ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ರಂಜಾನ್ (Ramadan 2026) ಕೂಡಾ ಒಂದು. ಪ್ರಪಂಚದಾದ್ಯಂತ ಮುಸ್ಲಿಮರು ಇಡೀ ರಂಜಾನ್ ತಿಂಗಳಲ್ಲಿ ಉಪವಾಸ ಇರುತ್ತಾರೆ. ಈ ರಂಜಾನ್ ತಿಂಗಳ ಅಂತ್ಯದಲ್ಲಿ ಈ ಈದ್ ಉಲ್ ಫಿತರ್ ಅಥವಾ ರಂಜಾನ್ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಆದ್ದರಿಂದ ರಂಜಾನ್ ತಿಂಗಳು ಮುಸ್ಲಿಂ ಸಮುದಾಯಕ್ಕೆ ಬಹಳ ಮಹತ್ವದ್ದಾಗಿದೆ.

ಪ್ರಸ್ತುತ ರಂಜಾನ್ ತಿಂಗಳು ನಡೆಯುತ್ತಿದೆ. ಮುಸ್ಲಿಂ ಬಾಂಧವರು ಈಗಾಗಲೇ ಉಪವಾಸ ಮಾಡುತ್ತಿದ್ದಾರೆ. ಈ ಮಧ್ಯೆ ೀದ್-ಉಲ್-ಫಿತರ್ ಹಬ್ಬ ಯಾವಾಗ ಬರಲಿದೆ ಎಂಬ ಪ್ರಶ್ನೆ ಎಲ್ಲರಲ್ಲೂ ಉದ್ಭವಿಸಿದೆ.
ಹಬ್ಬದ ಸಿದ್ಧತೆಯಲ್ಲಿ ಜನ
ಈಗಾಗಲೇ ರಂಜಾನ್ ತಿಂಗಳು ಮುಗಿಯುತ್ತಾ ಬರುತ್ತಿದೆ. ಅತ್ತ ರಂಜಾನ್ ತಿಂಗಳು ಅಂತ್ಯವಾಗುತ್ತಿದ್ದಂತೆ, ಈದ್-ಉಲ್-ಫಿತರ್ ಹಬ್ಬ ಆಚರಿಸಲು ಸಿದ್ಧತೆ ನಡೆಸುತ್ತಾರೆ. ಈದ್ ಹಬ್ಬ ಮುಸ್ಲಿಂ ಸಮುದಾಯಕ್ಕೆ ಪವಿತ್ರ ಮತ್ತು ಮಹತ್ವದ ಹಬ್ಬವಾಗಿದೆ. ಅದೇ ಕಾರಣದಿಂದ ಈ ಹಬ್ಬದ ಆಚರಣೆಗಾಗಿ ಮೊದಲೇ ಸಿದ್ಧತೆ ನಡೆಸುತ್ತಿರುತ್ತಾರೆ. ಇನ್ನು ಈ ವಿಶೇಷ ದಿನದಂದು ಮುಸ್ಲಿಮರು ಹೊಸ ಬಟ್ಟೆ ಧರಿಸಿ, ಮಸೀದಿಗೆ ತೆರಳಿ ಪ್ರಾರ್ಥನೆ ಮಾಡುತ್ತಾ, ಜೊತೆಗೆ ಊಟ ಮಾಡುತ್ತಾ ಹಬ್ಬವನ್ನು ಆಚರಿಸುತ್ತಾರೆ.
ಸಹೋದರತ್ವದ ಸಂದೇಶ
ಇನ್ನು ಈದ್ ಹಬ್ಬದಂದು ಪರಸ್ಪರ ಅಪ್ಪಿಕೊಳ್ಳುವುದು ಸಂಪ್ರದಾಯ. ಇದು ಸಹೋದರತ್ವ, ಸಂಬಂಧವನ್ನು ಮತ್ತಷ್ಟು ಗಟ್ಟಿಕೊಳಿಸುತ್ತದೆ ಎಂಬುದು ನಂಬಿಕೆ. ಈದ್ ಆಚರಣೆಗಳು ಬಹಳ ಮಹತ್ವದ್ದಾಗಿರುತ್ತದೆ. ಆದ್ರೆ ಹಬ್ಬದ ದಿನಾಂಕವನ್ನು ಚಂದ್ರನ ದರ್ಶನದಿಂದ ನಿರ್ಧರಿಸಲಾಗುತ್ತದೆ. ಹಾಗಾದ್ರೆ ಈ ವರ್ಷ ಈದ್-ಉಲ್-ಫಿತರ್ ಹಬ್ಬವನ್ನು ಯಾವಾಗ ಆಚರಿಸಲಾಗುತ್ತದೆ? ಈದ್ ಚಂದ್ರ ಯಾವಾಗ ಗೋಚರಿಸುವುದು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಈದ್ ಚಂದ್ರ ಯಾವಾಗ ಗೋಚರಿಸಬಹುದು?
ಭಾರತದಲ್ಲಿ ಮಾರ್ಚ್ 21 ರಂದು ಈದ್ ಆಚರಿಸಬಹುದು ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ, ಸೌದಿ ಅರೇಬಿಯಾದಲ್ಲಿ ಒಂದು ದಿನ ಮೊದಲೇ ಗೋಚರಿಸುತ್ತದೆ. 2026 ರಲ್ಲಿ ಈದ್ ಚಂದ್ರನು ಸೌದಿಯಲ್ಲಿ 19 ರಂದು ಗೋಚರಿಸುತ್ತಾನೆ. ಆದ್ದರಿಂದ ಮಾರ್ಚ್ 20 ರಂದು ಈದ್ ಹಬ್ಬ ಆಚರಿಸಲಾಗುತ್ತದೆ ಎಂದು ಹೇಳಲಾಗಿದೆ. ಅದೇ ರೀತಿ ಭಾರತದಲ್ಲಿ ಮಾರ್ಚ್ 21 ರಂದು ಆಚರಿಸುವ ಸಾಧ್ಯತೆ ಇದೆ.
ಅನೇಕ ಅಂದಾಜುಗಳ ಪ್ರಕಾರ ಶುಕ್ರವಾರ, ಮಾರ್ಚ್ 20, 2026 ರಂದು ಭಾರತದಲ್ಲಿ ಈದ್-ಉಲ್-ಫಿತರ್ ಆಚರಿಸುವ ಸಾಧ್ಯತೆ ಇದೆ. ಕೆಲವು ಕ್ಯಾಲೆಂಡರ್‌ಗಳಲ್ಲಿ ಮಾತ್ರ ಮಾರ್ಚ್ 21 ರಂದು ತೋದಿಸಲಾಗಿದೆ. ಇನ್ನು ಈ ದಿನಾಂಕಗಳು ಚಂದ್ರ ದರ್ಶನದ ಮೇಲೆ ಅವಲಂಬಿತವಾಗಿದೆ. ರಂಜಾನ್ 29ನೇ ದಿನ ಅಂದರೆ ಮಾರ್ಚ್ 19, 2026 ರಂದು ಸಂಜೆ ಚಂದ್ರ ಕಾಣಿಸಿದರೆ ಈದ್-ಉಲ್-ಫಿತರ್ ಮಾರ್ಚ್ 20, 2026 ರಂದು ಆಚರಿಸಲಾಗುತ್ತದೆ. ಒಂದು ವೇಳೆ ಮಾರ್ಚ್ 20 ಕ್ಕೆ ಚಂದ್ರ ಗೋಚರಿಸಿದರೆ ರಂಜಾನ್ ಹಬ್ಬವನ್ನು ಮಾರ್ಚ್ 21 ರಂದು ಆಚರಿಸಬಹುದು ಎಂದು ಹೇಳಲಾಗಿದೆ. ಆದ್ದರಿಂದ ಮುಸ್ಲಿಮರ ಪವಿತ್ರ ರಂಜಾನ್ ಹಬ್ಬಕ್ಕೆ ಇದೀಗ ದಿನಗಣನೆ ಶುರುವಾಗಿದೆ.


Click it and Unblock the Notifications