EPFO ಉದ್ಯೋಗದಾರರಿಗೆ ಸಿಹಿ ಸುದ್ದಿ.. ಹೌದು, ಸಾರ್ವಜನಿಕ ಭವಿಷ್ಯ ನಿಧಿಯು ತನ್ನ ಬಳಕೆದಾರರಿಗೆ ಹೊಸ ಆ್ಯಪ್, ಎಟಿಎಂನಿಂದ ಪಿಎಫ್ ಹಣ ಡ್ರಾ ಮಾಡುವ ಸೌಲಭ್ಯ ಸಿಗಲಿದೆ. ಯಾರೆಲ್ಲಾ ಇದರ ಮೂಲಕ ಲಾಭವನ್ನು ಪಡೆಯಬಹುದು?ಇಪಿಎಫ್‌ಒ 3.0 ಯಾವಾಗ ಜಾರಿಗೆ ಬರಲಿದೆ? ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
ಹೌದು,ಹೊಸ ಸಾಫ್ಟ್‌ವೇರ್ ಸಿಸ್ಟಮ್ ಇಪಿಎಫ್‌ಒ 3.0 ಅನ್ನು ಈ ವರ್ಷ ಪ್ರಾರಂಭಿಸಲಾಗುವುದು ಎಂದು ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಘೋಷಣೆಯನ್ನು ಮಾಡಿದ್ದಾರೆ. ಈ ಹೊಸ ವ್ಯವಸ್ಥೆಯಿಂದ ಹೆಚ್ಚಿನ ಉದ್ಯೋಗಿಗಳಿಗೆ ಅನುಕೂಲವಾಗಿದೆ.

EPFO 3.0 ಎಂದರೇನು?
EPFO 3.0 ಅಡಿಯಲ್ಲಿ ಸದಸ್ಯರಿಗೆ ATM ಕಾರ್ಡ್ಗಳನ್ನು ನೀಡಿದೆ. ಇದರ ಮೂಲಕ ಉದ್ಯೋಗಿಗಳು ತಮ್ಮ ಭವಿಷ್ಯ ನಿಧಿ (ಪಿಎಫ್) ಖಾತೆಯ ಹಣವನ್ನು ಸುಲಭವಾಗಿ ಪಡೆಯಬಹುದು. ಇದು ನಿಮಗೆ ಆರ್ಥಿಕ ತುರ್ತು ಸಂದರ್ಭಗಳಲ್ಲಿ ಈ ಸೇವೆ
ನಿಮಗೆ ಸಹಾಯಕವಗಲಿದೆ ಎಂದು ಮಾಹಿತಿಯನ್ನು ತಿಳಿದು ಬಂದಿದೆ.
ತಾಂತ್ರಿಕ ದೋಷಗಳ ಪರಿಹಾರವನ್ನು ಸರಿಪಡಿಸುವಿಕೆ
EPFO ವೆಬ್ಸೈಟ್ನಲ್ಲಿರುವ ಕೆಲವು ತಾಂತ್ರಿಕ ದೋಷಗಳನ್ನು ಮೊದಲು ಸರಿಪಡಿಸುತ್ತೇವೆ. ನಂತರ ಇಪಿಎಫ್‌ಒ 3.0 ಅನ್ನು ಹಂತಹಂತವಾಗಿ ಜಾರಿಗೊಳಿಸಲಾಗುತ್ತದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
ಯಾವಾಗ ಜಾರಿ ಬರುತ್ತದೆ?
2025ರ ಜೂನ್ ವೇಳೆಗೆ ಹೊಸ ಆ್ಯಪ್, ಎಟಿಎಂ ಕಾರ್ಡ್ ಹಾಗೂ ಸುಧಾರಿತ ಸಾಫ್ಟ್ ವೇರ್ ಬಿಡುಗಡೆಯಾಗಲಿದೆ. ಇನ್ನೂ EPFO 3.0 ಅಡಿಯಲ್ಲಿ ಹೊಸ ಮೊಬೈಲ್ ಅಪ್ಲಿಕೇಶನ್ಸ್, ಇತರೆ ಡಿಜಿಟಲ್ ಸೇವೆಗಳನ್ನ ಸಹ ಶುರು ಮಾಡಲಿದೆ.
ಇಪಿಎಫ್‌ಒ 3.0 ಭಾರತದ ಸಾಮಾಜಿಕ ಭದ್ರತಾ ಸೇವೆಗಳನ್ನು ಆಧುನೀಕರಿಸುವ ದೃಷ್ಟಿಯಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಪ್ರಸ್ತುತ, ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಚಂದಾದಾರರು ತಮ್ಮ ಕ್ಲೈಮ್‌ಗಳನ್ನು ಆನ್‌ಲೈನ್‌ನಲ್ಲಿ ಇತ್ಯರ್ಥಗೊಳಿಸಲು 7-10 ದಿನಗಳು ಕಾಯಬೇಕಾಗುತ್ತದೆ. ಪರಿಹಾರದ ನಂತರ, ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಆದರೆ ಇಪಿಎಫ್‌ಒ ATM ಈ ಸಮಸ್ಯೆಯೂ ದೂರವಾಗುತ್ತದೆ.
ಸುಲಭ ಪ್ರವೇಶ: ಸದಸ್ಯರು ಇನ್ನು ಮುಂದೆ ಭವಿಷ್ಯ ನಿಧಿ ಹಣವನ್ನು ಪಡೆಯಲು ಯಾವುದೇ ವಿಳಂಬವನ್ನು ಅನುಭವಿಸಬೇಕಾಗಿಲ್ಲ.
ಸಾಮಾಜಿಕ ಭದ್ರತಾ ವ್ಯಾಪ್ತಿ ವಿಸ್ತರಣೆ: 2017 ರಿಂದ 7 ಕೋಟಿಗೂ ಹೆಚ್ಚು ಕಾರ್ಮಿಕರು ಭವಿಷ್ಯ ನಿಧಿ ವ್ಯಾಪ್ತಿಗೆ ಸೇರ್ಪಡೆಯಾಗಿದ್ದಾರೆ. ಇದು ಭಾರತದ ಕಾರ್ಮಿಕರನ್ನು ಔಪಚಾರಿಕ ವಲಯಕ್ಕೆ ತರುವ ದಿಶೆಯಲ್ಲಿ ದೊಡ್ಡ ಹೆಜ್ಜೆಯಾಗಿದೆ.
ಪರಿಣಾಮ: ಭಾರತದಲ್ಲಿ 64 ಕೋಟಿಗೂ ಹೆಚ್ಚು ಆರ್ಥಿಕವಾಗಿ ಸಕ್ರಿಯವಾಗಿರುವ ವ್ಯಕ್ತಿಗಳೊಂದಿಗೆ, ಈ ಹೊಸ ಯೋಜನೆ ಕಾರ್ಮಿಕರು ತಮ್ಮ ಹಣಕಾಸಿನ ಸಂಪನ್ಮೂಲಗಳನ್ನು ಈ ಹಿಂದೆ ಪ್ರವೇಶಿಸುತ್ತಿದ್ದ ರೀತಿಯನ್ನು ಪರಿವರ್ತಿಸುವ ಗುರಿಯನ್ನು ಹೊಂದಿದೆ.
ಹೊಸ ನಿಯಮದಿಂದ ಆಗುವ ಪ್ರಯೋಜನಗಳೇನು..?
2025 ರಿಂದ EPFO ಬಳಕೆದಾರರು ATM ಮೂಲಕ ಹಣ ಡ್ರಾ ಮಾಡಬಹುದು.
ಈ ಹೊಸ ವ್ಯವಸ್ಥೆಯ ಜಾರಿಯಿಂದ ನೇರವಾಗಿ ಹಣ ಹಿಂಪಡೆಯಲು ಸಾಧ್ಯವಾಗುತ್ತದೆ.
ಗ್ರಾಹಕರು ತಮ್ಮ ಹಕ್ಕು ಒಂದೇ ಕ್ಲಿಕ್‌ನಲ್ಲಿ ಇತ್ಯರ್ಥಪಡಿಸಲು ಅನುಮತಿಯನ್ನು ಸಹ ಬದಗಿಸಲಾಗುತ್ತದೆ.
ಇಪಿಎಫ್‌ಒ 3.0 ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ಸೇವೆಯನ್ನು ನೀವು ಬಹುಬೇಗನೆ ಪಡೆದುಕೊಳ್ಳಬಹುದು.
ಯಾವುದೇ ಅಧಿಕಾರಿಯಿಂದ ನಿಮ್ಮ ಹಣಕ್ಕೆ ಕ್ಲಿಯರೆನ್ಸ್ ಪಡೆಯುವ ಅಗತ್ಯವಿರವುದಿಲ್ಲ.
ಉದ್ಯೋಗಿಗಳ ಆರ್ಥಿಕ ನಿರ್ವಹಣೆಯನ್ನು ಸುಧಾರಣೆ ಮಾಡಲು ಸಹಾಯಕವಾಗುತ್ತದೆ.
ಉದ್ಯೋಗಿಗಳಿಗೆ ಸುರಕ್ಷಿತ PF ನಿರ್ವಹಣೆಯ ಆಯ್ಕೆಯನ್ನು ಸಹ ಒದಗಿಸುತ್ತದೆ.


Click it and Unblock the Notifications