವಿಪರೀತವಾಗಿದೆ. ಒಂದೆ ಮಳೆಯಾರ್ಭಟವೂ ನಿಲ್ಲುತ್ತಿಲ್ಲ. ಇದೀಗ ತರಕಾರಿ, ಮೊಟ್ಟೆ, ಕೋಳಿ ಬೆಲೆಯೂ ಹೆಚ್ಚಾಗುತ್ತಿದೆ. ವರ್ಷಾಂತ್ಯದಲ್ಲಿ, ವರ್ಷದ ಆರಂಭದಲ್ಲಿ ನಾನ್‌ವೆಜ್‌ಗೆ ಬೇಡಿಕೆಯೂ ಹೆಚ್ಚು. ಮೊಟ್ಟೆ, ಕೋಳಿ, ಫಿಶ್ ತಿನ್ನುವವರ ಸಂಖ್ಯೆಯೂ ಹೆಚ್ಚಾಗುತ್ತದೆ. ಅಲ್ಲದೇ ಡಿಸೆಂಬರ್‌ನಲ್ಲಿ ಕ್ರಿಸ್ಮಸ್ ಹಬ್ಬ ಮತ್ತು ಹೊಸ ವರ್ಷ ಬರುತ್ತಿರುವುದರಿಂದ ಕೇಕ್ ಉತ್ಪಾದನೆ, ನಾನ್‌ವೆಜ್ ಬಳಕೆಯೂ ಹೆಚ್ಚಾಗುತ್ತದೆ. ಇದೀಗ ಮೊಟ್ಟೆ ಬೇಡಿಕೆಯೂ ಹೆಚ್ಚಾಗುವ ಹಿನ್ನೆಲೆ, ಬೆಲೆಯೂ ದುಬಾರಿಯಾಗಿದೆ.
ಬೆಂಗಳೂರಿನಲ್ಲಿ ಎಷ್ಟಿದೆ ಮೊಟ್ಟೆ ಬೆಲೆ?
ಬೆಂಗಳೂರಿನಲ್ಲಿ ಒಂದು ತಿಂಗಳ ಹಿಂದಷ್ಟೇ ಒಂದು ಮೊಟ್ಟೆ ದರ 5 ರೂ. ಇತ್ತು. ಆದ್ರೆ ಇದೀಗ ಮೊಟ್ಟೆ ಬೆಲೆ 7 ರೂ. ಗಡಿ ದಾಟಿದೆ. ತಮಿಳುನಾಡಿನಿಂದಲೂ ಆಮದು ಆಗುತ್ತಿದ್ದ ಮೊಟ್ಟೆ ಪ್ರಮಾಣದಲ್ಲಿ ಇಳಿಕೆಯಾಗಿದ್ದ, ಇದರಿಂದ ಕರ್ನಾಟಕದಲ್ಲೂ ಪೂರೈಕೆಯಲ್ಲಿ ಇಳಿಕೆಯಾಗಿದೆ. ಇದೇ ಕಾರಣದಿಂದ ಮೊಟ್ಟೆ ಬೆಲೆ ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ.
ಮೊಟ್ಟೆ ಪೂರೈಕೆಯಲ್ಲೂ ಕೊರತೆ!
ಬೆಂಗಳೂರಿನಲ್ಲಿ ಮೊಟ್ಟೆ ಬೆಲೆ ಏರಿಕೆ ಮಾತ್ರವಲ್ಲದೇ, ಪೂರೈಕೆಯಲ್ಲೂ ಸಮಸ್ಯೆ ಎದುರಿಸುತ್ತಿದೆ. ಕಳೆದ ವರ್ಷ ಹಕ್ಕಿ ಜ್ವರ ಬಂದ ಹಿನ್ನೆಲೆ ಕೋಳಿ ಸಾಕಾಣಿಕೆ ಮೇಳೆ ಸಾಕಷ್ಟು ಪೆಟ್ಟು ಬಿದ್ದಿತ್ತು. ಈ ಹಿನ್ನೆಲೆ ಹಲವಾರು ಕೋಳಿಗಳು ಸಾವನ್ನಪ್ಪಿದರೆ, ಇನ್ನೂ ಕೆಲವು ಪ್ರದೇಶಗಳಲ್ಲಿ ಮೊಟ್ಟೆಗಳ ಪೂರೈಕೆಯೂ ಕಡಿಮೆಯಾಗಿತ್ತು. ಇದೇ ಕಾರಣದಿಂದ ಬೆಂಗಳೂರಲ್ಲಿ ಬೇಡಿಕೆಗೆ ತಕ್ಕಂತೆ ಮೊಟ್ಟೆಗಳು ಪೂರೈಕೆಯಾಗುತ್ತಿಲ್ಲ. ಸದ್ಯ ದಿನಂಪ್ರತಿ 1.10 ಕೋಟಿ ಮೊಟ್ಟೆಗಳಿಗೆ ಬೇಡಿಕೆ ಇದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ 30 ರಿಂದ 40 ಲಕ್ಷ ಮೊಟ್ಟೆಗಳ ಕೊರತೆ ಇದೆ ಎಂದು ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆ.ಎನ್.ನಾಗರಾಜ್ ಮಾಹಿತಿ ನೀಡಿದ್ದಾರೆ.
ಕ್ರಿಸ್‌ಮಸ್ ಹಬ್ಬದ ಮುನ್ನವೇ ಗೋವಾದಲ್ಲೂ ಮೊಟ್ಟೆಯ ಬೆಲೆ ಡಜನ್‌ಗೆ 90 ರೂ.ಗೆ ಏರಿಕೆ ಕಂಡಿದೆ. ಕೇವಲ ಒಂದು ತಿಂಗಳ ಹಿಂದಷ್ಟೇ ಮೊಟ್ಟೆಯ ಬೆಲೆ 80 ರೂ.ಗಳಷ್ಟಿತ್ತು. ಆದ್ರೆ ಡಿಸೆಂಬರ್ ಮೂರನೇ ವಾರದಲ್ಲಿ ಮೊಟ್ಟೆ ಬೆಲೆ ಮತ್ತಷ್ಟು ಏರಿಕೆ ಕಾಣಬಹುದು ಎಂದು ನಿರೀಕ್ಷಿಸಲಾಗಿದೆ. 2026ರ ಹೊಸ ವರ್ಷದವರೆಗೂ ಮೊಟ್ಟೆ ಬೆಲೆ ಹೀಗೆ ಏರಿಕೆಯಾಗುತ್ತಿರುತ್ತದೆ ಎಂದು ವರದಿಯಗಳಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಗೋವಾ ತನ್ನ ಪೂರೈಕೆಗಾಗಿ ನೆರೆಯ ರಾಜ್ಯಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಸುಮಾರು 80% ಮೊಟ್ಟೆಗಳನ್ನು ಕರ್ನಾಟಕದಿಂದ ಮತ್ತು ಉಳಿದ 20% ಮೊಟ್ಟೆಗಳನ್ನು ಮಹಾರಾಷ್ಟ್ರದಿಂದ ಪಡೆಯುತ್ತಿದೆ. ಇನ್ನು ಮೊಟ್ಟೆ ಬೆಲೆ ಏರಿಕೆಯಾಗುತ್ತಿದ್ದಂತೆ, ಅತ್ತ ಚಿನ್ನದ ಬೆಲೆಯೂ ಏರಿಕೆ ಕಂಡಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications