ತನ್ನ ಶ್ರೀಮಂತಿಕೆ ವಿಚಾರದಲ್ಲಿಯೇ ಸುದ್ದಿಯಾಗುತ್ತಿರುವ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾದ ಎಲಾನ್ ಮಸ್ಕ್ ಪ್ರಸ್ತುತ ಟ್ವಿಟ್ಟರ್ ಮಾಲೀಕತ್ವವನ್ನು ಹೊಂದಿದ್ದಾರೆ. ಹಾಗೆಯೇ ಸಿಇಒ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಗಾಗಲೇ ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಸ್ಥಾನವನ್ನು ವಹಿಸಿಕೊಂಡಿರುವ ಎಲಾನ್ ಮಸ್ಕ್ ಟ್ವಿಟ್ಟರ್ ಖರೀದಿ ಬಳಿಕ ಟ್ವಿಟ್ಟರ್ ಸಿಇಒ ಸ್ಥಾನವನ್ನು ಕೂಡಾ ವಹಿಸಿಕೊಂಡಿದ್ದಾರೆ.
ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್‌ನ ಮುಖ್ಯ ಸ್ಥಾನವನ್ನು ಹೊಂದಿರುವುದು ಮಾತ್ರವಲ್ಲದೆ ಎರಡರಲ್ಲೂ ಕೂಡಾ ಮುಖ್ಯ ಪಾಲುದಾರನೂ ಹೌದು. ಆದರೂ ಕೂಡಾ ಅಕ್ಟೋಬರ್ 2022 ರಲ್ಲಿ ಟ್ವಿಟ್ಟರ್ ಅನ್ನು ಖರೀದಿ ಮಾಡಿದ ಸ್ವಲ್ಪ ಸಮಯದಲ್ಲೇ ಎಲಾನ್ ಮಸ್ಕ್ ತನ್ನ ಸಂಸ್ಥೆಯ ಸಿಇಒ ಸ್ಥಾನದಿಂದ ಹೊರನಡೆಯಲು, ಬೇರೊಬ್ಬರಿಗೆ ಈ ಸಿಇಒ ಸ್ಥಾನವನ್ನು ನೀಡಲು ನಿರ್ಧಾರ ಮಾಡಿದ್ದಾರೆ.

ಎಲಾನ್ ಮಸ್ಕ್ ಇತ್ತೀಚೆಗೆ ಟ್ವೀಟ್ ಒಂದನ್ನು ಮಾಡಿದ್ದಾರೆ. ತಾನು ಟ್ವಿಟ್ಟರ್‌ನ ಸಿಇಒ ಸ್ಥಾನದಿಂದ ಕೆಳಕ್ಕೆ ಇಳಿಯಬೇಕೆ ಎಂದು ಈ ಟ್ವೀಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ. "ನಾನು ಟ್ವಿಟ್ಟರ್‌ನ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಬೇಕೇ? ನಾನು ಈ ಸಮೀಕ್ಷೆಯ ಫಲಿತಾಂಶಕ್ಕೆ ಬದ್ಧನಾಗಿರುತ್ತೇನೆ," ಎಂದು ಬರೆದುಕೊಳ್ಳುವ ಮೂಲಕ ತನ್ನ ಸ್ಥಾನವನ್ನು ತ್ಯಜಿಸುವ ಇಚ್ಛೆಯನ್ನು ಎಲಾನ್ ಮಸ್ಕ್ ಸೂಚಿಸಿದ್ದಾರೆ.
ಅದಕ್ಕೂ ಮುಖ್ಯವಾದ ಆಶ್ಚರ್ಯದ ವಿಚಾರ ಏನೆಂದರೆ, ಸರಿಸುಮಾರು 17 ಮಿಲಿಯನ್ ಟ್ವಿಟ್ಟರ್ ಬಳಕೆದಾರರು, ಮತ ಚಲಾಯಿಸಿದ್ದಾರೆ. ಈ ಪೈಕಿ ಶೇಕಡ 57.5ರಷ್ಟು ಅಥವಾ ಸರಿಸುಮಾರು 9.8 ಮಿಲಿಯನ್ ಜನರು ಮಸ್ಕ್ ಪರವಾಗಿ ಮತ ಹಾಕಿದ್ದಾರೆ. ಆದರೆ ಎಲಾನ್ ಮಸ್ಕ್ ತಮ್ಮ ಭರವಸೆಯನ್ನು ಉಳಿಸಿಕೊಳ್ಳುವ ಮತ್ತು ಸಿಇಒ ನೇಮಕ ಮಾಡುವ ಯಾವುದೇ ಸೂಚನೆಯನ್ನು ಇದುವರೆಗೆ ನೀಡಿಲ್ಲ.
ಹೊಸ ಟ್ವಿಟ್ಟರ್ ಸಿಇಒ ಯಾರಾಗುತ್ತಾರೆ?
ಇತ್ತೀಚಿನ ಬೆಳವಣಿಗೆಯಲ್ಲಿ, ಮಸ್ಕ್ X/Twitter ಗಾಗಿ ಹೊಸ ಸಿಇಒ ಅನ್ನು ನೇಮಿಸಿಕೊಂಡಿದ್ದಾರೆ ಎಂದು ಘೋಷಿಸಿದ್ದಾರೆ. ಮೇ 12ರಂದು ಟ್ವಿಟ್ಟರ್‌ನಲ್ಲಿ "ಅವಳು" ಸುಮಾರು ಆರು ವಾರಗಳಲ್ಲಿ ಟ್ವಿಟ್ಟರ್‌ನ ಸಿಇಒ ಸ್ಥಾನವನ್ನು ನಿರ್ವಹಣೆ ಮಾಡಲು ಪ್ರಾರಂಭ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. ಇದರಿಂದಾಗಿ ಟ್ವಿಟ್ಟರ್‌ನ ಹೊಸ ಸಿಇಒ ಸ್ಥಾನವನ್ನು ಮಹಿಳೆ ವಹಿಸಿಕೊಳ್ಳಲಿದ್ದಾರೆ ಎಂಬುವುದು ಖಚಿತವಾಗಿದೆ.
ಆದರೆ ಎಲಾನ್ ಮಸ್ಕ್ ಟ್ವಿಟ್ಟರ್‌ನ ಹೊಸ ಸಿಇಒ ಯಾರು ಎಂದು ಬಹಿರಂಗಪಡಿಸಲಿಲ್ಲ. ಆದರೆ ಮಹಿಳೆಯನ್ನು ಆಯ್ಕೆ ಮಾಡಿದ್ದಾರೆ ಎಂಬ ಸುಳಿವನ್ನು ನೀಡಿದ್ದಾರೆ. ವಾಲ್ ಸ್ಟ್ರೀಟ್ ಜರ್ನಲ್ ಪ್ರಕಾರ, ಎನ್‌ಬಿಸಿ ಯುನಿವರ್ಸಲ್‌ನ ಜಾಹೀರಾತು ವಿಭಾಗದ ಮುಖ್ಯಸ್ಥೆ ಲಿಂಡಾ ಯಾಕರಿನೊ ಟ್ವಿಟ್ಟರ್‌ನ ಸಿಇಒ ಆಗುವ ಬಗ್ಗೆ ಮಾತುಕತೆ ನಡೆಯುತ್ತಿದೆ.
ಎಲಾನ್ ಮಸ್ಕ್ ಟ್ವಿಟ್ಟರ್‌ನ ಸಿಇಒ ಬದಲಾವಣೆಯ ಬಗ್ಗೆ ಘೋಷಣೆ ಮಾಡಿದ ಬಳಿಕ ಟೆಸ್ಲಾ ಷೇರುಗಳು ಗಗನಕ್ಕೇರಿದವು. ಆದರೆ ಎಲಾನ್ ಮಸ್ಕ್ ಮುಂದಿನ ಸಿಇಒ ಹೆಸರು, ಯಾರು ಎಂಬ ಬಗ್ಗೆ ಇನ್ನು ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಪಕ್ ನ್ಯೂಸ್‌ನ ಡೈಲನ್ ಬೈಯರ್ಸ್ ಅಂದಾಜಿನ ಪ್ರಕಾರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಂತಹ ಪ್ರಮುಖ ಸ್ಥಾನವನ್ನು ಉನ್ನತ ದರ್ಜೆಯ ಜಾಹೀರಾತು ಕಾರ್ಯನಿರ್ವಾಹಕರಾಗಿರುವ ಲಿಂಡಾ ಯಾಕರಿನೊ ವಹಿಸಿಕೊಳ್ಳಲಿದ್ದಾರೆ. ಈ ನಡುವೆ ದಿ ವಾಲ್ ಸ್ಟ್ರೀಟ್ ಜರ್ನಲ್ ಟ್ವಿಟ್ಟರ್ ಸಿಇಒ ಆಗಿ ಯಾಕರಿನೊ ನೇಮಕಾತಿ ಮಾಡಲು ಬಗ್ಗೆ ಮಾತುಕತೆ ನಡೆಯುತ್ತಿದೆ ಎಂಬ ವರದಿಯನ್ನು ಪ್ರಕಟ ಮಾಡಿದೆ.


Click it and Unblock the Notifications