ರಂಜಾನ್ ಉಪವಾಸ ಮಾಸದ ಮುಕ್ತಾಯವನ್ನು ಸೂಚಿಸುವ ಈದ್-ಉಲ್-ಫಿತರ್ (Eid-Ul-Fitr) ಅನ್ನು ಚಂದ್ರ ದರ್ಶನವಾದ ಮರು ದಿನದಂದು ಆಚರಣೆ ಮಾಡುತ್ತಾರೆ.ಇದು ದೇಶದ್ಯಾಂತ ಮುಸ್ಲಿಮ ಬಾಧವರು ರಂಜಾನ್ ಹಬ್ಬವನ್ನು ಆಚರಣೆ ಮಾಡುತ್ತಾರೆ. ಈ ಹಬ್ಬದ ತಿಂಗಳು ಮುಸ್ಲಿಮರ ಪವಿತ್ರ ಮಾಸವಾಗಿದೆ.ಇಂದು ಮತ್ತು ನಾಳೆ ಈದ್-ಉಲ್-ಫಿತರ್ ಹಬ್ಬದ ಸಲುವಾಗಿ ಭಾರತೀಯ ಷೇರು ಮಾರುಕಟ್ಟೆ ಓಪನ್ ಇರುತ್ತೋ ಅಥವಾ ಇಲ್ಲವೋ ಎಂಬ ಗೊಂದಲ ಹೂಡಿಕೆದಾರರಿಗೆ ಅಂತೂ ಇದ್ದೇ ಇರುತ್ತದೆ. ನಿಮ್ಮ ಗೊಂದಲಕ್ಕೆ ಉತ್ತರ ಇಲ್ಲಿದೆ ನೋಡಿ..
ಹೌದು, ಭಾರತದಲ್ಲಿ, ಈದ್-ಉಲ್-ಫಿತರ್ ಅನ್ನು ಮಾರ್ಚ್ 31 ಅಥವಾ ಏಪ್ರಿಲ್ 1 ರಂದು ಆಚರಿಸಲಾಗುತ್ತದೆ, ಇದು ಅರ್ಧಚಂದ್ರನ ದರ್ಶನವನ್ನು ಅವಲಂಬಿಸಿರುತ್ತದೆ. ಆದಕ್ಕಾಗಿ ಹೂಡಿಕೆದಾರರು ಷೇರು ಮಾರಕಟ್ಟೆಯ ಬಗ್ಗೆ ಗೊಂದಲಕ್ಕೀಡಾಗಬಾರದು ಏಕೆಂದರೆ ದೇಶದ ಪ್ರಮುಖ ಷೇರು ವಿನಿಮಯ ಕೇಂದ್ರಗಳಾದ NSE ಮತ್ತು BSE ಈಗಾಗಲೇ ಪ್ರಸಕ್ತ ಕ್ಯಾಲೆಂಡರ್ ವರ್ಷದ ತಮ್ಮ ರಜಾ ಕ್ಯಾಲೆಂಡರ್‌ಗಳನ್ನು ಬಿಡುಗಡೆ ಮಾಡಿವೆ.

ಈದ್-ಉಲ್-ಫಿತರ್ ಪ್ರಯುಕ್ತ ಷೇರು ಮಾರುಕಟ್ಟೆಗೆ ರಜೆ
ಈದ್-ಉಲ್-ಫಿತರ್‌ಗಾಗಿ, ಭಾರತೀಯ ಷೇರು ಮಾರುಕಟ್ಟೆಯು ಸೋಮವಾರ, ಮಾರ್ಚ್ 31, 2025 ರಂದು ಮುಚ್ಚಲ್ಪಡುತ್ತದೆ. ಬಿಎಸ್‌ಇ ಮತ್ತು ಎನ್‌ಎಸ್‌ಇ ರಜಾ ಕ್ಯಾಲೆಂಡರ್ ಪ್ರಕಾರ, ಈ ಎರಡೂ ಷೇರು ವಿನಿಮಯ ಕೇಂದ್ರಗಳು ಮಾರ್ಚ್ 31, 2025 ರಂದು ಈದ್-ಉಲ್-ಫಿತರ್‌ಗಾಗಿ ಮಾರಕಟ್ಟೆಯನ್ನು ಬಂದ್ ಮಾಡಿರುತ್ತೇವೆ.ಷೇರು ಮಾರುಕಟ್ಟೆ ಮಾತ್ರವಲ್ಲದೆ ಕರೆನ್ಸಿ ಉತ್ಪನ್ನಗಳ ವಿಭಾಗವೂ ಮುಚ್ಚಲ್ಪಡುತ್ತದೆ. ಮತ್ತೊಂದೆಡೆ, ಸರಕು ಉತ್ಪನ್ನಗಳ ವಿಭಾಗವು ಬೆಳಗಿನ ಅವಧಿಗೆ ಮುಚ್ಚಲ್ಪಡುತ್ತದೆ ಆದರೆ ಸಂಜೆಯ ಅವಧಿಗೆ ತೆರೆದಿರುತ್ತದೆ, ಅದು ಸಂಜೆ 5 ಗಂಟೆಗೆ ಪ್ರಾರಂಭವಾಗಿ ರಾತ್ರಿ 11:30 ಅಥವಾ 11:55 ರವರೆಗೆ ಹಾಗೆಯೇ ಇರುತ್ತದೆ.
ಮುಂಬರುವ ಷೇರು ಮಾರುಕಟ್ಟೆ ರಜಾದಿನಗಳು
2025ರಲ್ಲಿ ಭಾರತೀಯ ಷೇರು ಮಾರುಕಟ್ಟೆ ಒಟ್ಟು 14 ರಜಾದಿನಗಳನ್ನು ಹೊಂದಿದೆ. ಇಲ್ಲಿಯವರೆಗೆ, ಮಹಾಶಿವರಾತ್ರಿ (ಫೆಬ್ರವರಿ 26) ಮತ್ತು ಹೋಳಿ (ಮಾರ್ಚ್ 14) ಹಬ್ಬದ ರಜಾದಿನಗಳನ್ನು ಮಾತ್ರ ಷೇರು ಮಾರಕಟ್ಟೆ ಕ್ಲೋಸ್ ಆಗಿದೆ. ಇನ್ನೂ 12ರಜೆಗಳು ಬಾಕಿ ಇವೆ.
ಈದ್ ಹಬ್ಬಕ್ಕೆ ಮಾರ್ಚ್ 31 ರಂದು ರಜೆ, ನಂತರ ಏಪ್ರಿಲ್‌ನಲ್ಲಿ ಮೂರು ರಜಾದಿನಗಳು ಇವೆ ಅವುಗಳೆಂದರೆ ಗುರುವಾರ, ಏಪ್ರಿಲ್ 10, ಮಹಾವೀರ ಜಯಂತಿ, ಸೋಮವಾರ, ಏಪ್ರಿಲ್ 14, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಮತ್ತು ಶುಕ್ರವಾರ, ಏಪ್ರಿಲ್ 18, ಶುಭ ಶುಕ್ರವಾರ ದಂದು ಷೇರು ಮಾರುಕಟ್ಟೆ ಕ್ಲೋಸ್ ಆಗಿರುತ್ತದೆ.
ಮೇ ತಿಂಗಳಲ್ಲಿ, ಮೇ 1 ರ ಗುರುವಾರ ಮಹಾರಾಷ್ಟ್ರ ದಿನಕ್ಕೆ ಒಂದು ರಜೆ ಇರುತ್ತದೆ. ಅದರ ನಂತರ, ಮುಂದಿನ ಮಾರುಕಟ್ಟೆ ರಜೆ ಆಗಸ್ಟ್ 15 ರ ಶುಕ್ರವಾರ, ರಾಷ್ಟ್ರವು ಭಾರತದ 79 ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತದೆ, ನಂತರ ಆಗಸ್ಟ್ 27 ರ ಬುಧವಾರ ಗಣೇಶ ಚತುರ್ಥಿಗೆ ರಜೆ ಇರುತ್ತದೆ.
ಅಕ್ಟೋಬರ್‌ನಲ್ಲಿ ಮೂರು ರಜಾದಿನಗಳನ್ನು ಷೇರುಪೇಟೆ ಹೊಂದಿದೆ. ಅಕ್ಟೋಬರ್ 2 (ಗುರುವಾರ) ಮಹಾತ್ಮ ಗಾಂಧಿ ಜಯಂತಿ ಮತ್ತು ದಸರಾ, ಅಕ್ಟೋಬರ್ 21 (ಮಂಗಳವಾರ) ದೀಪಾವಳಿ ಮತ್ತು ಅಕ್ಟೋಬರ್ 22 (ಬುಧವಾರ) ದೀಪಾವಳಿ ಹಬ್ಬಕ್ಕೆ ರಜೆ ಇರುತ್ತದೆ.
ನವೆಂಬರ್ 5 (ಬುಧವಾರ) ಪ್ರಕಾಶ್ ಗುರುಪುರ್ ಶ್ರೀ ಗುರುನಾನಕ್ ದೇವ್ ಅವರಿಗೆ ಮಾರುಕಟ್ಟೆ ರಜೆಯಾಗಿರುತ್ತದೆ. ವರ್ಷದ ಕೊನೆಯ ರಜೆ ಡಿಸೆಂಬರ್ 25 ಗುರುವಾರ ಕ್ರಿಸ್‌ಮಸ್ ಆಗಿರುತ್ತದೆ. ಆ ದಿನ ಕೂಡ ಷೇರುಪೇಟೆ ಬಂದ್ ಆಗಿರುತ್ತದೆ.


Click it and Unblock the Notifications