ಟೆಸ್ಲಾ ಸಂಸ್ಥಾಪಕ ಹಾಗೂ ಸಿಇಒ ಎಲೋನ್ ಮಸ್ಕ್ ಹೊಸ ದಾಖಲೆ ಬರೆದಿದ್ದಾರೆ. ಕಳೆದ ಒಂದು ವಾರದಲ್ಲಿ ಈತನ ಸಂಪತ್ತು ಇಳಿಕೆಯಾದ ಕುರಿತು ಸುದ್ದಿ ಓದಿರ್ತೀರಿ. ಆದರೆ ಇದೀಗ ಒಂದೇ ದಿನದಲ್ಲಿ 25 ಬಿಲಿಯನ್ ಡಾಲರ್ ದಾಖಲೆ ಗಳಿಕೆ ಮಾಡಿದ್ದಾರೆ.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಟೆಸ್ಲಾ ಇಂಕ್‌ನ ಷೇರುಗಳು ಮಂಗಳವಾರ ಶೇಕಡಾ 20ರಷ್ಟು ಹೆಚ್ಚಳಗೊಂಡಿದ್ದು, ಇದು ಒಂದು ವರ್ಷದ ಬಳಿಕ ಅತ್ಯಂತ ದೊಡ್ಡ ಏರಿಕೆಯಾಗಿದ್ದು, ಎಲೋನ್ ಮಸ್ಕ್ ಒಟ್ಟು ಸಂಪತ್ತು 174 ಬಿಲಿಯನ್‌ಗೆ ಏರಿಕೆಯಾಗಿದೆ. ಇದರೊಂದಿಗೆ ವಿಶ್ವದ ನಂಬರ್ ಒನ್ ಶ್ರೀಮಂತ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರೊಂದಿಗಿನ ಸಂಪತ್ತಿನ ಅಂತರ ತಗ್ಗಿಸಿದೆ.

ರಾತ್ರೋರಾತ್ರಿ, ನಾಸ್ಡಾಕ್ ಶೇಕಡಾ 3.7ರಷ್ಟು ಏರಿಕೆಯಾಗಿದ್ದು, ಆಪಲ್, ಅಮೆಜಾನ್ ಮತ್ತು ಫೇಸ್‌ಬುಕ್‌ನಂತಹ ಬಿಗ್ ಟೆಕ್ ಕಂಪನಿಗಳ ಷೇರುಗಳು ಲಾಭದಿಂದ ಮುನ್ನುಗ್ಗಿವೆ.
ಅಮೆಜಾನ್. ಕಾಮ್ ಇಂಕ್ ಷೇರುಗಳ ಮೌಲ್ಯ 6 ಬಿಲಿಯನ್ ಡಾಲರ್ ಹೆಚ್ಚಳದಿಂದಾಗಿ ಬೇಜೋಸ್‌ನ ನಿವ್ವಳ ಸಂಪತ್ತು 180 ಬಿಲಿಯನ್ ಡಾಲರ್ ಹೆಚ್ಚಾಗಿದೆ. ವಿಶ್ವದ 500 ಶ್ರೀಮಂತ ಜನರ ಶ್ರೇಯಾಂಕದ ಸೂಚ್ಯಂಕದ ಪ್ರಕಾರ, ಮಸ್ಕ್‌ನ ಭವಿಷ್ಯವು ತಿಂಗಳ ಕೊನೆಯಲ್ಲಿ 210 ಶತಕೋಟಿಗೆ ಏರಿದೆ.
ಚೀನಾ ಮಾರಾಟದಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ಅಂಕಿ ಅಂಶಗಳು ತಿಳಿಸಿದ ನಂತರ ಜಗತ್ತಿನ ದೈತ್ಯ ಎಲೆಕ್ಟ್ರಿಕ್ ವಾಹನ ತಯಾರಕ ಟೆಸ್ಲಾ ಇಂಕ್ ಷೇರುಗಳು ಮಂಗಳವಾರ ಸುಮಾರು ಶೇಕಡಾ 20 ನಷ್ಟು ಏರಿಕೆ ಕಂಡಿದೆ.


Click it and Unblock the Notifications