For Quick Alerts
ALLOW NOTIFICATIONS  
For Daily Alerts

EPFO ಮಹತ್ವದ ಘೋಷಣೆ: 2020-21ರ ಪಿಎಫ್ ಬಡ್ಡಿ ದರ 8.5%

|

ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) 2020-21ರ ನೌಕರರ ಭವಿಷ್ಯ ನಿಧಿ ಬಡ್ಡಿದರವನ್ನು ಪ್ರಕಟಿಸಿದ್ದು, ಶೇಕಡಾ 8.5ರಷ್ಟು ಶಿಫಾರಸ್ಸು ಮಾಡಿದೆ. ಈ ಮೂಲಕ ಬಡ್ಡಿದರ ಕಡಿತಗೊಳ್ಳಬಹುದು ಎಂಬ ಊಹಾಪೋಹಗಳಿಗೆ ತೆರೆ ಬಿದ್ದಿದೆ.

ಇಂದು ಸಭೆ ಸೇರಿದ್ದ ಕೇಂದ್ರೀಯ ಟ್ರಸ್ಟಿಗಳ ಮಂಡಳಿ (ಸಿಬಿಟಿ) 2020-21ರ ನೌಕರರ ಭವಿಷ್ಯ ನಿಧಿ ಬಡ್ಡಿದರವನ್ನು ಪ್ರಕಟಿಸಿದ್ದು, 2019-20ನೇ ಸಾಲಿನ ಬಡ್ಡಿದರಗಳನ್ನು ಉಳಿಸಿಕೊಳ್ಳಲಾಗಿದೆ.

2020-21ರ ಆರ್ಥಿಕ ವರ್ಷದಲ್ಲಿ ಸಂಸ್ಥೆಯು, ಭವಿಷ್ಯದ ನಿಧಿ ಠೇವಣಿಗಳ ಮೇಲಿನ ಬಡ್ಡಿದರಗಳನ್ನು 2020ರ ಕೋವಿಡ್-19 ಆರ್ಥಿಕ ಕುಸಿತದ ಪರಿಣಾಮ ಕಡಿಮೆಗೊಳಿಸಬಹುದು ಎಂಬ ಊಹಾಪೋಹ ಸುದ್ದಿಗಳಿದ್ದವು. ಆದರೆ ಸಂಸ್ಥೆಯು ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದೆ ಹಾಗೆಯೇ ಉಳಿಸಿಕೊಂಡಿದೆ.

EPFO ಮಹತ್ವದ ಘೋಷಣೆ: 2020-21ರ ಪಿಎಫ್ ಬಡ್ಡಿ ದರ 8.5%

ಕಳೆದ ವರ್ಷ, ಮಾರ್ಚ್‌ನಲ್ಲಿ ಇಪಿಎಫ್ಒ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು 2019-20ರಲ್ಲಿ ಏಳು ವರ್ಷಗಳ ಕನಿಷ್ಠ ಶೇಕಡಾಕ್ಕೆ 8.5ಕ್ಕೆ ಇಳಿಸಿತ್ತು. ಮಾರ್ಚ್ 31 ಕ್ಕೆ ಕೊನೆಗೊಂಡ ವರ್ಷದಲ್ಲಿ ತನ್ನ ಚಂದಾದಾರರಿಗೆ 8.5 ಪ್ರತಿಶತದಷ್ಟು ಬಡ್ಡಿಯನ್ನು ಎರಡು ಕಂತುಗಳಲ್ಲಿ ಪಾವತಿಸುವುದಾಗಿ ಮಂಡಳಿ ಈ ಹಿಂದೆ ತಿಳಿಸಿತ್ತು. ಸಾಲ ಹೂಡಿಕೆಗಳಿಂದ ಶೇಕಡಾ 8.15ರಷ್ಟು ಮತ್ತು ಈಕ್ವಿಟಿಗಳಿಂದ ಶೇಕಡಾ 0.35ರಷ್ಟು ನೀಡಲಿದೆ.

ಇಪಿಎಫ್‌ಒ ತನ್ನಲ್ಲಿರುವ ಮೊತ್ತದ ಶೇಕಡಾ 15 ರಷ್ಟು ಹಣವನ್ನು ಇಟಿಎಫ್‌ನಲ್ಲಿ ಹೂಡಿಕೆ ಮಾಡುತ್ತದೆ. ಕೊರೊನಾ ಅವಧಿಯಲ್ಲಿ, ಇಪಿಎಫ್‌ಒ 2019-20ನೇ ಹಣಕಾಸು ವರ್ಷದಲ್ಲಿ ಶೇ 8.3 ರಷ್ಟು ಈಕ್ವಿಟಿ ಹೂಡಿಕೆಯನ್ನು ಪಡೆಯಿತು. ಅಂದರೆ ಅದರ ಬಂಡವಾಳ ಕಡಿಮೆಯಾಗಿದೆ. ಅದೇ ಸಮಯದಲ್ಲಿ, 2018-19ರ ಆರ್ಥಿಕ ವರ್ಷದಲ್ಲಿ, ಇಪಿಎಫ್‌ಒ ಈಕ್ವಿಟಿ ಹೂಡಿಕೆಯ ಮೇಲೆ ಶೇಕಡಾ 14.7ರಷ್ಟು ಪ್ರಬಲ ಲಾಭವನ್ನು ಹೊಂದಿದೆ.

ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ 2021 ರ ಬಜೆಟ್‌ನಲ್ಲಿ ಪ್ರಕಟಿಸಿದಂತೆ, ಒಂದು ವರ್ಷದಲ್ಲಿ ಇಪಿಎಫ್‌ನಲ್ಲಿ 2.5 ಲಕ್ಷ ರೂ.ಗಿಂತ ಹೆಚ್ಚು ಹೂಡಿಕೆ ಮಾಡುವ ಠೇವಣಿದಾರರು ಏಪ್ರಿಲ್ 1 ರಿಂದ ತಮ್ಮ ಬಡ್ಡಿಗೆ ತೆರಿಗೆ ವ್ಯಾಪ್ತಿ ಹೊಂದಿರುತ್ತಾರೆ.

Read more about: epf epfo pf
English summary

EPFO Board Recommends 8.5% Interest For 2020-21

EPFO announced the interest rates on Provident Fund deposits for the financial year 2020-21 on March 4. The EPFO board has recommended 8.5 percent interest for the financial year 2020-21
Story first published: Thursday, March 4, 2021, 15:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X