For Quick Alerts
ALLOW NOTIFICATIONS  
For Daily Alerts

EPFO ಬಡ್ಡಿ ದರ: ಮಾರ್ಚ್‌ 4ರಂದು ಪ್ರಕಟಗೊಳ್ಳುವ ಸಾಧ್ಯತೆ

|

2020-21ರ ನೌಕರರ ಭವಿಷ್ಯ ನಿಧಿ ಬಡ್ಡಿದರವನ್ನು ಮಾರ್ಚ್ 4ರಂದು ಘೋಷಿಸುವ ಸಾಧ್ಯತೆಯಿದ್ದು, ಕೇಂದ್ರೀಯ ಟ್ರಸ್ಟಿಗಳ ಮಂಡಳಿ (ಸಿಬಿಟಿ) ಸಭೆ ಸೇರಲಿದ್ದು ಬಡ್ಡಿ ದರವನ್ನು ನಿರ್ಧರಿಸಲಿದೆ.

2020-21ರ ಆರ್ಥಿಕ ವರ್ಷದಲ್ಲಿ ಸಂಸ್ಥೆಯು, ಭವಿಷ್ಯದ ನಿಧಿ ಠೇವಣಿಗಳ ಮೇಲಿನ ಬಡ್ಡಿದರಗಳನ್ನು 2020ರ ಕೋವಿಡ್-19 ಆರ್ಥಿಕ ಕುಸಿತದ ಪರಿಣಾಮ ಕಡಿಮೆಗೊಳಿಸಬಹುದು ಎಂಬ ಊಹಾಪೋಹ ಸುದ್ದಿಗಳಿವೆ.

ಕಳೆದ ವರ್ಷ ಇಪಿಎಫ್ಒ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿದರವನ್ನು 2019-20ರಲ್ಲಿ ಏಳು ವರ್ಷಗಳ ಕನಿಷ್ಠ ಶೇಕಡಾ 8.5ಕ್ಕೆ ಇಳಿಸಿತ್ತು. ಮಾರ್ಚ್ 31 ಕ್ಕೆ ಕೊನೆಗೊಂಡ ವರ್ಷದಲ್ಲಿ ತನ್ನ ಚಂದಾದಾರರಿಗೆ ಶೇಕಡಾ 8.5ರಷ್ಟು ಬಡ್ಡಿಯನ್ನು ಎರಡು ಕಂತುಗಳಲ್ಲಿ ಪಾವತಿಸುವುದಾಗಿ ಮಂಡಳಿ ಹೇಳಿದೆ. ಮೊದಲಿಗೆ ಸಾಲ ಹೂಡಿಕೆಗಳಿಂದ ಶೇಕಡಾ 8.15ರಷ್ಟು ಮತ್ತು ಈಕ್ವಿಟಿಗಳಿಂದ ಶೇಕಡಾ 0.35ರಷ್ಟು ನೀಡಲಿದೆ.

EPFO ಬಡ್ಡಿ ದರ: ಮಾರ್ಚ್‌ 4ರಂದು ಪ್ರಕಟಗೊಳ್ಳುವ ಸಾಧ್ಯತೆ

ಇಪಿಎಫ್‌ಒ ತನ್ನಲ್ಲಿರುವ ಮೊತ್ತದ ಶೇಕಡಾ 15 ರಷ್ಟು ಹಣವನ್ನು ಇಟಿಎಫ್‌ನಲ್ಲಿ ಹೂಡಿಕೆ ಮಾಡುತ್ತದೆ. ಕೊರೊನಾ ಅವಧಿಯಲ್ಲಿ, ಇಪಿಎಫ್‌ಒ 2019-20ನೇ ಹಣಕಾಸು ವರ್ಷದಲ್ಲಿ ಶೇ 8.3 ರಷ್ಟು ಈಕ್ವಿಟಿ ಹೂಡಿಕೆಯನ್ನು ಪಡೆಯಿತು. ಅಂದರೆ ಅದರ ಬಂಡವಾಳ ಕಡಿಮೆಯಾಗಿದೆ. ಅದೇ ಸಮಯದಲ್ಲಿ, 2018-19ರ ಆರ್ಥಿಕ ವರ್ಷದಲ್ಲಿ, ಇಪಿಎಫ್‌ಒ ಈಕ್ವಿಟಿ ಹೂಡಿಕೆಯ ಮೇಲೆ ಶೇಕಡಾ 14.7ರಷ್ಟು ಪ್ರಬಲ ಲಾಭವನ್ನು ಹೊಂದಿದೆ.

ಪ್ರಸ್ತುತ, ದೇಶಾದ್ಯಂತ ಸುಮಾರು 40-50 ಲಕ್ಷ ಜನರಿಗೆ 2019-20ರ ಆರ್ಥಿಕ ವರ್ಷಕ್ಕೆ ಇಪಿಎಫ್ ಮೊತ್ತದ ಬಡ್ಡಿ ಹಣ ದೊರೆತಿಲ್ಲ. ಅಂತಹ ಜನರು ಇಪಿಎಫ್ ಬಡ್ಡಿ ಹಣವನ್ನು ಪಡೆಯಲು ಕೆಲವು ದಿನಗಳನ್ನು ತೆಗೆದುಕೊಳ್ಳಬಹುದು.

2018-19ರಲ್ಲಿ ಬಡ್ಡಿದರ ಶೇಕಡಾ 8.65ರಷ್ಟು ಆಗಿತ್ತು. ಇಪಿಎಫ್‌ಒ ತನ್ನ ಚಂದಾದಾರರಿಗೆ 2017-18ನೇ ಸಾಲಿನಲ್ಲಿ 8.55ರಷ್ಟು , 2016-17ರಲ್ಲಿ ಶೇಕಡಾ 8.65ರಷ್ಟು ಬಡ್ಡಿ ದರ ನೀಡಿತ್ತು.

Read more about: epf epfo pf
English summary

EPF Interest Rates For 2020-21: EPFO Likely To Announces Rates On March 04

The EPFO is likely to announce the rate of interest on provident fund deposits for financial year 2020-21 on 4th march
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X