ಬೆಂಗಳೂರು, ಜೂನ್ 4: 2024 ರ ಲೋಕಸಭೆ ಚುನಾವಣೆಯಲ್ಲಿ 31.2 ಕೋಟಿ ಮಹಿಳೆಯರು ಸೇರಿದಂತೆ 64.2 ಕೋಟಿ ಮತದಾರರು ಭಾಗವಹಿಸುವ ಮೂಲಕ ಭಾರತ ವಿಶ್ವ ದಾಖಲೆ ನಿರ್ಮಿಸಿದೆ ಎಂದು ಭಾರತ ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಸೋಮವಾರ ಭಾರತ ಚುನಾವಣಾ ಆಯೋಗ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಈ ಮಾಹಿತಿ ನೀಡಿದ್ದು, ಏಪ್ರಿಲ್ 18 ರಂದು ಪ್ರಾರಂಭವಾಗಿ ಜೂನ್ 1 ರಂದು ಕೊನೆಗೊಂಡ ವಿಶ್ವದ ಅತಿದೊಡ್ಡ ಚುನಾವಣಾ ಚಟುವಟಿಕೆಯಲ್ಲಿ 68,000 ಕ್ಕೂ ಹೆಚ್ಚು ಮೇಲ್ವಿಚಾರಣಾ ತಂಡಗಳು ಮತ್ತು 1.5 ಕೋಟಿ ಮತಗಟ್ಟೆ ಮತ್ತು ಭದ್ರತಾ ಸಿಬ್ಬಂದಿ ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

10 ಪ್ರಮುಖ ಅಂಶಗಳು
2024 ರಲೋಕಸಭೆ ಚುನಾವಣೆಯಲ್ಲಿ ಭಾರತವು 64.2 ಕೋಟಿ ಮತದಾರರೊಂದಿಗೆ ವಿಶ್ವ ದಾಖಲೆಯನ್ನು ನಿರ್ಮಿಸಿದೆ.
2024 ರ ಲೋಕಸಭಾ ಚುನಾವಣೆಯಲ್ಲಿ 31.2 ಕೋಟಿ ಮಹಿಳೆಯರು ಈ ವರ್ಷ ಲೋಕಸಭೆ ಚುನಾವಣೆಯಲ್ಲಿ ಭಾಗವಹಿಸಿದ್ದರು.
ಹಿಂಸಾಚಾರವನ್ನು ನೋಡದ ಸಾರ್ವತ್ರಿಕ ಚುನಾವಣೆಗಳಲ್ಲಿ ಇದು ಒಂದಾಗಿದ್ದು, ಇದಕ್ಕೆ ಎರಡು ವರ್ಷಗಳ ತಯಾರಿ ಅಗತ್ಯವಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ನಾಲ್ಕು ದಶಕಗಳಲ್ಲೇ ಅತಿ ಹೆಚ್ಚು ಮತದಾನವಾಗಿದ್ದು, ಒಟ್ಟಾರೆ ಶೇ.58.58 ಮತ್ತು ಕಣಿವೆಯಲ್ಲಿ ಶೇ.51.05 ಮತದಾನವಾಗಿದೆ.
ಮೊದಲು ಅಂಚೆ ಮತ ಎಣಿಕೆ ಆರಂಭವಾಗಲಿದ್ದು, ಅರ್ಧ ಗಂಟೆ ಬಳಿಕ ಇವಿಎಂ ಎಣಿಕೆ ಆರಂಭವಾಗಲಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮತ ಎಣಿಕೆಗೆ ಮುನ್ನ 150 ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿದ್ದಾರೆ ಎಂಬ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿದ ಆಯೋಗ " ಯಾರಾದರೂ ಜಿಲ್ಲಾಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದರೆ ಆ ವ್ಯಕ್ತಿ ಯಾರು ? ದೂರು ನೀಡಿ ವದಂತಿ ಹಬ್ಬಿಸಿ ಎಲ್ಲರನ್ನೂ ಅನುಮಾನಿಸುವುದು ಸರಿಯಲ್ಲ" ಎಂದು ಹೇಳಿದೆ.
2019 ರಲ್ಲಿ 540 ಮರುಮತದಾನ ನಡೆದಿದ್ದು, 2024 ರ ಸಾರ್ವ ತ್ರಿ ಕ ಚುನಾವಣೆಯಲ್ಲಿ ಕೇವಲ 39 ಮರುಮತದಾನಗಳು ಮಾತ್ರ ನಡೆದಿವೆ
2024 ರ ಲೋಕಸಭೆ ಚುನಾವಣೆಯನ್ನು ನಡೆಸಲು ಸುಮಾರು ನಾಲ್ಕು ಲಕ್ಷ ವಾಹನಗಳು, 135 ವಿಶೇಷ ರೈಲುಗಳು ಮತ್ತು 1,692 ವಿಮಾನಗಳನ್ನು ಬಳಸಲಾಗಿದೆ.
ಮುಂದಿನ ಮತಎಣಿಕೆ ಪ್ರಕ್ರಿಯೆಯು ನಿಖರವಾಗಿ ಸಾಗಲಿದ್ದು, ಇದು ಗಡಿಯಾರದ ನಿಖರತೆಯಂತೆಯೇ ಕಾರ್ಯನಿರ್ವಹಿಸುತ್ತದೆ.
2024 ರ ಸಾರ್ವತ್ರಿಕ ಚುನಾವಣೆಯಲ್ಲಿ ನಗದು, ಉಚಿತ ಉಡುಗೊರೆಗಳು, ಡ್ರಗ್ಸ್ ಮತ್ತು ಮದ್ಯ ಸೇರಿದಂತೆ 10,000 ಕೋಟಿ ರೂ. ಮೌಲ್ಯದ ಸೊತ್ತುಗಳನ್ನು ಸೀಜ್ ಮಾಡಿ ದಾಖಲೆ ಬರೆದಿದೆ.


Click it and Unblock the Notifications