ಫೆಡರಲ್ ಡೆಪಾಸಿಟ್ ಇನ್ಶೂರೆನ್ಸ್ ಕಾಪೋರೇಷನ್ ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ ಸಂಪತ್ತನ್ನು ಶುಕ್ರವಾರ ವಶಕ್ಕೆ ಪಡೆದುಕೊಂಡಿದೆ. 2008ರ ಹಣಕಾಸು ಬಿಕ್ಕಟ್ಟಿನ ಬಳಿಕ ಯುಎಸ್‌ನಲ್ಲಿ ನಡೆದ ಅತೀ ದೊಡ್ಡ ಬ್ಯಾಂಕಿಂಗ್ ವೈಫಲ್ಯ ಇದಾಗಿದೆ. ಸಂಸ್ಥೆ ಹಾಗೂ ಸಂಸ್ಥೆಯಲ್ಲಿ ಹೂಡಿಕೆ ಮಾಡಿದರವು ಬಿಲಿಯನ್‌ಗಟ್ಟಲೆ ಡಾಲರ್ ಅನ್ನು ಕಳೆದುಕೊಂಡಿದ್ದಾರೆ. ಈ ನಡುವೆ ಸಿಲಿಕಾನ್ ವ್ಯಾಲಿ ಬ್ಯಾಂಕ್ ಅನ್ನು ವಿಶ್ವದ 2ನೇ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಖರೀದಿ ಮಾಡುತ್ತಾರಾ ಎಂಬ ಚರ್ಚೆ ನಡೆಯುತ್ತಿದೆ.
ಈ ದಿಢೀರ್ ಬೆಳವಣಿಗೆಯ ಮಧ್ಯೆ ಗೇಮಿಂಗ್ ಹಾರ್ಡ್‌ವೇರ್ ಕಂಪನಿ ರೇಜರ್‌ನ ಸಿಇಒ ಮಿನ್-ಲಿಯಾಂಗ್ ಟಾನ್, ಟ್ವಿಟ್ಟರ್ ಸಂಸ್ಥೆ ಸಿಲಿಕಾನ್ ವ್ಯಾಲಿ ಬ್ಯಾಂಕ್ ಅನ್ನು ಖರೀದಿಸಿ ಅದನ್ನು ಡಿಜಿಟಲ್ ಬ್ಯಾಂಕ್ ಆಗಿ ಪರಿವರ್ತಿಸುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಟ್ವಿಟ್ಟರ್‌ನ ಮುಖ್ಯಸ್ಥ ಎಲಾನ್ ಮಸ್ಕ್ ಕೂಡಾ ಪ್ರತಿಕ್ರಿಯೆ ನೀಡಿದ್ದಾರೆ. "ಈ ಆಲೋಚನೆಗೆ ನಾನು ಮುಕ್ತನಾಗಿದ್ದೇನೆ," ಎಂದು ಹೇಳಿಕೊಂಡಿದ್ದಾರೆ.

ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ
ಇನ್ನು ಷೇರು ಮಾರುಕಟ್ಟೆಯಲ್ಲಿ ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ ಪೋಷಕ ಸಂಸ್ಥೆಯಾದ ಎಸ್‌ವಿಬಿ ಫಿನಾನ್ಶಿಯಲ್ ಗ್ರೂಪ್ ಷೇರುಗಳು ಶೇಕಡ 70ರಷ್ಟು ಇಳಿಕೆಯಾಗಿದೆ. ವಹಿವಾಟಿನ ಆರಂಭದಲ್ಲೇ ನಾದ್‌ದಕ್‌ನಲ್ಲಿ ಟ್ರೇಡಿಂಗ್ ಅನ್ನು ಸ್ಥಗಿತಗೊಳಿಸಲಾಗಿದೆ. ಇದಾದ ಒಂದು ದಿನದಲ್ಲೇ ಎಸ್‌ವಿಬಿ ಫೈನಾನ್ಶಿಯಲ್ ಗ್ರೂಪ್ ಅನ್ನು ತೆಗೆದುಹಾಕಲಾಗಿದೆ.
ಸಂಸ್ಥೆಗೆ ನಷ್ಟವಾಗುತ್ತಿರುವ ಮೊತ್ತವನ್ನು ಉಳಿಸಿಕೊಳ್ಳುವಲ್ಲಿ ತೊಂದರೆ ಎದುರಿಸುತ್ತಿರುವ ಸಿಲಿಕಾನ್ ವ್ಯಾಲಿ ಬ್ಯಾಂಕ್ ಗುರುವಾರ ಪಬ್ಲಿಕ್ ಆಫರಿಂಗ್ (ಸಾರ್ವಜನಿಕ ಕೊಡುಗೆ) ಆರಂಭ ಮಾಡಿದೆ. ಹಾಗೆಯೇ ತನ್ನ ಸೆಕ್ಯೂರಿಟಿಗಳನ್ನು ಮಾರಾಟ ಮಾಡಿದೆ. ಹಾಗೆಯೇ ಹಲವಾರು ಘಟನೆಗಳನ್ನು ನಿರ್ವಹಣೆ ಮಾಡಿದೆ. ಇನ್ನು ಬ್ಯಾಂಕ್ ಅನ್ನು ಮುಚ್ಚಲಾಗುತ್ತಿದೆ ಎಂದು ಹೇಳುತ್ತಿದ್ದಂತೆ ಕಂಪನಿಯ ಷೇರುಗಳು ನ್ಯೂಯಾರ್ಕ್‌ನಲ್ಲಿ ಶೇಕಡ 60ರಷ್ಟು ಕುಸಿದಿದೆ.
ಟೆಕ್ ಇಂಡಸ್ಟ್ರೀಗೆ ಅಧಿಕವಾಗಿ ಈ ಬ್ಯಾಂಕ್ ಸಾಲ ಸೌಲಭ್ಯವನ್ನು ಒದಗಿಸಿದೆ. ಒಂದು ದಶಕಕ್ಕೂ ಹಿಂದೆ ಆರಂಭವಾದ ಯುಎಸ್‌ನ ಅತೀ ದೊಡ್ಡ ಆರ್ಥಿಕ ಹಿಂಜರಿತದ (2008 ಹಣಕಾಸು ಬಿಕ್ಕಟ್ಟು) ಬಳಿಕ ಬ್ಯಾಂಕಿಂಗ್ ವಲಯದಲ್ಲಿ ಹಲವಾರು ಆತಂಕಗಳು ಸೃಷ್ಟಿಯಾಗಿದೆ. ಇನ್ನು ಇದೇ ರೀತಿಯ ಪರಿಸ್ಥಿತಿಯಿಂದ ಹೊರಬರುವ ಸಾಮರ್ಥ್ಯವನ್ನು ಇತರೆ ಪ್ರಮುಖ ಬ್ಯಾಂಕುಗಳು ಹೊಂದಿದೆ ಎಂದು ವರದಿಯು ಉಲ್ಲೇಖಿಸಿದೆ.
ಈ ಎಲ್ಲ ಬೆಳವಣಿಗೆಯ ಬಳಿಕ ಫೆಡರಲ್ ಡೆಪಾಸಿಟ್ ಇನ್ಶೂರೆನ್ಸ್ ಕಾಪೋರೇಷನ್ ಅಥವಾ ಎಫ್‌ಡಿಐಸಿ ಸಿಲಿಕಾನ್ ವ್ಯಾಲಿ ಬ್ಯಾಂಕ್ ಅನ್ನು ಬಂದ್ ಮಾಡುವಂತೆ ಸೂಚನೆ ನೀಡಿದೆ. ಹಾಗೆಯೇ ಬ್ಯಾಂಕ್‌ನ ಎಲ್ಲ ಡೆಪಾಸಿಟ್‌ಗಳನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಬ್ಯಾಂಕ್ ವೈಫಲ್ಯ ಕಂಡ ಸಂದರ್ಭದಲ್ಲಿ ಆಸ್ತಿ ರೂಪದಲ್ಲಿ ಬ್ಯಾಂಕ್‌ನಲ್ಲಿ 209 ಬಿಲಿಯನ್ ಯುಎಸ್ ಡಾಲರ್ ಇದ್ದರೆ, ಡೆಪಾಸಿಟ್ ರೂಪದಲ್ಲಿ 175.4 ಬಿಲಿಯನ್ ಯುಎಸ್ ಡಾಲರ್ ಇತ್ತು ಎಂದು ಎಫ್‌ಡಿಐಸಿ ಮಾಹಿತಿ ನೀಡಿದೆ.


Click it and Unblock the Notifications