ಸರ್ಕಾರಿ ನೌಕರರ ಹಲವು ದಿನಗಳಿಂದ ವಿವಿಧ ಕಾರಣಗಳಿಂದ ಸರಿಯಾದ ಸಮಯಕ್ಕೆ ವೇತನ ಸಿಗುತ್ತಿಲ್ಲ. ಇದರಿಂದಾಗಿ ಯಾವುದೇ ತೊಪ್ಪಿಲ್ಲದಿದ್ದರೂ ಕೂಡ ಕರ್ನಾಟಕ ಸರ್ಕಾರದ ವಿಮಾ ಇಲಾಖೆಯಿಂದ (ಕೆಜಿಐಡಿ) ಸಾಲ ಪಡೆದವರು ಈಗ ತಮ್ಮ ವೇತನ ವಿಳಂಬದಿಂದಾಗಿ ದಂಡದ ಬಡ್ಡಿ ಪಾವತಿಸುವ ಪರಿಸ್ಥಿತಿ ಎದುರಾಗಿದೆ.
ಆರೋಗ್ಯ, ಶಿಕ್ಷಣ, ಜಿಲ್ಲಾ ಮತ್ತು ತಾಲೂಕು ಪಂಚಾಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸೇರಿದಂತೆ ಜಿಲ್ಲೆಗಳ ಕೆಲವು ಇಲಾಖೆಗಳ ಸರ್ಕಾರಿ ನೌಕರರಿಗೆ ಸರಿಯಾದ ರೀತಿಯಲ್ಲಿ ಸಂಬಳ ದೊರೆಯುತ್ತಿಲ್ಲ. ಹಲವಾರು ಸಂದರ್ಭಗಳಲ್ಲಿ, ನೌಕರರಿಗೆ ಸಿಗಬೇಕಾದ ಸಂಬಳ ವಿಂಬವಾಗುತ್ತಿದೆ. ಅಲ್ಲದೆ ಇದು ಇವತ್ತಿನ ಸಮಸ್ಯೆ ಹೊರತಾಗಿ ಇತರರ ತಿಂಗಳುಗಳಲ್ಲಿ, ಒಮದಿಷ್ಟು ವರ್ಷಗಳಿಂದ ಈ ಸಮಸ್ಯೆ ಹೀಗೆ ಮುಂದುವರೆದಿದೆ.

ಸರ್ಕಾರ 7.7 ಲಕ್ಷ ಹುದ್ದೆಗಳನ್ನ ಮಂಜೂರು ಮಾಡಿದ್ದು, ಅದರಲ್ಲಿ ಈಗಾಗಲೇ 5.4 ಲಕ್ಷ ಹುದ್ದೆಗಳನ್ನ ಸರ್ಕಾರ ಭರ್ತಿ ಮಾಡಿದೆ. ಸಧ್ಯಕ್ಕೆ ಸಿಬ್ಬಂದಿಗಳ ಕೊರತೆಯಿಂದಾಗಿ ಸರ್ಕಾರ ಈಗಾಗಲೇ ಹೆಚ್ಚಿನ ಸಂಖ್ಯೆಯ ಗುತ್ತಿಗೆ ನೌಕರರ ಮೇಲೆ ಅವಲಂಭಿತವಾಗಿದೆ. ಹೆಚ್ಚವರಿಯಾಗಿ ಸಿಬ್ಬಂದಿಗಳಿಗೆ ಸರಿಯಾಗಿ ಸಂಬಳ ಆಗದೇ ತೊಮದರೆ ಅನುಭವಿಸುವಂತಾಗಿದೆ. ಅದರಲ್ಲೂ ಅತಿಥಿ ಉಪನ್ಯಾಸಕರು, ಪೌರಕಾರ್ಮಿಕರು ಮತ್ತು ಇತರರಿಗೆ ಸಮಯಕ್ಕೆ ಸಂಬಳ ಸಿಗುತ್ತಿಲ್ಲ. ಇನ್ನು ಈ ವೇತನ ವಿಳಂಬದಿಂದಾಗಿ ಅವರು ಹೆಚ್ಚುವರಿಯಾಗಿ ಬಡ್ಡಿಯನ್ನು ಪಾವತಿಸಬೇಕಾಗಿದೆ ಎಂದು ತಿಳಿದುಬಂದಿದೆ.
ವೇತನ ವಿಳಂಬದಿಂದಾಗಿ ನೌಕರರು ಹೆಚ್ಚುವರಿ ಸಾಲದ ಬಡ್ಡಿಯನ್ನು ಪಾವತಿಸುವಂತಾಗಿದೆ
ರಾಜ್ಯ ಸರ್ಕಾರವು ಒಂದು ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ವೆಚ್ಚ ಮಾಡುತ್ತದೆ ಮತ್ತು 7ನೇ ವೇತನ ಆಯೋಗದ ಶಿಫಾರಸ್ಸುಗಳಿಂದಾಗಿ, ಇದು ಕನಿಷ್ಠ 22,000 ಕೋಟಿ ರೂಪಾಯಿಗಳಿಂದ 25,000 ಕೋಟಿ ರೂಪಾಯಿಗಳವರೆಗೆ ಹೆಚ್ಚಾಗಿದೆ. "ಸರ್ಕಾರ ಇದನ್ನು ನಿರ್ವಹಿಸಲು ಕಷ್ಟಪಡುತ್ತಿದೆ ಮತ್ತು ಇದು ವೇತನ ಪಾವತಿ ವಿಳಂಬಕ್ಕೆ ಇದು ಕೂಡ ಒಂದು ಕಾರಣವಾಗಿದೆ" ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್.ಷಡಕ್ಷರಿ ಮಾತನಾಡಿದ್ದು, "ಕೆಜಿಐಡಿ, ಕಡಿಮೆ ಬಡ್ಡಿದರದಲ್ಲಿ ಸಾಲಗಳನ್ನು ನೀಡುತ್ತದೆ. ಸಾಲದ ಮೊತ್ತವನ್ನು ಪ್ರತಿ ತಿಂಗಳಲ್ಲಿ ನಿಗದಿತ ದಿನಾಂಕದಲ್ಲಿ ಕಡಿತ ಮಾಡಲಾಗುತ್ತದೆ. ಆದರೆ ವೇತನಗಳು ವಿಳಂಬವಾಗುವಾಗ, ಅನೇಕರು ಸಮಯಕ್ಕೆ ಸಾಲದ ಬಡ್ಡಿಯನ್ನು ಪಾವತಿಸಲು ಆಗುತ್ತಿಲ್ಲ. ವಿವಿಧ ಕಾರಣಗಳಿಂದ ವೇತನಗಳು ವಿಳಂಬವಾಗುತ್ತವೆ. ಆದರೆ ಅವರ ತಪ್ಪಿನಿಂದ ಅಲ್ಲ, ಆದ್ರೂ ಕೂಡ ಅವರು ಹೆಚ್ಚುವರಿ ಬಡ್ಡಿಯನ್ನು ಪಾವತಿಸುವಂತಹ ಸ್ಥಿತಿ ಎದುರಾಗಿದೆ.
ಇನ್ನು ಈ ಕುರಿತು ಸಿ.ಎಸ್.ಷಡಕ್ಷರಿ ಅವರು ಹಣಕಾಸು ವಿಷಯಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, "ಕೆಜಿಐಡಿ'ಯ ಸಾಫ್ಟ್‌ವೇರ್‌ನಲ್ಲಿ ಬದಲಾವಣೆಗಳನ್ನು ಮಾಡುವಂತೆ ಅವರಿಗೆ ಮನವಿ ಮಾಡಿದ್ದಾರೆ, ಏಕೆಂದರೆ ವಿಳಂಬದಲ್ಲಿ ಪಾವತಿಯನ್ನು ಮಾಡುವುದರಿಂದ ಅಧಿಕ ಬಡ್ಡಿಗೆ ಕಾರಣವಾಗುತ್ತದೆ. "ವೇತನ ವಿಳಂಬವನ್ನು ಅನುಭವಿಸುವ ಉದ್ಯೋಗಿಗಳು ನನ್ನನ್ನು ಸಂಪರ್ಕಿಸಿದ್ದಾರೆ. ಇದು ಕೇವಲ ಸಾಲದ ಬಡ್ಡಿ ಪಾವತಿ ಮಾತ್ರವಲ್ಲ, ಕೆಜಿಐಡಿ ಮಾಸಿಕ ಕೊಡುಗೆಗಳು ಸಹ ವಿಳಂಬವಾಗಿ ಪಾವತಿಸಲಾಗುತ್ತಿವೆ" ಎಂದು ಅವರು ತಿಳಿಸಿದರು.
ಕರ್ನಾಟಕ ಸರ್ಕಾರದ ವಿಮಾ ಇಲಾಖೆ ಬಗ್ಗೆ ತಿಳಿಯಿರಿ
ಕರ್ನಾಟಕ ಸರ್ಕಾರದ ವಿಮಾ ಇಲಾಖೆಯು ರಾಜ್ಯದೊಳಗೆ ವಿಮೆ-ಸಂಬಂಧಿತ ಚಟುವಟಿಕೆಗಳನ್ನು ನಿರ್ವಹಿಸುವ ಮತ್ತು ನಿಯಂತ್ರಿಸುವ ಜವಾಬ್ದಾರಿಯನ್ನು ಹೊಂದಿದೆ. ಈ ಇಲಾಖೆಯು ವಿವಿಧ ಸರ್ಕಾರಿ ಪ್ರಾಯೋಜಿತ ವಿಮಾ ಯೋಜನೆಗಳ ಮೇಲ್ವಿಚಾರಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ, ಸರ್ಕಾರಿ ನೌಕರರಿಗೆ ರಕ್ಷಣೆಯನ್ನು ಒದಗಿಸುತ್ತದೆ ಮತ್ತು ರಾಜ್ಯದಲ್ಲಿ ವಿಮಾ ನಿಯಮಗಳ ಅನುಸರಣೆಯನ್ನು ಖಚಿತಪಡಿಸುತ್ತದೆ. ಆರೋಗ್ಯ, ಜೀವನ, ವಾಹನ ಮತ್ತು ಉದ್ಯೋಗಿ ಪ್ರಯೋಜನಗಳಿಗೆ ಸಂಬಂಧಿಸಿದ ಯೋಜನೆಗಳು ಸೇರಿದಂತೆ ಪ್ರವೇಶಿಸಬಹುದಾದ ಮತ್ತು ಕೈಗೆಟುಕುವ ವಿಮಾ ಸೇವೆಗಳ ಮೂಲಕ ನಾಗರಿಕರ ಕಲ್ಯಾಣವನ್ನು ಉತ್ತೇಜಿಸುವಲ್ಲಿ ಇದು ತೊಡಗಿಸಿಕೊಂಡಿದೆ.
ಉದ್ಯೋಗಿ ವಿಮಾ ಯೋಜನೆಗಳನ್ನು ನಿರ್ವಹಿಸುವುದರ ಜೊತೆಗೆ, ಇಲಾಖೆಯು ವಿಮೆಯ ಮಹತ್ವದ ಬಗ್ಗೆ ಅರಿವು ಮೂಡಿಸಲು ಕೆಲಸ ಮಾಡುತ್ತದೆ, ಸಾರ್ವಜನಿಕರಿಗೆ ಶಿಕ್ಷಣ ನೀಡುತ್ತದೆ ಮತ್ತು ವಿಮೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕುಂದುಕೊರತೆ ಪರಿಹಾರ ಕಾರ್ಯವಿಧಾನಗಳನ್ನು ಒದಗಿಸುತ್ತದೆ. ಇಲಾಖೆಯು ವಿಮಾ ಕಂಪನಿಗಳೊಂದಿಗೆ ಮೇಲ್ವಿಚಾರಣೆ ಮಾಡುತ್ತದೆ ಮತ್ತು ಸಮನ್ವಯಗೊಳಿಸುತ್ತದೆ, ಅವರು ನಿಯಂತ್ರಕ ಮಾನದಂಡಗಳನ್ನು ಪೂರೈಸುತ್ತಾರೆ.
ಒಟ್ಟಾರೆಯಾಗಿ, ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯು ಸುರಕ್ಷಿತ ವಿಮಾ ಪರಿಸರವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ, ನಾಗರಿಕರು, ವಿಶೇಷವಾಗಿ ಸರ್ಕಾರಿ ನೌಕರರು ಸೂಕ್ತ ವಿಮಾ ರಕ್ಷಣೆಯಿಂದ ಪ್ರಯೋಜನ ಪಡೆಯುತ್ತಾರೆ ಎಂದು ಖಚಿತಪಡಿಸುತ್ತದೆ.


Click it and Unblock the Notifications