ಭಾರತದಲ್ಲಿ ಆನ್ ಲೈನ್ ಸ್ಕ್ಯಾಮ್‌ಗಳು ಅತೀ ಹೆಚ್ಚಾಗುತ್ತಿದೆ. ದಿನಕ್ಕೆ ನಾವು ಕನಿಷ್ಠ ಒಂದಾದರೂ ಆನ್‌ಲೈನ್ ವಂಚನೆಯ ಬಗ್ಗೆ ಸುದ್ದಿಯನ್ನು ನಾವು ಕೇಳುತ್ತಾ ಬಂದಿದ್ದೇವೆ. ಸೈಬರ್ ಕ್ರಿಮಿನಲ್‌ಗಳು ಜನರನ್ನು ವಂಚನೆ ಮಾಡಲು ಹೊಸ ಹೊಸ ಟ್ರಿಕ್‌ಗಳನ್ನು ಬಳಸುತ್ತಿದ್ದಾರೆ. ದಿನ ಕಳೆದಂತೆ ನಾವು ಊಹಿಸಲೂ ಸಾಧ್ಯವಾಗದಂತಹ ರೀತಿಯನ್ನು ವಂಚಕರು ನಮ್ಮನ್ನು ಅವರ ಬಲೆಯಲ್ಲಿ ಸಿಲುಕಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಮುಂಬೈ ಮೂಲದ ಶಿಕ್ಷಕಿಯೋರ್ವರು ತಮ್ಮ ಪಿಎಫ್ ಖಾತೆಯಲ್ಲಿನ 80,000 ರೂಪಾಯಿಗೂ ಅಧಿಕ ಮೊತ್ತ ಕಳೆದುಕೊಂಡಿದ್ದಾರೆ.
ಮುಂಬೈನ ನಿವಾಸಿಯೊಬ್ಬರು ಈ ಆನ್‌ಲೈನ್ ವಂಚನೆಯಿಂದಾಗಿ ಸುಮಾರು 1.99 ಲಕ್ಷ ರೂಪಾಯಿ ಕಳೆದುಕೊಂಡಿದ್ದರೆ, 53 ವರ್ಷದ ಮಹಿಳೆಯೊಬ್ಬರು ಆನ್‌ಲೈನ್ ಫುಡ್ ಆರ್ಡರ್ ಮಾಡುವಾಗ 87 ಸಾವಿರ ರೂಪಾಯಿ ಕಳೆದುಕೊಂಡಿದ್ದಾರೆ. ಇನ್ನೊಂದು ವಂಚನೆ ಪ್ರಕರಣದಲ್ಲಿ ಒಎಲ್ಎಕ್ಸ್ ಆಪ್‌ನಲ್ಲಿ ಜ್ಯೂಸ್ ಮಿಷನ್ ಖರೀದಿ ಮಾಡುವಾಗ ಗ್ರಾಹಕರು 1.14 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಇತ್ತೀಚೆಗೆ ನಡೆದ ವಂಚನೆ ಪ್ರಕರಣ ಒಂದರಲ್ಲಿ ಶಿಕ್ಷಕರೊಬ್ಬರು ತಮ್ಮ ಪ್ರಾವಿಡೆಂಟ್ ಫಂಡ್ ಅಥವಾ ಪಿಎಫ್ ಖಾತೆಯಲ್ಲಿದ್ದ 80 ಸಾವಿರ ರೂಪಾಯಿಯನ್ನು ಕಳೆದುಕೊಂಡಿದ್ದಾರೆ.

ನವ ಮುಂಬೈನ 32 ವರ್ಷ ಪ್ರಾಯದ ಶಿಕ್ಷಕಿ ಆನ್‌ಲೈನ್‌ನಲ್ಲಿ ಪಿಎಫ್ ಕಚೇರಿಯ ಸಂಪರ್ಕ ಸಂಖ್ಯೆಯನ್ನು ಅಥವಾ ದೂರವಾಣಿ ಸಂಖ್ಯೆಯನ್ನು ಹುಡುಕಿದ್ದು ಈ ಸಂದರ್ಭದಲ್ಲಿ ವಂಚನೆಗೆ ಒಳಗಾಗಿದ್ದಾರೆ. ಆನ್‌ಲೈನ್‌ನಲ್ಲಿ ಪಿಎಫ್ ಕಚೇರಿ ಸಂಖ್ಯೆ ಹುಡುಕುವ ಮಹಿಳೆಯನ್ನು ಈ ವಂಚಕರು ಟಾರ್ಗೆಟ್ ಮಾಡಿಕೊಂಡಿದ್ದಾರೆ. ಈ ವಂಚಕರು ಪಿಎಫ್ ಕಚೇರಿಯ ಅಧಿಕಾರಿ ಎಂಬಂತೆ ಮಾತನಾಡಿದ್ದಾರೆ. ತನ್ನನ್ನು ತಾನು ಪಿಎಫ್ ಅಧಿಕಾರಿ ಎಂದು ಹೇಳಿಕೊಂಡ ವಂಚಕ ಆಪ್ ಒಂದನ್ನು ಡೌನ್‌ಲೋಡ್ ಮಾಡುವಂತೆ ತಿಳಿಸಿದ್ದಾರೆ.
ಶಿಕ್ಷಕಿಗೆ ಏರ್ ಡ್ರಾಯ್ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು ಈ ವಂಚಕರು ಹೇಳಿದ್ದಾರೆ. ಪಿಎಫ್ ಅಧಿಕಾರಿಯೇ ತನ್ನೊಂದಿಗೆ ಮಾತನಾಡುತ್ತಿದ್ದಾರೆ ಅಂದುಕೊಂಡ ಈ ಶಿಕ್ಷಕಿ ವಂಚಕ ಹೇಳಿದಂತೆ ಮಾಡಿಕೊಂಡು ಹೋಗಿದ್ದಾರೆ. ಈ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಂಡ ಬಳಿಕ ವಂಚಕ ಹೇಳಿದಂತೆ ಖಾತೆ ಸಂಖ್ಯೆ ಮತ್ತು ಎಂಪಿನ್ ಅನ್ನು ನಮೂದಿಸಿಕೊಂಡಿದ್ದಾರೆ. ಈ ವೇಳೆ ಸ್ಕ್ಯಾಮರ್ ಶಿಕ್ಷಕಿಯ ಖಾತೆಯನ್ನು ಹ್ಯಾಕ್ ಮಾಡಿಕೊಂಡು ಒಮ್ಮೆಗೆ 16 ವಹಿವಾಟುಗಳನ್ನು ಮಾಡಿಕೊಂಡಿದ್ದು ಒಟ್ಟಾಗಿ 80 ಸಾವಿರ ರೂಪಾಯಿಯನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾನೆ. ಕಳೆದ ವಾರದಲ್ಲಿ ಈ ಘಟನೆ ನಡೆದಿದೆ. ಏಪ್ರಿಲ್ 6ರಂದು ಶಿಕ್ಷಕಿ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲು ಮಾಡಿಕೊಂಡಿದ್ದಾರೆ.
ಈ ವಂಚನೆಯಿಂದ ತಪ್ಪಿಸಿಕೊಳ್ಳುವುದು ಹೇಗೆ?
ನೀವು ಇಂತಹ ವಂಚನೆಗಳಿಗೆ ಒಳಗಾಗುವುದರಿಂದ ತಪ್ಪಿಸಿಕೊಳ್ಳಬೇಕಾದರೆ ಅಧಿಕೃತ ನಂಬರ್ ಯಾವುದು ಎಂದು ಖಚಿತ ಪಡಿಸಿಕೊಂಡ ಬಳಿಕವೇ ಆ ಸಂಖ್ಯೆಯನ್ನು ಸಂಪರ್ಕ ಮಾಡಿ. ಪಿಎಫ್ ಖಾತೆ ಹೊಂದಿರುವವರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ಪಿಎಫ್ ಕಚೇರಿಗೆ ಭೇಟಿ ನೀಡಿ ಪಿಎಫ್ ಸಂಬಂಧಿತ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ. ಹಾಗೆಯೇ ಯಾವುದೇ ಆಪ್ ಅನ್ನು ಡೌನ್‌ಲೋಡ್ ಮಾಡುವ ಮುನ್ನ ಅದು ಅಧಿಕೃತ ಆಪ್ ಹೌದೇ ಎಂದು ಖಚಿತಪಡಿಸಿಕೊಳ್ಳಿ. ಇದು ಬರೀ ನಮ್ಮ ಪಿಎಫ್ ವಿಚಾರಕ್ಕೆ ಸಂಬಂಧಿಸಿದ್ದು ಅಲ್ಲ. ಬದಲಾಗಿ ಆಧಾರ್ ಕಾರ್ಡ್ ಡೌನ್‌ಲೋಡ್, ಇತರೆ ಯಾವುದೇ ಆಪ್ ಡೌನ್‌ಲೋಡ್ ಮಾಡುವಾಗ, ಆಹಾರ ಆರ್ಡರ್ ಮಾಡುವಾಗ, ಆನ್‌ಲೈನ್‌ನಲ್ಲಿ ಉದ್ಯೋಗ ಹುಡುಕಾಟ, ವಸ್ತು ಖರೀದಿ ಮಾರಾಟ ಸಂದರ್ಭದಲ್ಲಿಯೂ ಎಚ್ಚರವಾಗಿರಿ.


Click it and Unblock the Notifications